Udayavni Special

ಬೊಮ್ಮಾಯಿ ಸರ್ಕಾರ ಅಂದ್ರ ಹುಬ್ಬಳ್ಳಿ ರೋಡಿನ್ಯಾಗ ಬೈಕ್ ಹೊಡದಂಗ…!


Team Udayavani, Aug 8, 2021, 9:14 AM IST

ಬೊಮ್ಮಾಯಿ ಸರ್ಕಾರ ಅಂದ್ರ ಹುಬ್ಬಳ್ಳಿ ರೋಡಿನ್ಯಾಗ ಹೊಡದಂಗ…

ಆಫೀಸಿನಿಂದ ಮನಿಗಿ ಬರೂದ್ರಾಗ ಯಜಮಾನ್ತಿ ಫೋನ್‌ ಸ್ಟೇಟಸ್‌ ಬದ್ಲಾಗಿತ್ತು. ನನ್ನ ರಾಜಕೀಯ ಸಂಸಾರದ ಪುಸ್ತಕಾ ಬಿಡು ಗಡೆ ಟೈಮಿನ್ಯಾಗ ಹೋಮ್‌ ಮಿನಿಸ್ಟರ್‌ ಆಗಿದ್ದ ಬೊಮ್ಮಾಯಿ ಸಾಹೇಬ್ರಿಗೆ ಆಷಾಢದಾಗೂ ಲಕ್‌ ಹೊಡದ ಮುಖ್ಯಮಂತ್ರಿ ಆಗಿದ್ರು, ಬುಕ್‌ ಬಿಡುಗಡೆ ಟೈಮಿನ್ಯಾಗ ಯಜಮಾನ್ತಿ ಅವರ ಜೋಡಿ ನಿಂತು ತೆಗೆಸಿಕೊಂಡಿದ್ದ ಫೋಟೊನ ಸ್ಟೇಟಸ್‌ ಹಾಕ್ಕೊಂಡು ಮನ್ಯಾಗ ಕುಂತ ಸಿಎಂಗೆ ಕ್ಲೋಸ್‌ ಅನ್ನೋ ಹವಾ ಮೇಂಟೇಂನ್‌ ಮಾಡಾಕತ್ತಿದ್ಲು.

ಯಾರಾದ್ರು ವ್ಯಕ್ತಿ ರಾತ್ರೋ ರಾತ್ರಿ ಸ್ಟಾರ್‌ ಆದ್ರ ಆಂವ ಬದಲಾಗದಿದ್ದರೂ ಅವರ ಆಜು ಬಾಜು ಇರಾರು ತಮಗ ತಾವ ಬದಲಕ್ಕಾರಂತ. ಬೊಮ್ಮಾಯಿ ಸಾಹೇಬ್ರು ಸಿಎಂ ಆಗಿರೋದ್ಕ ಯಜಮಾನ್ತಿ ಅಷ್ಟ ಅಲ್ಲಾ. ಬಹುತೇಕ ಉತ್ತರ ಕರ್ನಾಟಕದ ಮಂದಿ ತಮಗ ತಾವ ಸ್ಟೇಟಸ್‌ ಚೇಂಜ್‌ ಮಾಡ್ಕೊಂಡು, ಸುವರ್ಣ ಯುಗ ಬಂತು ಅನ್ನಾರಂಗ ಸಂಭ್ರಮ ಪಟ್ಟಾರು.

ನಿರಾಣಿ, ಬೆಲ್ಲದ ಸಾಹೇಬ್ರು ಸಿಎಂ ಆಗು ಸಲುವಾಗಿ ಷಣ್ಮುಕನಂಗ ದಿಲ್ಲಿ ಅಷ್ಟ ಅಲ್ಲ ಕಾಶಿಯಾತ್ರೆ ಮಾಡಿದ್ರು, ಆದ್ರ ಬೊಮ್ಮಾಯಿ ಸಾಹೇಬ್ರು ಮಾತ್ರ ಗಣಪತಿ ಶಿವಾ ಪಾರ್ವತಿನ ಸುತ್ತಿ ಪ್ರಪಂಚ ಸುತ್ತೇನಿ ಅಂದಂಗ ಯಡಿಯೂರಪ್ಪನ ಹಿಂದ ತಿರುಗ್ಯಾಡಿ ಓಲಿಪಿಂಕ್ಸ್‌ ನ್ಯಾಗ ಒಂದ ಎಸೆತದಾಗ ಜಾವ್ಲಿನ್‌ ಒಗದು ಬಂಗಾರ ಗೆದ್ದ ನೀರಜ್‌ ನಂಗ ಸೈಲೆಂಟ್‌ ಆಗಿ ಸಿಎಂ ಆಗಿಬಿಟ್ರಾ.

ಬಿಜೆಪಿ ಗರ್ಭ ಗುಡ್ಯಾಗ ಹೊರಗಿನ್ಯಾರಿಗೆ ಅವಕಾಶ ಇಲ್ಲ ಅನ್ನು ಹೊತ್ತಿನ್ಯಾಗ ಯಡಿಯೂರಪ್ಪನ ಹಠಕ್ಕೆ ಮಣಿದ ಹೈಕಮಾಂಡ್‌ ಬೊಮ್ಮಾಯಿ ಅವರ್ನ ಗುಡಿ ಒಳಗ ಬಿಟ್ಕೊಳ್ಳೊ ಪ್ರಯತ್ನ ಮಾಡಿದಂಗ ಕಾಣತೈತಿ. ಅದ್ಕ ಸಿಎಂ ಸಾಹೇಬ್ರಿಗೆ ಶರಣರ ವಚನಾ ಬಿಟ್ಟು ಸಂಸ್ಕೃತ ಮಂತ್ರಾ ಕಲಸಾಕ್‌ ಟ್ರಾಯ್‌ ಮಾಡಾ ಕತ್ತಾರು ಅಂತ ಕಾಣತೈತಿ.

ಜನತಾ ಪರಿವಾರದಾಗ ಬೆಳದಿರೋ ಬೊಮ್ಮಾಯಿ ಸಾಹೇಬ್ರು ಸಿಎಂ ಆದ ಕೂಡ್ಲೇನ ಕುಮಾರಸ್ವಾಮಿ ಸಾಹೇಬ್ರು ಜನತಾ ದಳದ ಸಿಎಂ ಅಂದ್ರು, ಜತೆಗೆ, ಸಾಹೇಬ್ರು ದೊಡ್ಡ ಗೌಡ್ರ ಮನಿಗಿ ಭೇಟಿ ಕೊಟ್ಟು ಆಶೀರ್ವಾದ ಪಡೆದಿದ್ದು ಮೂಲ ಬಿಜೆಪ್ಯಾರದು ಮತ್ತಷ್ಟು ಹೊಟ್ಟಿ ಉರಿಸಿದಂಗ ಕಾಣತೈತಿ. ಅವರಿಗೆ ಪರಿವಾರದ ಹೆಡ್‌ ಆಫೀಸಿಗಿ ಹೋಗಬೇಕು ಅಂತ ಹೇಳಿರಬೇಕು. ಸಿಎಂ ಸಾಹೇಬ್ರು ಪರಿವಾರದ ಹೆಡ್‌ ಆಫೀಸ್‌ ಅಂದ್ರ ಪದ್ಮನಾಭನಗರ ಅಂತ ಸೀದಾ ಅಲ್ಲಿಗಿ ಗಾಡಿಹೊಡದಂಗ ಐತಿ.

ಹೈಕಮಾಂಡ್‌ ಯಡಿಯೂರಪ್ಪ ಅವರ್ನ ಇಳಸಾಕ ಮಾಡಿದ್ದ ಕಸರತ್ತು ನೊಡಿದ್ರ ಏನೋ ದೊಡ್ಡ ಮಟ್ಟದ ಕ್ರಾಂತಿನ ಆಗಿ ಬಿಡತೈತಿ ಅನಾಂಗ ಇತ್ತು. ಈಗ ನೋಡಿದ್ರ ಗುಡ್ಡಾ ಅಗದು ಇಲಿ ಹಿಡದ್ರು ಅನ್ನಾರಂಗ ಹಿಂದಿನ ಮಂತ್ರಿಗೋಳ್ನ ಮುಂದುವರೆಸಿ ಹಳೆ ಬಾಗಿಲಿಗೆ ಪಾಲಿಸ್‌ ಮಾಡಿ ವಾರ್ನಿಸ್‌ ಹಚ್ಚಿದಂಗ ಆಗೇತಿ.

ಬೊಮ್ಮಾಯಿ ಸಾಹೇಬ್ರು ಭವಿಷ್ಯದ ಲೆಕ್ಕಾಚಾರ ಇಟ್ಕೊಂಡು ದೊಡ್ಡ ಗೌಡರ ಮನಿಗಿ ಹೋಗಿದ್ದು ನೋಡಿ ಯಡಿಯೂರಪ್ಪ ಏನು ಸುಮ್ನ ಕುಂದ್ರತಾರು ಅಂತೇನ ಅನಸುದಿಲ್ಲ. ಯಾಕಂದ್ರ ಇಷ್ಟೆಲ್ಲಾ ಮಾಡಿದ್ರೂ ಸ್ವಂತ ಮಗಗ ಒಂದು ಮಂತ್ರಿ ಸ್ಥಾನ ಕೊಡಸಾಕ್‌ ಆಗ್ಲಿಲ್ಲಾ ಅಂದ್ರ ಸುಮ್ನ ಕುಂದ್ರತಾರು ಅಂತೇನು ಅನಸುದಿಲ್ಲ. ಹೈಕಮಾಂಡು ಬೊಮ್ಮಾಯಿ ಸಾಹೇಬ್ರನ ಯಡಿಯೂರಪ್ಪ ಹಿಡಿತದಿಂದ ಹೊರಗ ತರಾಕ ಕಸರತ್ತು ನಡಿಸಿದಂಗ ಕಾಣತೈತಿ. ಇವರ ಇಬ್ಬರ ನಡಕ ಬೊಮ್ಮಾಯಿ ಸಾಹೇಬ್ರುದು ಹುಬ್ಬಳ್ಯಾಗ ತಗ್ಗು ಬಿದ್ದಿರೋ ರಸ್ತೆದಾಗ ಹೆಂಡ್ತಿ ಕರಕೊಂಡು ಸ್ಕೂಟರ್‌ ಓಡಿಸಿದಂಗ ಆಕ್ಕೇತಿ ಅಂತ ಅನಸ್ತೆತಿ.

ಅದರ ನಡಕ ಇಪ್ಪತ್ತು ವರ್ಷದಾಗ ಫ‌ಸ್ಟ್‌ ಟೈಮ್‌ ಕ್ಯಾಬಿನೆಟ್‌ ನಿಂದ ಹೊರಗುಳದಿರೋ ಜಾರಕಿಹೊಳಿ ಬ್ರದರ್ಸು ಸುಮ್ಮನ ಕುಂದ್ರತಾರು ಅಂತ ಅನಸುದಿಲ್ಲ. ಬೊಮ್ಮಾಯಿ ಸಾಹೇಬ್ರು ಎಷ್ಟು ದಿನಾ ಅಧಿಕಾರದಾಗ ಇದ್ರೂ ಅದೃಷ್ಟದ ಅವಕಾಶ, ಈ ಟೈಮಿನ್ಯಾಗ ನಮ್ಮಾರ ಸಿಎಂ ಆಗ್ಯಾರು ಅಂತೇಳಿ ಉತ್ತರ ಕರ್ನಾಟಕ ಮಂದಿ ತಮ್ಮ ಸ್ಟೇಟಸ್‌ ತಾವ ಚೇಂಜ್‌ ಮಾಡ್ಕೊಂಡಾರು. ಅವರ ಸ್ಟೇಟಸ್‌ ಬದಲಾಗಬೇಕು ಅಂದ್ರ ಬೊಮ್ಮಾಯಿ ಸಾಹೇಬ್ರು ಆ ಭಾಗದ ಕಡೆ ಸ್ವಲ್ಪ ಹೆಚ್ಚಿನಗಮನಹರಿಸಿದ್ರಜನರು ತಮಗ ತಾವ ಸಂಭ್ರಮ ಪಟ್ಟಿದ್ಕೂ ಒಂದ್‌ ಅರ್ಥಾ ಇರತೈತಿ. ಇಲ್ಲಾಂದ್ರ ಶೆಟ್ರಂಗ ಬಿಟ್ಟಿ ಅಧಿಕಾರ ಬಂದಷ್ಟು ದಿನಾ ಜಾತ್ರಿ ಮಾಡಿದ್ರಾತು ಅಂದ್ಕೊಂಡ್ರ, ಹುಬ್ಬಳ್ಳಿ-ಧಾರವಾಡದಾಗಿನಿ ಗುಂಡಿನೂ ಮುಚ್ಚಾಕ ಆಗುದಿಲ್ಲ.

ಶಂಕರ ಪಾಗೋಜಿ

ಟಾಪ್ ನ್ಯೂಸ್

ರಾಹುಲ್‌ಗೆ ಕಾಂಗ್ರೆಸ್‌ ನೇತೃತ್ವ ವಹಿಸಲು ನಿರ್ಣಯ; ಮಲ್ಲಿಕಾರ್ಜುನ ಖರ್ಗೆ

ರಾಹುಲ್‌ಗೆ ಕಾಂಗ್ರೆಸ್‌ ನೇತೃತ್ವ ವಹಿಸಲು ನಿರ್ಣಯ; ಮಲ್ಲಿಕಾರ್ಜುನ ಖರ್ಗೆ

Untitled-1

ಸೆಕ್ಯೂರಿಟಿ ಗಾರ್ಡ್‌ ಸೋಗಿನಲ್ಲಿ ಮನೆ ಕಳವು: ನಾಲ್ವರು ಭದ್ರತಾ ಸಿಬ್ಬಂದಿ ಸೇರಿ ಐವರ ಬಂಧನ

ಮುಕ್ತ ವ್ಯಾಪಾರ’ ಮಾತುಕತೆಗೆ ಮರುಚಾಲನೆ

ಮುಕ್ತ ವ್ಯಾಪಾರ’ ಮಾತುಕತೆಗೆ ಮರುಚಾಲನೆ

ಸಿಎಂ ಕಚೇರಿ ನೌಕರನ ಭ್ರಷ್ಟಾಚಾರ ಬಯಲಾದರೂ ಸಿಎಂ ಮೌನ ಯಾಕೆ?

ಸಿಎಂ ಕಚೇರಿ ನೌಕರನ ಭ್ರಷ್ಟಾಚಾರ ಬಯಲಾದರೂ ಸಿಎಂ ಮೌನ ಯಾಕೆ?

ಅಮೆರಿಕದ ಮೊದಲ ಕಪ್ಪುವರ್ಣೀಯ ವಿದೇಶಾಂಗ ಸಚಿವ ಪೊವೆಲ್‌ ನಿಧನ

ಅಮೆರಿಕದ ಮೊದಲ ಕಪ್ಪುವರ್ಣೀಯ ವಿದೇಶಾಂಗ ಸಚಿವ ಪೊವೆಲ್‌ ನಿಧನ

ನ.8ರಿಂದ ದತ್ತಮಾಲಾ ಅಭಿಯಾನ; ಗಂಗಾಧರ ಕುಲಕರ್ಣಿ

ನ.8ರಿಂದ ದತ್ತಮಾಲಾ ಅಭಿಯಾನ; ಗಂಗಾಧರ ಕುಲಕರ್ಣಿ

 18 ತಿಂಗಳಲ್ಲಿ ಅತೀ ಕಡಿಮೆ ಕೋವಿಡ್‌ ಸೋಂಕು

 18 ತಿಂಗಳಲ್ಲಿ ಅತೀ ಕಡಿಮೆ ಕೋವಿಡ್‌ ಸೋಂಕು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

t a sharavana

ಅಲ್ಪಸಂಖ್ಯಾತರ ಮೇಲೆ ಪ್ರೀತಿಯಿದ್ದರೆ ಜಮೀರ್ ರನ್ನೇ ಸಿಎಂ ಅಭ್ಯರ್ಥಿಯಾಗಿಸಿ: ಶರವಣ ಸವಾಲು

ದೇಶವಾಸಿಗಳನ್ನು ಭಿಕ್ಷುಕರನ್ನಾಗಿಸಿದ್ದಾರೆ: ಪಿಎಂ ಮೋದಿ ವಿರುದ್ಧ ಕಾಂಗ್ರೆಸ್ ಟ್ವೀಟಾಸ್ತ್ರ

ದೇಶವಾಸಿಗಳನ್ನು ಭಿಕ್ಷುಕರನ್ನಾಗಿಸಿದ್ದಾರೆ: ಪಿಎಂ ಮೋದಿ ವಿರುದ್ಧ ಕಾಂಗ್ರೆಸ್ ಟ್ವೀಟಾಸ್ತ್ರ

cm-b-bommai

ಉಪಚುನಾಣೆ ತಮಗೆ ಪ್ರತಿಷ್ಠೆಯ ಪ್ರಶ್ನೆಯಲ್ಲ: ಸಿಎಂ ಬಸವರಾಜ್ ಬೊಮ್ಮಾಯಿ

2022ರಲ್ಲಿ ಸಿಡಬ್ಲ್ಯುಸಿ ಚುನಾವಣೆ; ರಾಹುಲ್ ಗಾಂಧಿಗೆ ಅಧ್ಯಕ್ಷ ಪಟ್ಟ ಸಾಧ್ಯತೆ?

2022ರಲ್ಲಿ ಸಿಡಬ್ಲ್ಯುಸಿ ಚುನಾವಣೆ; ರಾಹುಲ್ ಗಾಂಧಿಗೆ ಅಧ್ಯಕ್ಷ ಪಟ್ಟ ಸಾಧ್ಯತೆ?

ಅಲ್ಪಸಂಖ್ಯಾತ ನಾಯಕರ ʼರಾಜಕೀಯ ನರಮೇಧʼಕ್ಕೆ ಯಾರು ಕಾರಣವೆಂದು ಜನರಿಗೆ ಗೊತ್ತಾಗಲಿ: ಎಚ್ ಡಿಕೆ

ಅಲ್ಪಸಂಖ್ಯಾತ ನಾಯಕರ ʼರಾಜಕೀಯ ನರಮೇಧʼಕ್ಕೆ ಯಾರು ಕಾರಣವೆಂದು ಜನರಿಗೆ ಗೊತ್ತಾಗಲಿ: ಎಚ್ ಡಿಕೆ

MUST WATCH

udayavani youtube

ತೆರೆದ ಹೊಂಡದಲ್ಲಿ ಬಿದ್ದು ಸಾಯುತ್ತಿವೆ ಪ್ರಾಣಿಗಳು : ಕಣ್ಣು ಮುಚ್ಚಿ ಕುಳಿತ ನಗರ ಸಭೆ

udayavani youtube

ದುರಸ್ತಿಗೊಂಡು ಎರಡೇ ದಿನಕ್ಕೆ ಹಳೆ ಚಾಳಿಯನ್ನು ಮುಂದುವರಿಸಿದ ವಾಚ್ ಟವರ್

udayavani youtube

ಕೊನೆಗೂ ರಾಜ್ಯದಲ್ಲಿ 1 ರಿಂದ 5ನೇ ತರಗತಿ ಶಾಲೆ ಆರಂಭಕ್ಕೆ ಸರಕಾರದ ಗ್ರೀನ್ ಸಿಗ್ನಲ್

udayavani youtube

ಮಹಿಳೆಯರಿಗೆ ಉದ್ಯೋಗ ಕಲ್ಪಿಸಿದ ಯಶಸ್ವೀ ಮಹಿಳಾ ಉದ್ಯಮಿ

udayavani youtube

ಹಳೆ ದ್ವೇಷ : ICU ವಾರ್ಡ್ ನಲ್ಲೆ ನಡೆಯಿತು ಎರಡು ತಂಡಗಳ ಮಾರಾಮಾರಿ

ಹೊಸ ಸೇರ್ಪಡೆ

ರಾಹುಲ್‌ಗೆ ಕಾಂಗ್ರೆಸ್‌ ನೇತೃತ್ವ ವಹಿಸಲು ನಿರ್ಣಯ; ಮಲ್ಲಿಕಾರ್ಜುನ ಖರ್ಗೆ

ರಾಹುಲ್‌ಗೆ ಕಾಂಗ್ರೆಸ್‌ ನೇತೃತ್ವ ವಹಿಸಲು ನಿರ್ಣಯ; ಮಲ್ಲಿಕಾರ್ಜುನ ಖರ್ಗೆ

Untitled-1

ಸೆಕ್ಯೂರಿಟಿ ಗಾರ್ಡ್‌ ಸೋಗಿನಲ್ಲಿ ಮನೆ ಕಳವು: ನಾಲ್ವರು ಭದ್ರತಾ ಸಿಬ್ಬಂದಿ ಸೇರಿ ಐವರ ಬಂಧನ

ಮುಕ್ತ ವ್ಯಾಪಾರ’ ಮಾತುಕತೆಗೆ ಮರುಚಾಲನೆ

ಮುಕ್ತ ವ್ಯಾಪಾರ’ ಮಾತುಕತೆಗೆ ಮರುಚಾಲನೆ

ಸಿಎಂ ಕಚೇರಿ ನೌಕರನ ಭ್ರಷ್ಟಾಚಾರ ಬಯಲಾದರೂ ಸಿಎಂ ಮೌನ ಯಾಕೆ?

ಸಿಎಂ ಕಚೇರಿ ನೌಕರನ ಭ್ರಷ್ಟಾಚಾರ ಬಯಲಾದರೂ ಸಿಎಂ ಮೌನ ಯಾಕೆ?

4ಜಿ ಡೌನ್ ಲೋಡ್ ಸ್ಪೀಡ್ ಜಿಯೋ ಮುಂದೆ

4ಜಿ ಡೌನ್ ಲೋಡ್ ಸ್ಪೀಡ್ ಜಿಯೋ ಮುಂದೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.