ಇಲ್ಲೊಕ್ಕೆಲ್‌ ದಿನ ರೆಡಿ ಆಗುತ್ತಿದೆ!

Team Udayavani, Apr 18, 2019, 6:00 AM IST

ಕೋಸ್ಟಲ್‌ವುಡ್‌ನ‌ಲ್ಲಿ ಬಹುನಿರೀಕ್ಷೆ ಮೂಡಿಸಿದ ಸಿನೆಮಾ “ಇಲ್ಲೊಕ್ಕೆಲ್‌’. ಕುಡ್ಲದ ಸ್ಟಾರ್‌ ಕಲಾವಿದರ ಮೂಲಕ ನಡೆಸಿದ ಈ ಸಿನೆಮಾ ಈಗಾಗಲೇ ಶೂಟಿಂಗ್‌ ಎಲ್ಲ ಮುಗಿಸಿ ಬಿಡುಗಡೆಯ ತವಕದಲ್ಲಿದೆ. “ಇಲ್ಲೊಕ್ಕೆಲ್‌’ ಯಾವಾಗ ರಿಲೀಸ್‌ ಮಾಡೋಣ ಎಂಬ ಲೆಕ್ಕಾಚಾರದಲ್ಲಿದ್ದಾರೆ.

ನವೀನ್‌ ಡಿ. ಪಡೀಲ್‌, ಅರವಿಂದ್‌ ಬೋಳಾರ್‌, ಭೋಜರಾಜ್‌ ವಾಮಂಜೂರ್‌, ಅದ್ವಿತಿ ಶೆಟ್ಟಿ, “ಅಪ್ಪೆ ಟೀಚರ್‌’ ಖ್ಯಾತಿಯ ನಿರೀಕ್ಷಾ ಶೆಟ್ಟಿ, ಭವ್ಯಾ ಗೌಡ, ವಿಸ್ಮಯ ವಿನಾಯಕ್‌, ವಿಜೆ ವಿನೀತ್‌, “ಪಿಲಿಬೈಲು ಯಮುನಕ್ಕ’ ಖ್ಯಾತಿಯ ಚಂದ್ರಕಲಾ ಮೋಹನ್‌, ಸೀತರಾಮ್‌ ಕಟೀಲು ಮತ್ತು ಇನ್ನೂ ಅನೇಕ ಖ್ಯಾತ ಕಲಾವಿದರು ನಟಿಸಿದ್ದಾರೆ. ವಿಶಿಷ್ಟ ಪಾತ್ರದಲ್ಲಿ ಹಾಸ್ಯ ಕಲಾವಿದರಾದ ಕುರಿಬಾಂಡ್‌ ರಂಗ ಅಭಿನಯಿಸಿದ್ದು, ಇವರು ಪ್ರಥಮ ಬಾರಿಗೆ ಕೋಸ್ಟಲ್‌ವುಡ್‌ಗೆ ಕಾಲಿಡುತ್ತಿದ್ದಾರೆ. ಇಲ್ಲೊಕ್ಕೆಲ್‌ಗೆ ಡಾ| ಸುರೇಶ್‌ ಎಸ್‌. ಕೋಟ್ಯಾನ್‌ ಚಿತ್ರಾಪು ಅವರ ನಿರ್ದೇಶನವಿದ್ದು, ವಾಸುದೇವ ಎಸ್‌. ಚಿತ್ರಾಪು ಮತ್ತು ಡಿ.ಎಂ. ಶೆಟ್ಟಿ ಅವರು ನಿರ್ಮಾಪಕರು.

ಈ ಸಿನೆಮಾದಲ್ಲಿರುವ “ಮುರ್ಕುದು ಪೋಪುಂಡುಯೇ ಮಾತಾ’ ಎಂಬ ಚರಣದ ಈ ಹಾಡು ಸದ್ಯ ತುಳುನಾಡಿನಲ್ಲಿ ವಿನೂತನ ಟ್ರೆಂಡ್‌ ಹುಟ್ಟು ಹಾಕಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಹಾಡು ಸಾಕಷ್ಟು ವೈರಲ್‌ ಆಗಿದೆ. ನಿಜಕ್ಕೂ ತುಳುನಾಡಿನ ಮರೆತುಹೋದ ಒಂದೊಂದು ನೆನಪುಗಳನ್ನು ಇಂದು ಕಾಡುವಂತೆ ಮಾಡಿದೆ.

ಡಾ| ಸುರೇಶ್‌ ಚಿತ್ರಾಪು ಅವರ ಸಾಹಿತ್ಯಕ್ಕೆ ರಾಜ್‌ ಷಾ ಅವರ ಅದ್ಬುತ ಸಂಗೀತ ಮತ್ತು ಮೈಮ್‌ ರಾಮ್‌ದಾಸ್‌, ಡಾ| ಸುರೇಶ್‌ ಚಿತ್ರಾಪು, ರಾಜ್‌ ಷಾ ಹಾಗೂ ವೇಲು ಅವರ ಸಿರಿಕಂಠದಲ್ಲಿ ಮೂಡಿಬಂದ ಈ ಹಾಡು ಕೇಳುಗರನ್ನು ತನ್ನತ್ತ ಸೆಳೆಯುತ್ತಿದೆ. ಈ ಹಾಡಿಗೆ ಶಾನಾಯಿಯಲ್ಲಿ ಬಾಲೇಶ್‌, ಟೇಪ್‌ ಮತ್ತು ಪೆರ್ಕಶ್‌ನಲ್ಲಿ ಡಿ. ವಿಕ್ಕಿ ಮತ್ತು ನವೀನ್‌ ರಾವ್‌, ಮ್ಯಾಂಡೊಲಿನ್‌ನಲ್ಲಿ ಸೀನು, ಕೀಬೋರ್ಡ್‌ನಲ್ಲಿ ರಾಜ್‌ ಷಾ ಕೈಜೋಡಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

  • ಸದ್ಯ ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚು. ಕೈಯಲ್ಲಿರುವ ಮೊಬೈಲ್‌ ಮೂಲಕವೇ ಸರ್ವ ಸಂಗತಿಗಳು ಜನರ ಕೈ ಸೇರುತ್ತಿವೆ. ಫೇಸ್‌ಬುಕ್‌, ವಾಟ್ಸಪ್‌, ಟ್ವಿಟ್ಟರ್‌, ಇನ್‌ಸ್ಟಾಗ್ರಾಂ...

  • ಕೋಸ್ಟಲ್‌ವುಡ್‌ ಸಿನೆಮಾದಲ್ಲಿ ಹೊಸ ನಿರೀಕ್ಷೆ ಮೂಡಿಸಿದ ನಿರ್ದೇಶಕ ಸೂರಜ್‌ ಶೆಟ್ಟಿ ಅವರ "ಇಂಗ್ಲಿಷ್‌' ಸಿನೆಮಾ ಶೂಟಿಂಗ್‌ ಪೂರ್ಣಗೊಳಿಸಿ ಈಗ ಬಾಕಿ ಉಳಿದ ಎರಡು...

  • "ಕೋರಿರೊಟ್ಟಿ' ಮೂಲಕ ಮನೆ ಮಾತಾದ ಉಡುಪಿಯ ರಜನೀಶ್‌ ನಿರ್ದೇಶನದ "ಬೆಲ್ಚಪ್ಪ' ಸಿನೆಮಾ ಬಿಡುಗಡೆಯ ಹಂತದಲ್ಲಿದೆ. ನಟನಾಗಿ ಬೆಳೆದರೂ ಕೂಡ ಅವರಿಗೆ ಮುಖ್ಯ ಗುರಿ ಇದ್ದದ್ದು...

  • "ಕಟಪಾಡಿ ಕಟ್ಟಪ್ಪ ಸಿನೆಮಾ ಸದ್ಯ ಕೋಸ್ಟಲ್‌ವುಡ್‌ನ‌ಲ್ಲಿ ಹೊಸ ಕ್ರೇಝ್ ಹುಟ್ಟುಹಾಕಿದೆ. ರಾಜೇಶ್‌ ಬ್ರಹ್ಮಾವರ ನಿರ್ಮಾಣ, ಜೆ.ಪಿ. ತುಮಿನಾಡ್‌ ನಿರ್ದೇಶನದ ಕಟ್ಟಪ್ಪ...

  • ಗುಜರಾತಿನ ಐತಿಹಾಸಿಕ ನಗರಗಳಲ್ಲಿ ಒಂದಾಗಿರುವ ಬರೋಡಾದ ವಡೋದರ ಪ್ರೇಕ್ಷಣೀಯ ತಾಣಗಳಲ್ಲಿ ಒಂದು. ಅನೇಕ ಚಾರಿತ್ರಿಕ ಸ್ಥಳಗಳು ಇಲ್ಲಿದ್ದರೂ ಸರಕಾರದ ನಿರ್ಲಕ್ಷ್ಯದಿಂದಾಗಿ...

ಹೊಸ ಸೇರ್ಪಡೆ