ಮನೆಯ ಅಂದ ಹೆಚ್ಚಿಸುವ ಬಿಳಿ ಬಣ್ಣ

Team Udayavani, Nov 2, 2019, 4:56 AM IST

ಮನೆ ನಿರ್ಮಾಣ ಪೂರ್ಣಗೊಂಡರೆ ಸಾಕು, ಅನಂತರ ಬಣ್ಣ ಬಳಿಯುವ ಕೆಲಸ ಶುರುವಾಗುತ್ತದೆ. ಆಗ ಪ್ರಾರಂಭವಾಗುವುದೇ ಬಣ್ಣಗಳ ಆಯ್ಕೆಗಳ ಸಮಸ್ಯೆ. ನಾನಾ ಬಣ್ಣಗಳು ಕಣ್ಣ ಮುಂದೆ ಬಂದು ಬಿಡುತ್ತದೆ. ತಪ್ಪಾದ ಆಯ್ಕೆಯಿಂದ ಮನೆಯ ಅಂದ ಕೆಡಬಹುದೆಂಬ ಭಯ. ಹೀಗಿರುವ ಮನೆಯ ಅಂದವನ್ನು ಹೆಚ್ಚಿಸುವ ಒಂದು ಬಣ್ಣವಿದೆ ಅದುವೇ ಬಿಳಿ ಬಣ್ಣ.

ಬಿಳಿ ಬಣ್ಣದಿಂದ ಅಂದ ಹೆಚ್ಚಳ
ಶಾಂತಿ ಸಂಕೇತವಾಗಿರುವ ಬಿಳಿ ಬಣ್ಣ ಮನೆಯ ಅಂದ ಹೆಚ್ಚಿಸುತ್ತದೆ. ಒಂದು ರೀತಿಯಾದ ಪ್ರಶಾಂತತೆಯನ್ನು ಮನೆಯಲ್ಲಿ ಈ ಬಣ್ಣ ನಿರ್ಮಾಣ ಮಾಡುತ್ತದೆ. ಧನಾತ್ಮಕ ಶಕ್ತಿಯನ್ನು ಕೂಡ ಮನೆಯೊಳಗೆ ತುಂಬವಲ್ಲಿ ಬಿಳಿ ಬಣ್ಣ ಸಹಕಾರಿ.

ಪೀಠೊಪಕಣಗಳೊಂದಿಗೆ ಹೊಂದಿಕೆ
ಮನೆಯ ಅಂದವನ್ನು ಹೆಚ್ಚಿಸುವುದರೊಂದಿಗೆ ಬಿಳಿ ಬಣ್ಣ ಯಾವುದೇ ಬಣ್ಣದ ಪೀಠೊಪಕರಣಗಳೊಂದಿಗೆ ಹೊಂದಿಕೆಯಾಗುತ್ತದೆ. ಮನೆ ಗೋಡೆಯ ಬಣ್ಣದೊಂದಿಗೆ ಪೀಠೊಪಕರಣಗಳು ಹೊಂದಿಕೆಯಾದರೆ ಮನೆಯು ಇನ್ನಷ್ಟು ಸುಂದರವಾಗಿ ಕಾಣುತ್ತದೆ. ಮನೆಯಲ್ಲಿರುವ ಯಾವುದೇ ಬಣ್ಣಗಳ ಸೋಫಾ, ಕರ್ಟನ್‌ಗಳಿಗೆ ಬಿಳಿಬಣ್ಣವೂ ಮ್ಯಾಚ್‌ ಆಗುತ್ತದೆ. ಬಿಳಿ ಬಣ್ಣವು ಇತರ ಬಣ್ಣಗಳನ್ನು ಪೋಷಿಸುತ್ತದೆ. ಕೋಣೆಯಲ್ಲಿ ಬೆಳಕು ಬಿಳಿ ಬಣ್ಣವು ಶುಭ್ರತೆಯ ಸಂಕೇತ. ಇದು ಬೆಳಕನ್ನು ಆಕರ್ಷಿಸುವುದು. ಒಳಾಂಗಣದ ಬಣ್ಣ ಬಿಳಿ ಬಣ್ಣದಿಂದ ಕೂಡಿದ್ದರೆ, ಸ್ವಲ್ಪ ಬೆಳಕು ಇದ್ದರೂ ಹೆಚ್ಚು ಬೆಳಕನ್ನು ಹೊಂದಿರುವಂತೆ ತೋರುವುದು.

ಕೋಣೆ ವಿಶಾಲ
ಬಿಳಿ ಗೋಡೆಯು ವಿಸ್ತರಣೆಯನ್ನು ಹೆಚ್ಚಿಸಿರುವಂತೆ ತೋರುವುದು. ಸುತ್ತಲೂ ಬಿಳಿ ಬಣ್ಣದಿಂದ ಕೂಡಿದ್ದರೆ ಕೊಠಡಿಯು ಅತ್ಯಂತ ವಿಶಾಲತೆಯಿಂದ ಕೂಡಿರುವಂತೆ ಕಾಣುತ್ತದೆ.

ನಿರ್ವಹಣೆ ಸುಲಭ
ಯಾವ ಬಣ್ಣದ ಗೋಡೆಯಾಗಿದ್ದರೂ ಅದು ಸ್ವಲ್ಪ ಸಮಯದ ಬಳಿಕ ಮಂಕಾಗುವುದು. ಆಗ ಪುನಃ ಬಣ್ಣವನ್ನು ಬಳಿಯಬೇಕು. ನಾವು ಬಿಳಿ ಬಣ್ಣವನ್ನು ಹೊಂದಿದ್ದರೆ ಸುಲಭವಾಗಿ ಪುನಃ ಪುನಃ ಬಣ್ಣಗಳನ್ನು ಬಳಿಯಬಹುದು. ವಿಭಿನ್ನವಾದ ಬಣ್ಣಗಳನ್ನು ಹೊಂದಿದ್ದರೆ ಅದರ ನಿರ್ವಹಣೆ ಕಷ್ಟವಾಗುವುದು.

ಎಂದಿಗೂ ಟ್ರೆಂಡ್‌
ಬಿಳಿ ಬಣ್ಣ ಎಂದಿಗೂ ಹಳೆಯ ಬಣ್ಣ ಎಂದೇನಿಸುವುದಿಲ್ಲ. ಅದೇ ಇತರ ಬಣ್ಣಗಳು ಕೆಲವು ಸಮಯದ ನಂತರ ತನ್ನ ಟ್ರೆಂಡ್‌ ಅನ್ನು ಕಳೆದುಕೊಳ್ಳಬಹುದು. ಆಗ ಪುನಃ ಬೇರೆ ಬಣ್ಣಗಳ ಆಯ್ಕೆಗೆ ಮೊರೆ ಹೋಗಬೇಕಾಗುವುದು.

ನೈಸರ್ಗಿಕ ಬೆಳಕು
ಬಿಳಿ ಬಣ್ಣ ಬೆಳಕಿನ ಉತ್ತಮ ಪ್ರತಿಫ‌ಲಕ. ಕೋಣೆಗೆ ಬರುವ ನೈಸರ್ಗಿಕ ಬೆಳಕನ್ನು ಅಗಲವಾಗಿ ಮತ್ತು ಪ್ರಕಾಶಮಾನವಾಗಿ ಬಿಳಿ ಬಣ್ಣ ಹರಡುತ್ತದೆ. ಇದರಿಂದ ಕಡಿಮೆ ಪ್ರಮಾಣದಲ್ಲಿ ವಿದ್ಯುತ್‌ ಅನ್ನು ಬಳಕೆ ಮಾಡಬಹುದು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಜೀವನದಲ್ಲಿ ಎಲ್ಲದಕ್ಕಿಂತಲೂ ಸಂತೋಷ ಬಹಳ ಮುಖ್ಯ. ಅದೊಂದು ಇಲ್ಲವೆಂದಾದರೆ ಉಳಿದೆಲ್ಲ ಇದ್ದರೂ ಎಲ್ಲವೂ ಶೂನ್ಯವೆನಿಸುತ್ತದೆ. ಕೆಲವೊಮ್ಮೆ ನಾವು ಅನೇಕ ದುಗುಡಗಳನ್ನು...

  • ಜೀವನ ಎನ್ನುವುದು ಅನಿಶ್ಚಿತತೆಗಳ ಆಗರ. ಇಂದು ಇರುವಂತೆ ನಾಳೆ ಇರುವುದಿಲ್ಲ. ಅದು ಖುಷಿ ಆಗಿರಲಿ, ದುಃಖ ಆಗಿರಲಿ ಮಡುಗಟ್ಟಿರುವುದಿಲ್ಲ. ದಿನ ಉರುಳಿದಂತೆ ಅದು ಬದಲಾಗುತ್ತದೆ....

  • ಭಾರತವೂ ಶರಣರ, ಮಹಾತ್ಮರ, ಆಧ್ಯಾತ್ಮಿಕ ಚಿಂತಕರ, ಮಹಾಪುರುಷರು ಹುಟ್ಟಿದ ನಾಡು. ದೇಶದ ಕಟ್ಟುವ ಕೈಂಕರ್ಯದಲ್ಲಿ ಇವರ ಮಾರ್ಗೋಪದೇಶಗಳು ಪ್ರಮುಖ ಪಾತ್ರ ವಹಿಸಿವೆ....

  • ಈ ಜಗತ್ತಿನಲ್ಲಿ ಹೊಸತು ಯಾವುದು? ಏನೂ ಇಲ್ಲ. ಹಾಗಾದರೆ ಹಳತು ಯಾವುದು? ಅದೂ ಇಲ್ಲ. ಎಲ್ಲವೂ ಯಾವಾಗಲೂ ಇದೆ, ಯಾವಾಗಲೂ ಇದ್ದೇ ಇರುತ್ತದೆ. ಶಿರಡಿ ಶ್ರೀ ಸಾಯಿಬಾಬಾ ಪವಾಡ...

  • ನನ್ನ ಒತ್ತಡ ಕಳೆದುಕೊಳ್ಳುವ ತಂತ್ರವೆಂದರೆ ಸಮುದ್ರದ ಎದುರು ಹೋಗಿ ಕುಳಿತುಕೊಳ್ಳುವುದು. ಸದಾ ಸಾಗರವನ್ನು ಕಂಡರೆ ನನ್ನೆಲ್ಲ ದುಃಖಗಳು, ಕಷ್ಟಗಳು ಕರಗಿ ಹೋಗುತ್ತವೆ....

ಹೊಸ ಸೇರ್ಪಡೆ