ಮುಖದ ಕಾಂತಿಗೆ ಚಾರ್‌ಕೋಲ್‌ ಮಾಸ್ಕ್

Team Udayavani, Dec 10, 2019, 4:52 AM IST

ಸೌಂದರ್ಯದ ಬಗ್ಗೆ ಆಸಕ್ತಿ ಯಾರಿಗಿಲ್ಲ ಹೇಳಿ? ಹುಡುಗಿರೇ ಇರಲಿ, ಹುಡುಗರೇ ಇರಲಿ ಎಲ್ಲರಲ್ಲಿಯೂ ಸೌಂದರ್ಯ ಪ್ರಜ್ಞೆ ಇದ್ದೇ ಇರುತ್ತದೆ. ದಿನದಿಂದ ದಿನಕ್ಕೆ ಸೌಂದರ್ಯ ಸಲಹೆಗಳು ಹುಟ್ಟುತ್ತಲೇ ಇರುತ್ತದೆ. ಈಗಿನ ಟ್ರೆಂಡ್‌ ಚಾರ್‌ ಕೋಲ್‌ ಮಾಸ್ಕ್ ಅಥವಾ ಇದ್ದಿಲು ಮಾಸ್ಕ್. ಇತ್ತೀಚಿನ ಸೌಂದರ್ಯ ಸಾಧನಗಳಲ್ಲಿ ಇದೂ ಒಂದಾಗಿದೆ. ಚರ್ಮವನ್ನು ಶುಚಿಗೊಳಿಸುವ ಮತ್ತು ಮೃದುವಾಗಿಸಿ, ಪ್ರಕಾಶಮಾನವಾಗಲು ಇದು ಸಹಕಾರಿ.

ಚಾರ್‌ಕೋಲ್‌ ಮಾಸ್ಕ್ ಚರ್ಮದ ಕಾಳಜಿ ಮಾಡುತ್ತದೆ. ಚರ್ಮದಲ್ಲಿರುವ ಕಲ್ಮಶಗಳನ್ನು, ರಂಧ್ರಗಳನ್ನು ಮುಚ್ಚಿ ಹಾಕುತ್ತದೆ. ಈ ಮಾಸ್ಕ್ ನಮ್ಮ ಚರ್ಮದಲ್ಲಿನ ಎಣ್ಣೆ ಅಂಶವನ್ನೂ ನಿಯಂತ್ರಿಸುತ್ತದೆ. ಮುಖದಲ್ಲಿನ ಬ್ಲ್ಯಾಕ್‌ ಹೆಡ್ಸ್‌ ಮತ್ತು ಮೊಡವೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಚರ್ಮದಿಂದ ಬ್ಯಾಕ್ಟೀರಿಯಾ, ಜೀವಾಣು, ಕೊಳಕು ಮತ್ತು ಎಣ್ಣೆಯನ್ನು ಈ ಮಾಸ್ಕ್ ನಿವಾರಿಸುತ್ತ¤ದೆ. ಚರ್ಮದಲ್ಲಿನ ಸತ್ತ ಜೀವಕೋಶಗಳನ್ನು ತೆಗೆದು ಹಾಕಿ ಹೊಳೆಯುವಂತೆ ಮಾಡುತ್ತದೆ.

1 ಚರ್ಮವನ್ನು ಕಾಂತಿ ಯುತವನ್ನಾಗಿಸುತ್ತದೆ. ಕಲ್ಮಶ ಗಳನ್ನು, ಧೂಳು ಸ್ವತ್ಛಗೊಳಿಸುತ್ತದೆ. ಒಮ್ಮೆ ನಿಮ್ಮ ಈ ಮಾಸ್ಕ್ನ್ನು ಹಾಕಿಕೊಂಡು ನಂತರ ಮುಖವನ್ನು ತೊಳೆದುಕೊಳ್ಳಿ. ನಿಮ್ಮ ಚರ್ಮವು ಎಷ್ಟು ಪ್ರಕಾಶಮಾನವಾಗುತ್ತದೆ ಎಂಬುವುದನ್ನು ಗಮನಿಸಿ.

2 ನಿಮ್ಮ ಚರ್ಮವನ್ನು ಎಫೊಲಿಯೇಟ್‌ ಮಾಡಲು ಸಹಾಯ ಮಾಡುತ್ತದೆ. ಚರ್ಮವನ್ನು ಬೆಳಗಿಸುವುದರ ಜತೆಗೆ ಎಣ್ಣೆಯುಕ್ತ ಚರ್ಮವನ್ನು, ತೈಲ ಸ್ರವಿಸು ವಿಕೆಯನ್ನು ಸಮತೋಲನಗೊಳಿಸುತ್ತದೆ.

ತಯಾರಿ ಹೇಗೆ?
ಚಾರ್‌ಕೋಲ್‌ ಮಾಸ್ಕ್ನ್ನು ನೀವೇ ಮನೆಯಲ್ಲಿ ತಯಾರಿಸಿ ಕೊಳ್ಳಬಹುದು. ನಿಮಗೆ ಬೇಕಾಗು ವುದು ಒಂದು ಟೀ ಸ್ಪೂನ್‌ ಇದ್ದಿಲು ಪುಡಿ, ಒಂದು ಟೀ ಸ್ಪೂನ್‌ ಬೆಂಟೋನೈಟ್‌ ಜೇಡಿಮಣ್ಣು, ಒಂದು ಚಿಟಿಕೆ ಅಡುಗೆ ಸೋಡಾ ಮತ್ತು ಒಂದು ಟೀ ಸ್ಪೂನ್‌ ತೆಂಗಿನ ಎಣ್ಣೆ. ಇವುಗಳನ್ನು ಒಂದು ಬಟ್ಟಲಿನಲ್ಲಿ ಸೇರಿಸಿ, ಪೇಸ್ಟ್‌ ತಯಾರಿಸಿ. ನಂತರ ಈ ಪೇಸ್ಟ್‌ ಅನ್ನು ಬ್ರಷ್‌ನಿಂದ ಮುಖಕ್ಕೆ ಹಚ್ಚಿ 10 ನಿಮಿಷಗಳ ಕಾಲ ಬಿಡಿ. ನಂತರ ನಿಮ್ಮ ಮುಖವನ್ನು ತೊಳೆಯಿರಿ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಹಿರಿಯರಿಂದ ಹಿರೇಮದ್ದು ಎಂದು ಕರೆಸಿಕೊಂಡಿರುವ ಅಶ್ವಗಂಧ ಮನೆ ಮುಂದೆ, ಹಿತ್ತಲಲ್ಲಿ ಬೆಳೆಯಬಹುದಾದ ಮನೆಮದ್ದು. ಇದು ಕುದುರೆಯ ಮೂತ್ರದ ವಾಸನೆ ಹೊಂದಿರುವ ಕಾರಣ...

  • ಅರಿಶಿನವು ಹಲವು ಕಾಯಿಲೆಗಳಿಗೆ ಮದ್ದು. ಹೀಗಾಗಿ ಆಯುರ್ವೇದದಲ್ಲಿ ಇದಕ್ಕೆ ಪ್ರಮುಖ ಸ್ಥಾನವಿದೆ. ನಾವು ಸಾಮಾನ್ಯವಾಗಿ ಲೆಮನ್‌ ಟೀ, ಪುದೀನಾ ಟೀ ಸಹಿತ ಇನ್ನಿತರ ಮಾದರಿಯ...

  • ಕಂಪ್ಯೂಟರ್‌ನಲ್ಲಿ ಗ್ರಾಫಿಕ್ಸ್‌ ವಿನ್ಯಾಸ ಮಾಡುವವರು ಕಂಪ್ಯೂಟರ್‌ ಮೌಸ್‌ ಹಿಡಿಯುವ ಕೈಯತ್ತ ತಮ್ಮ ದೇಹವನ್ನು ಕೂಡ ಸ್ವಲ್ಪ ವಾಲಿಸುತ್ತಾ ಇರುತ್ತಾರೆ. ಈ ರೀತಿ...

  • ಒತ್ತಡದ ಬದುಕಿನ ಶೈಲಿಯಿಂದ ಕೆಲವು ನೋವುಗಳು ಮಹಿಳೆಯರನ್ನೇ ಹೆಚ್ಚಾಗಿ ಕಾಡುವುದಿದೆ. ಅದೂ ವಯಸ್ಸು 28 ದಾಟಿದರೆ ಸಾಕು, ಒಂದಲ್ಲ ಒಂದು ರೀತಿಯ ನೋವು.ನೋವು ನಿವಾರಕ...

  • ಆರೋಗ್ಯಕರವಾಗಿದ್ದ ದೇಹವಿದ್ದರೆ ಮಾತ್ರ ಏನೇ ಸಾಧನೆ ಮಾಡಲು ಸಾಧ್ಯ. ಆದ್ದರಿಂದ ಇಂದು ಜಿಮ್‌ ಮೊದಲಾದ ಫಿಟ್ನೆಸ್‌ ಕೇಂದ್ರಗಳ ಸಂಖ್ಯೆ ಹೆಚ್ಚುತ್ತಿದೆ. ಫಿಟ್ನೆಸ್‌...

ಹೊಸ ಸೇರ್ಪಡೆ

  • ಕ್ರಿಕೆಟಿಗರ ಮಕ್ಕಳು ಅಪ್ಪನ ಸರಿಸಮಾನವಾಗಿ ಬೆಳೆದ ಉದಾಹರಣೆಗಳು ಸಿಗುವುದು ಕಡಿಮೆ. ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡುಲ್ಕರ್‌ ಅವರ ಮಗ ಅರ್ಜುನ್‌ ತೆಂಡುಲ್ಕರ್‌...

  • ರಂಗಶಂಕರದ 15ನೇ ವಾರ್ಷಿಕೋತ್ಸವದ ಪ್ರಯುಕ್ತ ನಡೆಯುತ್ತಿರುವ ವಿಶೇಷ ರಂಗ ಕಾರ್ಯಕ್ರಮದಲ್ಲಿ, ಈ ತಿಂಗಳು ಕುಟಿಯಟ್ಟಂ ಪ್ರದರ್ಶನಗೊಳ್ಳಲಿದೆ. ಕೇರಳದ ಈ ಕಲಾ ಪ್ರಕಾರವು...

  • ತನಗಿಂತ ಕಪಿಲ್‌ ಶ್ರೇಷ್ಠ ಕಪಿಲ್‌ದೇವ್‌, ಇಮ್ರಾನ್‌ ಖಾನ್‌, ರಿಚರ್ಡ್‌ ಹ್ಯಾಡ್ಲಿ, ಇಯಾನ್‌ ಬಾಥಮ್‌, ವಿವಿಯನ್‌ ರಿಚರ್ಡ್ಸ್‌ ಇವರೆಲ್ಲ 80ರ ದಶಕದಲ್ಲಿ ವಿಪರೀತ...

  • ಈ ಹಿಂದೆ 3 ಬಾರಿ, ಸಾವಿರಕ್ಕೂ ಅಧಿಕ ಕಲಾವಿದರಿಂದ ಹಾಡಿಸಿ ಲಿಮ್ಕಾ ದಾಖಲೆಗೆ ಸಾಕ್ಷಿಯಾಗಿದ್ದ "ರಂಗಸಂಸ್ಥಾನ'ವು ಪ್ರಸ್ತುತ "ನಾದ ಮಂಜರಿ' ಎಂಬ ಸಮೂಹ ಗಾಯನ ಏರ್ಪಡಿಸಿದೆ....

  • "ವಿಮಾನ ಏರುವುದಕ್ಕೂ ಮೊದಲು, ಕೊಳಲನ್ನು ನುಡಿಸುತ್ತಾ ನುಡಿಸುತ್ತಾ ಆಕಾಶ ಕಂಡವನು ನಾನು. ಮನಸ್ಸು ಹಕ್ಕಿಯಾಗಿ, ಭೂಮಿಗೆ ಇಳಿಯುವುದನ್ನೇ ಮರೆಯುತ್ತಿದ್ದೆ' ಎಂದವರು,...