Udayavni Special

ಈ ರೀತಿಯ ಡಯಟ್‌ ಪ್ರಯೋಜನವಿಲ್ಲ !


Team Udayavani, May 27, 2018, 6:00 AM IST

diet.jpg

ಅಧಿಕ ತೂಕ ಹಾಗೂ ಸ್ಥೂಲತೆಯನ್ನು ಕಡಿಮೆ ಮಾಡುವ ಸಲುವಾಗಿ ಜನರು ವಿವಿಧ ರೀತಿಯಲ್ಲಿ  ಡಯೆಟ್‌ ಕ್ರಮಗಳನ್ನು ಅನುಸರಿಸುತ್ತಾರೆ. ವ್ಯಾಯಾಮವನ್ನು ಮಾಡುವ ಮೂಲಕ ತೂಕವನ್ನು ಇಳಿಸುವ  ಪ್ರಯತ್ನ ಮಾಡುವ ಮನಸ್ಸಿಲ್ಲದವರು ಮತ್ತು ಈ ರೀತಿಯ ಪ್ರಯತ್ನಗಳನ್ನು ಮಾಡಿಯೂ ನಿರೀಕ್ಷಿತ ಫ‌ಲಿತಾಂಶವನ್ನು ಪಡೆಯಲು ಅಸಾಧ್ಯವಾದವರು ಡಯೆಟ್‌ಗಳ ಮೊರೆ ಹೋಗುತ್ತಾರೆ. ಈ ಕೆಳಗೆ ವಿವರಿಸಿದ ಡಯೆಟ್‌ಗಳನ್ನು ಅನುಸರಿಸುವುದನ್ನು ಹೆಚ್ಚಾಗಿ ಗಮನಿಸಬಹುದಾಗಿದೆ. 

ಮ್ಯಾಜಿಕ್‌ ಫ‌ುಡ್‌: 
ಕೆಲವರು ತೂಕವನ್ನು ಇಳಿಸುವುದಕ್ಕಾಗಿ ಮ್ಯಾಜಿಕ್‌ ಫ‌ುಡ್‌ ಮೊರೆ ಹೋಗುತ್ತಾರೆ. ಈ ಮೂಲಕ ತೂಕ ಇಳಿಯುತ್ತದೆ ಎಂಬುದು ಅವರ ಭಾವನೆಯಾಗಿದೆ. ಆದರೆ ವಾಸ್ತವದಲ್ಲಿ ಮ್ಯಾಜಿಕ್‌ ಫ‌ುಡ್‌ ಎಂದು ವಿಶ್ಲೇಷಿಸಬಹುದಾದ ಆ್ಯಪ್‌ಲ್‌ ಸಿಡಾರ್‌ ವಿನೆಗರ್‌, ಗ್ರೇಪ್‌ಫ‌ೂÅಟ್‌, ಕ್ಯಾಬೇಜ್‌ ಸೂಪ್‌ ಇತ್ಯಾದಿಗಳನ್ನು ವ್ಯಕ್ತಿಯು ಪ್ರತಿನಿತ್ಯ ಹಾಗೂ ದೀರ್ಘ‌ ಸಮಯ ತೆಗೆದುಕೊಳ್ಳುವುದು ಸಾಧ್ಯವಿಲ್ಲ. ಇದಕ್ಕೆ ದೇಹವು ಒಗ್ಗಿಕೊಳ್ಳುವುದಿಲ್ಲ. ಹಾಗಾಗಿ ಜನರು ಇವುಗಳನ್ನು ಬಿಟ್ಟು ಮತ್ತೆ ಸಾಮಾನ್ಯ ಆಹಾರ ಕ್ರಮಕ್ಕೆ ಹಿಂದಿರು ಗುತ್ತಾರೆ. ಇಲ್ಲದಿದ್ದರೆ ಪೋಷಕಾಂಶಗಳ ಕೊರತೆ ಉಂಟಾಗುವ ಪರಿಣಾಮ ಅವರು ತೂಕ ಇಳಿಸಿಕೊಳ್ಳುವ ಭರವಸೆ ಕಳೆದುಕೊಳ್ಳುತ್ತಾರೆ. ಹಾಗಾಗಿ ಎಲ್ಲರೂ ತಿಳಿದುಕೊಳ್ಳಬೇಕಾದ ಪ್ರಮುಖಾಂಶ ವೆಂದರೆ ಮ್ಯಾಜಿಕ್‌ ಫ‌ುಡ್‌ ಎಂಬುದೇ ಇಲ್ಲ.

ಹೈ ಪ್ರೊಟೀನ್‌, ನೋ 
ಕಾಬೊìಹೈಡ್ರೇಟ್‌ ಡಯೆಟ್‌: ಈ ಡಯೆಟ್‌ನ್ನು ಸರಿಯಾದ ಸಮಯಕ್ಕೆ ಮುಟ್ಟಾಗದ ಹುಡುಗಿಯರು ಮತ್ತು ವೇಟ್‌ಲಿಫ್ಟಿಂಗ್‌ಗೆ ತೆರಳುವ ಹುಡುಗರು ಅನುಸರಿಸುತ್ತಾರೆ. ಅದಾಗ್ಯೂ ಈ ಆಹಾರ ಕ್ರಮವು ದೇಹದ ತೂಕವನ್ನು ಕಡಿಮೆ ಮಾಡುತ್ತದಾದರೂ ಕೊಬ್ಬನ್ನು ಕಡಿಮೆ ಮಾಡುವುದರಲ್ಲಿ ಯಾವುದೇ ಪರಿಣಾಮ ಉಂಟು ಮಾಡುವುದಿಲ್ಲ. ಇದರಿಂದ ಸಾಮಾನ್ಯವಾಗಿ ನಿರ್ಜಲೀಕರಣವೂ ಉಂಟಾಗಬಹುದು. ಕೆಲವೊಂದು ಮಾಂಸಾಹಾರ ಖಾದ್ಯಗಳು ಕೊಲೆಸ್ಟರಾಲ್‌ನ್ನು ಹೆಚ್ಚು ಹೊಂದಿರುತ್ತವೆ. ಇವುಗಳಿಂದಾಗಿ ಹೃದಯದ ಕಾಯಿಲೆಗಳು ಉಂಟಾಗುವ ಅಪಾಯ ಹೆಚ್ಚಿರುತ್ತದೆ. ಪ್ರೊಟೀನ್‌ನ್ನು ಹೆಚ್ಚಾಗಿ ತೆಗೆದುಕೊಳ್ಳುವುದರಿಂದ ಆಸ್ಟೆಯೋಪೊರೋಸಿಸ್‌ ,ಕಾನ್ಸ್ಟಿಪೇಶನ್‌ , ಜೀರ್ಣಿ ಸುವುದಕ್ಕೆ ಹೆಚ್ಚಿನ ಸಾಮರ್ಥ್ಯದ ಅಗತ್ಯವಿರುವುದರಿಂದ ಪಿತ್ತಜನಕಾಂಗ ಹಾಗೂ ಮೂತ್ರಪಿಂಡಗಳ ಮೇಲೆ ಒತ್ತಡ ಉಂಟಾಗುವ ಅಪಾಯವಿದೆ. ಹಸಿವನ್ನು ಹಿಡಿದಿಟ್ಟುಕೊಳ್ಳುವುದರಿಂದ kಛಿಠಿಟsಜಿs ಉಂಟಾಗುವ ಸಾಧ್ಯತೆಗಳೂ ಇವೆ.

ಹೈ ಫೈಬರ್‌ ಲೋ ಕ್ಯಾಲರಿ ಡಯೆಟ್‌: 
ಈ ರೀತಿಯ ಆಹಾರ ಕ್ರಮದಿಂದ ಅಂದರೆ ಫೈಬರ್‌ (ನಾರು) ಪದಾರ್ಥ ಸೇವನೆಯಿಂದಾಗಿ ಕೊಲೆಸ್ಟರಾಲ್‌ ಪ್ರಮಾಣ ಕಡಿಮೆಯಾಗುತ್ತದೆ. ಇದರಿಂದಾಗಿ ವ್ಯಕ್ತಿಯು cಟnsಠಿಜಿಟಚಠಿಜಿಟn ಮುಕ್ತಿ ಹೊಂದುತ್ತಾನೆ ಮತ್ತು ಉತ್ತಮ ಆರೋಗ್ಯವನ್ನು ಹೊಂದುತ್ತಾನೆ. ಆದರೆ ಈ ರೀತಿಯ ಆಹಾರಕ್ರಮವನ್ನು ಅನುಸರಿಸುವುದರಿಂದ ಕೆಲವೊಂದು ಸಮಸ್ಯೆಗಳೂ ಇವೆ. ಹೆಚ್ಚಿನ ಪ್ರಮಾಣದ ನಾರಿನಾಂಶವುಳ್ಳ ಆಹಾರದ ಸೇವನೆಯು ಪೂರಕ ಪ್ರಮಾಣದ ನೀರಿನಾಂಶವನ್ನು ದೇಹವು ಪಡೆಯದ ಸಂದರ್ಭದಲ್ಲಿ ನಿರ್ಜಲೀಕರಣ ಉಂಟಾಗುವ ಸಾಧ್ಯತೆ ಇದೆ. ಹಾಗಾಗಿ ಬೇಕಾದಷ್ಟು ನೀರು ಕುಡಿಯುವುದರಿಂದ ಈ ಡಯೆಟ್‌ನ್ನು ಫ‌ಲಪ್ರದಗೊಳಿಸಬಹುದಾಗಿದೆ. 

ಅತಿಯಾದ ನಾರಿನಂಶ ಸೇವನೆಯಿಂದ ಜೀರ್ಣ ಪ್ರಕ್ರಿಯೆ ತ್ವರಿತಗೊಳ್ಳುತ್ತದೆ. ಇದರಿಂದ ಈ ಪ್ರಕ್ರಿಯೆಯಲ್ಲಿ ಪೋಷಕಾಂಶಗಳನ್ನು ಹೀರಿಕೊಳ್ಳುವುದು ಕಡಿಮೆಯಾಗುತ್ತದೆ.

ದ್ರವಾಂಶ ಡಯೆಟ್‌: 
ಸರ್ಜರಿಗೆ ಒಳಗಾಗುವ ವ್ಯಕ್ತಿಗೆ ತೂಕ ಇಳಿಸುವ ಅನಿವಾರ್ಯತೆ ಇರುವುದರಿಂದ ಈ ರೀತಿಯ ದ್ರವಾಂಶ ಡಯೆಟ್‌ ಪದ್ಧತಿಯು ಪೂರಕವಾಗಿದೆ. ಈ ಡಯೆಟ್‌ಗಳು ಸಾಮಾನ್ಯವಾಗಿ ದಿನಂಪ್ರತಿ  700-800 kcಚl ಒದಗಿಸುತ್ತವೆ. ದೀರ್ಘ‌ ಕಾಲ ಈ ಡಯೆಟ್‌ ಪದ್ಧತಿಯನ್ನು ಅನುಸರಿಸುವುದರಿಂದ ಕೂದಲು ನಷ್ಟ ಸಂಭವಿಸುತ್ತದೆ. ಇಟnsಠಿಜಿಟಚಠಿಜಿಟn ಉಂಟಾಗುವ ಸಾಧ್ಯತೆ ಇದ್ದು ವೈದ್ಯಕೀಯ ನಿಗಾ ದೊರೆಯದೇ ಹೋದಲ್ಲಿ ಅಪಾಯ ಸಂಭವಿಸುವ ಸಾಧ್ಯತೆಯೂ ಇದೆ. ಶಸ್ತ್ರಕ್ರಿಯೆಗೆ ಒಳಗಾಗುವ ವ್ಯಕ್ತಿಯು  ದೈನಂದಿನ ದೇಹದ ಅಗತ್ಯಗಳಿಗಾಗಿ ಪೂರಕ ಆಹಾರ ಸೇವಿಸುವುದರಿಂದ ಈ ರೀತಿಯ ಡಯೆಟ್‌ನ್ನು ಯಶಸ್ವಿಗೊಳಿಸಬಹುದಾಗಿದೆ. 

ಸಂತುಲಿತ ಡಯೆಟ್‌ ಮಾತ್ರ ಸತ್ಯ: 
ಆದ್ದರಿಂದ ಕಾಬೊìಹೈಡ್ರೇಟ್ಸ್‌, ಪ್ರೊಟೀನ್ಸ್‌, ಕೊಬ್ಬು, ವಿಟಮಿನ್‌, ಲವಣಗಳನ್ನು ಹೊಂದಿರುವ ಸಮತೋಲಿತ ಡಯೆಟ್‌ ಮತ್ತು ವ್ಯಾಯಾಮವು ತೂಕ ಇಳಿಸುವಲ್ಲಿ ಸಹಕಾರಿಯಾಗಿದೆಯೇ ಹೊರತು ಬೇರಾವ ಕ್ರಮಗಳಿಂದಲೂ ತೂಕ ಇಳಿಸುವುದು ಸಾಧ್ಯವಿಲ್ಲ. ಕ್ಯಾಲರಿಗಳನ್ನು ಕಡಿಮೆ ಮಾಡುವುದು ಮತ್ತು 30-45 ನಿಮಿಷಗಳ ಕಾಲ ವ್ಯಾಯಾಮ ಮಾಡುವುದರಿಂದ ವ್ಯಕ್ತಿಯು ತೂಕವನ್ನು ಕಳೆದುಕೊಳ್ಳುವುದು ಮತ್ತು ಆರೋಗ್ಯಯುತವಾಗಿ ಬಾಳುವುದು ಸಾಧ್ಯವಿದೆ. ಯಾವತ್ತೂ ಜೀವನೋತ್ಸಾಹವನ್ನು ಕಳೆದುಕೊಳ್ಳದೆ ನಿಧಾನಗತಿಯ ಪ್ರಯೋಜನಕಾರಿ ಡಯೆಟ್‌ ಮೂಲಕ ತೂಕ ಇಳಿಸಿಕೊಳ್ಳಬಹುದು. ನಿಧಾನಗತಿಯ ಈ ಕ್ರಮಗಳು ಪೂರಕ ಪರಿಣಾಮಗಳನ್ನು ಉಂಟು ಮಾಡುತ್ತವೆ. ಕ್ಷಿಪ್ರ ಡಯೆಟ್‌ ಕ್ರಮಗಳಿಂದ ದೀರ್ಘ‌ ಕಾಲಿಕ ಪ್ರಯೋಜನ ಲಭಿಸುವುದಿಲ್ಲ. ಕಳೆದುಕೊಂಡ ತೂಕವನ್ನು ಮತ್ತೆ ಹೊಂದುವುದು ಆರೋಗ್ಯಕರವಲ್ಲ. ಆದ್ದರಿಂದ ಸಮತೋಲಿತ ಡಯೆಟ್‌ ಪದ್ಧತಿಯನ್ನು ಅನುಸರಿಸಿ, ಒಂದು ವರ್ಷದ ವರೆಗೆ ನಿರ್ದಿಷ್ಟ ತೂಕ ಇಳಿಕೆಯನ್ನು ಕಾಯ್ದುಕೊಂಡು ಉತ್ತಮ ಆಹಾರವನ್ನು ಸೇವಿಸುವುದು ಸೂಕ್ತ. 

ತೂಕ ಇಳಿಸುವ  ಮಾತ್ರೆಗಳು, ಯಂತ್ರಗಳು
ಈ ರೀತಿಯ ಯಾವುದೇ ಪ್ರಯತ್ನ ಗಳು ಫ‌ಲಪ್ರದವಾಗಿರುವುದು ಈ ವರೆಗೆ ಸಾಬೀತಾಗಿಲ್ಲ. ಇವು ಸುಳ್ಳು ಗಿಮಿಕ್‌ಗಳಾಗಿದ್ದು, ಇವುಗಳಿಂದಾಗಿ ನೀರಿನಾಂಶ ವನ್ನು ಕಳೆದುಕೊಳ್ಳಲು ಮಾತ್ರ ಸಾಧ್ಯವಾಗಿದೆ. ಸೋನಾ ಅಥವಾ ಬೆಲ್ಟ್‌ಗಳನ್ನು ಧರಿಸುವು ದರಿಂದ ತೂಕ ಇಳಿಯುತ್ತದೆ ಎಂಬುದು ಶುದ್ಧ ಸುಳ್ಳು. ಇದರಿಂದ ನೀರಿನಾಂಶ ಕಡಿಮೆಯಾಗಿ ತೂಕ ಕಡಿಮೆಯಾದಂತೆ ಗೋಚರಿಸುತ್ತದೆ. ನೀರು ಕುಡಿದಾಕ್ಷಣ ತೂಕವು ಮತ್ತೆ ಯಥಾಸ್ಥಿತಿಗೆ ಬರುತ್ತದೆ.

ಉಪವಾಸ ಪೂರಕವಲ್ಲ
ಕೆಲವರು ತೂಕವನ್ನು ಇಳಿಸಿಕೊಳ್ಳುವುದಕ್ಕೆ ಉಪವಾಸ ಮಾಡುತ್ತರೆ. ಕೆಲವರು ನಿಗದಿತವಾಗಿ ಉಪವಾಸ ಮಾಡಿದರೆ ಕೆಲವು ದಿನ ಬಿಟ್ಟು ದಿನ ಉಪವಾಸ ಮಾಡುತ್ತಾರೆ. ಇದರಿಂದಾಗಿ ಪೋಷಕಾಂಶ ನ್ಯೂನತೆ ಉಂಟಾಗುತ್ತದೆ ಮತ್ತು ದೀರ್ಘ‌ ಸಮಯ ಮುಂದುವರಿದರೆ ವ್ಯಕ್ತಿಯ ಆರೋಗ್ಯ ಹದಗೆಡುವ ಸಾಧ್ಯತೆ ಇದೆ. 

– ಅರುಣಾ ಮಲ್ಯ,   
ಡಯೆಟಿಷನ್‌, ಕೆಎಂಸಿ, ಮಂಗಳೂರು 

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ರಾಹುಲ್ ಅಜೇಯ ಶತಕದಾಟಕ್ಕೆ ಬೆಚ್ಚಿದ RCBಗೆ ಘೋರ ಸೋಲು!

ರಾಹುಲ್ ಅಜೇಯ ಶತಕದಾಟಕ್ಕೆ ಬೆಚ್ಚಿದ RCBಗೆ ಘೋರ ಸೋಲು!

KL-Rahul-1

ಕನ್ನಡಿಗ ರಾಹುಲ್ ಅಜೇಯ ಸ್ಪೋಟಕ ಸೆಂಚುರಿ ; RCB ಗೆಲುವಿಗೆ 207 ಟಾರ್ಗೆಟ್

suresh-anagadi

ಹುಟ್ಟೂರ ಮಣ್ಣು ಮತ್ತು ನೀರಿನೊಂದಿಗೆ ದೆಹಲಿಯಲ್ಲೇ ಸುರೇಶ್ ಅಂಗಡಿ ಅಂತ್ಯಕ್ರಿಯೆ

HUNDI

ಗಂಗಾವತಿ: ಅಂಜನಾದ್ರಿ ಹುಂಡಿ ಹಣ ಎಣಿಕೆ; 10.24 ಲಕ್ಷ ಸಂಗ್ರಹ

manday

ಮಂಡ್ಯದಲ್ಲಿಂದು 195 ಜನರಿಗೆ ಕೋವಿಡ್ ದೃಢ; 314 ಮಂದಿ ಗುಣಮುಖ, 1 ಸಾವು

KG-Halli-DJ-Halli

ಬೆಂಗಳೂರು ಗಲಭೆಯ ಪ್ರಮುಖ ಸೂತ್ರಧಾರಿ ಸಾದಿಕ್ ಆಲಿಯನ್ನು ಬಂಧಿಸಿದ NIA

crime

ಚಿಕ್ಕಮಗಳೂರು: ವೃದ್ಧೆಯನ್ನು ಹತ್ಯೆ ಮಾಡಿ ಚಿನ್ನದ ಸರ ದೋಚಿದ ದುಷ್ಕರ್ಮಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಿರಿಯರಲ್ಲಿ ಪರಿಣಾಮಕಾರಿ ಸಂವಹನದ ಮೇಲೆ ಶ್ರವಣ ಶಕ್ತಿ ನಷ್ಟ ಮತ್ತು ಡಿಮೆನ್ಶಿಯಾಗಳ ಪರಿಣಾಮ

ಹಿರಿಯರಲ್ಲಿ ಪರಿಣಾಮಕಾರಿ ಸಂವಹನದ ಮೇಲೆ ಶ್ರವಣ ಶಕ್ತಿ ನಷ್ಟ ಮತ್ತು ಡಿಮೆನ್ಶಿಯಾಗಳ ಪರಿಣಾಮ

t-15

ತಡೆಯಲಾಗದ ಅನಿಯಂತ್ರಿತ ಮೂತ್ರ ವಿಸರ್ಜನೆ ಮತ್ತು ಮೂತ್ರಶಂಕೆಯ ಅವಸರ

ಆಸಿಡಿಟಿಯನ್ನು ಉಪಶಮನಗೊಳಿಸಲು ಆಹಾರಕ್ರಮ

ಆಸಿಡಿಟಿಯನ್ನು ಉಪಶಮನಗೊಳಿಸಲು ಆಹಾರಕ್ರಮ

ಕೋವಿಡ್‌ -19 ಸಾಂಕ್ರಾಮಿಕ ಕಾಲದಲ್ಲಿ ಆಡಿಯಾಲಜಿ ಮತ್ತು ಸ್ಪೀಚ್‌ ಥೆರಪಿ

ಕೋವಿಡ್‌ -19 ಸಾಂಕ್ರಾಮಿಕ ಕಾಲದಲ್ಲಿ ಆಡಿಯಾಲಜಿ ಮತ್ತು ಸ್ಪೀಚ್‌ ಥೆರಪಿ

EDITION-TDY-1

ಕೋವಿಡ್ ಅನುಭವದ ಮಾತು : ಕೋವಿಡ್ ನಿಂದ ಗುಣಮುಖರಾದ ವೈದ್ಯರೊಬ್ಬರ ಹಿತನುಡಿ

MUST WATCH

udayavani youtube

ತೋಟದ ನಡುವೆ ಸಾಗುವ ಮಿನಿ ಟಿಪ್ಪರ್ ಆವಿಷ್ಕಾರ ಮಾಡಿದ ಪಾಲ್ತಾಡಿಯ ಯುವಕ

udayavani youtube

Udupi Krishna temple to be open for public from September 28 | Udayavani

udayavani youtube

ಕೋವಿಡ್ ‌ಕಾಲದಲ್ಲಿ ರಸ್ತೆ ರಾಜಕಾರಣ: ಪ್ರತಿಕ್ರಿಯಿಸಿದ ಸಂತ ಅಲೋಶಿಯಸ್ ಸಂಸ್ಥೆ

udayavani youtube

ಮಂಗಳೂರು ನಗರದ ಲೈಟ್ ಹೌಸ್ ರೋಡ್ ಗೆ ‘ಮುಲ್ಕಿ ಸುಂದರರಾಮ ಶೆಟ್ಟಿ ರಸ್ತೆ’ ಎಂದು ಮರುನಾಮಕರಣ

udayavani youtube

District Excise Department seized Millions worth of Marijuana | Udayavaniಹೊಸ ಸೇರ್ಪಡೆ

ರಾಹುಲ್ ಅಜೇಯ ಶತಕದಾಟಕ್ಕೆ ಬೆಚ್ಚಿದ RCBಗೆ ಘೋರ ಸೋಲು!

ರಾಹುಲ್ ಅಜೇಯ ಶತಕದಾಟಕ್ಕೆ ಬೆಚ್ಚಿದ RCBಗೆ ಘೋರ ಸೋಲು!

KL-Rahul-1

ಕನ್ನಡಿಗ ರಾಹುಲ್ ಅಜೇಯ ಸ್ಪೋಟಕ ಸೆಂಚುರಿ ; RCB ಗೆಲುವಿಗೆ 207 ಟಾರ್ಗೆಟ್

ಮಹಾರಾಷ್ಟ್ರದಲ್ಲಿ ಕೋವಿಡ್‌ ಸಾವು ಪ್ರಮಾಣ ಹೆಚ್ಚಳ

ಮಹಾರಾಷ್ಟ್ರದಲ್ಲಿ ಕೋವಿಡ್‌ ಸಾವು ಪ್ರಮಾಣ ಹೆಚ್ಚಳ

suresh-anagadi

ಹುಟ್ಟೂರ ಮಣ್ಣು ಮತ್ತು ನೀರಿನೊಂದಿಗೆ ದೆಹಲಿಯಲ್ಲೇ ಸುರೇಶ್ ಅಂಗಡಿ ಅಂತ್ಯಕ್ರಿಯೆ

ಕ್ರಿಕೆಟ್‌ ಆಟಗಾರರಿಗೆ ಸ್ಕಾಲರ್‌ಶಿಪ್‌: ಪಂಡಿತ್‌

ಕ್ರಿಕೆಟ್‌ ಆಟಗಾರರಿಗೆ ಸ್ಕಾಲರ್‌ಶಿಪ್‌: ಪಂಡಿತ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.