Ultrasound: ಗರ್ಭಧಾರಣೆಯಲ್ಲಿ ಅಲ್ಟ್ರಾಸೌಂಡ್‌ನ ಉಪಯೋಗಗಳು ಮತ್ತು ಸುರಕ್ಷತೆಗಳು


Team Udayavani, Nov 6, 2023, 7:00 AM IST

7-ultra-sound

ಶ್ರೀ ಮತ್ತು ಶ್ರೀಮತಿ ಕುಮಾರ್‌ ತಮ್ಮ ಸ್ಕ್ಯಾನಿಂಗ್‌ ಅಪಾಯಿಂಟ್‌ಮೆಂಟ್‌ಗಾಗಿ ಕಾಯುತ್ತಿರುವಾಗ ಅವರ ಮನಸ್ಸಿನಲ್ಲಿ ವಿವಿಧ ಭಾವನೆಗಳು ಸುಳಿದಾಡುತ್ತಿದ್ದವು. ಗರ್ಭಾವಸ್ಥೆಯಲ್ಲಿ ಅಲ್ಟ್ರಾಸೌಂಡ್‌ಗಳು ಏಕೆ ಅಗತ್ಯ, ಪ್ರತಿ ಬಾರಿಯ ಸ್ಕ್ಯಾನ್‌ನಲ್ಲಿ ಏನನ್ನು ನಿರೀಕ್ಷಿಸಬಹುದು, ಎಷ್ಟು ಸ್ಕ್ಯಾನ್‌ ಗಳು ಬೇಕಾಗುತ್ತವೆ ಮತ್ತು ಮುಖ್ಯವಾಗಿ, ಅಲ್ಟ್ರಾಸೌಂಡ್‌ ತಮ್ಮ ಮಗುವಿಗೆ ಸುರಕ್ಷಿತವೇ ಎಂಬಂತಹ ಅನೇಕ ಪ್ರಶ್ನೆಗಳು ಅವರ ಮನಸ್ಸಿನಲ್ಲಿದ್ದವು. ಮಗುವನ್ನು ನಿರೀಕ್ಷಿಸುತ್ತಿರುವ ಅನೇಕ ಪೋಷಕರು ಇಂತಹ ಸನ್ನಿವೇಶಗಳನ್ನು ಎದುರಿಸುತ್ತಾರೆ ಮತ್ತು ಯಾವೆಲ್ಲ ಬಗೆಯ ಸ್ಕ್ಯಾನ್‌ಗಳು ಲಭ್ಯವಿವೆ, ಅವುಗಳನ್ನು ಏಕೆ ಮಾಡುತ್ತಾರೆ ಮತ್ತು ಯಾವೆಲ್ಲ ಅಂತಾರಾಷ್ಟ್ರೀಯ ಮಾರ್ಗಸೂಚಿಗಳನ್ನು ಶಿಫಾರಸು ಮಾಡಲಾಗುತ್ತದೆ ಎಂಬುದರ ಕುರಿತು ಸ್ಪಷ್ಟತೆಯನ್ನು ಹೊಂದಿರುವುದು ಅತ್ಯಗತ್ಯ.

ಪ್ರತೀ ಅಲ್ಟ್ರಾಸೌಂಡ್‌ನ‌ ಪ್ರಾಮುಖ್ಯವನ್ನು ಅರ್ಥಮಾಡಿಕೊಳ್ಳುವ ಮೂಲಕ ಪೋಷಕರು ತಮ್ಮ ಮಗುವಿನ ಆರೋಗ್ಯದ ಬಗ್ಗೆ ತಮ್ಮ ನಿರ್ಧಾರಗಳನ್ನು ಹೆಚ್ಚು ಆತ್ಮವಿಶ್ವಾಸದೊಂದಿಗೆ ತೆಗೆದುಕೊಳ್ಳಬಹುದು. ಆದಾಗ್ಯೂ ಎಲ್ಲ ಅಲ್ಟ್ರಾಸೌಂಡ್‌ ಅಪಾಯಿಂಟ್‌ ಮೆಂಟ್‌ಗಳು ಮತ್ತು ನಿರ್ಧಾರಗಳನ್ನು ಪರವಾನಿಗೆ ಪಡೆದ ವೈದ್ಯರ ಮಾರ್ಗದರ್ಶನದಲ್ಲಿ ಮಾಡಬೇಕು ಎಂಬುದನ್ನು ಗಮನಿಸುವುದು ಮುಖ್ಯವಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು ಮಾಡಿದಂತೆ ಧನಾತ್ಮಕ ಗರ್ಭಧಾರಣೆ ಮತ್ತು ಪ್ರಸವ ಬಳಿಕದ ಆರೈಕೆಗೆ ಆದ್ಯತೆ ನೀಡುವುದು ಅತ್ಯಗತ್ಯ.

ಗರ್ಭಾವಸ್ಥೆ ಅಥವಾ ರೋಗವನ್ನು ಪತ್ತೆಹಚ್ಚಲು ಅಲ್ಟ್ರಾಸೌಂಡ್‌ ಸುರಕ್ಷಿತ ಮತ್ತು ಅತ್ಯಂತ ಸಾಮಾನ್ಯ ಸಾಧನವಾಗಿದೆ ಎಂದು ಗಮನಿಸುವುದು ಮುಖ್ಯ. ಇದು ಧ್ವನಿ ತರಂಗಗಳನ್ನು ಸೆರೆಹಿಡಿಯುವ ಮೂಲಕ ಮತ್ತು ಟಾರ್ಗೆಟ್‌ ಮಾಡಲಾದ ಪ್ರದೇಶದ ಚಿತ್ರಗಳನ್ನು ನೀಡುವ ಮೂಲಕ ಕಾರ್ಯನಿರ್ವಹಿಸುತ್ತದೆ.

ಈ ಚಿತ್ರಗಳನ್ನು ವಿಶ್ಲೇಷಿಸುವ ಮೂಲಕ, ಟಾರ್ಗೆಟ್‌ ಮಾಡಲಾದ ಅಂಗದಿಂದ ನಾವು ಪರಿಮಾಣ ಸಹಿತ ರಚನಾಸಂಬಂಧಿ ಮತ್ತು ಕಾರ್ಯಕ್ಷಮತೆಯ ಡೇಟಾವನ್ನು ಪಡೆಯಬಹುದು. 1956ರಲ್ಲಿ ವೈದ್ಯಕೀಯ ಉದ್ದೇಶಗಳಿಗಾಗಿ ಅಲ್ಟ್ರಾಸೌಂಡ್‌ ಅನ್ನು ಪ್ರಥಮ ಬಾರಿ ಬಳಸಲಾಯಿತು.

ಎಂಜಿನಿಯರ್‌ ಅಗಿರುವ ಟಾಮ್‌ ಬ್ರೌನ್‌ ಮತ್ತು ಪ್ರಸೂತಿ ತಜ್ಞ ಇಯಾನ್‌ ಡೊನಾಲ್ಡ್‌ ಇದನ್ನು ಗ್ಲಾಸ್ಗೋದಲ್ಲಿ ಬಳಸಿದರು. “ಪ್ರಸೂತಿ’ಯಲ್ಲಿ ಅಂದರೆ, ಗರ್ಭಾವಸ್ಥೆಯಲ್ಲಿ ಬಳಸಲಾಗುವ ಅಲ್ಟ್ರಾಸೌಂಡ್‌ ಅಗಾಧವಾಗಿದೆ. ಇದು ಗರ್ಭಾವಸ್ಥೆಯ ದೃಢೀಕರಣದಿಂದ ತೊಡಗಿ ಪ್ರಸವಾನಂತರದ ಆರೋಗ್ಯ ಮೇಲ್ವಿಚಾರಣೆಯವರೆಗೂ ಸಹಾಯ ಮಾಡುತ್ತದೆ. ಅಲ್ಟ್ರಾಸೌಂಡ್‌ ಅಧಿಕ ಫ್ರೀಕ್ವೆನ್ಸಿಯ ಧ್ವನಿ ತರಂಗಗಳನ್ನು ಬಳಸುವ ಮೂಲಕ ಒಳಗಿನ ಅಂಗಗಳನ್ನು ವೀಕ್ಷಿಸಲು ಸುರಕ್ಷಿತ ಮತ್ತು ಛೇದನರಹಿತ (non-invasive) ಮಾರ್ಗವನ್ನು ಒದಗಿಸುತ್ತದೆ. ಈ ತಂತ್ರಜ್ಞಾನವು ಯಕೃತ್ತು, ಪಿತ್ತಕೋಶದ ಕಲ್ಲು ಮತ್ತು ಥೈರಾಯ್ಡ ಗಂಟುಗಳ ವೈದ್ಯಕೀಯ ಪರಿಸ್ಥಿತಿಗಳ ವೈದ್ಯಕೀಯ ರೋಗನಿರ್ಣಯ ಮತ್ತು ಸಂಭಾವ್ಯ ಪ್ರಗತಿಯಲ್ಲಿ ಕ್ರಾಂತಿಯನ್ನುಂಟುಮಾಡಿದೆ.

ಈ ತಂತ್ರಜ್ಞಾನವು ದೇಹಕ್ಕೆ ಧ್ವನಿ ತರಂಗಗಳನ್ನು ಕಳುಹಿಸಿ ಅವು ಪುನಃ ಹಿಂಬರುವ ತಂತ್ರದ ಮೇಲೆ ಕಾರ್ಯನಿರ್ವಹಿಸುತ್ತದೆ. ಹಿಂದಿರುಗಿದ ಅಲೆಗಳನ್ನು ಅನಂತರ ವಿದ್ಯುತ್‌ ಪ್ರಚೋದನೆಗಳನ್ನಾಗಿ ಮಾರ್ಪಡಿಸಲಾಗುತ್ತದೆ.

ಅನಂತರ ಪರದೆಯ ಮೇಲೆ ರಿಯಲ್‌-ಟೈಮ್‌ ದೃಶ್ಯಗಳನ್ನು ಉತ್ಪಾದಿಸಲು ಕಂಪ್ಯೂಟರ್‌ ಸಾಫ್ಟ್ವೇರ್‌ನಿಂದ ವಿಶ್ಲೇಷಿಸಲಾಗುತ್ತದೆ. ಎಕ್ಸ್‌  ಕಿರಣಗಳಿಗೆ ಹೋಲಿಸಿದಾಗ ಅಲ್ಟ್ರಾಸಾನಿಕ್‌ ಇಮೇಜಿಂಗ್‌ನ ಪ್ರಮುಖ ಪ್ರಯೋಜನವೆಂದರೆ ಅದು ಅಯಾನೀಕರಿಸುವ ವಿಕಿರಣವನ್ನು ಬಳಸಿಕೊಳ್ಳುವುದಿಲ್ಲ.

ಆದ್ದರಿಂದ ಇದು ಗರ್ಭಿಣಿ ಮಹಿಳೆಯರಿಗೆ ಸುರಕ್ಷಿತ ಪರ್ಯಾಯವಾಗಿದೆ. ಭ್ರೂಣದ ಬೆಳವಣಿಗೆಯನ್ನು ಮೇಲ್ವಿಚಾರಣೆ ಮಾಡಲು ಮತ್ತು ಆರೋಗ್ಯಕರ ಗರ್ಭಧಾರಣೆಯನ್ನು ಖಚಿತಪಡಿಸಿಕೊಳ್ಳಲು ಇದು ಈಗ ಒಂದು ವಾಡಿಕೆಯ ತಪಾಸಣೆಯಾಗಿದೆ. ಭ್ರೂಣದ ಬೆಳವಣಿಗೆಯನ್ನು ಮೇಲ್ವಿಚಾರಣೆ ಮಾಡಲು ಮತ್ತು ಗರ್ಭಧಾರಣೆಯ ಸಂಭವನೀಯ ಸಮಸ್ಯೆಗಳನ್ನು ಪತ್ತೆಹಚ್ಚಲು ಈ ತಂತ್ರಜ್ಞಾನವು ಒಂದು ಪ್ರಮಾಣಿತ ಟೂಲ್‌ ಆಗಿ ಮಾರ್ಪಟ್ಟಿದೆ.

ಇಮೇಜಿಂಗ್‌ ಪ್ರಕ್ರಿಯೆಯಲ್ಲಿ ಬಳಸುವ ಧ್ವನಿ ತರಂಗಗಳನ್ನು ಮಾನವನ ಕಿವಿ ಗ್ರಹಿಸುವುದಿಲ್ಲವಾದ್ದರಿಂದ ಬಾಹ್ಯ ಅಲ್ಟ್ರಾಸೌಂಡ್‌ಗಳು ಸಾಮಾನ್ಯವಾಗಿ ನೋವುರಹಿತವಾಗಿರುತ್ತವೆ. ಅಲ್ಟ್ರಾಸೌಂಡ್‌ ತಂತ್ರಜ್ಞಾನದ ಬಳಕೆಯು ALARA ತತ್ವದ ಮಾರ್ಗದರ್ಶನವನ್ನು ಅನುಸರಿಸುತ್ತದೆ, ಇದು “ಸಮಂಜಸವಾಗಿರುವಷ್ಟು ಮಟ್ಟಿಗೆ (as low as reasonably achievable)’ ಎಂದು ಸೂಚಿಸುತ್ತದೆ. ಈ ತತ್ವವು ವೈದ್ಯಕೀಯ ಇಮೇಜಿಂಗ್‌ ಸಮಯದಲ್ಲಿ ಯಾವುದೇ ರೀತಿಯ ಅಯಾನೀಕರಿಸುವ ವಿಕಿರಣಕ್ಕೆ ರೋಗಿಗಳು ಒಡ್ಡಿಕೊಳ್ಳುವುದನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಇದನ್ನು ಅಲ್ಟ್ರಾಸಾನಿಕ್‌ ಇಮೇಜಿಂಗ್‌ಗೂ ವಿಸ್ತರಿಸಲಾಗಿದೆ.

ಗರ್ಭಧಾರಣೆಯ ಕಾರ್ಡ್‌ ಪರೀಕ್ಷೆಯು ಗರ್ಭಧಾರಣೆಯನ್ನು ಪತ್ತೆಹಚ್ಚಲು ಮನೆಯಲ್ಲಿ ಬಳಸುವ ಪ್ರಾಥಮಿಕ ಪರೀಕ್ಷೆಯಾಗಿದೆ. ಪರೀಕ್ಷೆಯ ಫ‌ಲಿತಾಂಶ ಧನಾತ್ಮಕವಾಗಿ ಬಂದರೆ, ಪ್ರಸೂತಿ ತಜ್ಞರನ್ನು ಸಂಪರ್ಕಿಸುವ ಸಲಹೆ ನೀಡಲಾಗುತ್ತದೆ. ಗರ್ಭಧರಿಸಿರುವುದು ದೃಢಪಟ್ಟ ಬಳಿಕ, ಭೂಣಶಿಶು ಮತ್ತು ತಾಯಿಯ ಆರೋಗ್ಯವನ್ನು ಮೇಲ್ವಿಚಾರಣೆ ಮಾಡಲು ನಿಯಮಿತ ಅಲ್ಟ್ರಾಸೌಂಡ್‌ ಸ್ಕ್ಯಾನ್‌ಗಳು ಮತ್ತು ರಕ್ತ ಪರೀಕ್ಷೆಗಳನ್ನು ನಿಗದಿಪಡಿಸಲು ವೈದ್ಯಕೀಯ ವೃತ್ತಿಪರರು ಸಲಹೆ ನೀಡುತ್ತಾರೆ.

ಅಲ್ಟ್ರಾಸೌಂಡ್‌ (USG) ಅಪಾಯಿಂಟ್‌ಮೆಂಟ್‌ ಸಮಯದಲ್ಲಿ, ನೀವು ಪರೀಕ್ಷಾ ಮೇಜಿನ ಮೇಲೆ ಮಲಗುತ್ತೀರಿ ಮತ್ತು ನಿಮ್ಮ ಹೊಟ್ಟೆಯ ಮೇಲೆ ಜೆಲ್‌ ಅನ್ನು ಸವರಲಾಗುತ್ತದೆ. ಅಲ್ಟ್ರಾಸೌಂಡ್‌ ಪ್ರೋಬ್‌ ನಿರ್ದಿಷ್ಟ ಅಂಗಗಳು ಮತ್ತು ಭಾಗಗಳ ಚಿತ್ರಗಳನ್ನು ಮತ್ತು ಅಳತೆಗಳನ್ನು ತೆಗೆದುಕೊಳ್ಳುತ್ತದೆ. ಗರ್ಭದಲ್ಲಿ ಮಗುವಿನ ಸ್ಥಾನದ ಕಾರಣದಿಂದಾಗಿ ಸಮಸ್ಯೆಯಾದರೆ, ಶಿಶುವಿನ ಚಲನೆಯನ್ನು ಉತ್ತೇಜಿಸಲು ನಿಮಗೆ ಚಲಿಸಲು, ಕುಡಿಯಲು ಅಥವಾ ಸಿಹಿ ಪಾನೀಯವನ್ನು ಸೇವಿಸಲು ಕೇಳಬಹುದು. ಅಲ್ಲದೆ, ಮಗುವಿನ ಸ್ಥಾನವನ್ನು ಅವಲಂಬಿಸಿ ಟ್ರಾನ್ಸ್‌ ವೆಜೈನಲ್‌ ಸ್ಕ್ಯಾನ್‌ ಮಾಡಲಾಗುತ್ತದೆ.

ತಾಯಿಯು ಬೊಜ್ಜು ದೇಹದವರಾಗಿದ್ದರೆ ಭ್ರೂಣಶಿಶುವಿನ ಮೇಲೆ ಸರಿಯಾಗಿ ಕೇಂದ್ರೀಕರಿಸಲು ಸಾಧ್ಯವಾಗುವುದಿಲ್ಲ. ಆರಂಭಿಕ ಗರ್ಭಾವಸ್ಥೆಯಲ್ಲಿ ಕಿಬ್ಬೊಟ್ಟೆಯ TVS ಮಾಡುವುದಾದರೆ ತಾಯಿಯ ಮೂತ್ರಕೋಶ ತುಂಬಿದ ಸ್ಥಿತಿಯಲ್ಲಿರಬೇಕು. ಆದಾಗ್ಯೂ TVSನೊಂದಿಗೆ ಇಮೇಜಿಂಗ್‌ನ ಸ್ಪಷ್ಟತೆ ಉತ್ತಮವಾಗಿರುತ್ತದೆ. ಆದ್ದರಿಂದ ಇದಕ್ಕೆ ಹೆಚ್ಚು ಆದ್ಯಾತೆ ನೀಡಲಾಗುತ್ತದೆ.

ಆರಂಭಿಕ ಗರ್ಭಾವಸ್ಥೆಯಲ್ಲಿ ಅಲ್ಟ್ರಾಸೌಂಡ್‌ (USG) ಇಂಪ್ಲಾಟೇಶನ್‌ ಸ್ಥಳವನ್ನು (ಗರ್ಭಾಶಯದ ಒಳಗೆ/ಹೊರಗೆ) ಗುರುತಿಸಲು, ಗರ್ಭಧಾರಣೆಗಳ ಸಂಖ್ಯೆ (ಏಕ/ಬಹು), ಬದುಕಿ ಉಳಿಯುವ ಸಾಧ್ಯತೆ (Viability) (ಹೃದಯ ಬಡಿತ ಇರುವಿಕೆ/ಇಲ್ಲದಿರುವಿಕೆ), ಕೊರಿಯೊಡೆಸಿಡ್ಯುಯಲ್‌ ಪ್ರತಿಕ್ರಿಯೆ, ಮೋಲಾರ್‌ ಪ್ರಗ್ನೆನ್ಸಿಯಂತಹ ಆರಂಭಿಕ ಗರ್ಭಧಾರಣೆಯ ತೊಡಕುಗಳು, ಫೈಬ್ರಾಯ್ಡ ಗಳ ಇರುವಿಕೆ, ಅಂಡಾಶಯದ ಸಿಸ್ಟ್‌ಗಳು ಮತ್ತು ಇನ್ನೂ ಹೆಚ್ಚಿನ ತೊಡಕುಗಳನ್ನು ಗುರುತಿಸಲು ಸಹಾಯವಾಗುತ್ತದೆ.

ಗರ್ಭಾಶಯದ ಹೊರಗೆ ಗರ್ಭಧಾರಣೆಯಾಗಿದ್ದು (ಎಕ್ಟೋಪಿಕ್‌) ಮತ್ತು ಗಮನಕ್ಕೆ ಬಾರದೆ ಹೋದಲ್ಲಿ, ಇದು ಮಹಿಳೆಯರಿಗೆ ತೀವ್ರ ತೊಡಕುಗಳು ಮತ್ತು ಮಾರಣಾಂತಿಕ ಪರಿಸ್ಥಿತಿಗಳಿಗೆ ಕಾರಣವಾಗಬಹುದು. ಮೂತ್ರದ ಗರ್ಭಧಾರಣೆಯ ಪರೀಕ್ಷೆಯು ಹಾರ್ಮೋನ್‌ (ಹ್ಯೂಮನ್‌ ಕೊರಿಯಾನಿಕ್‌ ಗೊನಡೋಟ್ರೋμನ್‌) ಇರುವಿಕೆಯನ್ನು ಮಾತ್ರ ಪತ್ತೆ ಮಾಡುವುದರಿಂದ ಮಹಿಳೆಯು ಹಾರ್ಮೋನ್‌ನಿಂದ ಗರ್ಭಿಣಿಯಾಗಿದ್ದಾಳೆ ಎಂದು ಮಾತ್ರ ಹೇಳಬಹುದು.

ಗರ್ಭಾಶಯದೊಳಗೆ ಬದುಕುಳಿಯಬಹುದಾದ ಭ್ರೂಣದೊಂದಿಗೆ ಗರ್ಭಾವಸ್ಥೆಯ ಚೀಲದ ಉಪಸ್ಥಿತಿಯು ಗರ್ಭಧಾರಣೆಯನ್ನು ದೃಢೀಕರಿಸುತ್ತದೆ. ಇದು ಭ್ರೂಣಗಳ ಸಂಖ್ಯೆಯನ್ನು ಕೂಡ ನಿರ್ಧರಿಸುತ್ತದೆ. ಅಂದರೆ, ಗರ್ಭದಲ್ಲಿ ಒಂದು ಮಗುವಿದೆಯೇ ಅಥವಾ ಒಂದಕ್ಕಿಂತ ಹೆಚ್ಚಿವೆಯೇ (ಸಾಮಾನ್ಯವಾಗಿ ಅವಳಿ/ತ್ರಿವಳಿ) ಗರ್ಭಧಾರಣೆಯ ದೃಢೀಕರಣವು ಆರು ಮತ್ತು ಎಂಟು ವಾರಗಳ ನಡುವೆ ಇರುತ್ತದೆ. ಸಾಮಾನ್ಯ ಗರ್ಭಧಾರಣೆಯು ಸುಮಾರು 280 ದಿನಗಳು ಅಥವಾ 40 ವಾರಗಳವರೆಗೆ ಇರುತ್ತದೆ.

ಮೊದಲ ತ್ತೈಮಾಸಿಕವು ಸುಮಾರು 13+6 ವಾರಗಳು, ಎರಡನೆಯದು 28 ಮತ್ತು ಮೂರನೆಯದು 40 ವಾರಗಳ ತನಕ ಇರುತ್ತದೆ. ಗರ್ಭಧಾರಣೆಯ ಆರಂಭಿಕ ಹಂತದಲ್ಲಿ ಪಿಂಡವನ್ನು ಭ್ರೂಣ ಎಂದು ಕರೆಯಲಾಗುತ್ತದೆ ಮತ್ತು ಭ್ರೂಣದಿಂದ ಭ್ರೂಣ ಶಿಶುವಿನ ಹಂತಗಳಿಗೆ ಪರಿವರ್ತನೆಯಾಗಲು ಫ‌ಲೀಕರಣದ ಬಳಿಕ ಏಳು ವಾರಗಳು ಅಥವಾ LMPಯ ಬಳಿಕ ಒಂಬತ್ತು ವಾರಗಳು ಬೇಕಾಗುತ್ತವೆ.

ಗರ್ಭಧಾರಣೆಯ 6-8 ವಾರಗಳ ಹೊತ್ತಿಗೆ, ಭ್ರೂಣಶಿಶುವಿನ ಹೃದಯ ಬಡಿಯಲು ಆರಂಭವಾಗುತ್ತದೆ. ಇದು ಭ್ರೂಣಶಿಶುವಿನ ಮೊದಲ ಧನಾತ್ಮಕ ಮೈಲಿಗಲ್ಲಾಗಿರುತ್ತದೆ.

ಗರ್ಭಾವಸ್ಥೆಯ 11ನೇ ಮತ್ತು 13ನೇ ವಾರಗಳ ನಡುವೆ ನ್ಯೂಕಲ್‌ ಟ್ರಾನ್ಸ್‌ ಲುಸೆನ್ಸಿ ಸ್ಕ್ಯಾನ್‌ (NT ಸ್ಕ್ಯಾನ್‌) ಮತ್ತು ರಕ್ತ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದು ಅತೀ ಅಗತ್ಯ. ಕತ್ತಿನ ಹಿಂಭಾಗ ಮತ್ತು ಅದನ್ನು ಮುಚ್ಚುವ ಚರ್ಮದ ನಡುವಿನ ವಿಶಿಷ್ಟವಾದ ದ್ರವ ತುಂಬಿದ ಅಂತರವನ್ನು ನ್ಯೂಕಲ್‌ ಟ್ರಾನ್ಸ್‌ ಲುಸೆನ್ಸಿ ಮಾಪನ ಎಂದು ಉಲ್ಲೇಖೀಸಲಾಗುತ್ತೆ. ಈ ಸ್ಕ್ಯಾನ್‌ನಿಂದ ಅನೆನ್ಸ್‌ಫಾಲಿಯಂತಹ ಹೆಚ್ಚಿನ ವೈಪರೀತ್ಯಗಳನ್ನು ಕಂಡುಹಿಡಿಯಬಹುದು.

ಅಷ್ಟೇ ಅಲ್ಲದೆ ಈ ರೋಗನಿರ್ಣಯದ ಸಾಧನಗಳು ಸಾಮಾನ್ಯ ಕ್ರೋಮೋಸೋಮ್‌ ಸಂಬಂಧಿತ ಅಥವಾ ಅನುವಂಶಿಕ ಕಾಯಿಲೆಗಳಂತಹ ಪ್ರಮುಖ ಅಸಹಜತೆಗಳನ್ನು ಗುರುತಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಹೆಚ್ಚಾಗಿ ಅಸಹಜ ಭ್ರೂಣಗಳಲ್ಲಿ NT ಮಾಪನಗಳು ಹೆಚ್ಚಿರುತ್ತವೆ. ಅಲ್ಟ್ರಾಸೌಂಡ್‌ ಹೆಚ್ಚಾಗಿ ಸಾಮಾನ್ಯವಾಗಿದೆ ಎಂದು ಕಂಡುಬಂದರೆ, ಮೊದಲ ತ್ತೈಮಾಸಿಕ ಸ್ಕ್ರೀನಿಂಗ್‌ ಡಬಲ್‌ ಮಾರ್ಕರ್‌ ಪರೀಕ್ಷೆಯನ್ನು ಒಳಗೊಂಡಿರುತ್ತದೆ.

ಇದನ್ನು ತಾಯಿಯ ಸೀರಮ್‌ ಸ್ಕ್ರೀನಿಂಗ್‌ ಎಂದೂ ಕರೆಯಲಾಗುತ್ತೆ. ಇದು ಕ್ರೋಮೋಸೋಮ್‌ ಸಂಬಂಧಿತ ಅಸಹಜತೆಗಳ ಸಾಧ್ಯತೆಯನ್ನು ಊಹಿಸಬಹುದು. ಭ್ರೂಣದಲ್ಲಿನ ಕ್ರೋಮೋಸೋಮ್‌ ಸಂಬಂಧಿತ ವೈಪರೀತ್ಯದ ಅಪಾಯವನ್ನು ಮುಕ್ತ ಬೀಟಾ-ಹ್ಯೂಮನ್‌ ಕೋರಿಯಾನಿಕ್‌ ಗೊನಡೋಟ್ರೋಪಿನ್‌ (beta-hCG) ಮತ್ತು ಗರ್ಭಾವಸ್ಥೆಗೆ ಸಂಬಂಧಿಸಿದ ಪ್ಲಾಸ್ಮಾ ಪ್ರೋಟೀನ್‌ (PAPP-A)ನಂತಹ ರಕ್ತ-ಸೂಚಕಗಳನ್ನು ತಾಯಿಯ ವಯಸ್ಸು ಮತ್ತು NT ರೀಡಿಂಗ್‌ಗಳೊಂದಿಗೆ ಸಂಯೋಜಿಸುವ ಮೂಲಕ ಲೆಕ್ಕ ಹಾಕಲಾಗುತ್ತದೆ. ಡ್ಯುಯಲ್‌ ಪ್ರಸವಪೂರ್ವ ಸ್ಕ್ರೀನಿಂಗ್‌ಗಾಗಿ ಟ್ರಿಪಲ್‌ ಅಥವಾ ಕ್ವಾಡ್ರುಪಲ್‌ ಮಾರ್ಕರ್‌ ಅನ್ನು ಆಯ್ಕೆ ಮಾಡಬಹುದು.

ಅಸಂಗತತೆಯ (anomaly) ಸ್ಕ್ಯಾನ್‌ ಅಥವಾ ಮಧ್ಯ-ತ್ತೈಮಾಸಿಕದ ಅಸಂಗತತೆಯ ಸ್ಕ್ಯಾನ್‌, ಪ್ರಸವಪೂರ್ವ ಆರೈಕೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಮತ್ತು ಗರ್ಭಧಾರಣೆಯ 18ನೇ ಮತ್ತು 22ನೇ ವಾರಗಳ ನಡುವೆ ಇದನ್ನು ನಿಗದಿಪಡಿಸಬೇಕು. ಭ್ರೂಣದ ದೈಹಿಕ ಬೆಳವಣಿಗೆಯನ್ನು ಮೇಲ್ವಿಚಾರಣೆ ಮಾಡಲು ಮತ್ತು ಯಾವುದೇ ಮುಖ್ಯವಾದ ಜನ್ಮಜಾತ ಅಸ್ವಸ್ಥತೆಗಳು ಅಥವಾ ಅಂಗರಚನೆಗೆ ಸಂಬಂಧಿಸಿದ ಗಮನಾರ್ಹ ಅಸಹಜತೆಗಳನ್ನು ಪತ್ತೆ ಹಚ್ಚಲು ಈ ಅಲ್ಟ್ರಾಸೌಂಡ್‌ ನಿರ್ಣಾಯಕವಾಗಿದೆ. ನಿರ್ದಿಷ್ಟ ಕ್ಲಿನಿಕಲ್‌ ಸನ್ನಿವೇಶಗಳಲ್ಲಿ, ಟ್ರಾನ್ಸ್‌ ವಜೈನಲ್‌ ಪ್ರೋಬ್‌, ಕಲರ್‌ ಡಾಪ್ಲರ್‌ ಮತ್ತು ಮೂರು-ಆಯಾಮದ (3ಡಿ) ಅಲ್ಟ್ರಾಸೌಂಡ್‌ ಉಪಯೋಗಿಸಬಹುದು. ವಿಶೇಷವಾಗಿ ಪ್ಲಾಸೆಂಟಾ ಪ್ರೀವಿಯಾ ಅಥವಾ ಭ್ರೂಣದ ಅಸಂಗತತೆಯ ಅನುಮಾನವಿರುವಾಗ, ಭ್ರೂಣದ ಎಕೋಕಾರ್ಡಿಯೋಗ್ರಫಿಯು ಎರಡನೇ ತ್ತೈಮಾಸಿಕದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಭ್ರೂಣದಲ್ಲಿ ಹೃದಯ ದೋಷಗಳನ್ನು ಪತ್ತೆಹಚ್ಚಲು ಆರೈಕೆಯ ಮಾರ್ಗಸೂಚಿಯಾಗಿದೆ.

ಬೆಳವಣಿಗೆ ಗಮನಿಸುವ ಸ್ಕ್ಯಾನ್‌ ಅನ್ನು ಸಾಮಾನ್ಯವಾಗಿ 28-32 ವಾರಗಳ ನಡುವೆ ನಡೆಸಲಾಗುತ್ತದೆ, ಇದು ಗರ್ಭಧಾರಣೆಯ ಮೂರನೇ ತ್ತೈಮಾಸಿಕವಾಗಿರುತ್ತದೆ. ಇದು ಭ್ರೂಣದ ತೂಕ, ಮಗುವಿನ ಸುತ್ತ ಇರುವ ನೀರು (amniotic fluid), ಭ್ರೂಣದ ಚಲನೆಗಳು, ಪ್ಲಾಸೆಂಟಾದ ಸ್ಥಾನ ಮತ್ತು ಭ್ರೂಣದ ಪ್ರಸ್ತುತಿ (fetal presentation)ಎಂಬುದನ್ನು ಮೇಲ್ವಿಚಾರಣೆ ಮಾಡಲು ಸಹಾಯ ಮಾಡುತ್ತದೆ.

ಇದು ಭ್ರೂಣದ ಬೆಳವಣಿಗೆಯನ್ನು ಅರ್ಥ ಮಾಡಿಕೊಳ್ಳಲು ಮತ್ತು ಇದು ಗರ್ಭಾವಸ್ಥೆಗೆ ಸೂಕ್ತವಾಗಿದೆಯೇ ಎಂಬುದನ್ನು ಕಂಡುಕೊಳ್ಳಲು ಸಹಾಯ ಮಾಡುತ್ತದೆ. ಪ್ಲಾಸೆಂಟಾವು ಗರ್ಭಕೊರಳನ್ನು ಆವರಿಸಿಕೊಂಡಿಲ್ಲ ಎಂದು ಖಚಿತಪಡಿಸಿಕೊಳ್ಳಲು ಪ್ಲಾಸೆಂಟಾದ ಮೌಲ್ಯಮಾಪನ ಮಾಡಲಾಗುತ್ತದೆ ಮತ್ತು ಆಮ್ನಿಯೋಟಿಕ್‌ ದ್ರವದ ಪ್ರಮಾಣವನ್ನು ಅಳೆಯಲಾಗುತ್ತದೆ.

ಭ್ರೂಣ ಮತ್ತು ಗರ್ಭಾಶಯದ ಹೊಂದಾಣಿಕೆಯ ಕೋನವನ್ನು Foetal lie ಎಂದು ಕರೆಯಲಾಗುತ್ತದೆ. ಆದರೆ ಭ್ರೂಣದ ಪ್ರಸ್ತುತಿ (Presentation) ಎಂಬುದು ಜನನ ಮಾರ್ಗದ ಹತ್ತಿರವಿರುವ ಭ್ರೂಣದ ಅಂಗರಚನಾ ಭಾಗವನ್ನು ಸೂಚಿಸುತ್ತದೆ. ಸೆಫಾಲಿಕ್‌ ಸ್ಥಾನವು ಅತ್ಯಂತ ಪ್ರಚಲಿತ ಸ್ಥಾನವಾಗಿರುತ್ತದೆ. ಇದರಲ್ಲಿ ಭ್ರೂಣದ ತಲೆಯು ಮೊದಲು ಹೊರಬರುವ ಭಾಗವಾಗಿರುತ್ತದೆ ಮತ್ತು ಇದು ಯೋನಿ ಮೂಲಕದ ಜನನಕ್ಕೆ ಸಂಬಂಧಿಸಿದಂತೆ ಉತ್ತಮ ಫ‌ಲಿತಾಂಶಗಳನ್ನು ಹೊಂದಿದೆ.

ಬ್ರೀಚ್‌, ಫ‌ೂಟ್ಲಿಂಗ್‌ ಅಥವಾ ನೀಲಿಂಗ್‌ (kneeling) ನಂತಹ ಅಸಮರ್ಪಕ ಪ್ರಸ್ತುತಿಗಳು ಹೆಚ್ಚಾಗಿ ಅಧಿಕ ಹೆರಿಗೆ ಸಮಸ್ಯೆಗಳಿಗೆ ಸಂಬಂಧಿಸಿದ್ದು ಇದರ ಪರಿಣಾಮವಾಗಿ, ಪ್ರಸವಪೂರ್ವ ತೊಡಕುಗಳು ಹೆಚ್ಚುತ್ತವೆ ಮತ್ತು ಶಸ್ತ್ರಚಿಕಿತ್ಸೆಗೂ ಒಳಗಾಗಬೇಕಾಗುತ್ತದೆ. ಅಲ್ಟ್ರಾಸೌಂಡ್‌ ಭ್ರೂಣದ ಪ್ರಸ್ತುತಿಗೆ (presentation) ಸಂಬಂಧಿಸಿದ ಸಂಪೂರ್ಣ ಮತ್ತು ಭಾಗಶಃ ವೈಪರೀತ್ಯಗಳನ್ನು ಪತ್ತೆ ಮಾಡಬಹುದು.

ಮೂರನೇ ತ್ತೈಮಾಸಿಕದಲ್ಲಿ, ಪರೀಕ್ಷೆಯ ಅತ್ಯಗತ್ಯ ಅಂಶವೆಂದರೆ ಆಮ್ನಿಯೋಟಿಕ್‌ ದ್ರವದ ಮೌಲ್ಯಮಾಪನ, ಆಮ್ನಿಯೋಟಿಕ್‌ ದ್ರವವು ಭ್ರೂಣದ ಬೆಳವಣಿಗೆಗೆ ಅವಶ್ಯಕವಾಗಿದೆ. ಇದು ಭ್ರೂಣ ಮತ್ತು ಹೊಕ್ಕುಳಬಳ್ಳಿಗೆ ದೈಹಿಕ ರಕ್ಷಣೆ ನೀಡುತ್ತದೆ. ಇದು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಕೂಡ ಹೊಂದಿದೆ. ಇದು ಸೋಂಕುಗಳನ್ನು ತಡೆಯಲು ಸಹಾಯ ಮಾಡುತ್ತದೆ. ದ್ರವವು ಗರ್ಭಾವಸ್ಥೆಯ ಪ್ರಗತಿಯನ್ನು ಮೇಲ್ವಿಚಾರಣೆ ಮಾಡಲು ಮತ್ತು ಭ್ರೂಣಸಂಬಂಧಿ ಫ‌ಲಿತಾಂಶಗಳನ್ನು ಊಹಿಸಲು ಸಹಾಯ ಮಾಡುತ್ತದೆ. ಇದು ಮೌಲ್ಯಯುತವಾದ ರೋಗನಿರ್ಣಯದ ಸಾಧನವಾಗಿದೆ.

ಗರ್ಭಾವಸ್ಥೆಯಲ್ಲಿ ಆಮ್ನಿಯೋಟಿಕ್‌ ದ್ರವದ ಮಟ್ಟವನ್ನು ಮೇಲ್ವಿಚಾರಣೆ ಮಾಡುವುದು ಭ್ರೂಣದ ಆರೋಗ್ಯಕರ ಬೆಳವಣಿಗೆಯನ್ನು ಖಚಿತಪಡಿಸಿಕೊಳ್ಳಲು ಅತೀ ಮುಖ್ಯವಾಗಿದೆ. ಸಾಮಾನ್ಯ ಮಟ್ಟದಿಂದ ಹೆಚ್ಚು ಅಥವಾ ಕಡಿಮೆ ಇರುವ ಅಳತೆಗಳು ಭ್ರೂಣದ ಫ‌ಲಿತಾಂಶಗಳು ಉತ್ತಮವಾಗಿಲ್ಲ ಎಂದು ಸೂಚಿಸಬಹುದು.

ಇದರಿಂದ ಈ ನಿಯತಾಂಕವನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುವುದು ಅತ್ಯಗತ್ಯವಾಗುತ್ತದೆ. ಪ್ಲಾಸೆಂಟಾದ ಕಾರ್ಯನ್ಯೂನತೆಯಿಂದಾಗಿ (uteroplacental insufficiency) ಭ್ರೂಣದ ಬೆಳವಣಿಗೆಗೆ ಅಡ್ಡಿಯಾದಲ್ಲಿ ಆಮ್ನಿಯೋಟಿಕ್‌ ದ್ರವ ಸೂಚ್ಯಂಕದಲ್ಲಿ (AFI) ಇಳಿಕೆ ಸಂಭವಿಸಬಹುದು. ಆಮ್ನಿಯೋಟಿಕ್‌ ದ್ರವದ ಪ್ರಮಾಣವನ್ನು ಅಂದಾಜು ಮಾಡಲು ವೈದ್ಯರು ಅಲ್ಟ್ರಾಸೌಂಡ್‌ ಮಾಪನಗಳನ್ನು ಬಳಸುತ್ತಾರೆ. ಇದಕ್ಕಾಗಿ AFI ಅಥವಾ ಸಿಂಗಲ್‌ ಡೀಪೆಸ್ಟ್‌ ಪಾಕೆಟ್‌ (SDP) ಅನ್ನು ರೋಗ ನಿರ್ಣಯದ ಸಾಧನಗಳಾಗಿ ಬಳಸಿಕೊಳ್ಳುತ್ತಾರೆ. ಈ ಅಳತೆಗಳು ಭ್ರೂಣದ ಟೋನ್‌, ಭ್ರೂಣದ ಉಸಿರಾಟ ಮತ್ತು ಒಂದು ಒತ್ತಡರಹಿತ ಪರೀಕ್ಷೆ ಸೇರಿದಂತೆ ಜೈವಿಕ ಭೌತಿಕ ಪ್ರೊಫೈಲ್‌ನ ಭಾಗವಾಗಿವೆ. (Biophysical profile).

ಇಂಟ್ರಾಪಾರ್ಟಮ್‌ ಅಲ್ಟ್ರಾಸೌಂಡ್‌ಗಳನ್ನು ಭ್ರೂಣದ ಪ್ರಸ್ತುತಿ, ಸ್ಥಾನ ಮತ್ತು ಪ್ರಸ್ತುತಪಡಿಸುವ ಭಾಗದ ತಿರುಗುವಿಕೆಯನ್ನು ಖಚಿತಪಡಿಸಲು ವಿಶೇಷವಾಗಿ ವೈದ್ಯಕೀಯ ಪರಿಕರಗಳನ್ನು ಬಳಸಿ ಮಾಡುವ ಯೋನಿ ಮೂಲಕದ ಹೆರಿಗೆಗೆ (instrumental vaginal delivery) ಮೊದಲು ಬಳಸಲಾಗುತ್ತದೆ. ಪ್ರಸವಾನಂತರದ ಸ್ಕ್ಯಾನ್‌ ಅನ್ನು ಪ್ಲಾಸೆಂಟಾ ಮತ್ತು ಪ್ರಸವದ ಬಳಿಕ ರಕ್ತಸ್ರಾವಕ್ಕೆ ಕಾರಣವಾಗುವ ಆಮ್ನಿಯೋಟಿಕ್‌ ಪೊರೆಗಳ ಅವಶೇಷಗಳು ಉಳಿದುಕೊಂಡಿವೇಯೇ ಎಂದು ನೋಡಲು ಸಲಹೆ ಮಾಡಲಾಗುತ್ತದೆ. ಆಗಾಗ್ಗೆ ಅಲ್ಟ್ರಾಸೌಂಡ್‌ ಗಳನ್ನು ಮಾಡುವುದರಿಂದ ಭ್ರೂಣಕ್ಕೆ ಹಾನಿಯಾಗಬಹುದು ಎಂಬ ಸಾಮಾನ್ಯ ತಪ್ಪು ಕಲ್ಪನೆ ಇದೆ; ಅಲ್ಟ್ರಾಸೌಂಡ್‌ ನಮ್ಮ ಬಳಕೆಗೆ ಲಭ್ಯವಿರುವ ಅತ್ಯಂತ ಸುರಕ್ಷಿತ ಮತ್ತು ನಿಖರವಾದ ಸಾಧನವಾಗಿದೆ ಮತ್ತು ಇದರ ಬಳಕೆಯು ತಾಯಿಗೆ ಅಥವಾ ಬೆಳೆಯುತ್ತಿರುವ ಭ್ರೂಣಕ್ಕೆ ಯಾವುದೇ ಬೆದರಿಕೆಯನ್ನು ತಂದೊಡ್ಡುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಕಠಿನ ಸುರಕ್ಷತಾ ಪ್ರೋಟೋಕಾಲ್‌ಗ‌ಳಿಗೆ ಒಳಪಟ್ಟಿರುತ್ತದೆ.

ಆಗಾಗ್ಗೆ ಮಾಡುವ ಅಲ್ಟ್ರಾಸೌಂಡ್‌ ಮೂಲಕ ಮೇಲ್ವಿಚಾರಣೆ ಅಂಗರಚನೆಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರ ನೀಡುತ್ತದೆ ಮತ್ತು ಅಗತ್ಯವಿದ್ದಾಗ ಸಕಾಲಿಕ ಮಧ್ಯಸ್ಥಿಕೆ ವಹಿಸಲು ಮತ್ತು ಆರೈಕೆ ಒದಗಿಸಲು ವೈದ್ಯಕೀಯ ವೃತ್ತಿಪರರಿಗೆ ಅವಕಾಶ ನೀಡುತ್ತದೆ. ಅದೇನೇ ಇದ್ದರೂ ಅಲ್ಟ್ರಾಸೌಂಡ್‌ ಮಿತಿಗಳನ್ನು ಹೊಂದಿದೆ ಮತ್ತು ಸಣ್ಣ ಅಥವಾ ಅಪರೂಪದ ವೈಪರೀತ್ಯಗಳನ್ನು ಕಂಡುಹಿಡಿಯಲಾಗುವುದಿಲ್ಲ ಎಂದು ಗಮನಿಸುವುದು ಮುಖ್ಯವಾಗಿದೆ.

ತಾಂತ್ರಿಕ ಪ್ರಗತಿಯು ಪತ್ತೆಹಚ್ಚುವಿಕೆಯ ಪ್ರಮಾಣವನ್ನು ಶೇ. 85-95ಕ್ಕೆ ಹೆಚ್ಚಿಸಿದರೂ, ಭ್ರೂಣದ ನಿರ್ದಿಷ್ಟ ಅಸಹಜತೆಗಳು ಅಥವಾ ದೋಷಗಳು ವಾಡಿಕೆಯ ಸ್ಕ್ಯಾನ್‌ ಗಳ ಸಮಯದಲ್ಲಿ ಪತ್ತೆಯಾಗದೆ ತಪ್ಪಿಸಿಕೊಳ್ಳಬಹುದು. ಗರ್ಭಾವಸ್ಥೆಯ ಅವಧಿಯಲ್ಲಿ ಬದಲಾವಣೆಗೊಳಗಾಗುವ ಅಸಂಗತತೆಗಳು ಕೊನೆಯವರೆಗೂ ಗೋಚರವಾಗದಿರಬಹುದು. ಯಾವಾಗಲೂ ನಿಮ್ಮ ಆರೈಕೆ ಯೋಜನೆಯು ನಿಮ್ಮ ಅಗತ್ಯಗಳಿಗೆ ಅನುಗುಣವಾಗಿದೆ ಮತ್ತು ಆರೋಗ್ಯ ಸ್ಥಿತಿಗೆ ಉತ್ತಮವಾಗಿದೆ ಎಂದು ಖಚಿತಪಡಿಸಿಕೊಳ್ಳಲು ನಿಮಗೆ ಸಲಹೆ ನೀಡುವ ವೈದ್ಯರೊಂದಿಗೆ ನಿಕಟ ಸಂಪರ್ಕದಲ್ಲಿರಿ.

ಹೆಚ್ಚುವರಿಯಾಗಿ, ಗರ್ಭ ಧರಿಸಲು ಯೋಜಿಸುವಾಗ, ಮಹಿಳೆಯರು ಸಂಪೂರ್ಣ ಅಲ್ಟ್ರಾಸೌಂಡ್‌ಗೆ ಒಳಗಾಗಬೇಕು ಮತ್ತು ಆರೋಗ್ಯಕರ ಗರ್ಭಧಾರಣೆಯನ್ನು ಖಚಿತಪಡಿಸಿಕೊಳ್ಳಲು ಪ್ರಸೂತಿ ತಜ್ಞರ ಮೇಲ್ವಿಚಾರಣೆಯಲ್ಲಿ ಪ್ರಸವಪೂರ್ವ ಔಷಧಗಳನ್ನು ತೆಗೆದುಕೊಳ್ಳಬೇಕು.

ಕುಟುಂಬವನ್ನು ಪ್ರಾರಂಭಿಸುವ ಬಗ್ಗೆ ಯೋಚಿಸುವಾಗ, ನಿಮ್ಮ ವೈದ್ಯರೊಂದಿಗೆ ಗರ್ಭಧಾರಣೆಗೆ ಮೊದಲು ಸಮಾಲೋಚನೆ ನಡೆಸುವುದು ಮುಖ್ಯ. ವೈದ್ಯಕೀಯ ಅಥವಾ ಆನುವಂಶಿಕ ಸಮಸ್ಯೆಗಳಂತಹ ಯಾವುದೇ ಸಂಭಾವ್ಯ ಅಪಾಯಗಳನ್ನು ನಿರ್ಣಯಿಸಲು ಮತ್ತು ನಿಮ್ಮ ಆಲ್ಕೋಹಾಲ್‌ ಮತ್ತು ಡ್ರಗ್‌ ಬಳಕೆಯ ಇತಿಹಾಸವನ್ನು ಪರಿಶೀಲಿಸಲು ಇದು ಒಂದು ಅವಕಾಶವಾಗಿದೆ.

ವ್ಯಾಕ್ಸಿನೇಷನ್‌ ಮತ್ತು ಪ್ರಸವಪೂರ್ವ ಆರೈಕೆಯ ಪ್ರಾಮುಖ್ಯವನ್ನು ಚರ್ಚಿಸುವುದು ಕೂಡ ಮುಖ್ಯವಾಗಿದೆ. ನೀವು ಜೀವನಶೈಲಿ ಆರೋಗ್ಯ ಸಮಸ್ಯೆಗಳನ್ನು ಹೊಂದಿದ್ದರೆ, ಔಷಧ ನಿರ್ವಹಣೆ ಮತ್ತು ಯಾವುದೇ ಅಗತ್ಯ ಬದಲಾವಣೆಗಳನ್ನು ಮಾಡುವ ಬಗ್ಗೆ ನಿಮ್ಮ ಔಷಧ ಪೂರೈಕೆದಾರರೊಂದಿಗೆ ಮಾತನಾಡುವುದು ಮುಖ್ಯವಾಗಿದೆ.

ಯಾವುದೇ ಸಂಭಾವ್ಯ ಅಪಾಯಗಳನ್ನು ಆರಂಭಿಕ ಹಂತದಲ್ಲಿ ಪರಿಹರಿಸುವ ಮೂಲಕ, ಗರ್ಭಾವಸ್ಥೆಯಲ್ಲಿ ತೊಡಕುಗಳ ಸಾಧ್ಯತೆಗಳನ್ನು ಕಡಿಮೆ ಮಾಡಲು ಮತ್ತು ತಾಯಿ ಹಾಗೂ ಮಗುವಿನ ಆರೋಗ್ಯಕ್ಕೆ ಸಂಬಂಧಿಸಿದಂತೆ ಅತ್ಯುತ್ತಮ ಫ‌ಲಿತಾಂಶಗಳನ್ನು ಖಚಿತಪಡಿಸಿಕೊಳ್ಳಲು ನಾವು ಕೆಲಸ ಮಾಡಬಹುದು. ನೀವು ಭವಿಷ್ಯದಲ್ಲಿ ಗರ್ಭಿಣಿಯಾಗಲು ಯೋಜಿಸುತ್ತಿದ್ದರೆ, ಯಾವುದೇ ಗುರುತಿಸಲಾದ ಅಪಾಯಗಳನ್ನು ಪರಿಹರಿಸಲು ಮತ್ತು ಗರ್ಭಧಾರಣೆಯ ಯೋಜನೆಯ ಬಗ್ಗೆ ಚರ್ಚಿಸಲು ಪ್ರಾಥಮಿಕ ಆರೈಕೆ ಕೇಂದ್ರವನ್ನು ಸಂಪರ್ಕಿಸುವುದು ಅಗತ್ಯ.

ಒಟ್ಟಾರೆಯಾಗಿ, ಅಲ್ಟ್ರಾಸೌಂಡ್‌ ಇಮೇಜಿಂಗ್‌ ಸುರಕ್ಷಿತ, ನಾನ್‌ -ಇನ್ವೇಸಿವ್‌ ಮತ್ತು ಅಮೂಲ್ಯ ಟೂಲ್‌ ಆಗಿದ್ದು, ರೋಗನಿರ್ಣಯ ಮತ್ತು ರೋಗಿಗಳ ಆರೈಕೆಗಾಗಿ ವೈದ್ಯರಿಗೆ ಅಗತ್ಯ ಮಾಹಿತಿಯನ್ನು ಒದಗಿಸುತ್ತದೆ. ವೈದ್ಯಕೀಯ ಸ್ಪೆಷಾಲಿಟಿಗಳಲ್ಲಿ ಇದರ ವ್ಯಾಪಕ ಬಳಕೆಯು ಆಧುನಿಕ ಔಷಧದಲ್ಲಿ ಅದರ ಪ್ರಾಮುಖ್ಯವನ್ನು ಎತ್ತಿ ತೋರಿಸುತ್ತದೆ ಮತ್ತು ಮುಂಬರುವ ವರ್ಷಗಳಲ್ಲಿ ಇದು ಪ್ರಮುಖ ಇಮೇಜಿಂಗ್‌ ವಿಧಾನವಾಗಿ ಮುಂದುವರಿಯುವ ಸಾಧ್ಯತೆಯಿದೆ.

ಜನ್ಮಜಾತ ಭ್ರೂಣದ ಅಸಹಜತೆಗಳು ಮತ್ತು ತಾಯಿಯ ವಯಸ್ಸಿನ ನಡುವೆ ಸಂಬಂಧವಿದೆ. 40ರ ಹರೆಯದ ಮಹಿಳೆಯರು ತಮ್ಮ 20ರ ಹರೆಯದ ಮಹಿಳೆಯರಿಗಿಂತ ಒಂಬತ್ತು ಪಟ್ಟು ಹೆಚ್ಚು ಕ್ರೊಮೋಸೋಮ್‌ ಸಂಬಂಧಿತ ಅಸಹಜತೆಗಳನ್ನು ಹೊಂದಿರುತ್ತಾರೆ. ಆದಾಗ್ಯೂ, ಆರೋಗ್ಯಕರ ಗರ್ಭಧಾರಣೆಗೆ ತಾಯಿಯ ಪೋಷಣೆ ಮತ್ತು ಆರೋಗ್ಯ ಸ್ಥಿತಿಯಂತಹ ಇತರ ಅಂಶಗಳು ಅಗತ್ಯವಿವೆ. ಅಲ್ಟ್ರಾಸೌಂಡ್‌ ಮಾಡುವಾಗ ಹಲವಾರು ಪ್ರಯೋಜನಗಳಿದ್ದರೂ ಈ ತಂತ್ರಗಳಲ್ಲಿನ ಮಿತಿಗಳನ್ನು ಕೂಡ ನಾವು ತಿಳಿದಿರಬೇಕು. ಎನ್‌ಟಿ ಸ್ಕ್ಯಾನ್‌ ಸಮಯದಲ್ಲಿ ಶೇ.5ರಷ್ಟು ತಪ್ಪು ಧನಾತ್ಮಕ (false positive) ಇದ್ದರೆ, ಟ್ರೈಸೋಮಿ 21 ಪತ್ತೆ ದರವು ಸರಿಸುಮಾರು ಶೇ. 80-85 ಭ್ರೂಣಗಳು 20 ವಾರಗಳಲ್ಲಿನ ಅಸಹಜತೆಯ ಅವಧಿಯಲ್ಲಿ, ಭ್ರೂಣದ ಸುಮಾರು ಶೇ. 60 ಜನ್ಮಜಾತ ಅಸಹಜತೆಗಳನ್ನು ಗುರುತಿಸಬಹುದು. ತೀವ್ರವಾದ ರಚನಾತ್ಮಕ ಅಥವಾ ಮಾರಣಾಂತಿಕ ಅಸಹಜತೆಯ ಸಂದರ್ಭದಲ್ಲಿ, ಗರ್ಭಧಾರಣೆಯನ್ನು ಕೊನೆಗೊಳಿಸಲು ಸೂಚಿಸಬಹುದು.

ಮಧ್ಯ-ತ್ತೈಮಾಸಿಕ ಅಸಂಗತತೆ ಸ್ಕ್ಯಾನ್‌ ಪ್ರಸವಪೂರ್ವ ಚಿಕಿತ್ಸೆಯಲ್ಲಿ ಸಂಭಾವ್ಯ ವೈಕಲ್ಯಗಳನ್ನು ಮುಂಚಿತವಾಗಿ ಪತ್ತೆಹಚ್ಚುವ ಪ್ರಮುಖ ತಂತ್ರವಾಗಿದೆ. ಅತ್ಯಂತ ಪರಿಣಾಮಕಾರಿ ಫ‌ಲಿತಾಂಶಗಳನ್ನು ಸಾಧಿಸಲು ವೃತ್ತಿಪರ ತಂಡದ ಸದಸ್ಯರ ನಡುವೆ ಹೊಂದಾಣಿಕೆ ಇರುವುದು ಮುಖ್ಯ. ಪ್ರತೀ ತ್ತೈಮಾಸಿಕದಲ್ಲಿ ಸ್ಕ್ಯಾನ್‌ಗಳ ಪ್ರಾಮುಖ್ಯದ ಬಗ್ಗೆ ಈ ಲೇಖನವು ನಿಮಗೆ ಉತ್ತಮ ತಿಳುವಳಿಕೆಯನ್ನು ನೀಡಿದೆ ಎಂದು ನಾವು ಭಾವಿಸುತ್ತೇವೆ. ನೀವು ಯಾವುದೇ ಪ್ರಶ್ನೆಗಳನ್ನು ಅಥವಾ ಕಾಳಜಿಗಳನ್ನು ಹೊಂದಿದ್ದರೆ, ದಯವಿಟ್ಟು ನಮ್ಮ ಆಸ್ಪತ್ರೆ ಮತ್ತು ವೈದ್ಯರನ್ನು ಸಂಪರ್ಕಿಸಲು ಹಿಂಜರಿಯಬೇಡಿ.

-ಪಾವನಾ ಎಂ.,

ರಿಸರ್ಚ್‌ ಸ್ಕಾಲರ್‌,

-ಡಾ| ಶಶಿಕಲಾ

ಎಚ್‌ಒಡಿ, ಹೆರಿಗೆ ಮತ್ತು ಸ್ತ್ರೀರೋಗ ವಿಭಾಗ,

ಡಾ| ಟಿ.ಎಂ.ಎ. ಪೈ ಆಸ್ಪತ್ರೆ, ಉಡುಪಿ ಮಾಹೆ, ಮಣಿಪಾಲ

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಹೆರಿಗೆ ಮತ್ತು ಸ್ತ್ರೀರೋಗ ವಿಭಾಗ, ಕೆಎಂಸಿ ಆಸ್ಪತ್ರೆ, ಮಂಗಳೂರು)

 

ಟಾಪ್ ನ್ಯೂಸ್

1-qeweqweqwe

IPL; ಹೈದರಾಬಾದ್ ಎದುರು ಚೆನ್ನೈ ಗೆ 78 ರನ್‌ಗಳ ಅಮೋಘ ಜಯ

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Bangarapet ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-Fibromyalgia

Fibromyalgia: ಫೈಬ್ರೊಮಯಾಲ್ಜಿಯಾ ಜತೆಗೆ ಜೀವನ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qeweqweqwe

IPL; ಹೈದರಾಬಾದ್ ಎದುರು ಚೆನ್ನೈ ಗೆ 78 ರನ್‌ಗಳ ಅಮೋಘ ಜಯ

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.