ಮ್ಯಾಂಗೊ ಮಸ್ತಿ:ರಜಾ ಮಜಾ ತಾಜಾ

ಮಾಲ್‌ನಲ್ಲಿ ಮಾವಿನ ಹಬ್ಬ

Team Udayavani, May 18, 2019, 9:18 AM IST

16

ಮಾವು ಎಂದರೆ ಬಾಯಿ ನೀರೂರುವುದು ಮಾತ್ರವಲ್ಲ ಮನಸ್ಸು ಸಂತಸದಿ ಕುಣಿದಾಡುತ್ತದೆ. ಮನದಿ ಹಬ್ಬದ ವಾತಾವರಣ ಕಳೆಗಟ್ಟುತ್ತದೆ. ಈಗಂತೂ ಎಲ್ಲೆಲ್ಲೂ ಹಣ್ಣಿನ ರಾಜನದ್ದೇ ಕಾರುಬಾರು. ಮಾವಿನ ಹಣ್ಣಿನ ಹೆಸರು ಕೇಳಿಯೇ ಪುಳಕಿತಗೊಳ್ಳುವವರು, ಈ ಸುದ್ದಿ ತಿಳಿದೇ ನಿಮ್ಮ ಬಾಯಲ್ಲಿ ನೀರೂರುವುದು ಖಂಡಿತ. ಮಾವಿನ ಸಂಭ್ರಮವನ್ನು ಹೆಚ್ಚಿಸುವ ಹಬ್ಬವೊಂದು ನಗರದಲ್ಲಿ ನಡೆಯುತ್ತಿದೆ. ಇಲ್ಲಿಗೆ ಕಾಲಿಟ್ಟರೆ ಥರಹೇವಾರಿ ಮಾವಿನಹಣ್ಣುಗಳ ರುಚಿ ನೋಡಬಹುದಲ್ಲದೆ ಇತರೆ ಚಟುವಟಿಕೆಗಳಲ್ಲೂ ಭಾಗವಹಿಸಬಹುದು.

ತಾಜಾ ಮಾಲ್‌
ಈ ಮ್ಯಾಂಗೋ ಹಬ್ಬದಲ್ಲಿ ಫೆಸ್ಟ್‌. ಸಿಂಧೂರ, ಕೇಸರ್‌, ರಸಪುರಿ, ಬಾಗೇಪಲ್ಲಿ, ಮಲ್ಲಿಕಾ, ತೋತಾಪುರಿ, ಆಮ್ರಪಲ್ಲಿ ಹೀಗೆ ಬಹುತೇಕ ಎಲ್ಲ ತಳಿಯ ತಾಜಾ ಮಾವಿನಹಣ್ಣುಗಳು ಇಲ್ಲಿ ಲಭ್ಯವಿದ್ದು, ಬೆಲೆ ಕೆ.ಜಿ.ಗೆ 30 ರೂ. ಇಂದ ಪ್ರಾರಂಭವಾಗಲಿದೆ. ಅಷ್ಟೇ ಅಲ್ಲದೆ, ತಾಜಾ ಮಾವಿನ ಹಣ್ಣಿನ ರಸ, ಉಪ್ಪಿನಕಾಯಿ ಮುಂತಾದ ಮಾವಿನ ಖಾದ್ಯಗಳನ್ನೂ ಸವಿಯಬಹುದು. ಇವೆಲ್ಲವಕ್ಕೂ ರಿಯಾಯಿತಿ ದರವನ್ನು ನಿಗದಿ ಪಡಿಸಲಾಗಿದೆ.

ಮಕ್ಕಳಿಗೆ ಮಸ್ತಿ
ಮಾವು ಪ್ರಿಯರಿಗೆ ಮಾವು. ತಿಂಡಿಪೋತರಿಗೆ, ಸವಿಯಲು ಮಾವಿನಹಣ್ಣಿನಿಂದ ತಯಾರಾದ ಖಾದ್ಯಗಳು. ಒಟ್ಟಿನಲ್ಲಿ ಕುಟುಂಬ ಸಮೇತ ಹೋದವರಿಗೆ ಔಟಿಂಗ್‌ನ ಅನುಭವ ಸಿಕ್ಕರೆ ಅಚ್ಚರಿಯೇನಿಲ್ಲ. ಬರೀ ದೊಡ್ಡವರು ಮಾವಿನ ಶಾಪಿಂಗ್‌ನಲ್ಲಿ ಖುಷಿಪಡುತ್ತಿರುವಾಗ ಮಕ್ಕಳೇನು ಮಾಡುವುದು ಎಂಬ ಚಿಂತೆಗೆ ಇಲ್ಲಿ ಕಾರಣವಿಲ್ಲ. ಎಕೆಂದರೆ ಮಕ್ಕಳಿಗಾಗಿಯೇ ಕೆಲ ಚಟುವಟಿಕೆಗಳನ್ನು ಆಯೋಜಿಸಲಾಗಿದೆ. ಅದರಲ್ಲಿ ಪಾಲ್ಗೊಂಡು ಇಲ್ಲಿ ಮೋಜು- ಮಸ್ತಿ ಮಾಡಲು ಅವಕಾಶವಿದೆ. 6-12 ವಯಸ್ಸಿನ ಮಕ್ಕಳಿಗಾಗಿ ಆರ್ಟ್ಸ್ ಅಂಡ್‌ ಕ್ರಾಫ್ಟ್$Õ ವರ್ಕ್‌ಶಾಪ್‌ ಅನ್ನು ಆಯೋಜಿಸಲಾಗಿದ್ದು, ವಿವಿಧ ಚಟುವಟಿಕೆಗಳನ್ನು ಅಲ್ಲಿ ಅವರಿಗೆ ಕಲಿಸಲಾಗುತ್ತದೆ. ಪ್ರತಿದಿನ ಸಂಜೆ 4-8ರವರೆಗೆ ಮಕ್ಕಳಿಗೆ ಕಾರ್ಯಾಗಾರಗಳು ನಡೆಯುತ್ತದೆ.

ಏನೇನು ಚಟುವಟಿಕೆಗಳಿವೆ?
ಮಕ್ಕಳಿಗೆ ಪೇಪರ್‌ ಫ್ರಾಕ್‌, ಒರಿಗಾಮಿ ಕ್ರಾಫ್ಟ್, ಪೇಪರ್‌ ಲ್ಯಾಂಪ್‌, ಐಸ್‌ಕ್ರೀಮ್‌ ಸ್ಟಿಕ್‌ ಕ್ರಾಫ್ಟ್, ಕ್ವಿಲ್ಲಿಂಗ್‌, ಪೇಪರ್‌ ಬ್ಯಾಗ್‌ ತಯಾರಿ, ಮಂಡಲ ಆರ್ಟ್‌, ಚಿತ್ರಕಲೆ, ಪ್ಲಾಸ್ಟಿಕ್‌ ಮ್ಯಾಟ್‌ ತಯಾರಿ ಮುಂತಾದ ಚಟುವಟಿಕೆಗಳನ್ನು ಹೇಳಿ ಕೊಡಲಾಗುತ್ತದೆ.

ಎಲ್ಲಿ?: ಎಲಿಮೆಂಟ್ಸ್‌ ಮಾಲ್‌, 3ನೇ ಮಹಡಿ, ತನ್ನಿಸಂದ್ರ ಮುಖ್ಯರಸ್ತೆ, ನಾಗವಾರ
ಯಾವಾಗ?: ಮೇ 20, ಬೆಳಗ್ಗೆ 11- ರಾತ್ರಿ 8
ಮಕ್ಕಳ ವರ್ಕ್‌ಶಾಪ್‌ : ಸಂಜೆ 4- ರಾತ್ರಿ 8
ಪ್ರವೇಶ: 250 ರೂ.

ಲಾಲ್‌ಬಾಗ್‌ ಮಾವು ಮೇಳ
ಹೂವಿನೊಡನೆ ಹಣ್ಣು

ಅಂಗಡಿ ಮಳಿಗೆಗಳಲ್ಲಿ ಮಾವು ಕೊಳ್ಳುವ ಮಜ ಒಂದು ರೀತಿಯದ್ದಾದರೆ, ಸಾವಿರಾರು ಒಟ್ಟು ಸೇರುವ ಮೇಳಗಳಲ್ಲಿ ಮಾವು ಕೊಳ್ಳುವುದು ಬೇರೆಯದೇ ರೀತಿಯ ಖುಷಿಯನ್ನು ಕೊಡುತ್ತದೆ. ಲಾಲ್‌ಬಾಗ್‌ ಮಾವು ಮೇಳ ತಿಂಗಳಾಂತ್ಯದಲ್ಲಿ ಶುರುವಾಗುತ್ತಿದೆ. ಕೈಚೀಲಗಳನ್ನು ಕೊಂಡೊಯ್ದು ಕುಟುಂಬ ಸಮೇತ ಲಾಲ್‌ಬಾಗಿನ ಮಾವಿನಹಣ್ಣಿನ ಮಳಿಗೆಗಳಲ್ಲಿ ರಿಯಾಯಿತಿ ದರದಲ್ಲಿ ಸಿಗುವ ತಾಜಾ ಮಾವು ಕೊಳ್ಳುವುದೆಂದರೆ ಯಾರಿಗೆ ತಾನೇ ಇಷ್ಟವಾಗದು. ಲಾಲ್‌ಬಾಗಿನ ಗಿಡಮರಗಳು, ಹೂಗಳ ಸೌಂದರ್ಯವನ್ನು ಸವಿಯುವುದರ ಜೊತೆಗೆ ಹಣ್ಣಿನ ರುಚಿಯನ್ನೂ ಸವಿಯಬಹುದು.
ಎಲ್ಲಿ?: ಲಾಲ್‌ಬಾಗ್‌
ಯಾವಾಗ?: ಮೇ 30ರಿಂದ ಶುರು

ಟಾಪ್ ನ್ಯೂಸ್

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!

Exam

NEET ಟಾಪರ್‌ಗಳ ಸಂಖ್ಯೆ 67ರಿಂದ ಈಗ 17ಕ್ಕೆ ಇಳಿಕೆ!

1-assam

UNESCO ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ‘ದಿಬ್ಬ ಸಮಾಧಿಗಳು’: ಏನಿದು ಮೊಯಿಡಮ್ಸ್‌?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.