ರೋಗ ಪ್ರತಿರೋಧಕ ಶಕ್ತಿಯ ಹೆಚ್ಚಳಕ್ಕೆ ಸುಲಭ ಸೂತ್ರಗಳು


Team Udayavani, Mar 14, 2021, 4:24 PM IST

ರೋಗ ಪ್ರತಿರೋಧಕ ಶಕ್ತಿಯ ಹೆಚ್ಚಳಕ್ಕೆ  ಸುಲಭ ಸೂತ್ರಗಳು

ನಮ್ಮ ಸುತ್ತಮುತ್ತ ಅನೇಕ ಸೂಕ್ಷ್ಮಾಣು ಜೀವಿಗಳು ಇದ್ದು, ನಾವು ದಿನ ನಿತ್ಯ ಅವುಗಳೊಂದಿಗೆ ಜೀವಿಸುತ್ತಿದ್ದೇವೆ. ಬಹಳಷ್ಟು ಸೂಕ್ಷ್ಮಾಣು ಜೀವಿಗಳು ನಮಗೆ ಸಹಾಯಕಾರಿಯಾಗಿವೆ. ಇವುಗಳಲ್ಲಿ ಕೆಲವು  ಬ್ಯಾಕ್ಟೀರಿಯಾಗಳು, ವೈರಸ್‌ಗಳು, ಪರಾವಲಂಬಿಗಳು ಹಾಗೂ  ಶಿಲೀಂಧ್ರಗಳು ನಮಗೆ ರೋಗ ಉಂಟು ಮಾಡುವ ಸಾಧ್ಯತೆಗಳನ್ನು ಹೊಂದಿವೆ. ಆದರೆ ಅದಕ್ಕೆ ವಿರುದ್ಧ ವಾಗಿ ನಮ್ಮಲ್ಲಿರುವ ರೋಗ ಪ್ರತಿರೋಧ ಶಕ್ತಿಯು ಇವುಗಳನ್ನು ಮಣಿಸುವ ಇಲ್ಲವೇ ನಮ್ಮ ದೇಹಕ್ಕೆ ಪ್ರವೇಶಿಸುವುದನ್ನು ತಡೆಯುವ ಸಾಮರ್ಥ್ಯ ಹೊಂದಿದ್ದು, ನಮ್ಮನ್ನು ರೋಗಗಳಿಂದ ರಕ್ಷಿಸುತ್ತವೆ.

ಬದಲಾಗುತ್ತಿರುವ ಈ ಜಗತ್ತಿನಲ್ಲಿ ನಾವು ಸಾಮಾನ್ಯ ಶೀತ-ಕೆಮ್ಮನ್ನು ನಿರ್ಲಕ್ಷಿಸುತ್ತೇವೆ. ಇವು ಕಡಿಮೆ ರೋಗ ನಿರೋಧಕ ಶಕ್ತಿಯ ಪ್ರಮುಖ ಲಕ್ಷಣಗಳಾಗಿವೆ. ರೋಗ ನಿರೋಧಕ ಶಕ್ತಿ ಹೆಚ್ಚಾಗಿರುವ ಜನರು ಹಲವಾರು ರೋಗಗಳಿಂದ ಮುಕ್ತರಾಗಿರುತ್ತಾರೆ. ಅಲ್ಲದೆ ಅವರಲ್ಲಿ ರೋಗಗಳ ವಿರುದ್ಧ ಹೋರಾಡುವ ಶಕ್ತಿ ಕೂಡ ಅಧಿಕವಾಗಿರುತ್ತದೆ.

ರೋಗ ಪ್ರತಿರೋಧಕ ಶಕ್ತಿಯು ನಮ್ಮ ದೇಹದ ನೈಸರ್ಗಿಕ ರಕ್ಷಣೆಯ ವ್ಯವಸ್ಥೆ. ಇದು ಆಕ್ರಮಣಕಾರೀ ಸೂಕ್ಷ್ಮಾಣು ಜೀವಿ ಗಳ ವಿರುದ್ಧ ನಮ್ಮ ದೇಹವನ್ನು ರಕ್ಷಿಸಲು ಇರುವ ಒಂದು ಸಂಕೀರ್ಣ ಜಾಲ.  ಇದು ಬಹಳಷ್ಟು ಕಾಯಿಲೆಗಳನ್ನು ತಡೆಗಟ್ಟುವ ಕೆಲಸ ಮಾಡುತ್ತದೆ. ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಸುಲಭ ಎಂದು ಹೇಳಲಾಗದಿದ್ದರೂ ಹಲ ವಾರು ಆಹಾರ ಮತ್ತು ಜೀವನಶೈಲಿಯ ಬದಲಾವಣೆಗಳು ದೇಹದ ನೈಸರ್ಗಿಕ ರಕ್ಷಣೆಯನ್ನು ಬಲಪಡಿಸಬಹುದು ಮತ್ತು ಇದು ಹಾನಿಕಾರಕ ರೋಗಕಾರಕಗಳನ್ನು ಅಥವಾ ರೋಗಕಾರಕ ಜೀವಿಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ರೋಗ ನಿರೋಧಕ ಶಕ್ತಿಯನ್ನು  ಹೇಗೆ ಹೆಚ್ಚಿಸಿಕೊಳ್ಳಬೇಕು? :

ಇದಕ್ಕೆ ಹಲವರು ವಿಧಾನಗಳಿವೆ. ಮೊದಲನೆಯದಾಗಿ ನಿದ್ರೆ. ನಿದ್ರೆ ಮತ್ತು ರೋಗ ನಿರೋಧಕ ಶಕ್ತಿ ನಿಕಟ ಸಂಬಂಧ ಹೊಂದಿವೆ. ವಾಸ್ತವವಾಗಿ, ಕಡಿಮೆ ಗುಣಮಟ್ಟದ ನಿದ್ರೆ ಅನಾರೋಗ್ಯಕ್ಕೆ ದಾರಿ ಮಾಡಿಕೊಡುತ್ತದೆ. ಒಂದು ಸಂಶೋಧನೆಯ ಪ್ರಕಾರ, ಆರೋಗ್ಯವಂತ ವ್ಯಕ್ತಿಯು ಪ್ರತೀ ರಾತ್ರಿ 6 ತಾಸುಗಳಿಗಿಂತ ಕಡಿಮೆ ನಿದ್ರಿಸಿದ್ದರೆ ಆತನಲ್ಲಿ ಶೀತವನ್ನು ತಡೆಯುವ ಶಕ್ತಿಯು ರಾತ್ರಿ 6 ತಾಸು ಅಥವಾ ಅದಕ್ಕಿಂತ ಹೆಚ್ಚು ನಿದ್ರಿಸಿದ್ದವರಿಗಿಂತ ಕಡಿಮೆ ಇರುತ್ತದೆ. ಸಾಕಷ್ಟು ವಿಶ್ರಾಂತಿ ಪಡೆಯುವುದು ನಮ್ಮ ನೈಸರ್ಗಿಕ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ವಯಸ್ಕರು ಪ್ರತೀ ರಾತ್ರಿ 7 ಅಥವಾ ಹೆಚ್ಚಿನ ತಾಸುಗಳ ನಿದ್ರೆಯನ್ನು ಪಡೆಯುವ ಗುರಿಯನ್ನು ಹೊಂದಿರಬೇಕು. ಮಕ್ಕಳು 8-10 ಗಂಟೆಗಳು ಮತ್ತು ಪುಟ್ಟ ಮಕ್ಕಳು ಹಾಗೂ ಶಿಶುಗಳಿಗೆ 14 ಗಂಟೆಗಳವರೆಗೆ ನಿದ್ರೆ ಬೇಕು.

ಕೆಲವರಿಗೆ ನಿದ್ರಾಹೀನತೆಯ ತೊಂದರೆ ಇರಬಹುದು. ಇದು ನಮ್ಮ ಫೋನ್‌, ಟಿವಿ ಮತ್ತು ಕಂಪ್ಯೂಟರ್‌ನಿಂದ ಹೊರಸೂಸುವ ನೀಲಿ ಬೆಳಕು ನಮ್ಮ ದೇಹದ ನೈಸರ್ಗಿಕ ಎಚ್ಚರ-ನಿದ್ರೆಯ ಚಕ್ರವನ್ನು ಅಡ್ಡಿಪಡಿಸುವ ಕಾರಣ ಬರಬಹುದು. ಹಾಗೇನಾದರೂ ಸಮಸ್ಯೆ ಇದ್ದರೆ ಮಲಗುವ ಒಂದು ಗಂಟೆ ಮೊದಲು ಎಲೆಕ್ಟ್ರಾನಿಕ್‌  ಪರದೆಯ ಸಮಯವನ್ನು ಮಿತಿಗೊಳಿಸಲು ಪ್ರಯತ್ನಿಸಬೇಕು. ಜತೆಗೆ ಸಂಪೂರ್ಣವಾಗಿ ಕತ್ತಲೆಯಾದ ಕೋಣೆಯಲ್ಲಿ ಮಲಗುವುದು ಅಥವಾ ಸ್ಲಿàಪ್‌ ಮಾÓR… ಬಳಸುವುದು, ಪ್ರತೀ ದಿನ ರಾತ್ರಿ ಒಂದೇ ಸಮಯದಲ್ಲಿ ಮಲಗುವುದು ಮತ್ತು ನಿಯಮಿತವಾಗಿ ವ್ಯಾಯಾಮ ಮಾಡುವುದು ನಿದ್ರೆ ಬರಲು ಸಹಾಯಕಾರಿ. ಪ್ರಾಣಾಯಾಮ ಮತ್ತು ಯೋಗ ಬಹಳ ಪ್ರಯೋಜನಕಾರಿ ಪರಿಹಾರಗಳು.

ವ್ಯಾಯಾಮಕ್ಕೂ ರೋಗ ಪ್ರತಿರೋಧಕ ಶಕ್ತಿಗೂ ಏನು ಸಂಬಂಧ?  :

ವ್ಯಾಯಾಮವು ನಮ್ಮ ರೋಗ ಪ್ರತಿರೋಧಕ ಶಕ್ತಿಯನ್ನು ಉತ್ತೇಜಿಸುತ್ತದೆ. ವ್ಯಾಯಾಮ ನಮ್ಮ ರೋಗನಿರೋಧಕ ಕೋಶಗಳನ್ನು ನಿಯಮಿತವಾಗಿ ಪುನರುತ್ಪಾದಿಸಲು ಸಹಾಯ ಮಾಡುತ್ತದೆ. ವ್ಯಾಯಾಮಗಳಿಗೆ ಉದಾಹರಣೆಗಳಲ್ಲಿ ಯೋಗ, ಚುರುಕಾದ ವಾಕಿಂಗ್‌, ಸ್ಥಿರವಾದ ಬೈಸಿಕಲ್‌ ಸವಾರಿ, ಜಾಗಿಂಗ್‌, ಈಜು ಮತ್ತು ಲಘು ಪಾದಯಾತ್ರೆ ಸೇರಿವೆ. ಹೆಚ್ಚಿನ ಜನರು ವಾರಕ್ಕೆ ಕನಿಷ್ಠ 150 ನಿಮಿಷಗಳ ಮಧ್ಯಮ ವ್ಯಾಯಾಮದ ಗುರಿಯನ್ನು ಹೊಂದಿರಬೇಕು. ಬೆಳಗ್ಗೆ ಮಾಡುವ ವ್ಯಾಯಾಮವು ರೋಗಪ್ರತಿರೋಧಕ ಶಕ್ತಿ ಹೆಚ್ಚಿಸುವುದರ ಜತೆಗೆ ನಮ್ಮನ್ನು ಇಡೀ ದಿನ ಹುರುಪಿನಿಂದ ಇರಿಸುತ್ತದೆ.

ಆಹಾರದಲ್ಲಿ ಬದಲಾವಣೆಯ ಅಗತ್ಯವೇನು?  :

ಸಂಪೂರ್ಣ ಸಸ್ಯ ಆಹಾರಗಳಾದ ಹಣ್ಣುಗಳು, ತರಕಾರಿಗಳು, ಬೀಜಗಳು, ದ್ವಿದಳ ಧಾನ್ಯಗಳು ಆ್ಯಂಟಿ-ಓಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿವೆ. ಇದು ನಮಗೆ ಹಾನಿಕಾರಕ ರೋಗಕಾರಕಗಳ ವಿರುದ್ಧ ಹೊರಾಡಲು ಸಹಾಯ ಮಾಡುತ್ತದೆ. ಈ ಆಹಾರಗಳಲ್ಲಿರುವ ಆ್ಯಂಟಿ-ಓಕ್ಸಿಡೆಂಟ್‌ ನಿರೋಧಕಗಳು ಫ್ರೀ ರ್ಯಾಡಿಕಲ್‌ ಎಂದು ಕರೆಯಲ್ಪಡುವ ಅಸ್ಥಿರ ಸಂಯುಕ್ತಗಳನ್ನು ಎದುರಿಸುವ ಮೂಲಕ ಸೋಂಕು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ದೀರ್ಘ‌ಕಾಲದ ಫ್ರೀ ರ್ಯಾಡಿಕಲ್‌ ಶೇಖರಣೆಯು ಹೃದ್ರೋಗ, ಅಲ್ಜಿಮರ್‌ ಮತ್ತು ಕೆಲವು ಕ್ಯಾನ್ಸರ್‌ ಸೇರಿದಂತೆ ಹಲವಾರು ಅನಾರೋಗ್ಯ ಪರಿಸ್ಥಿತಿಗಳಿಗೆ ಸಂಬಂಧಿಸಿದೆ. ಜತೆಗೆ ಸಸ್ಯ ಆಹಾರಗಳಲ್ಲಿರುವ ಫೈಬರ್‌ ನಮ್ಮ ಕರುಳಿನ ಸೂಕ್ಷ್ಮಜೀವಿಯನ್ನು ಅಥವಾ ನಮ್ಮ ಕರುಳಿನಲ್ಲಿರುವ ಆರೋಗ್ಯಕರ ಬ್ಯಾಕ್ಟೀರಿಯಾಗಳ ಸಮುದಾಯವನ್ನು ಪೋಷಿಸುತ್ತದೆ. ಇದಲ್ಲದೆ ಹಣ್ಣುಗಳು ಮತ್ತು ತರಕಾರಿಗಳು ವಿಟಮಿನ್‌-ಸಿಯಂತಹ ಪೋಷಕಾಂಶಗಳಿಂದ ಸಮೃದ್ಧವಾಗಿವೆ, ಇದು ನೆಗಡಿಯ ಅವಧಿಯನ್ನು ಕಡಿಮೆ ಮಾಡುತ್ತದೆ.

ಸಕ್ಕರೆಯ ಉಪಯೋಗ ಕೆಟ್ಟದ್ದೇ ಒಳ್ಳೆಯದೇ? :

ಸಕ್ಕರೆಗಳು ಮತ್ತು ಸಂಸ್ಕರಿಸಿದ ಶರ್ಕರ ಪಿಷ್ಟವು ಅಧಿಕ ತೂಕ ಮತ್ತು ಬೊಜ್ಜಿಗೆ ಕಾರಣವಾಗಬಹುದು ಎಂದು ತಿಳಿದು ಬಂದಿದೆ. ಸ್ಥೂಲಕಾಯವು ಅನಾರೋಗ್ಯದ ಅಪಾಯವನ್ನು ಹೆಚ್ಚಿಸುತ್ತದೆ. ಸಕ್ಕರೆ ಸೇವನೆಯನ್ನು ನಿಗ್ರಹಿಸುವುದು ತೂಕ ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಹೀಗಾಗಿ ಟೈಪ್‌ 2 ಡಯಾಬಿಟೀಸ್‌ (ಮಧುಮೇಹ / ಸಕ್ಕರೆ ಕಾಯಿಲೆ) ಮತ್ತು ಹೃದ್ರೋಗದಂತಹ ದೀರ್ಘ‌ಕಾಲದ ಆರೋಗ್ಯ ಪರಿಸ್ಥಿತಿಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಬೊಜ್ಜು, ಟೈಪ್‌ 2 ಡಯಾಬಿಟೀಸ್‌ ಮತ್ತು ಹೃದ್ರೋಗ ಇವೆಲ್ಲವೂ ನಮ್ಮ ರೋಗ ನಿರೋಧಕ ಶಕ್ತಿಯನ್ನು ದುರ್ಬಲಗೊಳಿಸಬಹುದು. ಸಕ್ಕರೆಯ ಉಪಯೋಗವನ್ನು ಸೀಮಿತಗೊಳಿಸುವುದು ರೋಗ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರಶೈಲಿಯ ಪ್ರಮುಖ ಭಾಗವಾಗಿದೆ.

ಸಕ್ಕರೆ ಸೇವನೆಯನ್ನು ನಮ್ಮ ದೈನಂದಿನ ಕ್ಯಾಲೊರಿಗಳಲ್ಲಿ ಶೇ.5ಕ್ಕಿಂತ ಕಡಿಮೆ ಮಾಡಲು ಪ್ರಯತ್ನಿಸಬೇಕು. ಇದು 2,000 ಕ್ಯಾಲೋರಿಗಳ ಆಹಾರದಲ್ಲಿ ಸುಮಾರು 2 ಚಮಚ (25 ಗ್ರಾಂ) ಸಕ್ಕರೆಗೆ ಸಮನಾಗಿರುತ್ತದೆ.

ರೋಗ ಪ್ರತಿರೋಧ ಶಕ್ತಿಗೆ  ಕೊಬ್ಬಿನಂಶ ಅವಶ್ಯವೇ?  :

ಹೌದು. ಆರೋಗ್ಯಕರ ಕೊಬ್ಬುಗಳು; ಉದಾಹರಣೆಗೆ, ಕೊಬ್ಬರಿ ಎಣ್ಣೆ ನಮ್ಮ ದೇಹದ ಪ್ರತಿರಕ್ಷಣ ಪ್ರತಿಕ್ರಿಯೆಯನ್ನು ಹೆಚ್ಚಿಸಬಹುದು. ಜತೆಗೆ ಇದು ನಮ್ಮ ದೇಹದಲ್ಲಿ ಹಾನಿಕಾರಕ ರೋಗ – ಉಂಟುಮಾಡುವ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳೊಡನೆ ಹೋರಾಡಲು ಸಹಾಯ ಮಾಡುತ್ತದೆ.

ಆಹಾರದಲ್ಲಿ ಬೇರೆ ಏನಾದರೂ ಬದಲಾವಣೆಯ ಅಗತ್ಯ ಇದೆಯಾ?  :

ಹುದುಗಿಸಿದ ಅಥವಾ ಹುಳಿ ಬರಿಸಿದ ಆಹಾರಗಳು ಪ್ರೋಬಯಾಟಿಕ್‌ಗಳು ಎಂಬ ಪ್ರಯೋಜನಕಾರಿ ಬ್ಯಾಕ್ಟೀರಿಯಾದಲ್ಲಿ ಸಮೃದ್ಧವಾಗಿವೆ. ಇದು ನಮ್ಮ ಜೀರ್ಣಾಂಗ ವ್ಯೂಹವನ್ನು ಸಕ್ರಿಯಗೊಳಿಸುತ್ತದೆ. ಮೊಸರು, ಇಡ್ಲಿ, ದೋಸೆ, ವಡೆಯಂಥ ಆಹಾರಗಳಲ್ಲಿ ಇವು ಹೇರಳವಾಗಿವೆ. ಇದು ಸಂಶೋಧನೆಗಳಲ್ಲಿ ಸಾಬೀತಾಗಿದೆ. ಇವೆಲ್ಲ ನಮ್ಮ ಭಾರತೀಯ ಸಂಪ್ರದಾಯಿಕ ಆಹಾರ ಪದ್ಧತಿಯಲ್ಲಿ ಅಳವಡಿಕೆಯಾಗಿರುವಂಥವು, ನಾವು ಅದನ್ನು ಪಾಲಿಸಬೇಕಷ್ಟೆ.

ರೋಗ ಪ್ರತಿರೋಧಕ ಶಕ್ತಿ ಹೆಚ್ಚಿಸುವಲ್ಲಿ  ನೀರಿನ ಪಾತ್ರವೇನು? :

ಹೆಚ್ಚು ನೀರು ಕುಡಿಯುವ ಪ್ರಕ್ರಿಯೆಯು ರೋಗಾಣುಗಳು ಮತ್ತು ವೈರಸ್‌ಗಳಿಂದ ನಮ್ಮನ್ನು ರಕ್ಷಿಸಬೇಕಾಗಿಲ್ಲ. ಆದರೆ ನಿರ್ಜಲೀಕರಣವನ್ನು ತಡೆಯುವುದು ನಮ್ಮ ಒಟ್ಟಾರೆ ಆರೋಗ್ಯಕ್ಕೆ ಮುಖ್ಯವಾಗಿದೆ. ನಿರ್ಜಲೀಕರಣವು ತಲೆನೋವು ಉಂಟುಮಾಡುತ್ತದೆ ಮತ್ತು ನಮ್ಮ ದೈಹಿಕ ಕಾರ್ಯಕ್ಷಮತೆ, ಗಮನ, ಮನಸ್ಥಿತಿ, ಜೀರ್ಣಕ್ರಿಯೆ ಮತ್ತು ಹೃದಯ ಹಾಗೂ ಮೂತ್ರಪಿಂಡಗಳ ಕಾರ್ಯಕ್ಕೆ ಅಡ್ಡಿಯಾಗಬಹುದು. ಈ ತೊಡಕುಗಳು ನಾವು ಅನಾರೋಗ್ಯಕ್ಕೆ ತುತ್ತಾಗುವಂತೆ ಮಾಡಬಹುದು.

ನಮ್ಮ ಮೂತ್ರವು ಮಸುಕಾದ ಹಳದಿ ಬಣ್ಣವನ್ನು ಹೊಂದಲು, ನಿರ್ಜಲೀಕರಣವನ್ನು ತಡೆಗಟ್ಟಲು ನಾವು ಪ್ರತೀದಿನ ಸಾಕಷ್ಟು ದ್ರವವನ್ನು ಕುಡಿಯಬೇಕು. ಚಹಾ ಮತ್ತು ಜ್ಯೂಸ್‌ಗಳಲ್ಲಿ ಸಕ್ಕರೆಯ ಅಂಶ ಮಿತಿ ಗೊಳಿಸುವುದು ಉತ್ತಮ. ಏಕೆಂದರೆ ಹೆಚ್ಚಿನ ಸಕ್ಕರೆ ಸೇರಿಸುವುದು  ಒಳ್ಳೆಯದಲ್ಲ. ಸಾಮಾನ್ಯ ಮಾರ್ಗ ಸೂಚಿಯಾಗಿ, ನಾವು ಬಾಯಾರಿದಾಗ ನೀರು ಕುಡಿಯಬೇಕು. ನಾವು  ತೀವ್ರವಾಗಿ ವ್ಯಾಯಾಮ ಮಾಡಿದರೆ, ಹೊರಗೆ ಕೆಲಸ ಮಾಡಿದರೆ ಅಥವಾ ಬಿಸಿ ವಾತಾವರಣದಲ್ಲಿ ವಾಸಿಸುತ್ತಿದ್ದರೆ ನಮಗೆ ಹೆಚ್ಚು ದ್ರವ ಪದಾರ್ಥಗಳು ಬೇಕಾಗಬಹುದು. ವಯೋವೃದ್ಧರು ನೀರು ಕುಡಿಯುವ ಹಂಬಲವನ್ನು ಕಳೆದುಕೊಳ್ಳಲು ಪ್ರಾರಂಭಿಸುತ್ತಾರೆ. ಏಕೆಂದರೆ ಅವರ ದೇಹವು ಬಾಯಾರಿಕೆಯನ್ನು ಸಮರ್ಪಕವಾಗಿ ಸೂಚಿಸುವುದಿಲ್ಲ. ಹಾಗಾಗಿ ಹಿರಿಯ  ವಯಸ್ಕರಿಗೆ ಬಾಯಾರಿಕೆ ಅನಿಸದಿದ್ದರೂ ನಿಯಮಿತವಾಗಿ ನೀರು ಕುಡಿಯಲು ಹೇಳಬೇಕು.

ಧೂಮಪಾನ ಮತ್ತು ಮದ್ಯಪಾನ  ತ್ಯಜಿಸುವುದರಿಂದ ರೋಗ  ಪ್ರತಿರೋಧಕ ಶಕ್ತಿ ಜಾಸ್ತಿ ಆಗುತ್ತದೆಯೇ? :

ಧೂಮಪಾನ ಮತ್ತು ಮದ್ಯಪಾನ ಅನಾರೋಗ್ಯಕ್ಕೆ ಆಹ್ವಾನ ಕೊಟ್ಟಂತೆಯೇ. ಈ ಚಟಗಳು ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಹದಗೆಡಿಸುತ್ತವೆ. ಇವು ರೋಗಪ್ರತಿರೋಧಕ ಶಕ್ತಿಯನ್ನು ಕಡಿಮೆಗೊಳಿಸುವುದಲ್ಲದೆ ನಮ್ಮ ಎಲ್ಲ ಸಾಮರ್ಥ್ಯಗಳನ್ನು ಕುಗ್ಗಿಸುತ್ತವೆ. ಇದರಿಂದ ದೂರವಿದ್ದಷ್ಟು ನಾವು ಆರೋಗ್ಯಕ್ಕೆ ಹತ್ತಿರವಾಗುತ್ತೇವೆ.

ಮಾನಸಿಕ ನಿರ್ವಹಣೆ ಹೇಗೆ ಮಾಡುವುದು? :

ಮೇಲೆ ಹೇಳಿದ್ದೆಲ್ಲ ದೈಹಿಕ ನಿರ್ವಹಣೆಯ ಅಂಶಗಳು. ಇವುಗಳ ಜತೆಗೆ ಮಾನಸಿಕ ಒತ್ತಡ ಮತ್ತು ಆತಂಕವನ್ನು ನಿವಾರಿಸುವುದು ರೋಗ ನಿರೋಧಕ ಆರೋಗ್ಯಕ್ಕೆ ಪ್ರಮುಖವಾಗಿದೆ. ದೀರ್ಘ‌ಕಾಲೀನ ಒತ್ತಡವು ಸೊಂಕಿನ ಸಾಧ್ಯತೆಯನ್ನು ಉತ್ತೇಜಿಸುತ್ತದೆ. ನಿರ್ದಿಷ್ಟವಾಗಿ ಹೇಳುವುದಾದರೆ, ದೀರ್ಘ‌ಕಾಲದ ಮಾನಸಿಕ ಒತ್ತಡವು ಮಕ್ಕಳಲ್ಲಿ ರೋಗನಿರೋಧಕ ಪ್ರತಿಕ್ರಿಯೆಯನ್ನು ನಿಗ್ರಹಿಸುತ್ತದೆ. ನಮ್ಮ ಒತ್ತಡವನ್ನು ನಿರ್ವಹಿಸಲು ನಮಗೆ ಸಹಾಯ ಮಾಡುವ ಚಟುವಟಿಕೆಗಳಲ್ಲಿ ಧ್ಯಾನ, ವ್ಯಾಯಾಮ, ಯೋಗ ಮತ್ತು ಇತರ ಆರೋಗ್ಯಕರ ಅಭ್ಯಾಸಗಳು ಸೇರಿವೆ. ಮಾನಸಿಕ ಸಲಹೆಗಾರ ಅಥವಾ ಚಿಕಿತ್ಸಕರನ್ನು ನೋಡುವುದರಿಂದಲೂ ನಾವು  ಪ್ರಯೋಜನ ಪಡೆಯಬಹುದು.

ಸಪ್ಲಿಮೆಂಟ್‌ ಅಥವಾ ಪೂರಕಗಳ  ಸಹಾಯದಿಂದ ರೋಗ ನಿರೋಧಕ  ಶಕ್ತಿ ಹೆಚ್ಚಿಸಬಹುದೇ? :

ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಪ್ಲಿಮೆಂಟ್‌ ಅಥವಾ ಪೂರಕಗಳ ಆವಶ್ಯಕತೆ ಇಲ್ಲ. ಆದರೂ ಕೆಲವು ಅಧ್ಯಯನಗಳು ಈ ಕೆಳಗಿನ ಪೂರಕಗಳು ನಮ್ಮ ದೇಹದ ಸಾಮಾನ್ಯ ರೋಗನಿರೋಧಕ ಪ್ರತಿಕ್ರಿಯೆಯನ್ನು ಬಲಪಡಿಸಬಹುದು ಎಂದು ಸೂಚಿಸುತ್ತವೆ:

  • ವಿಟಮಿನ್‌ ಸಿ ತೆಗೆದುಕೊಳ್ಳುವುದರಿಂದ ಶೀತದ ಅವಧಿಯನ್ನು ಕಡಿಮೆ ಮಾಡಬಹುದು. ಆದರೆ ಪೂರಕವು ಶೀತವನ್ನು ಪೂರ್ತಿಯಾಗಿ ತಡೆಯುವುದಿಲ್ಲ.
  • ವಿಟಮಿನ್‌ ಡಿ ಕೊರತೆಯು ನಾವು ಕಾಯಿಲೆಗೆ ಒಳಗಾಗುವ ಸಾಧ್ಯತೆಯನ್ನು ಹೆಚ್ಚಿಸಬಹುದು. ಆದ್ದರಿಂದ ಪೂರಕ ಸೇವಿಸುವುದರಿಂದ ಈ ಪರಿಣಾಮವನ್ನು ಎದುರಿಸಬಹುದು. ಅದೇನೇ ಇದ್ದರೂ ನಾವು  ಈಗಾಗಲೇ ಸಾಕಷ್ಟು ಮಟ್ಟವನ್ನು ಹೊಂದಿರುವಾಗ ವಿಟಮಿನ್‌ ಡಿ ತೆಗೆದುಕೊಳ್ಳುವುದರಿಂದ ಹೆಚ್ಚುವರಿ ಪ್ರಯೋಜನಗಳನ್ನು ಒದಗುವುದಿಲ್ಲ.
  • ಸತು (ಜಿಂಕ್‌) ಪೂರಕವಾಗಿ ಶೀತದ ಅವಧಿಯನ್ನು ಕಡಿಮೆ ಮಾಡುತ್ತದೆ. ಆದರೆ ಎಷ್ಟರಮಟ್ಟಿಗೆ ಶೀತ ತಡೆಯಲು ಸಹಾಯವಾಗುತ್ತದೆ ಎಂದು ಹೇಳಲಾಗದು.
  • ಬೆಳ್ಳುಳ್ಳಿಯನ್ನು ಪ್ರತೀದಿನ, 12 ವಾರಗಳ ವರೆಗೆ ಸೇವಿಸುವುದರಿಂದ ನೆಗಡಿಯ ಪ್ರಮಾಣವು ಸುಮಾರು ಶೇ. 30ರಷ್ಟು ಕಡಿಮೆಯಾಗುವುದು ಎಂದು ಕಂಡುಬಂದಿದೆ. ಆದರೆ ಇದನ್ನು ದೃಡಪಡಿಸಲು ಹೆಚ್ಚಿನ ಸಂಶೋಧನೆಯ ಅಗತ್ಯವಿದೆ.
  • ಯಾವುದೇ ಪೂರಕ ಅಥವಾ ಸಪ್ಲಿಮೆಂಟ್‌ ಔಷಧಗಳನ್ನುವೈದ್ಯರ ಸಲಹೆ ಇಲ್ಲದೇ ಸೇವಿಸುವುದು ನಮ್ಮ ಆರೋಗ್ಯಕ್ಕೆ ಮಾರಕವಾಗಬಹುದು.

ನಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ನಾವು ಹಲವಾರು ಜೀವನಶೈಲಿ ಮತ್ತು ಆಹಾರ ಬದಲಾವಣೆಗಳನ್ನು ಮಾಡಬಹುದು. ಸಕ್ಕರೆ ಸೇವನೆಯನ್ನು ಕಡಿಮೆ ಮಾಡುವುದು, ಸಾಕಷ್ಟು ನೀರು ಕುಡಿಯುವುದು, ನಿಯಮಿತವಾಗಿ ವ್ಯಾಯಾಮ ಮಾಡುವುದು, ಸರಿಯಾಗಿ ನಿದ್ರೆ ಮಾಡುವು ಮತ್ತು ನಮ್ಮ ಮಾನಸಿಕ ಒತ್ತಡದ ಮಟ್ಟವನ್ನು ನಿರ್ವಹಿಸುವುದು ಇವುಗಳಲ್ಲಿ ಸೇರಿವೆ. ಎಲ್ಲಕ್ಕಿಂತ ಮಿಗಿಲಾಗಿ ನಮ್ಮ ಪೂರ್ವಜರು ಹಾಕಿಕೊಟ್ಟ ಜೀವನ ಶೈಲಿ ಮತ್ತು ಆಹಾರ ಕ್ರಮಗಳು ಅತ್ಯಂತ ಶ್ರೇಷ್ಠಮಟ್ಟದಲ್ಲಿವೆ ಮತ್ತು ನಮ್ಮ ಭೌಗೋಳಿಕ ಸನ್ನಿವೇಶಕ್ಕೆ ಸಮರ್ಪಕವಾಗಿವೆ. ಅವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದರ ಜತೆಗೆ ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಜವಾಬ್ದಾರಿ ನಮ್ಮದು. ಈ ಎಲ್ಲ ಸಲಹೆಗಳು ಹಾನಿಕಾರಕ ರೋಗಕಾರಕಗಳ ವಿರುದ್ಧ ನಮ್ಮ ದೇಹದ ರಕ್ಷಣೆಯನ್ನು ಬಲಪಡಿಸಬಹುದು.

 

ಡಾ| ಲತಾ ಟಿ.

 ಜಾನೆಟ್‌ ಆಳ್ವ

ಸಹಾಯಕ ಪ್ರಾಧ್ಯಾಪಕರು,

ಮಣಿಪಾಲ ಕಾಲೇಜ್‌ ಆಫ್‌ ನರ್ಸಿಂಗ್‌, ಮಾಹೆ, ಮಣಿಪಾಲ

ಟಾಪ್ ನ್ಯೂಸ್

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.