ಆಟೋ ರಿಕ್ಷಾ ಓಡಿಸುತ್ತಿದ್ದ ಶಿಂಧೆ ಮಹಾ ಗಾದಿಗೆ ಏರಿದ್ದು ಹೇಗೆ ?

ಜೀವನದಲ್ಲಿ ನೊಂದು ಮಾನಸಿಕ ಖಿನ್ನತೆಗೆ ಜಾರಿದ್ದ ಮಹಾರಾಷ್ಟ್ರ ಸಿಎಂ

Team Udayavani, Jun 30, 2022, 8:58 PM IST

1-gfdg

ಮುಂಬಯಿ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆಯವರು ಸತಾರಾದ ಜಾವಲಿ ತಾಲೂಕಿನವರುವರು. ಅವರ ಕುಟುಂಬ ಜೀವನೋಪಾಯಕ್ಕಾಗಿ ಥಾಣೆಗೆ ಸ್ಥಳಾಂತರಗೊಂಡಿತ್ತು. ಏಕನಾಥ್ ಅವರು ಥಾಣೆಯ ಮಂಗಳಾ ಹೈಸ್ಕೂಲ್ ಮತ್ತು ಜೂನಿಯರ್ ಕಾಲೇಜಿನಲ್ಲಿ ಓದಿದ್ದಾರೆ.ಅವರು ತಮ್ಮ ಕುಟುಂಬವನ್ನು ಪೋಷಿಸಲು ಆಟೋರಿಕ್ಷಾವನ್ನು ಓಡಿಸುತ್ತಿದ್ದರು ಎನ್ನುವುದು ವಿಶೇಷವಾಗಿದೆ.

ಶಿವಸೇನೆಯ ಪರಮೋಚ್ಛ ನಾಯಕ ಬಾಳಾ ಸಾಹೇಬ್ ಠಾಕ್ರೆ ಮತ್ತು ಆನಂದ್ ದಿಘೆ ಅವರ ಗರಡಿಯಲ್ಲಿ ಪಳಗಿದ ಶಿಂಧೆ ರಾಜಕೀಯದಲ್ಲಿ ಹಂತ ಹಂತವಾಗಿ ಬಹುಬೇಗ ಉನ್ನತ ಸ್ಥಾನಗಳನ್ನು ಪಡೆದಿದ್ದಾರೆ.

1997ರಲ್ಲಿ ಮೊದಲ ಬಾರಿಗೆ ಥಾಣೆ ಮುನ್ಸಿಪಲ್ ಕಾರ್ಪೊರೇಟರ್ ಆಗಿ ಆಯ್ಕೆಯಾದ ಶಿಂಧೆ ವೇಗದ ರಾಜಕೀಯ ಪ್ರಗತಿ ಸಾಧಿಸಿ 2004 ರಲ್ಲಿ ಮೊದಲ ಬಾರಿಗೆ ಮಹಾರಾಷ್ಟ್ರ ವಿಧಾನಸಭೆಗೆ ಆಯ್ಕೆಯಾದರು. 2019ರ ಗೆಲುವು ಸೇರಿ ಸತತ ನಾಲ್ಕು ಬಾರಿ ವಿಧಾನಸಭೆಗೆ ಚುನಾಯಿತರಾಗಿದ್ದಾರೆ.

2014 ರಾಡು ಮಹಾರಾಷ್ಟ್ರ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿದ್ದ ಅವರು, 2014 – 2019ರ ವರೆಗೆ ರಾಜ್ಯ ಸರ್ಕಾರದಲ್ಲಿ ಲೋಕೋಪಯೋಗಿ ಕ್ಯಾಬಿನೆಟ್ ಸಚಿವರಾಗಿ, 2019ರಲ್ಲಿ ಉದ್ಧವ್ ಠಾಕ್ರೆ ಅವರ ಸಂಪುಟದಲ್ಲಿ ನಗರಾಭಿವೃದ್ಧಿ ಮತ್ತು ಸಾರ್ವಜನಿಕ ಕಾರ್ಯಗಳ ಸಚಿವರಾಗಿ, ಗೃಹ ಸಚಿವರಾಗಿ ಕಾರ್ಯನಿರ್ವಹಿಸಿದ ರಾಜಕೀಯ ಅನುಭವ ಹೊಂದಿದ್ದಾರೆ.

ಕೊಪ್ರಿ ಪಚ್ಪಪಖಾಡಿ ವಿಧಾನಸಭಾ ಕ್ಷೇತ್ರವನ್ನು ನಾಲ್ಕು ಅವಧಿಗೆ ಪ್ರತಿನಿಧಿಸುತ್ತಿರುವ 58 ರ ಹರೆಯದ ಶಿಂಧೆ ಅವರಿಗೆ ಮುಖ್ಯಮಂತ್ರಿ ಹುದ್ದೆ ಬಂಡಾಯವೆದ್ದ ಬೆನ್ನಲ್ಲೇ ಬಿಜೆಪಿಯ ಕಡೆಯಿಂದ ರಾಜಕೀಯ ರಣತಂತ್ರದ ಭಾಗವಾಗಿ ಉಡುಗೊರೆಯ ರೂಪದಲ್ಲಿ ಅಚ್ಚರಿಯಾಗಿ ಒಲಿದು ಬಂದಿದೆ.

ಬದುಕಿನಲ್ಲಿ ಮರೆಯಲಾಗದ ನೋವು

2 ಜೂನ್ 2000 ರಂದು ನಡೆದ ದುರಂತ ಶಿಂಧೆಯವರ ಬದುಕಿನಲ್ಲಿ ಎಂದು ಮರೆಯಲಾಗದ ಆಗಾಗ ನೆನಪಾಗುವ ದುರಂತ ದಿನವಾಗಿದೆ. ಅವರ ಮಕ್ಕಳಾದ ದಿಪೇಶ್ (11 ವರ್ಷ) ಮತ್ತು ಶುಭದಾ (7 ವರ್ಷ) ಹಳ್ಳಿಯ ಸಮೀಪವಿರುವ ಸರೋವರದಲ್ಲಿ ದೋಣಿ ವಿಹಾರಕ್ಕೆ ತೆರಳಿದ್ದಾಗ ದೋಣಿ ಮಗುಚಿ ಬಿದ್ದು ಇಬ್ಬರೂ ಮಕ್ಕಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು. ದುರಂತದ ಬಳಿಕ ಶಿಂಧೆ ಹಲವು ತಿಂಗಳುಗಳ ಕಾಲ ಖಿನ್ನತೆಗೆ ಒಳಗಾಗಿದ್ದರು. ಶಿವಸೇನೆಯ ಹಿರಿಯ ನಾಯಕ ಆನಂದ್ ದಿಘೆ ಅವರು ಶಿಂಧೆಗೆ ಭಾವನಾತ್ಮಕ ಬೆಂಬಲವನ್ನು ನೀಡಿ ಅವರ ಮನಸ್ಸಿನ ನೋವನ್ನು ದೂರ ಮಾಡಲು, ಖಿನ್ನತೆಯಿಂದ ದೂರವಿರಿಸಲು ರಾಜಕೀಯವಾಗಿ ಹೆಚ್ಚು ಕ್ರೀಯಾಶೀಲರನ್ನಾಗಿಸಿದರು.

ನೋವಿನ ಗಳಿಗೆಯಲ್ಲಿ ನನ್ನ ಕುಟುಂಬಕ್ಕೆ ನನ್ನ ಅಗತ್ಯವಿತ್ತು. ಈ ವೇಳೆ ದಿಘೆ ಸಾಹೇಬರು, ‘ಈ ಸಮಾಜಕ್ಕೆ ನಿಮ್ಮ ಅವಶ್ಯಕತೆ ಬಹಳ ಇದೆ. ನಿಮ್ಮ ಕುಟುಂಬ ಅಷ್ಟು ಚಿಕ್ಕದಲ್ಲ, ದೊಡ್ಡ ಕುಟುಂಬ. ನೀವು ಜನರಿಗಾಗಿ ಕೆಲಸ ಮಾಡಲು ಬಯಸುವವರು ಎಂದು ಧೈರ್ಯ ತುಂಬಿದ್ದನ್ನು ಶಿಂಧೆ ಕಾರ್ಯಕ್ರಮವೊದರಲ್ಲಿ ಕಂಬನಿ ಸಹಿತ ಹೇಳಿಕೊಂಡಿದ್ದರು.

ಶಿಂಧೆಯವರ ಇನ್ನೋರ್ವ ಪುತ್ರ ಡಾ. ಶ್ರೀಕಾಂತ್ ಶಿಂಧೆ ಅವರು ಮೂಳೆ ಶಸ್ತ್ರಚಿಕಿತ್ಸಕರಾಗಿದ್ದು, ಅವರು 2014 ರಲ್ಲಿ ಕಲ್ಯಾಣ್ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದು, 2019 ರಲ್ಲಿ ಮರು ಆಯ್ಕೆಯಾಗಿದ್ದಾರೆ.

ಟಾಪ್ ನ್ಯೂಸ್

ಪಿನ್ ಕೋಡ್ ಜಾರಿಗೆ ಬಂದು ಆ.15ಕ್ಕೆ 50 ವರ್ಷ: ಅಂಚೆ ಕಚೇರಿಯ ಪಿನ್ ಕೋಡ್ ಇತಿಹಾಸ ಗೊತ್ತಾ?

ಪಿನ್ ಕೋಡ್ ಜಾರಿಗೆ ಬಂದು ಆ.15ಕ್ಕೆ 50 ವರ್ಷ: ಅಂಚೆ ಕಚೇರಿಯ ಪಿನ್ ಕೋಡ್ ಇತಿಹಾಸ ಗೊತ್ತಾ?

ಹಾಸನ: ವಿವಾಹ ವಿಚ್ಛೇದನ ಪ್ರಕರಣ; ಕೋರ್ಟ್‌ ಆವರಣದಲ್ಲೇ  ಪತ್ನಿ ಕತ್ತು ಕೊಯ್ದು ಹತ್ಯೆಗೈದ ಪತಿ

ಹಾಸನ: ವಿವಾಹ ವಿಚ್ಛೇದನ ಪ್ರಕರಣ; ಕೋರ್ಟ್‌ ಆವರಣದಲ್ಲೇ  ಪತ್ನಿ ಕತ್ತು ಕೊಯ್ದು ಹತ್ಯೆಗೈದ ಪತಿ

ನಿನ್ನ ಡೆಡಿಕೇಶನ್‌… ನಿರೂಪ್ ಗಾಯದ ಪೋಟೋ ಹಂಚಿಕೊಂಡು ಬರ್ತ್‌ ಡೇಗೆ ವಿಶ್‌ ಮಾಡಿದ ಅನೂಪ್‌!

ನಿನ್ನ ಡೆಡಿಕೇಶನ್‌… ನಿರೂಪ್ ಗಾಯದ ಪೋಟೋ ಹಂಚಿಕೊಂಡು ಬರ್ತ್‌ ಡೇ ವಿಶ್‌ ಮಾಡಿದ ಅನೂಪ್‌!

tdy-7

ವಿವಾದದ ಹೇಳಿಕೆಯೇ ʼಲಾಲ್‌ ಸಿಂಗ್‌ ಚಡ್ಡಾʼ ಕ್ಕೆ ಮುಳುವಾಯಿತೇ? : ಟ್ರೋಲ್‌ ಆದ್ರು ಬೇಬೋ

thumb-6

ಬೀಚ್‌ನಲ್ಲಿ ಮಹಿಳೆಗೆ ಮಾರಕವಾದ ಛತ್ರಿ: ವಾರ್ಷಿಕವಾಗಿ 3 ಸಾವಿರ ಜನರಿಗೆ ಗಾಯ

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತದ ವಿರುದ್ಧ ಮಹಿಳೆಯರ ಆಕ್ರೋಶ, ಪ್ರತಿಭಟನೆ

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತದ ವಿರುದ್ಧ ಮಹಿಳೆಯರ ಆಕ್ರೋಶ, ಪ್ರತಿಭಟನೆ

ಕೋಳಿ ತುಂಡಿನೊಳಗೆ ಗಾಂಜಾ: ವಿಜಯಪುರ ಜೈಲಿಗೆ ಮಾದಕ ವಸ್ತು ಸಾಗಾಟ ಮಾಡುತ್ತಿದ್ದಾತ ಸೆರೆ

ಕೋಳಿ ತುಂಡಿನೊಳಗೆ ಗಾಂಜಾ: ವಿಜಯಪುರ ಜೈಲಿಗೆ ಮಾದಕ ವಸ್ತು ಸಾಗಾಟ ಮಾಡುತ್ತಿದ್ದಾತ ಸೆರೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಾಜ್ಯದ ಐದು ಕಡೆ ಜನೋತ್ಸವ ಕಾರ್ಯಕ್ರಮ ಮಾಡುತ್ತೇವೆ: ಸಿಎಂ ಬೊಮ್ಮಾಯಿ

ರಾಜ್ಯದ ಐದು ಕಡೆ ಜನೋತ್ಸವ ಕಾರ್ಯಕ್ರಮ ಮಾಡುತ್ತೇವೆ: ಸಿಎಂ ಬೊಮ್ಮಾಯಿ

ರಾಜಕೀಯ ಮೀಸಲು ಕುರಿತ ಭಕ್ತವತ್ಸಲಂ ಸಮಿತಿ ವರದಿ ಅಂಗೀಕರಿಸಿದ ಸಂಪುಟ ಸಭೆ

ರಾಜಕೀಯ ಮೀಸಲು ಕುರಿತ ಭಕ್ತವತ್ಸಲಂ ಸಮಿತಿ ವರದಿ ಅಂಗೀಕರಿಸಿದ ಸಂಪುಟ ಸಭೆ

ಮಮತಾಗೆ ಮತ್ತೊಂದು ಶಾಕ್: ಪ್ರಭಾವಿ ಮುಖಂಡ ಶರ್ಮಾ ಟಿಎಂಸಿಗೆ ರಾಜೀನಾಮೆ

ಮಮತಾಗೆ ಮತ್ತೊಂದು ಶಾಕ್: ಪ್ರಭಾವಿ ಮುಖಂಡ ವರ್ಮಾ ಟಿಎಂಸಿಗೆ ರಾಜೀನಾಮೆ

ಮಮತಾ ನಿಮ್ಮನ್ನೂ ನಡುನೀರಲ್ಲೇ ಕೈಬಿಡುತ್ತಾರೆ: ಟಿಎಂಸಿ ಶಾಸಕರಿಗೆ ಬಿಜೆಪಿ ಎಚ್ಚರಿಕೆ

ಮಮತಾ ನಿಮ್ಮನ್ನೂ ನಡುನೀರಲ್ಲೇ ಕೈಬಿಡುತ್ತಾರೆ: ಟಿಎಂಸಿ ಶಾಸಕರಿಗೆ ಬಿಜೆಪಿ ಎಚ್ಚರಿಕೆ

ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದರೆ ಬಿ.ಸಿ.ನಾಗೇಶ್?: ಕಾಂಗ್ರೆಸ್ ಗೆ ತಿರುಗೇಟು ನೀಡಿದ ಸಚಿವ

ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದರೆ ಬಿ.ಸಿ.ನಾಗೇಶ್?: ಕಾಂಗ್ರೆಸ್ ಗೆ ತಿರುಗೇಟು ನೀಡಿದ ಸಚಿವ

MUST WATCH

udayavani youtube

ಮಗನನ್ನು ನಾಗರ ಹಾವಿನಿಂದ ರಕ್ಷಿಸಿದ ತಾಯಿ : ವಿಡಿಯೋ ನೋಡುವಾಗ ಮೈ ಜುಂ ಅನ್ನುತ್ತೆ

udayavani youtube

ಮಳೆಯ ಅಬ್ಬರಕ್ಕೆ ಕುಸಿದ ಸಾಲು ಸಾಲು ಮನೆಗಳು.. ಬಿರುಕು ಬಿಟ್ಟ ಕಾಂಕ್ರೀಟ್ ರಸ್ತೆ

udayavani youtube

News bulletin 12-8-2022

udayavani youtube

12 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಂದ ಹರ್ ಘರ್ ತಿರಂಗಾ ಜಾಗೃತಿ

udayavani youtube

ರಕ್ಷಾಬಂಧನವನ್ನು ತುಂಡರಿಸಿ ಹಾಕಿದ ಘಟನೆ ಕ್ಷಮೆ ಕೇಳಿದ ಶಾಲಾ ಆಡಳಿತ ಮಂಡಳಿ

ಹೊಸ ಸೇರ್ಪಡೆ

ಧಾರವಾಡ ಹೈಕೋರ್ಟ್ ಪೀಠ ಲೋಕ‌ ಅದಾಲತ್ : 5 ಕೋಟಿ 77 ಲಕ್ಷ ರೂ.ಮೊತ್ತದ 183 ಪ್ರಕರಣಗಳ ಇತ್ಯರ್ಥ

ಧಾರವಾಡ ಹೈಕೋರ್ಟ್ ಪೀಠ ಲೋಕ‌ ಅದಾಲತ್: 5 ಕೋಟಿ 77 ಲಕ್ಷ ರೂ.ಮೊತ್ತದ 183 ಪ್ರಕರಣಗಳ ಇತ್ಯರ್ಥ

ಕಾಪು: ಬಿಜೆಪಿ ಮಹಿಳಾ ಮೋರ್ಚಾ ತಿರಂಗಾ ಕಾಲ್ನಡಿಗೆ ಜಾಥಕ್ಕೆ ಸಚಿವೆ ಶೋಭಾ ಚಾಲನೆ

ಕಾಪು: ಬಿಜೆಪಿ ಮಹಿಳಾ ಮೋರ್ಚಾ ತಿರಂಗಾ ಕಾಲ್ನಡಿಗೆ ಜಾಥಕ್ಕೆ ಸಚಿವೆ ಶೋಭಾ ಚಾಲನೆ

ಪಿನ್ ಕೋಡ್ ಜಾರಿಗೆ ಬಂದು ಆ.15ಕ್ಕೆ 50 ವರ್ಷ: ಅಂಚೆ ಕಚೇರಿಯ ಪಿನ್ ಕೋಡ್ ಇತಿಹಾಸ ಗೊತ್ತಾ?

ಪಿನ್ ಕೋಡ್ ಜಾರಿಗೆ ಬಂದು ಆ.15ಕ್ಕೆ 50 ವರ್ಷ: ಅಂಚೆ ಕಚೇರಿಯ ಪಿನ್ ಕೋಡ್ ಇತಿಹಾಸ ಗೊತ್ತಾ?

7flag

ರಾರಾಜಿಸಿದ ತ್ರಿವರ್ಣ ಧ್ವಜ-ದಾಖಲೆ ಬರೆದ ರ್ಯಾಲಿ

ಹರ್ ಘರ್ ತಿರಂಗಾ: ಗುಡಿಸಲು,ಜಮೀನಿನಲ್ಲಿ ತ್ರಿವರ್ಣ ಧ್ವಜ ಹಾರಿಸಿ ಸಂಭ್ರಮಾಚರಣೆ

ಹರ್ ಘರ್ ತಿರಂಗಾ: ಗುಡಿಸಲು,ಜಮೀನಿನಲ್ಲಿ ತ್ರಿವರ್ಣ ಧ್ವಜ ಹಾರಿಸಿ ಸಂಭ್ರಮಾಚರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.