ಸೆಂಟ್ರಲ್‌ ಮಾರ್ಕೆಟ್‌ ನಿಂದ ಹೊರಬರಲು ಸೂಕ್ತ ವ್ಯವಸ್ಥೆಯಾಗಬೇಕು

Team Udayavani, Nov 4, 2018, 12:39 PM IST

4-november-12.gif

ಮಂಗಳೂರು ನಗರ ಮಾತ್ರವಲ್ಲ ಗ್ರಾಮೀಣ ಭಾಗದ ಹೆಚ್ಚಿನ ಜನರು ಹಣ್ಣು, ತರಕಾರಿ, ಮಾಂಸ ಮತ್ತಿತರ ಅಗತ್ಯ ವಸ್ತುಗಳನ್ನು ಖರೀದಿಸಲು ಸೆಂಟ್ರಲ್‌ ಮಾರ್ಕೆಟ್‌ಗೆ ಬರುತ್ತಾರೆ. ಇಲ್ಲಿ ಒಳ ಬರಲು ಮೂರು ದಾರಿಗಳಿವೆ.

1. ಲೇಡಿಗೋಷನ್‌ (ಟೌನ್‌ಹಾಲ್‌ ರಸ್ತೆ) ರಸ್ತೆ. 2. ಗಣಪತಿ ಹೈಸ್ಕೂಲ್‌ ರಸ್ತೆ (ಫೆಲಿಕ್ಸ್‌ ಪೈ ಬಜಾರ್‌ ಬಳಿ), 3. ರಾಮಕಾಂತಿ ರೂಪವಾಣಿ ಟಾಕೀಸ್‌ ಮುಖಾಂತರ ಬರಬಹು ದಾದ ರಸ್ತೆ. ಆದರೆ ಇಲ್ಲಿ ಬಂದ ಜನರ ವಾಹನಗಳಿಗೆ ಹಂಪನಕಟ್ಟೆಗೆ ಹೋಗಲು ಇರುವುದು ಲೇಡಿಗೋಷನ್‌ ಮತ್ತು ಸೆಂಟ್ರಲ್‌ ಟಾಕೀಸ್‌ ಪಕ್ಕದಲ್ಲಿರುವ ರಸ್ತೆ ಮಾತ್ರ. ಇಲ್ಲಿ ಎಲ್ಲ ಕಡೆ ನೋ ಎಂಟ್ರೀ ರಸ್ತೆಗಳೇ ಇರುವುದರಿಂದ ಸೆಂಟ್ರಲ್‌ ಮಾರುಕಟ್ಟೆಗೆ ಬಂದವರು ಹೊರ ಹೋಗಲು ಪರದಾಡುವಂತಾಗಿದೆ.

ಮಾರ್ಕೆಟ್‌ ರಸ್ತೆಯಿಂದ ಬಂದವರು ಗಣಪತಿ ರಸ್ತೆ ಸೇರುವಂತಿಲ್ಲ. ಕಾರ್‌ಸ್ಟ್ರೀಟ್‌ನಿಂದ ಬರುವವರೂ ಕಲ್ಪನಾ ಸ್ವೀಟ್‌ ಕಡೆ ಹೋಗುವಂತಿಲ್ಲ. ಒಟ್ಟಿನಲ್ಲಿ ಇಲ್ಲಿ ಒಳರಸ್ತೆಗಳಲ್ಲಿ ಸಂಚಾರಕ್ಕಿಂತ ಗೊಂದಲಗಳೇ ಹೆಚ್ಚಾಗಿವೆ. ಜತೆಗೆ ವಾಹನ ಪಾರ್ಕಿಂಗ್‌ ಸಮಸ್ಯೆ, ಬೀದಿ ಬದಿ ವ್ಯಾಪಾರಸ್ಥರ ಹಾವಳಿಯೂ ಹೆಚ್ಚಾಗಿದೆ.

ಒಟ್ಟಿನಲ್ಲಿ ಸೆಂಟ್ರಲ್‌ ಮಾರ್ಕೆಟ್‌ ಎಂಬ ಚಕ್ರವ್ಯೂಹದಿಂದ ಹೊರಬರಲು ಪಾದಚಾರಿಗಳು, ವಾಹನ ಸವಾರರು ಪರದಾಡಬೇಕಾಗಿದೆ. ಮಾರ್ಕೆಟ್‌ನಿಂದ ಮೈದಾನ (ಒಂದನೇ ಕ್ರಾಸ್‌ನಿಂದ ಒಂದು ಕ್ಲಾಕ್‌ಟವರ್‌) ರಸ್ತೆಗೆ ತಲು ಪಲು ಸಾಕಷ್ಟು ಸಾಹಸ ಪಡಬೇಕಾಗುತ್ತದೆ. ಕಾರಣ ಎರಡು ಬದಿಗಳಲ್ಲೂ ಬಿರುಸಿನ ವ್ಯಾಪಾರ ನಡೆಯುತ್ತಿರುವ ತಿನಿಸು ಹಾಗೂ ಇತರ ಅಂಗಡಿಗಳು, ಲಾರಿಗಳಿಂದ ಪಾರ್ಸೆಲ್‌ಗ‌ಳನ್ನು ಇಳಿಸುವುದು, ಪಕ್ಕದ ಅಂಗಡಿಗಳಿಗೆ ಸಾಗಿಸುವುದು, ಅದಲ್ಲದೇ ಅಂಗಡಿಗಳಿಂದ ಖರೀದಿಸಿದ ಮನೆ ಸಾಮಗ್ರಿ, ತಿನಿಸು ವಸ್ತುಗಳನ್ನು ಅವರವರ ವಾಹನಗಳಿಗೆ ಏರಿಸುವುದು, ತುಂಬಿಸುವುದು ಹೀಗೆ ಮತ್ತಿತರ ಕಾರ್ಯಗಳು ರಸ್ತೆಯಲ್ಲೇ ದಿನವೀಡಿ ಪುರುಸೊತ್ತಿಲ್ಲದ ಹಾಗೆ ನಡೆಯುತ್ತಿರುತ್ತವೆ. ಹಾಗಾಗಿ ದಿನಪೂರ್ತಿ ಲಾರಿ, ಟೆಂಪೋ, ಖಾಸಗಿ ವಾಹನಗಳು ಇಲ್ಲಿ ಯದ್ವಾತದ್ವ ಪಾರ್ಕ್‌ ಮಾಡಲಾಗಿರುತ್ತದೆ. ಹೀಗಾಗಿ ಈ ರಸ್ತೆಯಲ್ಲಿ ಹೋಗುವುದೇ ಕಷ್ಟ ಎಂಬಂತಾಗಿದೆ. ಅಲ್ಲದೇ ರಸ್ತೆಪೂರ್ತಿ ಗುಂಡಿಗಳೇ ತುಂಬಿಕೊಂಡಿದ್ದು, ತಿಳಿಯದೇ ಒಳ ಹೋದರೆ ಅಪಾಯ ಖಂಡಿತ.

ಒಟ್ಟಿನಲ್ಲಿ ಸಾವಿರಾರು ಜನರು ಬಂದುಹೋಗುವ, ಅತ್ಯಂತ ಹೆಚ್ಚಿನ ವಾಣಿಜ್ಯ ವ್ಯವಹಾರಗಳು ನಡೆಯುತ್ತಿರುವ ಸೆಂಟ್ರಲ್‌ ಮಾರ್ಕೆಟ್‌ಗೆ ಒಳ ಹೋಗುವ ಮತ್ತು ಹೊರ ಬರುವ ರಸ್ತೆಗಳನ್ನು ಸರಿಯಾಗಿ ಗುರುತಿಸಬೇಕು. ಜತೆಗೆ ಜಿಲ್ಲಾಡಳಿತ, ಟ್ರಾಫಿಕ್‌ ಪೊಲೀಸ್‌ ಹಾಗೂ ಮನಪಾ ಅಧಿಕಾರಿಗಳು ಇಲ್ಲಿ ಸೂಕ್ತ ವ್ಯವಸ್ಥೆ ಕೈಗೊಳ್ಳಲು ಕ್ರಮಕೈಗೊಳ್ಳಬೇಕಿದೆ.

 ಜೆ.ಎಫ್.ಡಿ’ಸೋಜಾ,
ಅತ್ತಾವರ

ಟಾಪ್ ನ್ಯೂಸ್

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೀಚ್‌ ಪ್ರವಾಸೋದ್ಯಮಕ್ಕೆ ಸ್ವಚ್ಛತೆಯ ಸ್ಪರ್ಶ ಅಗತ್ಯ

ಬೀಚ್‌ ಪ್ರವಾಸೋದ್ಯಮಕ್ಕೆ ಸ್ವಚ್ಛತೆಯ ಸ್ಪರ್ಶ ಅಗತ್ಯ

ತುಂಬೆ: 7 ಮೀ. ನೀರು ಸಂಗ್ರಹಕ್ಕೆ ಕ್ರಮ ಅಗತ್ಯ

ತುಂಬೆ: 7 ಮೀ. ನೀರು ಸಂಗ್ರಹಕ್ಕೆ ಕ್ರಮ ಅಗತ್ಯ

Mangalore-railway

ಮಂಗಳೂರು: ರೈಲ್ವೇ ಸಂಪರ್ಕ ಜಾಲ ವಿಸ್ತರಣೆಗೆ ಹೊಸ ಸಾಧ್ಯತೆಗಳ ಪರಿಶೀಲನೆ

ನಗರ 24×7 ಪರಿಕಲ್ಪನೆಗೆ ಒಲವು

ನಗರ 24×7 ಪರಿಕಲ್ಪನೆಗೆ ಒಲವು

ಅಂಗಡಿ ಬದಿಗಳ ಶುಚಿತ್ವಕ್ಕೆ ಮಹತ್ವ ನೀಡಲಿ

ಅಂಗಡಿ ಬದಿಗಳ ಶುಚಿತ್ವಕ್ಕೆ ಮಹತ್ವ ನೀಡಲಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನ ಗಗನಂ’

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನಂ ಗಗನಂ’

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.