“ಪಿರ್ಕಿಲು ಬತ್ತೆರ್‌’! ಸಿನೆಮಾದ ಶೂಟಿಂಗ್‌ ಆರಂಭ

Team Udayavani, Nov 7, 2019, 3:27 AM IST

ಕೋಸ್ಟಲ್‌ವುಡ್‌ನ‌ಲ್ಲಿ ಮತ್ತೂಂದು ಕಾಮಿಡಿ ಸಿನೆಮಾಕ್ಕೆ ಸಿದ್ಧತೆ ನಡೆಯುತ್ತಿದೆ. “ಪಿರ್ಕಿಲು ಬತ್ತೆರ್‌’ ಟೈಟಲ್‌ನಲ್ಲಿ ಮೂಡಿಬರುವ ಈ ಸಿನೆಮಾ ಪುತ್ತೂರಿನಲ್ಲಿ ಮುಹೂರ್ತ ಕಂಡು ಈಗ ಶೂಟಿಂಗ್‌ ಆರಂಭಿಸಿದೆ. ಕರಾವಳಿ ಸಿನೆಮಾಸ್‌ ಬ್ಯಾನರ್‌ನಲ್ಲಿ ಸತೀಶ್‌ ನಿರ್ಮಾಣದ ಈ ಸಿನೆಮಾದಲ್ಲಿ ವರ್ಧನ ಮುಖ್ಯ ಪಾತ್ರದಲ್ಲಿದ್ದಾರೆ. ಕಥೆ-ಚಿತ್ರಕಥೆ ನಿರ್ದೇಶನ ಜಯಂತ್‌ ಆರ್ಯ ಅವರದ್ದು. ಅಂದಹಾಗೆ, ಅರವಿಂದ ಬೋಳಾರ್‌ ಹಾಗೂ ಭೋಜರಾಜ್‌ ವಾಮಂಜೂರು ಅವರು ಈ ಸಿನೆಮಾದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿ ಕೊಳ್ಳಲಿದ್ದಾರೆ.

ಪಿರ್ಕಿಲು ಎಂಬ ಹೆಸರು ಇವರಿಬ್ಬರ ಕಥೆಯ ಮೇಲೆ ಹೊರಳಲಿದೆ ಎಂಬುದು ಸದ್ಯದ ಮಾಹಿತಿ. ಹೀಗಾಗಿ ಕಾಮಿಡಿ ಗೆಟಪ್‌ನಲ್ಲಿ ಸಿನೆಮಾ ವಿಭಿನ್ನವಾಗಿ ಮೂಡಿಬರಲಿದೆ ಎಂಬುದು ನಿರೀಕ್ಷೆ. ಉಳಿದಂತೆ, ತುಳುನಾಡಿನ ಖ್ಯಾತ ಕಾಮಿಡಿ ಕಲಾವಿದರು ಇದರಲ್ಲಿ ಬಣ್ಣಹಚ್ಚಿದ್ದಾರೆ.

ಹೊಸ ನಟರನ್ನು ಕೂಡ ಇಲ್ಲಿ ಪರಿಚಯಿಸಲಾಗಿದೆ. ವಿಶೇಷವೆಂದರೆ ಖ್ಯಾತ ಸಂಗೀತ ನಿರ್ದೇಶಕ ವಿ. ಮನೋಹರ್‌ ಅವರು ಈ ಸಿನೆಮಾಕ್ಕೆ ಸಂಗೀತದಲ್ಲಿ ಕೈಜೋಡಿಸಲಿದ್ದಾರೆ. ಹೀಗಾಗಿ ಈ ಸಿನೆಮಾದ ಸಂಗೀತದ ಮೇಲೆ ಕೋಸ್ಟಲ್‌ವುಡ್‌ನ‌ಲ್ಲಿ ಕುತೂಹಲವಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ