ಪ್ರವಾಸದ ವೇಳೆಯೂ ವ್ಯಾಯಾಮ ಮಾಡಿ

Team Udayavani, Sep 17, 2019, 5:15 AM IST

ನೀವು ಪ್ರವಾಸ ಪ್ರಿಯರೇ? ಹೆಚ್ಚು ಸಮಯ ವ್ಯವಹಾರ, ಉದ್ಯೋಗದ ಕಾರಣ ಇಲ್ಲವೇ ಮೋಜು ಮಸ್ತಿಯ ಪ್ರವಾಸದ ಕಾರಣದಿಂದಾಗಿ ನಿಮ್ಮ ದೈನಂದಿನ ವ್ಯಾಯಾಮದ ಚಟುವಟಿಕೆಗೆ ವಿರಾಮ ನೀಡಬೇಕಾಗಿ ಬರುವುದೇ? ಹಾಗಾದರೆ ಇಲ್ಲಿದೆ ಅದಕ್ಕೆ ಪರಿಹಾರ. ಪ್ರವಾಸದ ಸಮಯದಲ್ಲೂ ವ್ಯಾಯಾಮ ಚಟುವಟಿಕೆ ಕೈಗೊಳ್ಳುವ ಮೂಲಕ ದೇಹವನ್ನು ಫಿಟ್‌ ಆಗಿರಿಸಿಕೊಳ್ಳಬಹುದು. ಅಂಥ ಕೆಲವು ಚಟುವಟಿಕೆಗಳು ಇಲ್ಲಿವೆ

ಫಿಟ್‌ನೆಸ್‌ ಬಟ್ಟೆಗಳು ಜತೆಗಿರಲಿ
ಪ್ರವಾಸದ ಕೈಗೊಳ್ಳುವ ಸಮಯದಲ್ಲಿ ನಿಮ್ಮ ಬ್ಯಾಗ್‌ಗಳಲ್ಲಿ ಅಗತ್ಯ ವಸ್ತುಗಳ ಜತೆ ಶೂ, ವ್ಯಾಯಾಮಕ್ಕೆ ಸಂಬಂಧಿ ಫಿಕ್ಲೃಸ್‌ ಉಡುಪುಗಳು ಜತೆ ಇರಲಿ.

ಬಿಡುವಿರಲಿ
ಪ್ರವಾಸದ ವೇಳೆ ಒಂದೇ ಸಮನೇ ಬಿಡುವಿಲ್ಲದೆ ಪಯಣ ಮಾಡುವ ಬದಲು ನಡು ನಡುವೆ ಬಿಡುವು ಕೊಡುವುದು ಅತ್ಯುತ್ತಮ. ಇದರಿಂದ ದೈಹಿಕ ಹಾಗೇ ಮಾನಸಿಕ ಒತ್ತಡ ನಿವಾರಣೆ ಜತೆ ಸ್ಟ್ರೇಚಿಂಗ್‌, ಜತೆಜತೆಗೆ ಸಣ್ಣ ವಾಕ್‌ ಇರಲಿ. ಎಚ್ಚರದಿಂದ ವಾಹನ ಚಲಾಯಿಸಲು ಸಾಧ್ಯವಾಗುವುದು.

ಸ್ಥಳೀಯ ಪರಿಸರದ ಪರಿಚಯ
ತಾವು ಭೇಟಿ ನೀಡುವ ಸ್ಥಳದ ಹಿನ್ನೆಲೆ, ಮತ್ತು ಸುತ್ತ ಮುತ್ತ ಇರುವ ಸ್ಥಳಗಳ ಬಗ್ಗೆ ಮೊದಲೆ ತಿಳಿದುಕೊಳ್ಳಿ( ಇಂದು ತಂತ್ರಜ್ಞಾನಗಳ ಬೆಳವಣಿಗೆಯಿಂದ ಗೂಗಲ್‌ ಮ್ಯಾಪ್‌ನಂತಹ ಮೊಬೈಲ್‌ ಆ್ಯಪ್‌ ಮೂಲಕ ಎಲ್ಲ ಸ್ಥಳೀಯ ಸ್ಥಳಗಳ ಮಾಹಿತಿ ಪಡೆಯಬಹುದಾಗಿದೆ.) ಸ್ಥಳೀಯ ಪಾರ್ಕ್‌ , ವಾಕಿಂಗ್‌ ವೇ ಮೊದಲಾದ ಸ್ಥಳಗಳನ್ನು ಗುರುತಿಸಿ ಬಳಿಕ ಇಲ್ಲಿ ಸೈಟ್‌ ಸೀಯಿಂಗ್‌, ವಾಕಿಂಗ್‌ ನಂತಹ ಚಟುವಟಿಕೆ ಕೈಗೊಳ್ಳಬಹುದು.

ಒಟ್ಟಾರೆ ದೈನಂದಿನ ಚಟುವಟಿಕೆಗೆ ವಿರಾಮ ನೀಡದೆ, ಬೆಳಗ್ಗೆ ಹೆಚ್ಚು ವ್ಯಾಯಾಮದಲ್ಲಿ ತೊಡಗಿರುವವರು ಸಣ್ಣ ವಾಕ್‌ನಂತಹ ವ್ಯಾಯಾಮಗಳನ್ನು, ಸಂಜೆ ವ್ಯಾಯಮಾಭ್ಯಾಸ ಇದ್ದವರು ಪ್ರವಾಸದ ಸಮಯದಲ್ಲೂ ಸಂಜೆ ವಾಕ್‌ ಹಾಗೇ ಮುಂದುವರಿಸಬಹುದು ಇದರಿಂದ ಪ್ರವಾಸದ ಸ್ಥಳದ ಪರಿಚಯವಾಗುವುದರ ಜತೆಜತೆಗೆ ಆರೋಗ್ಯವು ಉತ್ತಮವಾಗಿರುವುದು.

ಸ್ಥಳೀಯ ವ್ಯಾಯಾಮ ಸೌಲಭ್ಯಗಳ ಬಗ್ಗೆ ವಿಚಾರಿಸಿ
ಇಂದು ಹೊಟೇಲ್‌ ಮಾಲ್‌ಗ‌ಳಲಿ ವ್ಯಾಯಾಮ ಚಟುವಟಿಕೆಗೆ ಸಂಬಂಧಿ ಜಿಮ್‌ಗಳ ವ್ಯವಸ್ಥೆ ಇವೆ. ನೀವು ಉಳಿದು ಕೊಳ್ಳುವ ಸ್ಥಳದಲ್ಲಿ ಇಂತಹ ಸೌಲಭ್ಯಗಳು ಇದ್ದಲ್ಲಿ ಅದರ ಸದುಪಯೋಗ ಪಡೆಯಬಹುದು.

-  ಕಾರ್ತಿಕ್‌ ಚಿತ್ರಾಪುರ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಕಣ್ಣಿನ ದೋಷವಿರುವವರ ಕನ್ನಡಕ ಬಳಸುತ್ತಿದ್ದ ಕಾಲ ಮರೆಯಾಗಿ ಆಧುನಿಕತೆಗೆ ತಕ್ಕಂತೆ ಕಾಂಟೆಕ್ಟ್ ಲೆನ್ಸ್‌ಗಳ ಬಳಕೆ ಹೆಚ್ಚಾಗಿದೆ. ಎಲ್ಲರ ಮುಂದೆ ಕನ್ನಡಕ ಹಾಕಲು...

  • ಅಸಿಡಿಟಿ ಇತ್ತೀಚಿಗೆ ಎಲ್ಲರಲ್ಲೂ ಬಾಧಿಸಿರುವ ಸಮಸ್ಯೆಯಾಗಿದೆ. ಹೊಟ್ಟೆಯ ಗ್ಯಾಸ್ಟ್ರಿಕ್‌ ಗ್ರಂಥಿಗಳಲ್ಲಿ ಆಮ್ಲಗಳು ಸ್ರವಿಸಿದಾಗ ಅಸಿಡಿಟಿ ಹೆಚ್ಚಾಗಿ ಉಸಿರಾಟದ...

  • ದಂತಕ್ಷಯ ಅಥವಾ ಹಲ್ಲು ಹುಳುಕಾಗುವುದು ಬಾಯಿಯ ಒಂದು ಪ್ರಮುಖ ಆರೋಗ್ಯ ಸಮಸ್ಯೆಯಾಗಿದೆ. ಅಧಿಕ ಸಕ್ಕರೆ ಸೇವಿಸಿದರೆ ನಿಸ್ಸಂದೇಹವಾಗಿ ಹಲ್ಲಿನಲ್ಲಿ ಹುಳುಕಾಗುತ್ತದೆ....

  • ತೆಂಗಿನ ಎಣ್ಣೆ ಬಳಕೆ ಯಿಂದ ಕೊಬ್ಬಿನಾಂಶ ಹೆಚ್ಚುತ್ತದೆ ಎಂಬುದು ಕೆಲವರ ನಂಬಿಕೆ. ಆದರೆ ಪ್ರತಿನಿತ್ಯ ತೆಂಗಿನ ಎಣ್ಣೆ ಸೇವನೆಯಿಂದ ಆರೋಗ್ಯವಾಗಿರ ಬಹುದು ಮತ್ತು...

  • ಶಿಸ್ತಿನ ದೇಹ ಎಂದೂ ಔಟ್‌ ಆಫ್ ಫ್ಯಾಷನ್‌ ಆಗುವುದೇ ಇಲ್ಲ. ಈಗಲೂ ನಮ್ಮ ಜೀವನದಲ್ಲಿ ಬಿಡುವಿಲ್ಲದ ಕೆಲಸಗಳ ನಡುವೆ ಸಾಧ್ಯವಾದಷ್ಟು ವ್ಯಾಯಾಮ ಮಾಡಿ ಫಿಟ್‌ ಆಗಲು ಪ್ರಯತ್ನಿಸುತ್ತೇವೆ....

ಹೊಸ ಸೇರ್ಪಡೆ