ಉಳಿಕೆಯೇ ಗಳಿಕೆ  ಶಾಂತಿಯೇ ಸಂಪತ್ತು 

Team Udayavani, Nov 12, 2018, 12:46 PM IST

12-november-10.gif

ಹಣ ಅಥವಾ ಸಂಪತ್ತು ಗಳಿಸುವುದಷ್ಟೇ ಬಾಳಿನ ಗುರಿಯಲ್ಲ. ಗಳಿಸಿದ್ದನ್ನು ಉಳಿಸಬೇಕು. ಉಳಿಸಿದ್ದನ್ನು ಬೆಳೆಸಬೇಕು. ಅಗತ್ಯ ಬಂದಾಗ ಬಳಸಬೇಕು. ಸಂಪತ್ತೆಂಬುದು ಕಷ್ಟಕ್ಕೆ ಆಗಲಿಲ್ಲ ಅಂದರೆ, ಅದು ಎಷ್ಟಿದ್ದರೂ ವ್ಯರ್ಥ. ಹಾಗಾಗಿ, ವೈಯಕ್ತಿಕ ಹಾಗೂ ವ್ಯಾವಹಾರಿಕ ಬದುಕಿಗೆ ನಮ್ಮ ಉಳಿತಾಯದಿಂದ ಅನುಕೂಲವಾಗುವಂತೆ ಜೀವನ ವಿಧಾನವನ್ನು ರೂಪಿಸಿಕೊಳ್ಳಬೇಕು.

ಹನಿ ಹನಿ
ಹನಿ ಹನಿ ಎನ್ನುವುದು ಬಹಳ ಮುಖ್ಯ. ನಮ್ಮ ಜೀವನದ ಗುಣಮಟ್ಟ ಸಣ್ಣ ಸಣ್ಣ ಖುಷಿಗಳಲ್ಲಿ ಅಡಗಿದೆ. ದೀರ್ಘ‌ ನಡಿಗೆ ಒಂದೊಂದೆ ಹೆಜ್ಜೆಯಲ್ಲಿ ಕುಳಿತಿದೆ. ನಮ್ಮ ಜೀವನ ಒಂದೊಂದೇ ದಿನವಾಗಿ ಕಳೆಯುತ್ತದೆ. ಹಾಗೆಯೇ, ನಮ್ಮ ಹಣಕಾಸಿನ ಯೋಜನೆಗಳೂ ಸಣ್ಣ ಸಣ್ಣ ಉಳಿತಾಯದಿಂದಲೇ ಆರಂಭ ಆಗಬೇಕು. ಉಳಿಸಿದೆ ಎನ್ನುವುದು ಕೇವಲ ಒಬ್ಬರ ಕೆಲಸವಾಗಲಿ, ಅಗತ್ಯವಾಗಲಿ ಅಲ್ಲ. ಅದು ಮನೋಭಾವ ಆಗಬೇಕು.

ಇದು ಮನೋಭಾವ ಆದಾಗ ಇದನ್ನು ಬೇರೆಯವರೂ ಅಷ್ಟೇ ಸುಲಭವಾಗಿ ಅಳವಡಿಸಿಕೊಳ್ಳುತ್ತಾರೆ. ಇದನ್ನು ಹೇರಲು ಬರುವುದಿಲ್ಲ. ಬದಲಾಗಿ, ನೋಡಿಯಾದರೂ ಕಲಿಯುತ್ತಾರೆ. ಇಂದಿನ ಮಕ್ಕಳೆದರು ಹಣವನ್ನು ನಿರ್ವಹಿಸುವುದು ಬಹುದೊಡ್ಡ ಸವಾಲಾಗಿದೆ. ಆದರೆ ಅವರಿಗೆ ಅದು ಗೊತ್ತಿಲ್ಲ. ನಾವು ಬಡತನವನ್ನು ನಿರ್ವಹಿಸುವುದನ್ನು ಕಲಿಯುತ್ತ ಬಂದ ತಲೆಮಾರಿನವರು. ಹಾಗಾಗಿ, ನಮ್ಮ ಪೀಳಿಗೆಗೆ ಉಳಿತಾಯ ಸಹಜವಾಗಿತ್ತು.

ಈ ಕಾಲದ ಹೊರ ಆಕರ್ಷಣೆಗಳ ಹಿನ್ನೆಲೆಯಲ್ಲಿ ಉಳಿತಾಯಕ್ಕೆ ದೃಢ ಸಂಕಲ್ಪ ಇರಬೇಕು. ಇಂತಹ ಸಂಕಲ್ಪ ಇದ್ದಾಗ ಮಾತ್ರವೇ ಉಳಿತಾಯ ಸಾಧ್ಯವಾಗುತ್ತದೆ. ಹಣ ಉಳಿಸುವ ವಿಚಾರ ಬಂದಾಗ, ಸರಳತೆ ನಮ್ಮ ಜೀವನದ ಭಾಗವಾಗುತ್ತದೆ. ಸರಳತೆ ಇದ್ದಾಗ ಸಂತೋಷ ಇರುತ್ತದೆ. ಎಷ್ಟೇ ವಸ್ತುಗಳನ್ನು ಕೊಂಡರೂ ಸಿಗದ ಸಂತೋಷ, ಸರಳತೆಯಿಂದ ಬದುಕುವುದರಲ್ಲಿ ಇದೆ. ನಿಧಾನವಾಗಿ ಯಾವುದೇ ಧಾವಂತವೂ ಇರದ ಜೀವನ ನಮ್ಮನ್ನು ಕಾಯಿಲೆಯಿಂದ ದೂರ ಇಡುವುದಕ್ಕೆ ಸಹಕಾರಿ. ಎಲ್ಲಿಂದೆಲ್ಲಿಯ ಸಂಬಂಧ.

ಕೇವಲ ಉಳಿಸಿದರೆ ಆಗಲಿಲ್ಲ. ಗಳಿಸಿ, ಉಳಿಸಿ ಜತೆಗೆ ಬೆಳೆಸಿ. ಏನೆಲ್ಲ ಶ್ರಮಪಟ್ಟು ದುಡಿದರೂ ಹಗಲಿರುಳು ಬೆವರು ಸುರಿಸಿದರೂ ಇದು ಧ್ಯೇಯ. ಗಳಿಸುವ ವಿಷಯದಲ್ಲಿ ಈಗ ಮಹಿಳೆ- ಪುರುಷ ಎನ್ನುವ ವ್ಯತ್ಯಾಸ ಇಲ್ಲ. ಗಳಿಸಿದ್ದನ್ನು ಉಳಿಸದಿದ್ದರೆ ಏನೆಲ್ಲ ಶ್ರಮಪಟ್ಟು ದುಡಿದರೂ, ಹಗಲಿರುಳು ಬೆವರು ಸುರಿಸಿದರೂ ಗಳಿಸಿಯೂ ಪ್ರಯೋಜನ ಇಲ್ಲ. ಉಳಿಸಿದ್ದು ಬೆಳೆಸದಿದ್ದರೆ ಉಳಿಸಿಯೂ ಪ್ರಯೋಜನ ಇಲ್ಲ.

ಹೀಗೆ ಒಂದು ಸರಪಳಿಯಂತೆ ನಮ್ಮ ಬದುಕನ್ನು ಆವರಿಸಿಕೊಂಡಿರುವ ಉಳಿತಾಯ ಸೂತ್ರದ ಮೊದಲ ಪಾಠವೇ ಅಗತ್ಯ ಇರುವಷ್ಟು ಮಾತ್ರ ಖರ್ಚು ಮಾಡಬೇಕು ಎನ್ನುವುದು. ಅಗತ್ಯವನ್ನು ಅರಿಯಲು ಸರಳವಾಗುವುದು. ಇನ್ನೊಬ್ಬರನ್ನು ಹೋಲಿಸಿಕೊಂಡು ನೋಡಿ ತನಗಿಲ್ಲ ಎಂದು ಕೊರಗುವುದೇ ಇವತ್ತಿನ ಎಲ್ಲ ಅಸಹನೆಯ ಮೂಲ. ಅಸಹನೆಯೇ ಅಶಾಂತಿಯ ಬೀಜ. ವೈಯಕ್ತಿಕ ಬದುಕಿನಲ್ಲೂ, ವ್ಯಾವಹಾರಿಕ ಬದುಕಿನಲ್ಲೂ ಶಾಂತಿಯೇ ಸಂಪತ್ತು. ಇನ್ನು ನಾವು ಬೆಳೆಸಬೇಕಾದ ಸಂಪತ್ತು ಯಾವುದು? ಇದು ಅವರವರೇ ಕಂಡುಕೊಳ್ಳಬೇಕಾದದ್ದು.

ಸುಧಾಶರ್ಮ ಚವತ್ತಿ

ಟಾಪ್ ನ್ಯೂಸ್

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ನಾರಿಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.