ಚಳಿಗೆ ಕಾಡುವ ಶಿಲೀಂಧ್ರ ಸೋಂಕು

Team Udayavani, Jan 21, 2020, 5:14 AM IST

ಚಳಿಗಾಲ ಕಾಲಿಡುತ್ತಿದ್ದಂತೆ ಚರ್ಮದ ವಿವಿಧ ಕಾಯಿಲೆಗಳು ದಾಂಗುಡಿ ಇಡುತ್ತವೆ. ಇವುಗಳಲ್ಲಿ ಚರ್ಮದ ಫ‌ಂಗಸ್‌ ಸೋಂಕು ಒಂದು. ಚರ್ಮ, ಕೂದಲು ಮತ್ತು ಉಗುರುಗಳಲ್ಲಿ ಶಿಲೀಂಧ್ರ ಸೋಂಕು ಉಂಟಾಗುತ್ತದೆ. ಇದಕ್ಕೆ ಕಾರಣ ಪೋಷಕಾಂಶಗಳ ಕೊರತೆ. ರಿಂಗ್‌ ವರ್ಮ್ ಅಥವಾ ಹುಳುಕಡ್ಡಿ ಕೂಡ ಇದೇ ಸಾಲಿನಲ್ಲಿ ಸೇರ್ಪಡೆಯಾಗಿದೆ. ಆಡುಭಾಷೆಯಲ್ಲಿ ಇದನ್ನು ಹುಳುಕಡ್ಡಿ, ಚಿಬ್ಬು ಎಂದು ಕರೆಯುತ್ತೇವೆ. ಮಧುಮೇಹ ನಿಯಂ ತ್ರಣ ಕಳೆದುಕೊಂಡಾಗ ಇಂತಹ ರೋಗ ಬೇಗನೆ ಕಾಣಿಸಿಕೊಳ್ಳುತ್ತದೆ. ಅಷ್ಟೇ ಅಲ್ಲ, ದೀರ್ಘ‌ ಕಾಲದ ಆ್ಯಂಟಿ ಬಯಾಟಿಕ್‌ ಅಥವಾ ಸ್ಟಿರಾಯ್ಡ ಬಳಕೆ ಕೂಡ ಶಿಲೀಂಧ್ರಗಳ ಸೋಂಕಿಗೆ ಕಾರಣವಾಗಬಲ್ಲದು.

ಗುಣಲಕ್ಷಣ
ಬಿಳಿ, ಕೆಂಪು, ಕಪ್ಪು, ಕಂದು ಬಣ್ಣದ ಮಚ್ಚೆಗಳು ದೇಹದ ವಿವಿಧ ಭಾಗಗಳಲ್ಲಿ ಕಂಡುಬರುತ್ತವೆ. ಇದರಿಂದ ತುರಿಕೆ, ಉರಿ ಉಂಟಾಗಬಹುದು. ತುರಿಸಿದರೆ ನೋವು ಹೆಚ್ಚಾಗಿ, ರಕ್ತ ಜಿನುಗುವ ಸಾಧ್ಯತೆಯೂ ಇರುತ್ತವೆ. ಮುಖ್ಯವಾಗಿ ಕುತ್ತಿಗೆ, ಬೆನ್ನು, ಭುಜ, ಕಾಲಿನಲ್ಲಿ, ಸೊಂಟದ ಭಾಗದಲ್ಲಿ ಫ‌ಂಗಸ್‌ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಎಳೆ ಮಕ್ಕಳಲ್ಲಿ ಈ ಶಿಲೀಂಧ್ರಗಳ ಕಾಟ ಹೆಚ್ಚಾಗಿರುತ್ತದೆ. ಮಕ್ಕಳ ನಾಲಿಗೆ ಮೇಲೆ, ಬಾಯಿಯ ಒಳಭಾಗದಲ್ಲಿ ಬಿಳಿ ಬಣ್ಣದ ಲೇಪನ ಕಂಡುಬರುತ್ತವೆ. ಇದನ್ನು ನಿವಾರಿಸಲು, ದಿನನಿತ್ಯ ದೇಹ ಶುದ್ಧಿಯ ಕಡೆ ಗಮನ ಹರಿಸಬೇಕು. ಸ್ನಾನ ಮಾಡುವಾಗ, ಹಲ್ಲು ತೊಳೆಯುವಾಗ ಸರಿಯಾಗಿ ಶುಚಿಗೊಳಿಸಬೇಕು. ಇದ ರಿಂದ ಚರ್ಮದ ಫ‌ಂಗಸ್‌ ಮಕ್ಕಳಿಗೆ ಬಾಧಿಸದಂತೆ ತಡೆಗಟ್ಟಬಹುದು.

ಹೀಗೆ ಮಾಡಿ
ಚರ್ಮದಲ್ಲಿ ತೇವಾಂಶ ಇರದಂತೆ ನೋಡಿಕೊಳ್ಳುವುದು ಅಗತ್ಯ. ಸ್ನಾನ ಮಾಡಿ, ಕೈಕಾಲು ತೊಳೆದು ಹಾಗೇ ಕುಳಿತುಕೊಳ್ಳುವುದು ಉತ್ತಮ ಲಕ್ಷಣ ವಲ್ಲ. ಒಂದು ವೇಳೆ ಹೀಗೆ ಮಾಡಿದರೆ ನೀರಿನಲ್ಲಿರುವ ಶಿಲೀಂಧ್ರಗಳು ಬಹು ಬೇಗನೆ ಬೆಳೆಯುತ್ತವೆ. ಇಂತಹ ಹಲವು ಸಕಾಲಿಕ ಕ್ರಮದ ಮೂಲಕ ಇವುಗಳನ್ನು ಶಮನ ಮಾಡಬಹುದು. ಜತೆಗೆ ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಅಗತ್ಯವಾಗಿ ತೆಗೆದುಕೊಳ್ಳಲೇಬೇಕು. ಶಿಲೀಂಧ್ರಗಳ ಹಾವಳಿಯಿಂದ ಚರ್ಮದ ಸೋಂಕು ಕಂಡುಬಂದ ತತ್‌ಕ್ಷಣ ವೈದ್ಯರನ್ನು ಕಾಣುವುದು ಒಳಿತು. ಹೆಚ್ಚಾದಂತೆ ನೋವಿನ ಕಾಟ ಹೆಚ್ಚು. ಇದಕ್ಕೆ ಅವಕಾಶ ನೀಡದಿರುವುದು ಒಳಿತು.

ದಿನನಿತ್ಯದ ಜೀವನದಲ್ಲಿ ಅಳವಡಿಸಬೇಕಾದ ಸಿಂಪಲ್‌ ಸೂತ್ರಗಳಿವು. ಇದೇನು ಮಹಾ ಎಂದು ಹೇಳಿಕೊಳ್ಳುವಂತೆಯೂ ಇಲ್ಲ. ಇಂತಹ ಸಣ್ಣ ವಿಚಾರಗಳು, ಆರೋಗ್ಯ ಹಾಗೂ ತ್ವಚೆ ರಕ್ಷಣೆ ವಿಚಾರದಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತವೆ.

-ದೇಹದ ನೀರಿನಂಶ ತೆಗೆಯಲು ಒಣಗಿದ ಟವೆಲ್‌ ಬಳಸಿಕೊಳ್ಳಿ.
-  ಟವೆಲ್‌, ಸಾಬೂನ್‌, ಬಾಚಣಿಗೆ ಪ್ರತ್ಯೇಕವಾಗಿ ಇಡುವುದು ಉತ್ತಮ.
- ಟವೆಲ್‌, ಕಾಲುಚೀಲ, ಕರವಸ್ತ್ರ, ಒಳಉಡುಪುಗಳನ್ನು ಪ್ರತಿನಿತ್ಯ ಸ್ವತ್ಛಗೊಳಿಸಬೇಕು.
- ಮಧುಮೇಹಿಗಳು ನಿಯಮಿತ ವಾಗಿ ರಕ್ತದ ಸಕ್ಕರೆ ಅಂಶವನ್ನು ಪರೀಕ್ಷೆ ಮಾಡಿಕೊಳ್ಳಬೇಕು.
-ಆ್ಯಂಟಿಬಯಾಟಿಕ್‌, ಸ್ಟಿರಾಯ್ಡ ಬಳಕೆಯ ಮುನ್ನ ವೈದ್ಯರ ಸಲಹೆ ಪಡೆದುಕೊಳ್ಳಿ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಮರೆವು ಒಂದು ರೀತಿಯ ಮೆದುಳಿನ ನ್ಯೂನತೆ. ಭೌತಿಕ ಅಥವಾ ಮಾನಸಿಕ ಆಘಾತದಿಂದ ಉಂಟಾಗುವ ರೋಗವಿದು. ಮನಸ್ಸಿಗೆ ತೀವ್ರ ರೀತಿಯ ಆಘಾತವಾದಾಗ ಅದರಿಂದ ಘಾಸಿಯಾಗಿ ಜ್ಞಾಪಕ...

  • ಸಾಮಾನ್ಯವಾಗಿ ಹುಡುಗಿಯರಷ್ಟೇ ಸೌಂದರ್ಯದ ಬಗ್ಗೆ ಕಾಳಜಿ ವಹಿಸುತ್ತಾರೆ ಎಂಬ ಮಾತಿದೆ. ಅಂತೆಯೇ ಪುರುಷರು ಕೂಡ ಇತ್ತೀಚೆಗೆ ಹೆಚ್ಚು ಸೌಂದರ್ಯ ಕಾಳಜಿ ವಹಿಸುತ್ತಿರುವುದು...

  • ನಮ್ಮ ಮನೆಯ ಅಡುಗೆ ಮನೆಯಲ್ಲಿ ಹಲವಾರು ಔಷಧ ಗುಣಗಳಿರುವ ಮತ್ತು ಆರೋಗ್ಯದಾಯಕ ವಸ್ತುಗಳಿವೆ. ಅವುಗಳ ಪ್ರಯೋಜನವನ್ನು ತಿಳಿದು ಬಳಸಿದರೆ ರೋಗ ನಿಯಂತ್ರಣಕಾರಿಯಾಗಿ...

  • ಉಪ್ಪು ಆಹಾರ ತಯಾರಿಕೆಯಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತದೆ. ಆಹಾರ ಎಷ್ಟೇ ಚೆನ್ನಾಗಿದ್ದರೂ ಉಪ್ಪಿನಂಶಇಲ್ಲದಿದ್ದರೆ ಅದರ ರುಚಿ ಕೆಟ್ಟು ಹೋಗುತ್ತದೆ. ಉಪ್ಪು...

  • ಆಫೀಸ್‌ನಲ್ಲಿ ಒಂದೇ ಕಡೆ ಕುಳಿತು ಕೆಲಸ ಮಾಡುತ್ತಿದ್ದೀರಾ?ಹಾಗಾದರೆ ಕೆಲವೊಮ್ಮೆ ಸೊಂಟ ನೋವು, ಕುತ್ತಿಗೆ ನೋವು ಕಾಡಿದ ಅನುಭವ ನಿಮಗೂ ಆಗಿರಬಹುದಲ್ಲ?ಇದಕ್ಕೇನು...

ಹೊಸ ಸೇರ್ಪಡೆ

  • ಬಿಸಿಲಿನಿಂದ ರಕ್ಷಣೆ ಪಡೆಯಲಷ್ಟೇ ಸನ್‌ಗ್ಲಾಸಸ್‌ ಧರಿಸುವ ಕಾಲ ಇದಲ್ಲ. ನೀವು ಧರಿಸುವ ಕೂಲಿಂಗ್‌ ಗ್ಲಾಸ್‌ ಕಣ್ಣನ್ನಷ್ಟೇ ಅಲ್ಲ, ನಿಮ್ಮ ಸ್ಟೈಲ್‌ ಅನ್ನೂ "ಕೂಲ್‌'...

  • ಮಹಾನಗರ: ರಾಜ್ಯ ಸರಕಾರವು ನೂತನವಾಗಿ ಜಾರಿಗೆ ತಂದ ನಂಬರ್‌ ಪ್ಲೇಟ್‌ ಮಾದರಿ ನಗರದಲ್ಲಿ ಇನ್ನೂ ಸಮರ್ಪಕವಾಗಿ ಪಾಲನೆಯಾಗುತ್ತಿಲ್ಲ. ವಾಹನಗಳ ನಂಬರ್‌ ಪ್ಲೇಟ್‌ನಲ್ಲಿ...

  • ತಾವು ಯಾವುದರಲ್ಲಿ ಡಿಗ್ರಿ ಮಾಡಿದ್ದೇವೋ ಅದಕ್ಕೆ ತಕ್ಕಂತೆ ಕೆಲಸ ಸಿಗಬೇಕೆಂದು ಕಾದು ಕುಳಿತುಕೊಳ್ಳುವ ಕಾಲ ಅಲ್ಲ ಇದು. ಇವತ್ತು ಪದವಿ, ಸ್ನಾತಕೋತ್ತರ ಪದವಿಗಳು...

  • ಆಗೆಲ್ಲಾ ಈಗಿನಂತೆ ನಿಶ್ಚಿತಾರ್ಥಕ್ಕೆ ನೂರಾರು ಜನರು ಬರುತ್ತಿರಲಿಲ್ಲ. ಮುಖ್ಯವಾದ ಏಳೆಂಟು ಜನರು ಬಂದು, ಹುಡುಗಿಗೆ ಉಂಗುರ ತೊಡಿಸಿ, ಹರಿವಾಣ ವಿನಿಮಯ ಮಾಡುತ್ತಿದ್ದರು....

  • ಮಂಗಳೂರು: ರಾಜ್ಯದಲ್ಲಿ ಸಹಕಾರ ಸಂಸ್ಥೆಗಳ ಮೂಲಕ ಸಾಲ ಪಡೆದು 2020 ಜ. 31ಕ್ಕೆ ಸುಸ್ತಿಯಾಗಿರುವ ಮಧ್ಯಮಾವಧಿ ಹಾಗೂ ದೀರ್ಘಾವಧಿ ಕೃಷಿ ಹಾಗೂ ಕೃಷಿ ಸಂಬಂಧಿತ ಸಾಲಗಳ ಮೇಲಿನ...