- Saturday 07 Dec 2019
ಲವ್ ತಪ್ಪಲು ಕಾರಣವಾದ ಇಂಗ್ಲಿಷ್ !
Team Udayavani, Jun 20, 2019, 5:00 AM IST
ಸೂರಜ್ ಶೆಟ್ಟಿ ನಿರ್ದೇಶನ ಮತ್ತು ಹರೀಶ್ ಶೇರಿಗಾರ್ ಮತ್ತು ಶರ್ಮಿಳಾ ಶೇರಿಗಾರ್ ನಿರ್ಮಾಣದ “ಇಂಗ್ಲಿಷ್’ ಸಿನೆಮಾದ ಚಿತ್ರೀಕರಣ ಪೂರ್ಣಗೊಂಡಿದ್ದು ಮಳೆಗಾಲ ಮುಗಿದ ಕೂಡಲೇ ಬಿಡುಗಡೆಯಾಗುವ ನಿರೀಕ್ಷೆ ಇದೆ. ಚಿತ್ರದ ಎರಡು ಹಾಡುಗಳ ಚಿತ್ರೀಕರಣ ಮಾತ್ರ ಬಾಕಿ ಉಳಿದಿದ್ದು, ಎಲ್ಲವೂ ಅಂದುಕೊಂಡಂತೆ ಆದರೆ, ಆಗಸ್ಟ್‌ನಲ್ಲಿ ಸಿನೆಮಾ ತೆರೆಗೇರುವ ನಿರೀಕ್ಷೆಯಿದೆ. ಇಂಗ್ಲಿಷ್ ಗೊತ್ತಿಲ್ಲದ ಕಾರಣಕ್ಕೆ ಪ್ರೀತಿಯಿಂದ ದೂರವಿರಬೇಕಾದ ಪರಿಸ್ಥಿತಿಯನ್ನು ಎದುರಿಸುವ ಯುವಕನೊಬ್ಬನ ಸುತ್ತ ಹೆಣೆದ ಕಥೆಯನ್ನು ಹೊಂದಿರುವ ಸಿನೆಮಾ. ಮಾಲ್‌ನಲ್ಲಿ ವೇಷ ಹಾಕಿ ಕುಣಿಯುವ ಯುವಕನೋರ್ವನಿಗೆ ಓರ್ವ ಯುವತಿಯಲ್ಲಿ ಪ್ರೀತಿ ಮೂಡುತ್ತದೆ. ಆದರೆ ಆಕೆ ಇಂಗ್ಲಿಷ್ ಕಲಿತವಳು, ಈತನಿಗೆ ಇಂಗ್ಲಿಷ್ ಗೊತ್ತಿಲ್ಲ. ಆತನಿಗೆ ಇಂಗ್ಲಿಷ್ ಗೊತ್ತಿಲ್ಲ ಎಂದು ಅವಳು ಇವನಿಂದ ದೂರವಾಗಲು ಪ್ರಯತ್ನಿಸುತ್ತಾಳೆ. ಇದರಿಂದ ಬೇಸರಗೊಳ್ಳುವ ಆತ, ತನ್ನ ಗೆಳೆಯರ ಸಹಾಯ ಪಡೆದು ಹೇಗಾದರೂ ಮಾಡಿ ಇಂಗ್ಲಿಷ್ ಕಲಿಯಬೇಕು ಎಂದು ಪಣ ತೊಡುತ್ತಾನೆ. ಅದಕ್ಕಾಗಿ ತೀವ್ರ ಶ್ರಮಪಡುತ್ತಾನೆ. ಇದರಿಂದ ಆಕೆಗೆ ಯುವಕನ ಮೇಲೆ ಪ್ರೀತಿ ಮೂಡುತ್ತದೆ. ಆದರೆ ಆಕೆಯ ಮನೆಯವರು ಆತನನ್ನು ಒಪ್ಪಿಕೊಳ್ಳಲು ಹಿಂದೇಟು ಹಾಕುತ್ತಾರೆ. ಬಳಿಕ ಮತ್ತಷ್ಟು ಸಾಧನೆ ಮಾಡಿ ಅವರ ಮನವೊಲಿಸುವಲ್ಲೂ ಆತ ಯಶಸ್ವಿಯಾಗುತ್ತಾನೆ. ಇವೆಲ್ಲವುಗಳ ಹಿಂದಿರುವುದು ಇಂಗ್ಲಿಷ್. ಆದ್ದರಿಂದ ಸಿನೆಮಾಕ್ಕೆ ಇಂಗ್ಲಿಷ್ ಎಂದು ಹೆಸರಿಡಲಾಗಿದೆ. ಈ ಸಿನೆಮಾದಲ್ಲಿ ಖ್ಯಾತ ನಟ ಅನಂತನಾಗ್ ಅವರು ನಟಿಸಿರುವುದು ಮತ್ತೂಂದು ವಿಶೇಷ.
ಪೃಥ್ವಿ ಅಂಬಾರ್, ನವ್ಯಾ ಪೂಜಾರಿ, ನವೀನ್ ಡಿ. ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ವಿಸ್ಮಯ ವಿನಾಯಕ, ದೀಪಕ್ ರೈ ಪಾಣಾಜೆ, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಪ್ರಸನ್ನ ಬೈಲೂರು, ರವಿ ರಾಮಕುಂಜ ಮೊದಲಾದವರು ತಾರಾಗಣದಲ್ಲಿರುವ ಈ ಸಿನೆಮಾಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ನಿರ್ದೇಶನ ಸೂರಜ್ ಶೆಟ್ಟಿ ಅವರದ್ದು. ಶಶಿರಾಜ್ ಕಾವೂರು ಮತ್ತು ಅರ್ಜುನ್ ಲೂಯಿಸ್ ಅವರ ಸಾಹಿತ್ಯವಿದ್ದು, ಛಾಯಾಗ್ರಹಣದಲ್ಲಿ ಕೃಷ್ಣ ಸಾರಥಿ, ಮನು ಶೇರಿಗಾರ ಸಂಕಲನವಿದೆ. ಸಂಗೀತದಲ್ಲಿ ಮಣಿಕಾಂತ್ ಕೊಡುಗೆಯಿದೆ.
ಈ ವಿಭಾಗದಿಂದ ಇನ್ನಷ್ಟು
-
"ದೇವರ ಸ್ವಂತ ನಾಡು' ಕೇರಳದಲ್ಲಿ ಪ್ರಕೃತಿ ರಮಣೀಯ ತಾಣಗಳಿಗೆ ಕೊರತೆ ಇಲ್ಲ. ಅದರಲ್ಲೂ ಹಸುರಿನಿಂದ ಕೂಡಿದ ಬೆಟ್ಟ ಗುಡ್ಡ ಎಂತಹವರನ್ನೂ ತನ್ನತ್ತ ಸೆಳೆಯುವ ಚುಂಬಕ...
-
ಕೋಸ್ಟಲ್ವುಡ್ನಲ್ಲಿ ಹಲವು ದಾಖಲೆ ಬರೆದಿರುವ "ಗಿರಿಗಿಟ್' ಸಿನೆಮಾ ಮೊನ್ನೆ ಶನಿವಾರ ಶತಕದ ಸಾಧನೆ ಬರೆದಿದೆ. ಮಂಗಳೂರಿನ ಜ್ಯೋತಿ, ಭಾರತ್ ಸಿನೆಮಾಸ್, ಸಿನೆಪೊಲೀಸ್,...
-
ಹೆಸರಿನಿಂದಲೇ ಗಮನ ಸೆಳೆದ ಸಿನೆಮಾ "ಲುಂಗಿ'. ಮಂಗಳೂರು ಮೂಲದ ಪ್ರತಿಭೆಗಳ ಹೊಸ ರೀತಿಯ ಸಿನೆಮಾವಿದು. ಅ. 11ರಂದು ತೆರೆ ಕಂಡ "ಲುಂಗಿ' ಸಿನೆಮಾ ನ. 29ರಂದು 50ನೇ ದಿನಕ್ಕೆ ಕಾಲಿರಿಸಿದೆ....
-
ಭವಿಷ್ ಆರ್.ಕೆ. ಕ್ರಿಯೇಶನ್ಸ್ ಲಾಂಛನದಲ್ಲಿ ತಯಾರಾದ "ಆಟಿಡೊಂಜಿ ದಿನ' ಸಿನೆಮಾ ಸದ್ಯ ಕೋಸ್ಟಲ್ವುಡ್ನಲ್ಲಿ ಹೊಸ ನಿರೀಕ್ಷೆಯೊಂದಿಗೆ ತೆರೆಕಾಣಲು ಅಣಿಯಾಗಿದೆ....
-
ಪೌರಾಣಿಕ ಹಿನ್ನೆಲೆ ಮತ್ತು ಪ್ರಾಕೃತಿಕ ಸಂಪತ್ತನ್ನು ತನ್ನ ಒಡಲಲ್ಲಿಟ್ಟುಕೊಂಡಿರುವ ಪ್ರವಾಸಿ ತಾಣ ಯಾಣವು ಪ್ರವಾಸಿ ಗರನ್ನು ಕೈ ಬೀಸಿ ಕರೆಯುತ್ತದೆ. ಹಸುರು...
ಹೊಸ ಸೇರ್ಪಡೆ
-
"ಅರ್ಜುನ್ ನೀನು ಹೇಳಿದಂಗೆ ಈ ಕಾರನ್ನ ತಗೊಂಡ್ ಹೋದ್ರೆ ಹತ್ತುಕೋಟಿ ಸಿಗುತ್ತಾ... ' - ಸನಾ ಅಲಿಯಾಸ್ ಸೃಷ್ಟಿ ಆ ದಟ್ಟ ಕಾಡಿನ ನಡುವೆ ಈ ಡೈಲಾಗ್ ಹೇಳುವ ಹೊತ್ತಿಗೆ,...
-
ಅದೊಂದು ಶ್ರೀಮಂತ ಕುಟುಂಬದ ಮನೆ. ಒಮ್ಮೆ ವಾರಾಂತ್ಯದಲ್ಲಿ ಆ ಮನೆಯಲ್ಲಿರುವವರೆಲ್ಲರೂ ಬೇರೆ ಬೇರ ಕಾರಣಗಳಿಂದ ಮನೆಯಿಂದ ಹೊರ ಹೋಗಬೇಕಾದ ಪರಿಸ್ಥಿತಿ ಬರುತ್ತದೆ....
-
ನವದೆಹಲಿ: ಪಶುವೈದ್ಯೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಪೆಟ್ರೋಲ್ ಸುರಿದು ಸುಟ್ಟು ಹಾಕಿದ್ದ ನಾಲ್ವರು ಆರೋಪಿಗಳು ಪೊಲೀಸರ ಎನ್ ಕೌಂಟರ್ ಗೆ ಶುಕ್ರವಾರ ಮುಂಜಾನೆ...
-
ಸದಭಿರುಚಿ ಸಿನಿಮಾ ಮಾಡೋದಕ್ಕೆ ಒಂದು ಒಳ್ಳೆಯ ಕಥೆಯನ್ನು ಹುಡುಕಿ, ಆಯ್ಕೆ ಮಾಡಿಕೊಳ್ಳುವುದು, ಅದನ್ನು ಪ್ರೇಕ್ಷಕರಿಗೆ ಇಷ್ಟವಾಗುವಂತೆ ತೆರೆಮೇಲೆ ಕಟ್ಟಿಕೊಡೋದೇ...
-
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಮದಕರಿ ನಾಯಕನ ಕುರಿತ ಐತಿಹಾಸಿಕ ಚಿತ್ರಕ್ಕೆ "ಗಂಡುಗಲಿ ಮದಕರಿ ನಾಯಕ' ಎಂದು ಹೆಸರಿಡಲಾಗಿತ್ತು. ಕಳೆದ ಕೆಲ ತಿಂಗಳಿನಿಂದ...