ಋತುಚಕ್ರಪೂರ್ವ ಡಿಸ್ಪೋರಿಕ್‌ ಡಿಸಾರ್ಡರ್‌  

Team Udayavani, Jun 26, 2022, 3:18 PM IST

arogya

ಋತುಚಕ್ರಪೂರ್ವ ಡಿಸ್ಪೋರಿಕ್‌ ಡಿಸಾರ್ಡರ್‌ (ಪ್ರಿಮೆನ್‌ಸ್ಟ್ರೆವಲ್‌ ಡಿಸ್ಪೋರಿಕ್‌ ಡಿಸಾರ್ಡರ್‌ -ಪಿಎಂಡಿಡಿ) ಎಂಬುದು ಋತುಚಕ್ರಪೂರ್ವ ಸಿಂಡ್ರೋಮ್‌ (ಪಿಎಂಎಸ್‌)ನ ಹೆಚ್ಚು ತೀವ್ರವಾದ ಸ್ವರೂಪ. ಪಿಎಂಎಸ್‌ನಿಂದಾಗಿ ಋತುಚಕ್ರ ಆರಂಭಕ್ಕೆ ಒಂದು ಅಥವಾ ಎರಡು ವಾರ ಮುನ್ನ ಹೊಟ್ಟೆಯುಬ್ಬರ, ತಲೆನೋವು, ಸ್ತನಗಳ ಮೃದುತ್ವ ಉಂಟಾಗುತ್ತದೆ.

ಪಿಎಂಡಿಡಿ ಇದ್ದಾಗ ಮಹಿಳೆಯರಿಗೆ ಪಿಎಂಎಸ್‌ನ ಲಕ್ಷಣಗಳ ಜತೆಗೆ ತೀವ್ರತರಹದ ಕಿರಿಕಿರಿ, ಸಿಟ್ಟಾಗುವಿಕೆ, ಉದ್ವಿಗ್ನತೆ ಅಥವಾ ಖನ್ನತೆ ಕಾಣಿಸಿಕೊಳ್ಳಬಹುದು ಮತ್ತು ಈ ಲಕ್ಷಣಗಳು ಅವರ ದೈನಿಕ ಚಟುವಟಿಕೆಗಳನ್ನು ಬಾಧಿಸಬಲ್ಲಷ್ಟು ತೀವ್ರತರಹದ್ದಾಗಿರಬಹುದು. ಋತುಚಕ್ರ ಆರಂಭವಾದ ಕೆಲವು ದಿನಗಳಲ್ಲಿ ಈ ಲಕ್ಷಣಗಳು ಕಡಿಮೆಯಾಗಿ ನಿಂತು ಹೋಗುತ್ತವೆ.

ಒಟ್ಟು ಮಹಿಳೆಯರಲ್ಲಿ ಶೇ. 10ರಷ್ಟು ಮಂದಿಯಲ್ಲಿ ಇದು ಕಂಡು ಬರುತ್ತದೆ.

ಪಿಎಂಡಿಡಿಗೆ ಕಾರಣಗಳು ಮತ್ತು ಅಪಾಯಾಂಶಗಳು

ಋತುಚಕ್ರಪೂರ್ವ ಡಿಸ್ಪೋರಿಕ್‌ ಡಿಸಾರ್ಡರ್‌ಗೆ ಖಚಿತ ಕಾರಣಗಳು ಇನ್ನೂ ತಿಳಿದಿಲ್ಲ. ಋತುಚಕ್ರ ಸಂಬಂಧಿ ಹಾರ್ಮೋನ್‌ ಬದಲಾವಣೆಗಳಿಗೆ ದೇಹದಲ್ಲಿ ಉಂಟಾಗುವ ಅಸಹಜ ಪ್ರತಿಸ್ಪಂದನೆಗಳು ಇದಕ್ಕೆ ಕಾರಣ ಎನ್ನಲಾಗಿದೆ. ಮಿದುಳಿನ ರಾಸಾಯನಿಕಗಳಲ್ಲಿ ಒಂದಾದ ಸೆರೆಟೋನಿನ್‌ ಕೂಡ ಪಿಎಂಡಿಡಿ ಉಂಟಾಗುವಲ್ಲಿ ಪಾತ್ರ ವಹಿಸಬಹುದಾಗಿದೆ. ಋತುಚಕ್ರದ ಅವಧಿಯುದ್ದಕ್ಕೂ ಸೆರೆಟೋನಿನ್‌ ಮಟ್ಟದಲ್ಲಿ ಬದಲಾವಣೆ ಆಗುತ್ತಿರುತ್ತದೆ. ಕೆಲವು ಮಹಿಳೆಯರು ಈ ಬದಲಾವಣೆಗಳಿಗೆ ಸೂಕ್ಷ್ಮ ಸಂವೇದಿಯಾಗಿರುತ್ತಾರೆ.

ಪಿಎಂಡಿಡಿಗೆ ಅಪಾಯಾಂಶಗಳು

 ಖನ್ನತೆ ಅಥವಾ ಉದ್ವಿಗ್ನತೆಯ ಚರಿತ್ರೆ

 ಪಿಎಂಎಸ್‌

 ಪಿಎಂಎಸ್‌, ಪಿಎಂಡಿಡಿ ಅಥವಾ ಭಾವನಾತ್ಮಕ ಏರಿಳಿತಗಳ ಕುಟುಂಬ ಚರಿತ್ರೆ

ಪಿಎಂಡಿಡಿಯ ಲಕ್ಷಣಗಳು

 ನಿಯಂತ್ರಣ ತಪ್ಪಿದಂತಹ ಭಾವನೆಗಳು

 ನಿದ್ದೆ ಹೋಗುವಲ್ಲಿ ತೊಂದರೆ

 ಚಿಂತೆ ಅಥವಾ ಉದ್ವಿಗ್ನತೆಯ ಭಾವನೆಗಳು

 ಉದ್ವೇಗಗೊಳ್ಳುವಿಕೆ

 ದಣಿವು ಅಥವಾ ಚೈತನ್ಯದ ಕೊರತೆ

 ಕಿರಿಕಿರಿಗೊಳ್ಳುವುದು, ಸಿಟ್ಟಾಗುವುದು- ಇದರಿಂದ ಇತರರ ಮೇಲೂ ವ್ಯತಿರಿಕ್ತ ಪರಿಣಾಮಗಳು ಉಂಟಾಗಬಹುದು

 ದುಃಖ ಅಥವಾ ಹತಾಶೆಯ ಭಾವನೆ, ಇದು ಆತ್ಮಹತ್ಯೆಯ ಆಲೋಚನೆಯವರೆಗೂ ಮುಂದುವರಿಯಬಹುದು

 ಭಾವನೆಗಳಲ್ಲಿ ಏರಿಳಿತ ಅಥವಾ ಆಗಾಗ ಅಳುವುದು

 ದೈನಿಕ ಚಟುವಟಿಕೆಗಳು ಮತ್ತು ಸಂಬಂಧಗಳಲ್ಲಿ ಆಸಕ್ತಿಯ ಕೊರತೆ

 ಆಲೋಚನೆ ಅಥವಾ ಏಕಾಗ್ರತೆಯಲ್ಲಿ ತೊಂದರೆ

 ಆಹಾರಕ್ಕಾಗಿ ಅತಿಯಾಸೆ, ಹಪಾಹಪಿ, ಹೊಟ್ಟೆಬಾಕತನ

 ಸ್ನಾಯು ಸೆಳೆತ, ಸೆಡವು, ಹೊಟ್ಟೆಯುಬ್ಬರ, ಸ್ತನಗಳು ಮೃದುವಾಗುವುದು, ತಲೆನೋವು ಮತ್ತು ಸಂಧಿಗಳು ಅಥವಾ ಸ್ನಾಯುಗಳಲ್ಲಿ ನೋವಿನಂತಹ ದೈಹಿಕ ಲಕ್ಷಣಗಳು.

ಸಾಮಾನ್ಯವಾಗಿ ಈ ಲಕ್ಷಣಗಳು ಕಳೆದ ಒಂದು ವರ್ಷದ ಅವಧಿಯಲ್ಲಿ ಹಲವು ಋತುಚಕ್ರಗಳಲ್ಲಿ ಕಂಡುಬರುತ್ತವೆ. ನಿಖರವಾದ ರೋಗ ಪತ್ತೆಗಾಗಿ ವೈದ್ಯರು ರೋಗಲಕ್ಷಣಗಳ ವೇಳಾಪಟ್ಟಿ ಅಥವಾ ಡೈರಿ ದಾಖಲಿಸಿಕೊಳ್ಳಲು ಸೂಚಿಸುತ್ತಾರೆ. ಭಾವನೆಗಳಿಗೆ ಸಂಬಂಧಿಸಿದ ಒಂದು ಲಕ್ಷಣದ ಸಹಿತ ಐದು ಅಥವಾ ಹೆಚ್ಚು ರೋಗ ಲಕ್ಷಣಗಳು ರೋಗನಿರ್ಣಯಕ್ಕೆ ಅಗತ್ಯವಾಗಿರುತ್ತವೆ.

ಚಿಕಿತ್ಸೆ

 ಮಿದುಳಿನ ಸಿರೆಟೋನಿನ್‌ ಮಟ್ಟವನ್ನು ನಿಭಾಯಿಸಲು ಸಹಾಯ ಮಾಡುವುದಕ್ಕಾಗಿ ಆ್ಯಂಟಿಡಿಪ್ರಸೆಂಟ್‌ ಗಳು (ಋತುಚಕ್ರಕ್ಕೆ ಮುಂಚಿತವಾಗಿ ಅಥವಾ ತಿಂಗಳುಪೂರ್ತಿ ಸತತವಾಗಿ)

 ಉಪ್ಪು, ಕೊಬ್ಬು ಅಥವಾ ಸಕ್ಕರೆಭರಿತ ಆಹಾರಗಳು ಮತ್ತು ಕೆಫಿನ್‌ಯುಕ್ತ ಆಹಾರಗಳನ್ನು ಕಡಿಮೆ ಮಾಡುವಂತಹ ಆಹಾರ ಶೈಲಿಗೆ ಸಂಬಂಧಿಸಿದ ಬದಲಾವಣೆಗಳು.

 ಡ್ರೊಸ್ಪಿರೆನೋನ್‌ ಮತ್ತು ಇಥಿನೈಲ್‌ ಎಸ್ಟ್ರಾಡಿಯೋಲ್‌ ಹೊಂದಿರುವ ಹಾರ್ಮೋನಲ್‌ ಸಂತಾನ ನಿಯಂತ್ರಣ ಗುಳಿಗೆಗಳು.

 ಋತುಚಕ್ರ ಸಂಬಂಧಿ ಸೆಳವು, ಸ್ನಾಯುಸೆಳೆತ, ನೋವು, ತಲೆನೋವು, ಸ್ತನಗಳ ಮೃದುತ್ವ ಮತ್ತು ಇತರ ದೈಹಿಕ ಲಕ್ಷಣಗಳನ್ನು ಕಡಿಮೆ ಮಾಡಲು ನೋವು ನಿವಾರಕ ಔಷಧಗಳು.

 ಭಾವನೆಗಳನ್ನು ಉತ್ತಮಪಡಿಸುವುದಕ್ಕಾಗಿ ನಿಯಮಿತವಾಗಿ ವ್ಯಾಯಾಮ ಮಾಡುವುದು.

 ಆಳವಾದ ಉಸಿರಾಟ ಅಭ್ಯಾಸ ಮತ್ತು ಧ್ಯಾನದಂತಹ ಒತ್ತಡ ನಿಭಾವಣೆ ತಂತ್ರಗಳು.

-ಡಾ| ಸೋನಿಯಾ ಶೆಣೈ
ಅಸೋಸಿಯೇಟ್‌ ಪ್ರೊಫೆಸರ್‌,
ಸೈಕಿಯಾಟ್ರಿ ವಿಭಾಗ, ಕೆಎಂಸಿ,
ಮಣಿಪಾಲ

ಟಾಪ್ ನ್ಯೂಸ್

PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್‌ ವಿರುದ್ಧ ಬಿಜೆಪಿ ದೂರು

PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್‌ ವಿರುದ್ಧ ಬಿಜೆಪಿ ದೂರು

Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್‌ ವಿರುದ್ಧ ಕಾಂಗ್ರೆಸ್‌ ವಾಗ್ಧಾಳಿ

Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್‌ ವಿರುದ್ಧ ಕಾಂಗ್ರೆಸ್‌ ವಾಗ್ಧಾಳಿ

Election  ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌Election  ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌

Election ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌

ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ

ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ

ನಮ್ಮ ವಿರುದ್ಧ ಷಡ್ಯಂತ್ರ: ಎಚ್‌.ಡಿ. ರೇವಣ್ಣ

ನಮ್ಮ ವಿರುದ್ಧ ಷಡ್ಯಂತ್ರ: ಎಚ್‌.ಡಿ. ರೇವಣ್ಣ

1-qewqeqw

Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-Fibromyalgia

Fibromyalgia: ಫೈಬ್ರೊಮಯಾಲ್ಜಿಯಾ ಜತೆಗೆ ಜೀವನ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್‌ ವಿರುದ್ಧ ಬಿಜೆಪಿ ದೂರು

PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್‌ ವಿರುದ್ಧ ಬಿಜೆಪಿ ದೂರು

Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್‌ ವಿರುದ್ಧ ಕಾಂಗ್ರೆಸ್‌ ವಾಗ್ಧಾಳಿ

Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್‌ ವಿರುದ್ಧ ಕಾಂಗ್ರೆಸ್‌ ವಾಗ್ಧಾಳಿ

accident

Kunigal; ಬೈಕ್‌ಗೆ ಕಾರು ಡಿಕ್ಕಿ: ಯುವಕರಿಬ್ಬರು ಸ್ಥಳದಲ್ಲೇ ದುರ್ಮರಣ

Election  ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌Election  ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌

Election ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌

ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ

ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.