ಚಿಗುರು ಟೂರಿಸಂನ “ಮ್ಯಾಂಗೋ’ವರ್‌


Team Udayavani, Apr 8, 2017, 5:08 PM IST

655555.jpg

ಅಂಗಡಿಯಲ್ಲಿ, ಗಾಡಿಯಲ್ಲಿ, ಮಾಲ್‌ನಲ್ಲಿ, ಮಾರ್ಕೆಟಿನಲ್ಲಿ… ಎಲ್ಲಿ ನೋಡಿದ್ರೂ ಮಾವು ಮಾವು ಮಾವು! ಇಡೀ ರಾಜಧಾನಿ ಈಗ ಮ್ಯಾಂಗೋವರ್‌ನಲ್ಲಿದೆ. ಬಾದಾಮ್‌, ರಸಪುರಿ ಎನ್ನುತ್ತಾ ವೈವಿಧ್ಯ ಮಾವನ್ನು ಸವಿಯಲು ರಾಜಧಾನಿ ಮಂದಿ ಹಾತೊರೆಯುತ್ತಲೇ ಇದ್ದಾರೆ. ಆದರೆ, ಹೀಗೆ ಹಂಬಲಿಸುತ್ತಿರುವ ಎಲ್ಲರಿಗೂ ಒಂದೇ ಗೊಂದಲ. ಇದರಲ್ಲಿ ಆರ್ಗಾನಿಕ್‌ ಯಾವುದು? ಕೆಮಿಕಲ್‌ ಸಿಂಪಡಿಸಿದ ಮಾವು ಯಾವುದು?

ಇದನ್ನು ತಿಳಿದುಕೊಳ್ಳಲು, ಆರ್ಗಾನಿಕ್‌ ಮಾವನ್ನೇ ಪಡೆಯಲು ನೀವು “ಮ್ಯಾಂಗೋ ಟ್ರಿಪ್‌’ ಹೊಡೆಯಲೇಬೇಕು. ಅಲ್ಲಿ ನಿಮಗೆ ಕೆಮಿಕಲ್‌ಯುಕ್ತ ಮಾವಿನ ಹಣ್ಣು ಕಣ್ಣಿಗೇ ಬೀಳುವುದಿಲ್ಲ. ರಾಸಾಯನಿಕ ಸಿಂಪಡಿಸಿದ ಹಣ್ಣಾಗಿದ್ದರೆ ಒಂದು ಕಡೆ ಹಸಿರು, ಅಲ್ಲಲ್ಲಿ ಕೆಂಪು- ಹಳದಿ ಬಣ್ಣ ಇರುತ್ತದೆ. ಆದರೆ, ಅಂಥ ಹಣ್ಣುಗಳನ್ನು ಇಲ್ಲಿ ಕಾಣಲು ಸಾಧ್ಯವೇ ಇಲ್ಲ. ಬೆಂಗಳೂರಿನ ಹೊರವಲಯದಲ್ಲಿರುವ ಚಿಗುರು ಫಾರ್ಮ್ ಪ್ರತಿವರ್ಷದ ಏಪ್ರಿಲ್‌- ಮೇನಲ್ಲಿ “ಮ್ಯಾಂಗೋ ಟೂರಿಸಂ’ ಆಯೋಜಿಸುತ್ತದೆ. ಒಂದು ತಾಸಿನಲ್ಲಿ ನೀವು ತಾಜಾ ಮಾವಿನ ಹಣ್ಣುಗಳನ್ನು ಕಿತ್ತುಕೊಂಡು, ಮನೆಗೆ ವಾಪಸಾಗಬಹುದು!

ಏನಿದು ಮ್ಯಾಂಗೋ ಟೂರಿಸಂ?

ಚಿಗುರು ಫಾರ್ಮ್ನ ಮಾವಿನ ತೋಟಕ್ಕೆ ಹೋಗಲು ಇರುವ ಅವಕಾಶವಿದು. ಅಲ್ಲಿಗೆ ನೀವು ನಿಮ್ಮ ಕುಟುಂಬದೊಟ್ಟಿಗೆ ಪ್ರವೇಶ ನೀಡಬಹುದು. ನಿಮ್ಮೊಂದಿಗೆ ಒಬ್ಬ ಗೈಡ್‌ ಅನ್ನೂ ನೀಡಲಾಗುತ್ತದೆ. ನಿಮಗಿಷ್ಟ ಬಂದ ಯಾವ ಮಾವಿನ ಹಣ್ಣನ್ನಾದರೂ ಕಿತ್ತುಕೊಳ್ಳುವ ಸ್ವಾತಂತ್ರÂ ನಿಮಗಿರುತ್ತೆ. ಹಾಗೆ ಕಿತ್ತ ಹಣ್ಣುಗಳನ್ನು ಬುಟ್ಟಿಗೆ ಹಾಕಿಕೊಂಡು, ಚೆನ್ನಾಗಿ ತೊಳೆದು, ಮನೆಗೆ ತರಬಹುದು. ಒಟ್ಟು ಹಣ್ಣನ್ನು ತೂಕ ಮಾಡಿ, ನಿರ್ದಿಷ್ಟ ಶುಲ್ಕವನ್ನು ಚಿಗುರು ಫಾರ್ಮ್ನವರಿಗೆ ನೀಡಬೇಕಾಗುತ್ತೆ.

ಮಾವೊಂದೇ ಅಲ್ಲ!

ಈ ಮ್ಯಾಂಗೋ ಟೂರಿಸಂನಲ್ಲಿ ಬೇರೆ ಹಣ್ಣಿನ ಗೊಂಚಲಿಗೂ ನೀವು ಕೈಹಾಕಬಹುದು. ತೋಟದಲ್ಲಿನ ಚಿಕ್ಕು, ಚೆರ್ರಿ, ರೋಸ್‌ ಆ್ಯಪಲ್‌, ಕಿತ್ತಳೆ ಹಣ್ಣುಗಳೂ ಇಷ್ಟವಾದರೆ ಅವನ್ನೂ ಕಿತ್ತುಕೊಳ್ಳಬಹುದು. ಇದಕ್ಕೂ ಅಗತ್ಯ ಶುಲ್ಕ ಪಾವತಿಸಬೇಕಾಗುತ್ತೆ.

ಎಲ್ಲವೂ ಆರ್ಗಾನಿಕ್‌

ಇಲ್ಲಿ ಬೆಳೆದ ಹಣ್ಣುಗಳಿಗೆ ಕೆಮಿಕಲ್‌ ಸಿಂಪಡಿಸುವುದಿಲ್ಲ. ರಾಸಾಯನಿಕ ಹಾಕಿಯೂ ಹಣ್ಣಿನ ಗಿಡಗಳನ್ನು ಬೆಳೆಸುವುದಿಲ್ಲ. ಸಂಪೂರ್ಣ ಸಾವಯವ ಮಾದರಿಯಲ್ಲಿ ಹಣ್ಣಿನ ಮರಗಳನ್ನು ಬೆಳೆಸಲಾಗಿದೆ. ಹೀಗಾಗಿ, ಹಣ್ಣು ತಿಂದರೆ ಕೆಮಿಕಲ್ಸ್‌ನಿಂದ ಆರೋಗ್ಯಕ್ಕೆ ಸೈಡ್‌ಎಫೆಕ್ಟ್ ಆಗುತ್ತೆಂಬ ಆತಂಕವನ್ನು ಬದಿಗಿಟ್ಟು ನೀವಿಲ್ಲಿಗೆ ಭೇಟಿ ನೀಡಬಹುದು. 

ನೀವು ಶೂ ಧರಿಸಿದ್ದರೆ, ತೋಟದಲ್ಲಿ ಓಡಾಡುವಾಗ ಪಾದರಕ್ಷೆ ಮಣ್ಣಾಗುತ್ತೆಂಬ ದಿಗಿಲೂ ಬೇಡ. ತೋಟದೊಳಗೆ ಅಷ್ಟು ಚೆನ್ನಾಗಿ ರಸ್ತೆಗಳನ್ನು ನಿರ್ಮಿಸಲಾಗಿದೆ. ಒಳ್ಳೆಯ ಗಾಳಿ ನಿಮ್ಮ ದೇಹ ಮತ್ತು ಮನಸ್ಸಿಗೆ ಉಲ್ಲಾಸವನ್ನು ತಂದುಕೊಡುತ್ತೆ. 

ಚಿಗುರು ಫಾರ್ಮ್ ಎಲ್ಲಿದೆ?
ನೈಸ್‌ ರಸ್ತೆ, ಕನಕಪುರ ರೋಡ್‌ ಜಂಕ್ಷನ್‌ನಿಂದ ಕೇವಲ 45 ಕಿ.ಮೀ. ದೂರದಲ್ಲಿದೆ. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಿಂದ ದಕ್ಷಿಣಕ್ಕೆ ಹೋದರೆ ಬಿಳಿಕಲ್‌ ಫಾರೆಸ್ಟ್‌ ಬಳಿ ಚಿಗುರು ಫಾರ್ಮ್ ಸಿಗುತ್ತದೆ. 2015ರಿಂದ ಇಲ್ಲಿ ಆರ್ಗಾನಿಕ್‌ ಫಾರ್ಮ್ ನಿರ್ಮಾಣಗೊಂಡಿದೆ.

ಎಷ್ಟು ತಾಸು?
1 ಗಂಟೆಯಲ್ಲಿ ಇಡೀ ತೋಟ ಸುತ್ತಾಟ

ಏಕೆ ಹೋಗಿ ಅಂದ್ರೆ…
– ಸಾವಯವ ಮಾವಿನ ಹಣ್ಣಿಗಾಗಿ
– ಬೇಸಿಗೆಯಲ್ಲಿ ತೋಟದ ತಂಪಿನಲ್ಲಿ ಕಳೆಯಲು
– ಮಾಲ್‌ ಸುತ್ತುವ ಫ್ಯಾಮಿಲಿಗೆ ತೋಟ ಸುತ್ತಿದ ಅನುಭವ
– ಫ್ರೆಶ್‌ ಗಾಳಿ, ಒಂದು ಜಾಲಿ ಟ್ರಿಪ್‌ಗಾಗಿ.

ಸಂಪರ್ಕ: ಮೊ. 9845258575
ವೆಬ್‌ಸೈಟ್‌:  www.chigurufarm.com

ಟಾಪ್ ನ್ಯೂಸ್

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

1-tatoo

Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!

1-wewqewq

Mumbai; 2005ರ ಭೀಕರ ಪ್ರವಾಹ ನೆನಪಿಸಿದ ಮಳೆ!:19 ವರ್ಷ ಹಿಂದಿನ ಸ್ಥಿತಿ ಮರುಕಳಿಸಲಿದೆಯೇ?

rahul-Gandhi-Car

Defamation case; ಪ್ರಚಾರಕ್ಕಾಗಿ ನನ್ನ ವಿರುದ್ಧ ಮಾನಹಾನಿ ಕೇಸ್‌: ರಾಹುಲ್‌ ಆರೋಪ

1-dubey

Increase of Muslims; ಝಾರ್ಖಂಡ್‌,ಪಶ್ಚಿಮ ಬಂಗಾಲ ಕೇಂದ್ರಾಡಳಿತ ಪ್ರದೇಶವಾಗಿಸಿ: ದುಬೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

Kohli IPL 2024

Champions Trophy; ಕೊಹ್ಲಿ ಪಾಕ್‌ನಲ್ಲಿ ಆಡಲಿ: ಯೂನಿಸ್‌ ಖಾನ್‌

1-tatoo

Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.