ನೋ ಕಾಸ್ಟ್‌ ಇಎಂಐ ಮೇಲೇ ಎಲ್ಲರ ಐ!


Team Udayavani, Sep 10, 2018, 3:33 PM IST

secptember-17.jpg

ಸಾಮಾನ್ಯವಾಗಿ ಎಲೆಕ್ಟ್ರಾನಿಕ್‌ ಸಾಮಗ್ರಿಗಳು, ಕೆಮರಾ, ರೆಫ್ರಿ ಜರೇಟರ್‌, ಸ್ಮಾರ್ಟ್‌ ಫೋನ್‌ಗಳಿಗೆ ಈ ಕೊಡುಗೆ ಇರುತ್ತದೆ. ಅದರಲ್ಲೂ ಕೆಲವು ಬ್ಯಾಂಕ್‌ಗಳು ಕ್ರೆಡಿಟ್‌ ಕಾರ್ಡ್‌ಗಳ ಮೇಲೆ ಪದೇ ಪದೇ ಈ ಸೌಲಭ್ಯ ನೀಡುತ್ತವೆ. ಯಾಕೆಂದರೆ ಈ ಬ್ಯಾಂಕ್‌ಗಳೇ ಹೆಚ್ಚಿನ ಸಂಖ್ಯೆಯ ಕ್ರೆಡಿಟ್‌ ಕಾರ್ಡ್‌ ಹೊಂದಿವೆ. ನೋ ಕಾಸ್ಟ್ ಇಎಂಐ ಎಂಬುದು ಕೇವಲ ಕ್ರೆಡಿಟ್‌ ಕಾರ್ಡ್‌ಗಳ ಮೇಲಷ್ಟೇ ಕೊಡುವ ಕೊಡುಗೆ. ಅಂದರೆ ಕ್ರೆಡಿಟ್‌ ಕಾರ್ಡ್‌ ಇಲ್ಲದಿದ್ದರೆ ಈ ಸೌಲಭ್ಯ ಸಿಗುವುದಿಲ್ಲ.

ಒಂದು ಸ್ಮಾರ್ಟ್‌ಫೋನ್‌ ಖರೀದಿಸಬೇಕಿದೆ. ಆದರೆ ಒಂದೇ ಬಾರಿಗೆ 30- 40 ಸಾವಿರ ದುಡ್ಡು ಹಾಕುವ ಮನಸ್ಸಿಲ್ಲ. ಹಾಗಾದರೆ ಏನು ಮಾಡಲಿ ಎಂದು ಯೋಚಿಸುತ್ತಿದ್ದಾಗಲೇ ನಿಮ್ಮ ಹಳೆಯ ಸ್ಮಾರ್ಟ್‌ಫೋನ್‌ನ ಸ್ಕ್ರೀನ್‌ ಮೇಲೆ ಆಕರ್ಷಕ ಫೋನ್‌ಗಳು ನೋ ಕಾಸ್ಟ್  ಇಎಂಐನಲ್ಲಿ ಲಭ್ಯ. ಇದು ವಿಶೇಷ ಕೊಡುಗೆ ಎಂಬ ನೋಟಿಫಿಕೇಶನ್‌ ಫ್ಲಿಪ್‌ ಕಾರ್ಟ್‌ನಿಂದಲೋ ಅಥವಾ ಅಮೆಜಾನ್‌ ನಿಂದಲೋ ಟಣ್‌ ಎಂದು ಸದ್ದು ಮಾಡುತ್ತಾ ಕಾಣಿಸಿಕೊಳ್ಳುತ್ತದೆ.

ಈ ನೋ ಕಾಸ್ಟ್  ಇಎಂಐ ಎಂಬುದು ಕಳೆದ ಎರಡು ವರ್ಷಗಳಿಂದ ಭಾರೀ ಚಾಲ್ತಿಯಲ್ಲಿದೆ. ಇ- ಕಾಮರ್ಸ್‌ ವೆಬ್‌ಸೈಟ್‌ ಗಳು ಜನಪ್ರಿಯವಾಗುವುದಕ್ಕೂ ಮೊದಲು, ಬಡ್ಡಿ ರಹಿತ ಸಾಲ ಎಂಬುದೊಂದು ಸಂಗತಿ ಪ್ರಚಾರದಲ್ಲಿತ್ತು. ಯಾವುದೇ ಮಳಿಗೆಯ ಎದುರು ನೋಡಿದರೂ ಬೃಹತ್‌ ಗಾತ್ರದ ಶೇ. 0 ಎಂಬ ಬ್ಯಾನರ್‌ ಕಾಣಿಸುತ್ತಿತ್ತು. ಇದರಲ್ಲಿ ಕೆಲವು ಹಿಡನ್‌ ಚಾರ್ಜ್ಗಳನ್ನೆಲ್ಲ ಸೇರಿಸಿ ಕಂಪೆನಿಗಳು ಗ್ರಾಹಕರಿಗೆ ಮೋಸ ಮಾಡಲು ಆರಂಭಿಸಿದಾಗ ಇಂಥ ಸ್ಕೀಮ್‌ಗಳನ್ನು ಘೋಷಿಸುವುದನ್ನೇ ಆರ್‌ಬಿಐ ನಿಷೇಧಿಸಿತು.

ಆದರೆ ಇ-ಕಾಮರ್ಸ್‌ ಜನಪ್ರಿಯಗೊಂಡ ಅನಂತರ ಶೇ. 0 ಲೋನ್‌ ಎಂಬುದು ಹೊಸ ಹೆಸರು ಪಡೆದು ಅಸ್ತಿತ್ವಕ್ಕೆ ಬಂತು. ಈ ಹೊಸ ಹೆಸರೇ ನೋ ಕಾಸ್ಟ್ ಇಎಂಐ! ಆದರೆ ಇದು ಕೆಲಸ ಮಾಡುವ ವಿಧಾನ ಸ್ವಲ್ಪ ವಿಭಿನ್ನ. ಆರ್‌ಬಿಐ ನಿಷೇಧ ಇರುವುದರಿಂದ ಈಗ ಬ್ಯಾಂಕ್‌ಗಳೇ ನೇರವಾಗಿ ಬಡ್ಡಿ ರಿಯಾಯಿತಿ ನೀಡಲಾಗದು. ಹೀಗಾಗಿ ಬ್ಯಾಂಕ್‌ಗಳು ಬಡ್ಡಿ ವಿಧಿಸುತ್ತವೆ. ಆದರೆ ಆ ಬಡ್ಡಿ ಮೊತ್ತವನ್ನು ಕಂಪೆನಿಗಳು ಕಾರ್ಡ್‌ಗೆ ವಾಪಸ್‌ ನೀಡುತ್ತವೆ.

ಉದಾಹರಣೆಗೆ 30 ಸಾವಿರ ರೂ. ಬೆಲೆಯ ಸ್ಮಾರ್ಟ್‌ಫೋನ್‌ ಅನ್ನು ನೀವು ನೋ ಕಾಸ್ಟ್ ಇಎಂಐಯಲ್ಲಿ ಆರು ತಿಂಗಳ ಅವಧಿಗೆ ಖರೀದಿಸಿದರೆ ಇದಕ್ಕೆ ಸಾಮಾನ್ಯವಾಗಿ ತಿಂಗಳಿಗೆ 638 ರೂ. ಬಡ್ಡಿ ವಿಧಿಸಲಾಗುತ್ತದೆ. ಆದರೆ ಬ್ಯಾಂಕ್‌ಗಳು ಆರು ತಿಂಗಳವರೆಗೆ ನಿಮ್ಮ ಕಾರ್ಡ್‌ನಿಂದ ಪ್ರತಿ ತಿಂಗಳೂ ಶೇ. 12 ರ ಬಡ್ಡಿಯಂತೆ 5,176 ರೂ. ಪಡೆಯುತ್ತವೆ. ಆದರೆ 176 ರೂ. ಅನ್ನು ನಿಮ್ಮ ಕಾರ್ಡ್‌ಗೆ ವಾಪಸ್‌ ರಿಯಾಯಿತಿ ರೂಪದಲ್ಲಿ ಇ- ಕಾಮರ್ಸ್‌ ಕಂಪೆನಿ ಅಥವಾ ನೀವು ಯಾವ ಕಂಪನಿಯ ಉತ್ಪನ್ನವನ್ನು ಖರೀದಿಸಿರುತ್ತೀರೋ ಆ ಕಂಪೆನಿ ವಾಪಸ್‌ ಮಾಡುತ್ತದೆ. ಅಲ್ಲಿಗೆ ನೀವು ಖರೀದಿಸಿದ ಉತ್ಪನ್ನದ ಬೆಲೆ 30 ಸಾವಿರಕ್ಕಿಂತ ಒಂದು ರೂಪಾಯಿಯೂ ಹೆಚ್ಚಾಗುವುದಿಲ್ಲ.

ಆದರೆ ಇಂಥ ಆಫ‌ರ್‌ ಎಲ್ಲ ಉತ್ಪನ್ನಗಳ ಮೇಲೂ ಇರುವುದಿಲ್ಲ. ಅಷ್ಟೇ ಅಲ್ಲ, ಎಲ್ಲ ಕಾರ್ಡ್‌ಗಳ ಮೇಲೂ ಇರುವುದೂ ಇಲ್ಲ. ಆಯ್ದ ಉತ್ಪನ್ನಗಳಿಗೆ, ಆಯ್ದ ಕಾರ್ಡ್‌ ಗಳಿಗೆ ಮಾತ್ರ. ಇದಕ್ಕಾಗಿ ಇ-ಕಾಮರ್ಸ್‌ ಕಂಪೆನಿಗಳು ಬ್ಯಾಂಕ್‌ ಮತ್ತು ಉತ್ಪಾದಕರ ಜತೆಗೆ ಒಪ್ಪಂದ ಮಾಡಿಕೊಂಡಿರುತ್ತದೆ. ನೋ ಕಾಸ್ಟ್ ಇಎಂಐ ಎಂಬುದು ಕೇವಲ ಕ್ರೆಡಿಟ್‌ ಕಾರ್ಡ್‌ಗಳ ಮೇಲಷ್ಟೇ ಕೊಡುವ ಕೊಡುಗೆ. ಅಂದರೆ ಕ್ರೆಡಿಟ್‌ ಕಾರ್ಡ್‌ ಇಲ್ಲದಿದ್ದರೆ ಈ ಸೌಲಭ್ಯ ಸಿಗುವುದಿಲ್ಲ.

ಕ್ರೆಡಿಟ್‌ ಕಾರ್ಡ್‌ ಇಲ್ಲದಿದ್ದರೆ?
ಇಡೀ ದೇಶದಲ್ಲಿ ಕ್ರೆಡಿಟ್‌ ಕಾರ್ಡ್‌ ಹೊಂದಿರುವವರ ಸಂಖ್ಯೆ ಕೇವಲ 6 ಕೋಟಿ. ಆದರೆ ಡೆಬಿಟ್‌ ಕಾರ್ಡ್‌ ಹೊಂದಿರುವವರು 79 ಕೋಟಿ ಜನರು. ಹಾಗಾದರೆ ಡೆಬಿಟ್‌ ಕಾರ್ಡ್‌ ಮೇಲೆ ಯಾಕೆ ಇಎಂಐ ಕೊಡಬಾರದು ಎಂಬ ಹೊಸ ಕಲ್ಪನೆ ಇತ್ತೀಚೆಗೆ ಹುಟ್ಟಿಕೊಂಡಿದೆ. ಈವರೆಗೆ ಸಾಲ ಎಂಬುದು ಕೇವಲ ಕ್ರೆಡಿಟ್‌ ಕಾರ್ಡ್‌ ಮೇಲೆ ಮಾತ್ರವೇ ಸಿಗುತ್ತಿದೆ. ಕ್ರೆಡಿಟ್‌ ಕಾರ್ಡ್‌ ಬಳಸಿದಾತ ಸಾಲ ಹಾಗೂ ಅದರ ಮರುಪಾವತಿಗೆ ಮಾನಸಿಕವಾಗಿ ಸಿದ್ಧವಾಗುತ್ತಾನೆ ಎಂಬುದು ಒಂದು ಪ್ರಮುಖ ಅಂಶವಾದರೆ, ಕ್ರೆಡಿಟ್‌ ಕಾರ್ಡ್‌ ಕೊಡುವಾಗಲೇ ಕಂಪೆನಿಗಳು ವ್ಯಕ್ತಿಯ ಪ್ರೊಫೈಲ್‌ ತಪಾಸಣೆ ನಡೆಸಿರುವುದರಿಂದ ಸಾಲ ನೀಡುವಾಗ ಪುನಃ ಪ್ರೊಫೈಲ್‌ ಜಾಲಾಡುವ ಅಗತ್ಯ ಇರುವುದಿಲ್ಲ. ಹೀಗಾಗಿ ವ್ಯಕ್ತಿಯ ಬಳಿ ಕ್ರೆಡಿಟ್‌ ಕಾರ್ಡ್‌ ಇದೆ ಎಂದಾದರೆ ಸಾಲ ಕೊಡಲು ಕಂಪೆನಿಗಳಿಗೆ ಧೈರ್ಯ ಬರುತ್ತದೆ.

ಆದರೆ ಕ್ರೆಡಿಟ್‌ ಕಾರ್ಡ್‌ ಹೊಂದಿರುವವರ ಸಂಖ್ಯೆ ಕಡಿಮೆ ಇರುವುದರಿಂದ ಡೆಬಿಟ್‌ ಕಾರ್ಡ್‌ಗಳ ಮೇಲೂ ಇಎಂಐ ಅವಕಾಶ ನೀಡಿದರೆ ಹೆಚ್ಚು ಜನರನ್ನು ಸೆಳೆಯಬಹುದು ಎಂಬುದು ಇ-ಕಾಮರ್ಸ್‌ ಕಂಪೆನಿಗಳ ಉದ್ದೇಶ. ಇದೇ ಕಾರಣಕ್ಕೆ ಈಗ ಫ್ಲಿಪ್‌ ಕಾಟ್‌ ಈ ಸೌಲಭ್ಯವನ್ನು ಒದಗಿಸಿದೆ. ಆದರೆ ಎಲ್ಲರಿಗೂ ಇದು ಲಭ್ಯವಿಲ್ಲ. ಹಲವು ದಿನಗಳಿಂದಲೂ ಫ್ಲಿಪ್‌ ಕಾರ್ಟ್‌ ಸೇವೆ ಬಳಸುತ್ತಿದ್ದವರಿಗೆ ಮಾತ್ರ ಈ ಸೌಲಭ್ಯ ಒದಗಿಸಲಾಗಿದೆ. ಅರ್ಹತೆ ಮಾನದಂಡದಲ್ಲಿ ಪಾಸಾದರೆ ಮಾತ್ರ ಈ ಸೌಲಭ್ಯ ಸಿಗುತ್ತದೆ. ಆದರೆ, ಇದು ನೋ ಕಾಸ್ಟ್ ಇಎಂಐ ಆಗಿರುವುದಿಲ್ಲ. ಬದಲಿಗೆ, ಬ್ಯಾಂಕ್‌ ವಿಧಿಸುವ ಬಡ್ಡಿ ದರ ಇದಕ್ಕೆ ಅನ್ವಯವಾಗುತ್ತದೆ. ಇನ್ನು ಖರೀದಿಗೆ ಕನಿಷ್ಠ ಮೊತ್ತವನ್ನೂ ನಿಗದಿಪಡಿಸಲಾಗಿದ್ದು, ಇವು ಬ್ಯಾಂಕ್‌ನಿಂದ ಬ್ಯಾಂಕ್‌ಗೆ ಬದಲಾಗುತ್ತವೆ. ಸದ್ಯ ಇದು ಕೆಲವು ಬ್ಯಾಂಕ್‌ ಗಳ ಡೆಬಿಟ್‌ ಕಾರ್ಡ್‌ಗಳಿಗೆ ಮಾತ್ರ ಅನ್ವಯವಾಗುತ್ತದೆ.

 ಕೃಷ್ಣ ಭಟ್‌

ಟಾಪ್ ನ್ಯೂಸ್

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ನಾರಿಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.