ದೀಪಾವಳಿಗೆ “ಏರೆಗಾವುಯೇ ಕಿರಿಕಿರಿ’

Team Udayavani, Aug 29, 2019, 5:00 AM IST

ರೋಶನ್‌ ವೇಗಸ್‌ ನಿರ್ಮಿಸುತ್ತಿರುವ ರಾಮ್‌ ಶೆಟ್ಟಿ ನಿರ್ದೇಶನದ “ಏರೆಗಾವುಯೇ ಕಿರಿಕಿರಿ’ ತುಳು ಸಿನೆಮಾದ ಚಿತ್ರೀಕರಣ ಇತ್ತೀಚೆಗೆ ಪೂರ್ಣಗೊಂಡಿದ್ದು, ದೀಪಾವಳಿ ಸಮಯಕ್ಕೆ ರಿಲೀಸ್‌ ಆಗುವುದು ಬಹುತೇಕ ನಿಚ್ಚಳವಾಗಿದೆ. ಬ್ರಹ್ಮಾವರದ ಪೇತ್ರಿ ಬಳಿ ಇರುವ ಗುತ್ತಿನ ಮನೆಯಲ್ಲಿ ಅಂತಿಮ ಹಂತದ ಚಿತ್ರೀಕರಣದ ಭಾಗವಾಗಿ ಮಾಸ್‌ ಮಾದ ನಿರ್ದೇಶನದ ಸಾಹಸ ದೃಶ್ಯಗಳನ್ನು ಸಂಯೋಜಿಸಲಾಗಿತ್ತು.

ನವೀನ್‌ ಡಿ. ಪಡೀಲ್‌, ಅರವಿಂದ ಬೋಳಾರ್‌, ಮಹಮ್ಮದ್‌ ನಹೀಮ್‌ ಉದ್ಯಾವರ, ಐಶ್ವರ್ಯ ಹೆಗ್ಡೆ, ರೋಶನ್‌ ವೇಗಸ್‌, ಶ್ರದ್ಧಾ ಸಾಲ್ಯಾನ್‌, ಹರೀಶ್‌ ವಾಸು ಶೆಟ್ಟಿ-ಸಾಯಿಕೃಷ್ಣ ಕುಡ್ಲ, ಸಂದೀಪ್‌ ಶೆಟ್ಟಿ ಮಾಣಿಬೆಟ್ಟು, ಉಮೇಶ್‌ ಮಿಜಾರ್‌, ಸುಂದರ ರೈ ಮಂದಾರ, ದಿನೇಶ್‌ ಕೋಡಪದವು, ಪ್ರದೀಪ್‌ ಚಂದ್ರ, ಸುನೀಲ್‌ ನೆಲ್ಲಿಗುಡ್ಡೆ, ರಘು ಪಾಂಡೇಶ್ವರ, ಸರೋಜಿನಿ ಶೆಟ್ಟಿ, ಶೇಖರ್‌ ಭಂಡಾರಿ, ಶ್ರೀಜಿತ್‌ ವಸಂತ ಮುನಿಯಾಲ್‌, ಪ್ರಿಯಾಮಣಿ, ಪವಿತ್ರಾ ಶೆಟ್ಟಿ- ಡಿಬಿಸಿ ಶೇಖರ್‌, ಕುಶಿ ಚಂದ್ರಶೇಖರ್‌ ಸಿನೆಮಾದಲ್ಲಿದ್ದಾರೆ.ರಾಮ್‌ದಾಸ್‌ ಸಸಿಹಿತ್ಲು ಸಹನಿರ್ದೇಶನ, ಛಾಯಾಗ್ರಹಣ ರವಿಚಂದನ್‌ ಅವರದ್ದು. ವಿ. ಮನೋಹರ್‌ ಸಂಗೀತ ನೀಡಿದ್ದಾರೆ. ಚಿತ್ರಕತೆ ಸಚಿನ್‌ ಶೆಟ್ಟಿ ಕುಂಬ್ಳೆ, ಸಂಭಾಷಣೆ-ಸಾಹಿತ್ಯ ಡಿಬಿಸಿ ಶೇಖರ್‌, ಸಂಕಲನ ನಾಸಿರ್‌ ಹಕೀಮ್‌ ಮಾಡಿದ್ದರೆ, ಮದನ್‌ ಹರಿಣಿ ನೃತ್ಯ ಸಂಯೋಜಿಸಿದ್ದು, ಮಾಸ್‌ ಮಾದ ಸಾಹಸ ನಿರ್ದೇಶಕರಾಗಿದ್ದಾರೆ. ಕಲಾ ನಿರ್ದೇಶನ ದೇವಿ ಪ್ರಕಾಶ್‌, ಮೇಕಪ್‌ ಜೆ.ಎನ್‌. ಅಶೋಕ್‌, ವಸ್ತ್ರಾಲಂಕಾರ ರಾಮ್‌ಕುಮಾರ್‌, ಸ್ಟಿಲ್‌ ರಾಮ್‌ಪ್ರಸಾದ್‌, ನಿರ್ಮಾಣ -ಶಿವಾರ್ಜುನ್‌ ದಿನೇಶ್‌ ಜೋಗಿ, ಕಾರ್ಯಕಾರಿ ನಿರ್ಮಾಪಕರು -ನಿಕ್ಷಿತ್‌ರಾವ್‌ ನಿಧಿರಾವ್‌ ಚಿತ್ರತಂಡದ ಜತೆಗಿದ್ದಾರೆ. ನಾಯಕರಿಬ್ಬರು ಕಳ್ಳರು. ಒಬ್ಬ ತಾಯಿಯ ಆರೈಕೆಗಾಗಿ ಕಳ್ಳತನ ಮಾಡಿದರೆ ಇನ್ನೊಬ್ಬ ತನ್ನ ಬಾಲ್ಯದ ಕಹಿ ಘಟನೆಯಿಂದ ಕಳ್ಳತನಕ್ಕಿಳಿಯುತ್ತಾನೆ. ಇವರು ಮಾಡಹೊರಟ ದೊಡ್ಡ ಮಟ್ಟದ ಕಳ್ಳತನದ ಲಾಭವನ್ನು ಒಬ್ಬ ಟೆರರ್‌ ವಿಲನ್‌ ಪಡೆದುಕೊಳ್ಳುತ್ತಾನೆ. ನಾಯಕರಿಬ್ಬರು ತಮ್ಮದಲ್ಲದ ತಪ್ಪಿಗೆ ಬಂದ ಅಪವಾದ ಬಂದಾಗ, ಅದರ ಮೂಲವನ್ನು ಭೇದಿಸಿ, ವಿಲನ್‌ನನ್ನು ಸದೆಬಡಿಯುತ್ತಾರೆ.

-  ದಿನೇಶ್‌ ಇರಾ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ