Udayavni Special

ಮಕ್ಕಳ ಮನಸೆಳೆಯುವ ದಾಂಡೇಲಿಯ ಇಕೋ ಪಾರ್ಕ್‌


Team Udayavani, Aug 22, 2019, 5:18 AM IST

g-34

ದಾಂಡೇಲಿ ಪಟ್ಟಣದಲ್ಲಿ 25 ಎಕ್ರೆ ಅರಣ್ಯ ಪ್ರದೇಶದಲ್ಲಿ ಇಕೋ ಪಾರ್ಕ್‌ ಎಂಬ ಮಾಯಾಬಜಾರ್‌ ಮೈದಳೆದು ನಿಂತಿದೆ. ಮಕ್ಕಳ ಮನೋರಂಜನಗೆ ಇದೊಂದು ಅತಿ ವಿಶಿಷ್ಟ ಪಿಕ್‌ನಿಕ್‌ ತಾಣ ಎಂದೆನಿಸಿಕೊಂಡಿದೆ.

ಟಾಮ್‌ ಆ್ಯಂಡ್‌ ಜೆರ್ರಿ, ಮಿಕ್ಕಿ ಮೌಸ್‌, ಡೋರೆಮನ್‌, ಕಾಂಗಾ, ಎಂವೆಜರ್, ಪಾಪೆಯೆ, ಮಿಚಿಗನ್‌, ಶ್ರೇಕ್‌, ಆ್ಯಂಗ್ರಿ ಬರ್ಡ್ಸ್‌,ಛೋಟಾ ಭೀಮ್, ಅಲಾದಿನ್‌, ಜಂಗಲ್ ಬುಕ್‌ನ ಮೊಗ್ಲಿ, ಸ್ಕಿಪ್ಪಿ ಸೆರಲ್, ಚಿಪ್‌ ಆ್ಯಂಡ್‌ ಡೆಲ್, ಮೋಟು ಪೊತ್ಲು, ಹಾಸ್ಯ ಚಕ್ರವರ್ತಿ ಚಾರ್ಲಿ ಚಾಪ್ಲಿನ್‌ ಹೀಗೆ ಟಿ.ವಿ. ಯಲ್ಲಿ ಬರುವ ಮಕ್ಕಳ ಕಾರ್ಟೂನ್‌ ಲೋಕದ ಪಾತ್ರಗಳು ಕಣ್ಣೆದುರು ಬಂದರೆ ಹೇಗೆ? ಹೌದು, ಇವರೆಲ್ಲರನ್ನೂ ಒಂದೇ ವೇದಿಕೆಯಲ್ಲಿ ನೋಡುವಂಥ ಅವಕಾಶ ಇಲ್ಲಿದೆ. ಇದೊಂದು ಸುಂದರವಾದ ಮಾಯಾಬಜಾರ್‌. ಇಲ್ಲಿ ಎಲ್ಲವೂ ಮನಮೋಹಕ. ಮಕ್ಕಳನ್ನು ಇಲ್ಲಿಗೆ ಕರೆದುಕೊಂಡು ಬಂದ ತಂದೆ-ತಾಯಿಗೆ, ಮಕ್ಕಳೇ ಶಿಕ್ಷಕರು.

ಎಲ್ಲಿ ಅಂತೀರಾ? ಉತ್ತರಕನ್ನಡ ಜಿಲ್ಲೆಯ ದಾಂಡೇಲಿ ಪಟ್ಟಣದ ಬಸ್‌ ನಿಲ್ದಾಣದ ಹಿಂದೆ ಸುಮಾರು 25 ಎಕ್ರೆ ಅರಣ್ಯ ಪ್ರದೇಶದಲ್ಲಿ ದಂಡಕಾರಣ್ಯ ಇಕೋ ಪಾರ್ಕ್‌ ಅನಾವರಣಗೊಂಡಿದೆ.

ಪಾರ್ಕ್‌ನೊಳಗೆ ಕಾಲಿಡುತ್ತಿದ್ದಂತೆ ಇರುವೆಗಳ ದೊಡ್ಡ ಸಾಲಿನ ದರ್ಶನವಾಗುತ್ತದೆ. ಅರೇ, ಇರುವೆಗಳು ಕಚ್ಚಬಹುದು ನಿಧಾನವಾಗಿ ನಡೆಯಿರಿ ಎಂದು ಹೇಳುತ್ತಾ ಮುಂದೆ ಸಾಗಿದಾಗ ಮರದ ಮರೆಯಿಂದ ಹೊರಬಂದ ಚಾರ್ಲಿ ಚಾಪ್ಲಿನ್‌ ತಮಾಷೆ ಪ್ರಸಂಗವೊಂದನ್ನು ತೋರಿಸಲು ಮಕ್ಕಳನ್ನು ಆಹ್ವಾನಿಸುವಂತೆ ನಿಂತಿದ್ದಾರೆ. ಚಾಪ್ಲಿನ್‌ ಟ್ರೇಡ್‌ ಮಾರ್ಕ್‌ ಎನಿಸಿರುವ ಟೋಪಿ ತಲೆಯ ಮೇಲಿದ್ದರೂ ಕೋಲನ್ನು ಅವರು ಎಲ್ಲಿಯೋ ಬಿಟ್ಟು ಬಂದಿರುವಂತಿದೆ. ಮೆಲ್ ಫ್ರಾಗ್‌ 19-20ನೇ ಶತಮಾನದ ಹಾಡುಗಳನ್ನು ಹಾಡುತ್ತಾ ಡ್ಯಾನ್ಸ್‌ ಮಾಡುತ್ತಾ ಇರುವ ಮಿಚಿಗನ್‌, ಪುರಪುರಿಯಲ್ಲಿ ವಾಸಿಸುವ ಮೋಟು ಮತ್ತು ಪತ್ಲು ಆಪ್ತಸ್ನೇಹಿತರು. ದೋಲಕ್‌ಪುರದ ಛೋಟಾ ಭೀಮ್‌ನ ಕುಟುಂಬ ಒಂದೆಡೆಯಾದರೆ, ಇನ್ನೊಂದೆಡೆ ಕಾಡಿನ ಪ್ರಾಣಿಗಳ ಸಹವಾಸದಲ್ಲೇ ಬೆಳೆದ ಮೊಗ್ಲಿ, ಆಮೆಯೊಂದರ ಮೇಲೆ ಸವಾರಿ ಮಾಡುತ್ತಿರುವ ದೃಶ್ಯ ನಗೆ ಉಕ್ಕಿಸುತ್ತದೆ. ಸೂಪರ್‌ ಮ್ಯಾನ್‌ ಸಹ ಈ ಪಾರ್ಕ್‌ನಲ್ಲಿ ತನ್ನ ತೋಳ್ಬಲ ಪ್ರದರ್ಶನಕ್ಕೆ ನಿಂತಿದ್ದಾನೆ.

ಜೀವನವಿಡೀ ಸೆಗಣಿಯನ್ನು ಉಂಡೆಮಾಡಿ ಅದನ್ನು ಉರುಳಿಸುವುದರಲ್ಲೇ ಕಾಲ ಕಳೆಯುವ ಕಾಪೋರೋಫಾಗಸ್‌ ಕೀಟಗಳು, ಶುಭ್ರವಾದ, ನಯವಾದ, ಸೆಗಣಿಯನ್ನು ಹುಡುಕುವುದರೊಂದಿಗೆ ತನ್ನ ದಿನ ಪ್ರಾರಂಭಿಸುವ ಡಂಗ್‌-ಬೀಟಲ್ಸ್ ಇಷ್ಟೆಲ್ಲಾ ಸಿಮೆಂಟ್ ಆಕೃತಿಗಳಿವೆ. ಒಂದೂವರೆ ವರ್ಷದ ಅವಧಿಯಲ್ಲಿ ಸುಮಾರು 35-40 ಕಲಾವಿದರು ಪರಿಶ್ರಮ ವಹಿಸಿ 106 ಕಾರ್ಟೂನ್‌ ಶಿಲ್ಪಗಳನ್ನು ನಿರ್ಮಿಸಿದ್ದಾರೆ. ಇಟ್ಟಿಗೆ, ಕಬ್ಬಿಣ, ಮರಳು ಮತ್ತಿತರ ಕಚ್ಚಾ ಸಾಮಗ್ರಿಗಳನ್ನು ಬಳಸಿ ನಿರ್ಮಿಸಲಾಗಿರುವ ವಿಭಿನ್ನ ಉದ್ಯಾನವನ ಇದಾಗಿದೆ.

ದಾಂಡೇಲಿ ಭಾಗದಲ್ಲಿ ಪ್ರವಾಸೋದ್ಯಮವನ್ನು ಮತ್ತಷ್ಟು ಉತ್ತೇಜಿಸಲು ಈ ಸೌಲಭ್ಯ ಕಲ್ಪಿಸಲಾಗಿದೆ. ಜತೆಗೆ ಮನೋರಂಜನೆಗಾಗಿ ಜಿಮ್ನಾಶಿಯಂ, ಮಲ್ಟಿ ಪ್ಲೇ ಮಾಡಲಾಗಿದೆ. ದಂಡಕಾರಣ್ಯದ ಒಳಗಿರುವ ಯಾವುದೇ ಒಂದು ಮರವನ್ನೂ ಕಡಿಯದೆ. ಆಲಂಕಾರಿಕ ಹೂವು ಮತ್ತು ಹಣ್ಣಿನ ಗಿಡಗಳನ್ನೂ ಅಲ್ಲಿ ನೆಟ್ಟು ನೈಸರ್ಗಿಕ ಸನ್ನಿವೇಶದಲ್ಲೇ ಕಾರ್ಟೂನ್‌ ಶಿಲ್ಪಗಳನ್ನು ನಿರ್ಮಿಸಲಾಗಿದೆ.

ಕಲಾವಿದರಿಗೆ ಪ್ರತಿ ಶನಿವಾರ ಮತ್ತು ರವಿವಾರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸುವುದರ ಮೂಲಕ ಪ್ರತಿಭಾನ್ವೇಷಣೆ ಕಾರ್ಯವನ್ನೂ ನಡೆಸಲಾಗುತ್ತದೆ. ಈ ಕಾರ್ಟೂನ್‌ ಲೋಕ ಎಲ್ಲರಿಗೂ ಪರಿಸರದ ಮಹತ್ವವನ್ನು ಮನವರಿಕೆ ಮಾಡಿಕೊಡುತ್ತಲೇ ಪರಿಸರ ರಕ್ಷಣೆಯ ಮನೋಭಾವದ ಬೀಜ ಬಿತ್ತುವುದು ಅತ್ಯಂತ ಮಹತ್ವದ ವಿಷಯ. ಕುಡಿಯುವ ನೀರು, ಶೌಚಾಲಯ, ವಿಶ್ರಾಂತಿಗೆ ಪ್ಯಾರಾಗೋಲ ಮಾಹಿತಿ ಕೇಂದ್ರವನ್ನು ನಿರ್ಮಿಸಲಾಗಿದೆ. ದಾಂಡೇಲಿಗೆ ತಮ್ಮ ಮಕ್ಕಳನ್ನು ಕರೆದುಕೊಂಡು ಬಂದರೆ ಈ ಕಾರ್ಟೂನ್‌ ಪಾರ್ಕ್‌ಗೆ ಬಂದು ಹೋಗಿ.

ಇತರ ಪ್ರವಾಸಿ ತಾಣಗಳು
ದಾಂಡೇಲಿ ಕಡೆ ಪ್ರವಾಸ ಬೆಳೆಸಿದರೆ ನೋಡಲು ಸುಂದರವಾರ ತಾಣಗಳು ಬಹಳಷ್ಟಿವೆ. ಅವುಗಳಲಿ ಪ್ರಮುಖವಾಗಿ ಕಾಳಿ ನದಿ, ಸಿಂಥೆರಿ ರಾಕ್‌, ಸೂಪ ಡ್ಯಾಮ್‌, ಅಂಶಿ ರಾಷ್ಟ್ರೀಯ ಉದ್ಯಾನವನ, ಸೈಕ್ಸ್‌ ಪಾಯಿಂಟ್, ಕವಳ ಗುಹೆ, ಕುಲ್ಗಿ ನೇಚರ್‌ ಕ್ಯಾಂಪ್‌ ಆಕರ್ಷಣೀಯ ಸ್ಥಳಗಳು.

•ಟಿ.ಶಿವಕುಮಾರ್‌

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಮೂರು ಭಾರತೀಯ ಚಿತ್ರಗಳು

ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಮೂರು ಭಾರತೀಯ ಚಿತ್ರಗಳು

ಬೆಳಗಾವಿ : ಬಿಜೆಪಿ ಚಾಣಕ್ಯ ಅಮಿತ್ ಶಾಗೆ ಬೆಳ್ಳಿ ಗದೆ ನೀಡಿ, ರುದ್ರಾಕ್ಷಿ ಹಾರ ಹಾಕಿ ಸ್ವಾಗತ

ಬೆಳಗಾವಿ : ಬಿಜೆಪಿ ಚಾಣಕ್ಯ ಅಮಿತ್ ಶಾಗೆ ಬೆಳ್ಳಿ ಗದೆ ನೀಡಿ, ರುದ್ರಾಕ್ಷಿ ಹಾರ ಹಾಕಿ ಸ್ವಾಗತ

ಸಿದ್ದರಾಮಯ್ಯ ಯಾವಾಗ ಜ್ಯೋತಿಷಿಯಾದರೋ ಗೊತ್ತಿಲ್ಲ, ಭವಿಷ್ಯ ಮಾತ್ರ ಸುಳ್ಳಾಗುತ್ತಿದೆ ;ಈಶ್ವರಪ್ಪ

ಸಿದ್ದರಾಮಯ್ಯ ಯಾವಾಗ ಜ್ಯೋತಿಷಿಯಾದರೋ ಗೊತ್ತಿಲ್ಲ, ಭವಿಷ್ಯ ಮಾತ್ರ ಸುಳ್ಳಾಗುತ್ತಿದೆ;ಈಶ್ವರಪ್ಪ

ವಿಶ್ವ ಸಿನಿಮಾ ವಿಭಾಗ : 50 ಚಿತ್ರಗಳ ದೊಡ್ಡ ಪಟ್ಟಿ !

ವಿಶ್ವ ಸಿನಿಮಾ ವಿಭಾಗ : 50 ಚಿತ್ರಗಳ ದೊಡ್ಡ ಪಟ್ಟಿ !

ದಿ.ಸುರೇಶ್ ಅಂಗಡಿ ನಿವಾಸಕ್ಕೆ ಭೇಟಿ ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ

ದಿ.ಸುರೇಶ್ ಅಂಗಡಿ ನಿವಾಸಕ್ಕೆ ಭೇಟಿ ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ

ಸರ್ಕಾರದಲ್ಲಿ ಹಣವಿಲ್ಲವೆಂದರೆ ಶ್ವೇತಪತ್ರ ಹೊರಡಿಸಲಿ: ಪರಮೇಶ್ವರ್ ಆಗ್ರಹ

ಸರ್ಕಾರದಲ್ಲಿ ಹಣವಿಲ್ಲವೆಂದರೆ ಶ್ವೇತಪತ್ರ ಹೊರಡಿಸಲಿ: ಪರಮೇಶ್ವರ್ ಆಗ್ರಹ

ಪಣಜಿ: ತೆರೆದುಕೊಂಡ ಚಿತ್ರ ಜಗತ್ತು ; ಎರಡನೇ ದಿನ ಪರವಾಗಿಲ್ಲ

ಪಣಜಿ: ತೆರೆದುಕೊಂಡ ಚಿತ್ರ ಜಗತ್ತು ; ಎರಡನೇ ದಿನ ಪರವಾಗಿಲ್ಲಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶ್ವಾನ ಜಗದೊಳಗೆಒಂದು ಸುತ್ತಾಟ

ನಾವು ನೋಡಿದ ಸಿನಿಮಾ: ಶ್ವಾನ ಜಗದೊಳಗೆಒಂದು ಸುತ್ತಾಟ

kodibengre

ಪ್ರಕೃತಿ ಸೌಂದರ್ಯದ ಖನಿ ಕೋಡಿಬೇಂಗ್ರೆ

costalwood-kangal

ಕೊರೊನಾ ಕಪಿಮುಷ್ಟಿಗೆ ಕಂಗಾಲು!

ಸಿಂಪಲ್‌ ಆಗಿ ಮಾಡಿ ಬಗೆಬಗೆಯ ದೋಸೆಗಳು

ಸಿಂಪಲ್‌ ಆಗಿ ಮಾಡಿ ಬಗೆಬಗೆಯ ದೋಸೆಗಳು

pingara-2

ತೆರೆಗೆ ಬರಲು ಅಣಿಯಾಗಿದೆ ಪಿಂಗಾರ

MUST WATCH

udayavani youtube

KBCಯಲ್ಲಿ 12.5 ಲಕ್ಷ ಗೆದ್ದು ಬಡ ಮಕ್ಕಳ ಆಶಾಕಿರಣವಾದ ರವಿ ಕಟಪಾಡಿ | Udayavani

udayavani youtube

Whatsapp ಅನ್ನು ಓವರ್ ಟೇಕ್ ಮಾಡಿದ ಸಿಗ್ನಲ್!!??

udayavani youtube

ದ.ಕ ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ವಿತರಣೆ ಅಭಿಯಾನಕ್ಕೆ ಕೋಟ ಶ್ರೀನಿವಾಸ ಪೂಜಾರಿ ಚಾಲನೆ

udayavani youtube

ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ 19 ಲಸಿಕೆ ಅಭಿಯಾನ; ಪ್ರಥಮ ಡೋಸ್ ನೀಡಿ ಚಾಲನೆ

udayavani youtube

ಉಡುಪಿಯಲ್ಲಿ ಕೋರೋನಾ ಲಸಿಕೆ ಪಡೆದ ಮೊದಲ ವ್ಯಕ್ತಿಯ ಮಾತು

ಹೊಸ ಸೇರ್ಪಡೆ

ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಮೂರು ಭಾರತೀಯ ಚಿತ್ರಗಳು

ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಮೂರು ಭಾರತೀಯ ಚಿತ್ರಗಳು

ಬೆಳಗಾವಿ : ಬಿಜೆಪಿ ಚಾಣಕ್ಯ ಅಮಿತ್ ಶಾಗೆ ಬೆಳ್ಳಿ ಗದೆ ನೀಡಿ, ರುದ್ರಾಕ್ಷಿ ಹಾರ ಹಾಕಿ ಸ್ವಾಗತ

ಬೆಳಗಾವಿ : ಬಿಜೆಪಿ ಚಾಣಕ್ಯ ಅಮಿತ್ ಶಾಗೆ ಬೆಳ್ಳಿ ಗದೆ ನೀಡಿ, ರುದ್ರಾಕ್ಷಿ ಹಾರ ಹಾಕಿ ಸ್ವಾಗತ

ಸಿದ್ದರಾಮಯ್ಯ ಯಾವಾಗ ಜ್ಯೋತಿಷಿಯಾದರೋ ಗೊತ್ತಿಲ್ಲ, ಭವಿಷ್ಯ ಮಾತ್ರ ಸುಳ್ಳಾಗುತ್ತಿದೆ ;ಈಶ್ವರಪ್ಪ

ಸಿದ್ದರಾಮಯ್ಯ ಯಾವಾಗ ಜ್ಯೋತಿಷಿಯಾದರೋ ಗೊತ್ತಿಲ್ಲ, ಭವಿಷ್ಯ ಮಾತ್ರ ಸುಳ್ಳಾಗುತ್ತಿದೆ;ಈಶ್ವರಪ್ಪ

IRB building opening

ಐಆರ್‌ಬಿ ಕಟ್ಟಡ ಉದ್ಘಾಟನೆ

Jana Sevaka Ceremony in Belgaum today

ಇಂದು ಬೆಳಗಾವಿಯಲ್ಲಿ ಜನಸೇವಕ ಸಮಾರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.