ನೂರು ಮಾತಿಗಿಂತ ಮೌನವೇ ಆಧಾರ

Team Udayavani, Jan 13, 2020, 5:56 AM IST

ಮಾನವ ಜೀವನದಲ್ಲಿ ಮಾತುಗಳಿಗಿಂತ ಮೌನವೇ ಹೆಚ್ಚು ಅರ್ಥವನ್ನು ಕೊಡುತ್ತದೆ. ನೂರು ಮಾತಿಗಿಂತ ಒಂದು ಮೌನವೇ ಭಾವವನ್ನು ವ್ಯಕ್ತಪಡಿಸುತ್ತದೆ.

ಅದೊಂದು ದಿನ ಒಬ್ಬ ವ್ಯಕ್ತಿ ಏನೋ ಒಂದನ್ನು ಕಳೆದುಕೊಂಡ ಕೊರತೆಯಿಂದ ಇರುತ್ತಾನೆ. ಎಲ್ಲಿ ಹೋದರೂ ಯಾವ ಯೋಜನೆ ಹಾಕಿಕೊಂಡರೂ, ಅಲ್ಲಿ ಆ ವ್ಯಕ್ತಿಗೆ ಕೊರತೆಯನ್ನು ಅನುಭವಿಸುತ್ತಿರುವ ಯೋಚನೆಯೇ ಅಡ್ಡಲಾಗಿ ಕಾಡುತ್ತದೆ. ದೈಹಿಕವಾಗಿ ಪುಷ್ಟಿಯಾಗಿದ್ದರೂ ಮಾನಸಿಕವಾಗಿ ಕುಗ್ಗಿದ ಭಾವ ಆ ವ್ಯಕ್ತಿಯ ದಿನಚರಿಯಲ್ಲಿ ಎಲ್ಲವೂ ನಿರಾಶೆಯಾಗಿ, ನಿಧಾನವಾಗಿ ಸಾಗುವಂತೆ ಮಾಡುತ್ತದೆ. ಏನಾಯಿತು, ಹೇಗಾಯಿತು, ಎನ್ನುವ ಮಾತಿಗೂ ಆ ವ್ಯಕ್ತಿಯ ಮೂಲಕ ಬರುವುದು ಮೌನ ತುಂಬಿದ ಒಂದು ದೀರ್ಘ‌ ಉಸಿರು ಮಾತ್ರ.

ಕೆಲ ಕ್ಷಣಗಳಲ್ಲಿ ಆ ವ್ಯಕ್ತಿ ಯೋಚನಾ ಲಹರಿಯನ್ನು ಬದಲಾಯಿಸಿಕೊಂಡು ಎಲ್ಲವೂ ಸರಿಯಾಗುತ್ತದೆ ಎನ್ನುವ ಭರವಸೆಯೊಂದಿಗೆ, ಎಲ್ಲರೊಂದಿಗೆ ಬೆರೆಯುವ, ನುಡಿಯುವ ಹಾಗೂ ಮೌನ ಮರೆಮಾಚಿ ನಗುವ ಪ್ರಯತ್ನವನ್ನು ಮಾಡುತ್ತಾನೆ. ಇದು ಪ್ರತಿಯೊಬ್ಬರಲ್ಲಿ ಸಾಗುವ ಒಂದು ಸಹಜ ಪ್ರಕ್ರಿಯೆ. ಇದಕ್ಕೆ ಕಾರಣ ನಮ್ಮ ನಗುವನ್ನು ಕೇಳುವ ಕಿವಿಗಳು, ನೋವನ್ನು ಕೇಳದೇ ದೂರ ಹೋಗುವುದು. ಎಷ್ಟೇ ಹೇಳಿದರೂ ಮಾನವ ನಕ್ಕಾಗ ಜಂಟಿ ಅತ್ತಾಗ ಒಂಟಿ ಎನ್ನುವ ವಾಸ್ತವದ ಮಾತನ್ನು ನಾವು ಅನುಭವದ ಗೆರೆಯನ್ನು ದಾಟಿಕೊಂಡೇ ಅರ್ಥ ಮಾಡಿಕೊಳ್ಳಬೇಕು.

ಕೆಲವೊಂದು ಬಂಧಗಳು ಹಾಗೆಯೇ. ನೋಟಗಳಿಂದ ಆರಂಭವಾಗುವ ಬಾಂಧವ್ಯ, ನಗು ನಲಿವಿನೊಂದಿಗೆ ವಿಲೀನವಾಗಿ ಕೊನೆಗೆ ಅಲ್ಲೊಂದಿಷ್ಟು ಚರ್ಚೆ, ತಾತ್ಕಾಲಿಕ ಕೋಪ, ನೀರು, ಅನ್ನದ ಮೇಲಿನ ಮುನಿಸು, ಸಾವಿನ ಬಗ್ಗೆ ಪ್ರಾರಂಭಿಕ ಚಿಂತೆ, ಮೋಸ ಹೋಗುತ್ತೇನೆ ಎನ್ನುವುದರ ಭಯ, ನಿನ್ನೆಯ ಸಂತೆ, ನಾಳಿನ ಚಿಂತೆ ಎಲ್ಲವೂ ಆಗಾಗ ನಿದ್ದೆಯಲ್ಲೂ ಪೀಡಿಸುವ ಮಾನಸಿಕ ಜಿಜ್ಞಾಸೆಗಳಾಗುತ್ತವೆ. ನೋಟಗಳಿಂದ ಆರಂಭವಾಗುವ ಪ್ರೀತಿ, ಜೀವನದ ಪಾಠವನ್ನು ಕಲಿಸುತ್ತದೆ. ನಡುವೆ ಬರುವ ಸಾವಿನ ಯೋಚನೆ, ಊಟ, ನಿದ್ದೆ ಬಿಟ್ಟು ಬಿಡುವ ನಿರ್ಣಯ ಎಲ್ಲವೂ ತಾತ್ಕಾಲಿಕ ಎನ್ನುವ ಸತ್ಯಾಂಶವನ್ನು ನಾವಾಗಿಯೇ ತಿಳಿದುಕೊಳ್ಳಬೇಕು. ಎಷ್ಟು ವಿರ್ಪಯಾಸ ಅಂದರೆ ನೋವು, ನಲುವಿಗೂ ಅನುಭವದ ಆಧಾರ ಕೇಳುವ ಕಾಲವಿದು.

ಬದುಕು ಬದಲಿಸಬಹುದು. ಹೌದು ಬದಲಾಯಿಸಬಹುದು, ಬದಲಾಗುವ ಮನಸ್ಸು ಇದ್ದರೆ, ಬದಲಾಗಿ ಕನಸು ಕಾಣುವ ಉಮೇದು ಇದ್ದರೆ ಬದುಕು ಬದಲಾಯಿಸಬಹುದು. ಬದುಕಿನ ಆಯ್ಕೆಗಳು ನಮ್ಮ ಕೈಯಲ್ಲಿವೆ ನಿಜ. ಆದರೆ ಆ ಕೈಯನ್ನು ಇನ್ನೊಬ್ಬರು ಹಿಡಿದು ಮುನ್ನೆಡೆಸಬೇಕು. ಅವರ ನೆರಳಿನ ಹಿಂದೆ ನಮ್ಮ ಹೆಜ್ಜೆಯನ್ನಿಡಬೇಕು ಎನ್ನುವ ಯೋಚನೆಯಿಂದ ಮುಕ್ತಿ ಪಡೆದು ಸಾಗುವುದು ಇದೆ ಅಲ್ವಾ ಅಲ್ಲಿ ನಮ್ಮ ಬದುಕಿದೆ. ಜೀವನ ಎಷ್ಟೇ ಹೇಳಿದರೂ ಭಾವನೆಗಳ ಬದನೇಕಾಯಿ. ತಮಾಷೆಯ ವಾಕ್ಯವಾದರೂ ಇದರ ಹಿಂದಿರುವ ತಣ್ತೀ ಬದುಕಿನ ಕೈಗನ್ನಡಿ.

-ಸುಹಾನ್‌ ಶೇಕ್‌

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

  • ಇತ್ತೀಚಿನ ಹವಮಾನ ತೀರಾ ವಿಚಿತ್ರವೆನ್ನಬಹುದು. ಚಳಿಗಾಲವಾಗಿದ್ದರೂ ಸುಡುಬಿಸಿಲು ನೆತ್ತಿಯ ಮೇಲೆ ಮಂಜು ಹನಿಯುವ ಬದಲು ಬೆವರಲ್ಲಿಯೇ ಸ್ನಾನ ಮಾಡಿಸುವಂತಿರುತ್ತದೆ....

  • ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಕೈಯಲ್ಲೊಂದು ಸ್ಮಾರ್ಟ್‌ಫೋನ್‌, ಮಡಿಲಲ್ಲೊಂದು ಲ್ಯಾಪ್‌ಟಾಪ್‌ ಇರಲೇಬೇಕು. ಈಗಿನ ಕೆಲಸ ಕಾರ್ಯಗಳೆಲ್ಲವೂ ಈ ಎರಡರಲ್ಲೇ ನಿಭಾಯಿಸಲ್ಪಡುವುದರಿಂದ...

  • ಕಾರು ನಿಲ್ಲಿಸಿ ಕೆಲವು ದಿನ ಆಯ್ತು. ಆದ್ರೆ ಈಗ ಸ್ಟಾರ್ಟ್‌ ಮಾಡಲು ನೋಡ್ತಿದ್ರೆ ಜಪ್ಪಯ್ಯ ಅಂದ್ರೂ ಸ್ಟಾರ್ಟ್‌ ಆಗ್ತಿಲ್ಲ ಎನ್ನುವ ಸಮಸ್ಯೆಯನ್ನು ನೀವು ಎದುರಿಸಿರಬಹುದು....

  • ನಂಬಿಗಸ್ತ ಆಟಗಾರ ಎಂದು ಕಣ್ಮುಚ್ಚಿಕೊಂಡು ಹೇಳಬಹುದಾಗಿದ್ದ ಕ್ರಿಕೆಟಿಗರ ಪೈಕಿ ಹರ್ಭಜನ್‌ ಸಿಂಗ್‌ ಕೂಡ ಒಬ್ಬರು. ಅಪಾರ ಪ್ರತಿಭಾವಂತರು ಎಂಬುದು ಪ್ಲಸ್‌ ಪಾಯಿಂಟ್‌....

  • ನವದಂಪತಿ ಪರಸ್ಪರ ಅರಿಯಲು, ರೊಮ್ಯಾಂಟಿಕ್‌ ಕ್ಷಣಗಳನ್ನು ಮತ್ತಷ್ಟು ಮಧುರವಾಗಿಸಲು ಹನಿಮೂನ್‌ ಗೆ ತೆರಳುತ್ತಾರೆ. ಏಕಾಂತದಿಂದ ಜೋಡಿ ಹಕ್ಕಿಗಳಾಗಿ ವಿಹರಿಸುವ...

ಹೊಸ ಸೇರ್ಪಡೆ