ದಾಖಲೆ ವೀರ : ಭಲೇ ತಾತ!

22 ದಾಖಲೆಗಳ ಸರದಾರ ಹರ್‌ ಪ್ರಕಾಶ್‌ ರಿಶಿ

Team Udayavani, May 9, 2019, 9:42 AM IST

Chinnari—Ajja

ಈ ವ್ಯಕ್ತಿಯ ವಯಸ್ಸು ಎಪ್ಪತ್ತಾರು ಅಷ್ಟೇ. ಆದರೂ ಉತ್ಸಾಹದ ಚಿಲುಮೆ. ಏನಾದರೊಂದು ದಾಖಲೆಯನ್ನು ಮಾಡುತ್ತಿರುವುದೇ ಅವರ ಗೀಳು. ಇಪ್ಪತ್ತೈದು ವರ್ಷಗಳ ಹಿಂದೆ ಮೊದಲ ದಾಖಲೆ ಮಾಡಿದ ಅವರು, ಆ ಬಳಿಕ ಹಿಂತಿರುಗಿ ನೋಡಲಿಲ್ಲ. ಸ್ಥಳೀಯವಾಗಿ ಮೆರೆದ ಸಾಹಸಗಳಿಂದಾಗಿ ಅವರು ಪಡೆದ ಪ್ರಶಸ್ತಿಗಳಿಗೆ ಲೆಕ್ಕವಿಟ್ಟವರಿಲ್ಲ. ಇಪ್ಪತ್ತೆರಡು ಜಾಗತಿಕ ದಾಖಲೆಗಳನ್ನು ಮಾಡಿ ಲಿಮ್ಕಾ ಮತ್ತು ಗಿನ್ನೆಸ್‌ ರೆಕಾರ್ಡ್ಸ್‌ನಲ್ಲಿ ಸೇರಿಕೊಂಡಿದ್ದಾರೆ. ಇವರು, ಹರ್‌ ಪ್ರಕಾಶ್‌ ರಿಶಿ. ದೆಹಲಿಯ ನಿವಾಸಿ. ವೃತ್ತಿಯಿಂದ ಮೋಟಾರ್‌ ವಾಹನಗಳ ಬಿಡಿ ಭಾಗಗಳ ತಯಾರಕ.

ಗಿನ್ನೆಸ್‌ ದಾಖಲೆ
1942ರ ಜುಲೈ 7ರಂದು ಜನಿಸಿದ ರಿಶಿಯವರಿಗೆ, ಬಾಲ್ಯದಿಂದಲೇ ಸಾಹಸ ಗಳನ್ನು ಮಾಡಿ ದಾಖಲೆ ವೀರನಾಗಬೇಕು ಎಂಬ ಹಂಬಲವಿತ್ತು. ಮೊದಲ ಬಾರಿಗೆ ಅದು ಸಾಧ್ಯವಾಗಿದ್ದು 1991ರಲ್ಲಿ. ಅತಿ ದೀರ್ಘ‌ ಸಮಯ, ಸ್ಕೂಟರ್‌ನಿಂದ ಕೆಳಗಿಳಿಯದೆ ಪ್ರಯಾಣ ಮಾಡುವ ಸಾಹಸ ಕಾರ್ಯ ಕೈಗೊಂಡಿದ್ದರು.

ಗೆಳೆಯರೂ ಇದ್ದ ಆ ಸ್ಪರ್ಧೆಯಲ್ಲಿ ಕೆಲವು ತಾಸು ಗಾಡಿ ಓಡಿಸುವಾಗಲೇ ಗೆಳೆಯರಿಗೆ ಸಾಕಾಗಿ ಒಬ್ಬೊಬ್ಬರಾಗಿ ಯಾನವನ್ನು ನಿಲ್ಲಿಸಿಬಿಟ್ಟರು. ಆದರೂ ರಿಶಿ ಒಬ್ಬರೇ ಸತತ ಪ್ರಯಾಣದ ದಾಖಲೆ ಬರೆದರು. 1001 ತಾಸುಗಳ ಕಾಲ ಸುದೀರ್ಘ‌ವಾಗಿ ಸ್ಕೂಟರ್‌ನಿಂದ ಕೆಳಗಿಳಿಯದೆ ಇದ್ದಿದ್ದು ನಂಬಲು ಕಷ್ಟವಾದರೂ ನಿಜ. ಗಿನ್ನೆಸ್‌ ಸಂಸ್ಥೆಯ ಉಸ್ತುವಾರಿಯಲ್ಲಿ ಈ ಪಂದ್ಯ ನಡೆದ ಕಾರಣ, ಜಾಗತಿಕ ಸಾಧಕರ ಸಾಲಿನಲ್ಲಿ ರಿಶಿ ಮಿಂಚಿದರು.

ಮೈಮೇಲೆ ಜಾಗತಿಕ ನಾಯಕರ ಹಚ್ಚೆ
ರಿಶಿ ಅವರಿಗೆ ಹಚ್ಚೆಯ ಗೀಳು ಕೂಡಾ ಇದೆ. ದೇಹವಿಡೀ ಹಚ್ಚೆ ಹಾಕಿಸಿಕೊಳ್ಳುವ ಮೂಲಕವೂ ರಿಶಿ ಜಾಗತಿಕ ದಾಖಲೆಯ ಗೌರವ ಗಳಿಸಿದ್ದಾರೆ. ಅವರ ಶರೀರದಲ್ಲಿ 150ಕ್ಕೂ ಹೆಚ್ಚಿನ ರಾಷ್ಟ್ರಧ್ವಜಗಳ ಹಚ್ಚೆ ಇವೆ. ಅದಷ್ಟೇ ಅಲ್ಲದೆ 2985 ಅಕ್ಷರಗಳು ಮತ್ತು ಜಾಗತಿಕ ನಾಯಕರ ಭಾವಚಿತ್ರಗಳನ್ನೂ ಹಚ್ಚೆ ಹಾಕಿಸಿಕೊಂಡಿದ್ದಾರೆ.

ಇವರಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮೆರಿಕದ ಮಾಜಿ ಅಧ್ಯಕ್ಷ ಒಬಾಮಾ, ಇಂಗ್ಲೆಂಡಿನ ಎಲಿಜಬೆತ್‌ ರಾಣಿ ಮೊದಲಾದವರಿದ್ದಾರೆ. ದೇಹದೆಲ್ಲೆಡೆ ಹಚ್ಚೆ ಹಾಕಿಸಿಕೊಂಡಿರುವ ಅವರು ಬೆನ್ನನ್ನು ಮಾತ್ರ ಖಾಲಿ ಬಿಟ್ಟಿದ್ದಾರೆ. ಆ ಭಾಗದಲ್ಲಿ ಒಂದೇ ಒಂದು ಹಚ್ಚೆಯನ್ನೂ ಬರೆಸಿಕೊಂಡಿಲ್ಲ. ಅದಕ್ಕೆ ಕಾರಣವೂ ಇದೆ. ಅದೇನೆಂದು ಕೇಳಿದಾಗ ನಿರ್ದಿಷ್ಟವಾಗಿ ಹೇಳದಿದ್ದರೂ ಆ ಜಾಗವನ್ನು ತಮ್ಮ ಕನಸಿನ ಯೋಜನೆಗೆ ಮುಡಿಪಿಟ್ಟಿರುವುದಾಗಿ ಹೇಳಿ ನಗುತ್ತಾರೆ.

ಕೈಗೂಡದ ಆಸೆ!
ದಾಖಲೆಗಳ ನಿರ್ಮಾಣವೇ ಒಂದು ಹವ್ಯಾಸವಾಗಿರುವ ರಿಶಿಯ ಸಾಹಸಗಳಿಗೆ ಅವರ ಮಡದಿ ಬಿಮ್ಲಾ ಪ್ರೋತ್ಸಾಹವೇ ಸ್ಫೂರ್ತಿಯಂತೆ. ದೆಹಲಿಯಿಂದ 10,286 ಮೈಲು ದೂರದಲ್ಲಿರುವ ಸ್ಯಾನ್‌ಫ್ರಾನ್ಸಿಸ್ಕೋಗೆ ಅತಿ ಶೀಘ್ರವಾಗಿ ಒಂದು ಪಿಜ್ಜಾವನ್ನು ತಲುಪಿಸುವಲ್ಲಿ ವಿಶ್ವದಾಖಲೆ ಮಾಡಿದ ರಿಶಿ ಟೊಮಾಟೊ ಕೆಚಪ್‌ ಕುಡಿಯುವುದರಲ್ಲಿಯೂ ಅಳಿಸಲಾಗದ ದಾಖಲೆ ಮಾಡಿದ್ದಾರೆ. ಒಂದು ಲೀಟರ್‌ ಕೆಚಪ್‌ ಸೀಸೆ ಖಾಲಿ ಮಾಡಲು ಅವರು ತೆಗೆದುಕೊಂಡಿದ್ದು 40 ಸೆಕೆಂಡ್‌ಗಳಷ್ಟೆ! ನಗರಪಾಲಿಕೆಯ ಚುನಾವಣೆಗೆ ಸ್ಪರ್ಧಿಸಿ ಒಂದೇ ಒಂದು ಮತ ಪಡೆಯದ ದಾಖಲೆಗೆ ಯತ್ನಿಸಿದ್ದರು. ಆದರೆ ದುರಾದೃಷ್ಟವಶಾತ್‌ ಒಂದು ಮತ ಬಿದ್ದು ಅವರಾಸೆ ಕೈಗೂಡಲಿಲ್ಲ.

ಜಗತ್ತಿನ ಅತಿ ಚಿಕ್ಕ ಉಯಿಲು
ರಿಶಿ ಹಲವು ಸಾಹಸಗಳನ್ನು ಮೆರೆದಿದ್ದಾರೆ. ಬಾಯಿಯೊಳಗೆ ಅತ್ಯಧಿಕ ಸ್ಟ್ರಾಗಳನ್ನು (500) ತೂರಿಸಲೆಂದು ಮೂವತ್ತೆರಡು ಹಲ್ಲುಗಳನ್ನೂ ಕೀಳಿಸಿದರು. ಇದರಿಂದಾಗಿ ಐನೂರು ಸ್ಟ್ರಾಗಳು ಸಲೀಸಾಗಿ ಒಳಗೆ ತುಂಬಿಕೊಂಡವು. ಇದೂ ಒಂದು ದಾಖಲೆ ಆಯಿತು. ಅವರ ಮಡದಿ ಬಿಮ್ಲಾ, ತನ್ನ ದತ್ತು ಮಗನ ಹೆಸರಿಗೆ ಬರೆದ ವೀಲುನಾಮೆ ಜಗತ್ತಿನ ಅತೀ ಸಂಕ್ಷಿಪ್ತ ಉಯಿಲು ಎಂದು ದಾಖಲೆ ಸ್ಥಾಪಿಸಿದೆ. ಅದರಲ್ಲಿರುವುದು ಒಂದೇ ವಾಕ್ಯ, “ಎಲ್ಲವೂ ಮಗನಿಗೆ’.

ಮಗನ ಮದುವೆಯ ಕರೆಯೋಲೆಯನ್ನು ಅರ್ಧ ಇಂಚು ಉದ್ದ ಮತ್ತು ಅಷ್ಟೇ ಅಗಲವಿರುವ ಕಾಗದದಲ್ಲಿ ಮುದ್ರಿಸಿದ್ದರು. ಸಕ್ಕರೆಯ ಕ್ಯೂಬ್‌ನಿಂದ ಅತಿ ಎತ್ತರದ ಗೋಪುರ ನಿರ್ಮಿಸಿ ರಿಶಿ ಹೊಸ ದಾಖಲೆ ಬರೆದಿದ್ದರು. ಈ ಟವರ್‌ನ ಎತ್ತರ 64 ಇಂಚುಗಳಷ್ಟಿತ್ತು.

– ಪ. ರಾಮಕೃಷ್ಣ ಶಾಸ್ತ್ರಿ

ಟಾಪ್ ನ್ಯೂಸ್

ಶಿಥಿಲಾವಸ್ಥೆ ತಲುಪಿದ ಕಟ್ಟಡದಲ್ಲಿ ತರಗತಿ ನಡೆಸಬೇಡಿ: ಶಿಕ್ಷಣ ಇಲಾಖೆಶಿಥಿಲಾವಸ್ಥೆ ತಲುಪಿದ ಕಟ್ಟಡದಲ್ಲಿ ತರಗತಿ ನಡೆಸಬೇಡಿ: ಶಿಕ್ಷಣ ಇಲಾಖೆ

ಶಿಥಿಲಾವಸ್ಥೆ ತಲುಪಿದ ಕಟ್ಟಡದಲ್ಲಿ ತರಗತಿ ನಡೆಸಬೇಡಿ: ಶಿಕ್ಷಣ ಇಲಾಖೆ

ತೈಲ ದರ ಏರಿಕೆಗೆ ಬಿಜೆಪಿ ಕೆಂಡ ರಾಜ್ಯದಲ್ಲಿ ರಾಜಕೀಯ ಬೆಂಕಿ

ತೈಲ ದರ ಏರಿಕೆಗೆ ಬಿಜೆಪಿ ಕೆಂಡ ರಾಜ್ಯದಲ್ಲಿ ರಾಜಕೀಯ ಬೆಂಕಿ

1-wqeqwewqe

Japan ಈಗ ಮಾಂಸ ಭಕ್ಷಕ ಬ್ಯಾಕ್ಟೀರಿಯಾ ಭೀತಿ!;ಸೋಂಕು ತಗಲಿದ 48 ಗಂಟೆಯಲ್ಲೇ ಸಾವು

sanjay-raut

TDP ಸ್ಪೀಕರ್‌ ಚುನಾವಣೆಗೆ ಸ್ಪರ್ಧಿಸಿದರೆ ಬೆಂಬಲ: ಉದ್ಧವ್‌ ಪಕ್ಷ

MASIDI

Bakrid; ತ್ಯಾಗದ ಮಹತ್ವವನ್ನು ಸಾರುವ ಹಬ್ಬ: ವಿಶ್ವ ಬಾಂಧವ್ಯದ ಪ್ರತೀಕ

1-MPP

Madhya Pradesh:ಡಿಸ್ಟಿಲರಿಯಲ್ಲಿದ್ದ 58 ಬಾಲ ಕಾರ್ಮಿಕರ ರಕ್ಷಣೆ

Mehabooba

POCSO ಪ್ರಕರಣದಲ್ಲಿ ಬಿಎಸ್‌ವೈಗೆ ಕೋರ್ಟ್‌ ರಕ್ಷಣೆ ಸರಿಯಲ್ಲ: ಮುಫ್ತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಕೆ‌ಎಸ್‌ಆರ್‌ಟಿಸಿ‌ ಬಸ್- ಬೈಕ್ ಮುಖಾಮುಖಿ ಢಿಕ್ಕಿ ; ಸವಾರ ಮೃತ್ಯು

udayavani youtube

ಇಡ್ಲಿ, ವಡೆ, ಚಟ್ನಿ ಗೆ ತುಂಬಾ ಫೇಮಸ್ ಈ ಹೋಟೆಲ್

udayavani youtube

ಕಾಪು ಸರ್ವೀಸ್ ರಸ್ತೆಯಲ್ಲಿ ರಿಕ್ಷಾ ಚಾಲಕ ಮತ್ತು ಬೈಕ್ ಸವಾರನ ನಡುವೆ ಹೊಡೆದಾಟ

udayavani youtube

ದರ್ಶನ್ ಗ್ಯಾಂಗ್ ಕ್ರೌರ್ಯ ಹೇಗಿತ್ತು ಗೊತ್ತಾ..? ವೈರಲ್ ಆಡಿಯೋ ಇಲ್ಲಿದೆ

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

ಹೊಸ ಸೇರ್ಪಡೆ

ಶಿಥಿಲಾವಸ್ಥೆ ತಲುಪಿದ ಕಟ್ಟಡದಲ್ಲಿ ತರಗತಿ ನಡೆಸಬೇಡಿ: ಶಿಕ್ಷಣ ಇಲಾಖೆಶಿಥಿಲಾವಸ್ಥೆ ತಲುಪಿದ ಕಟ್ಟಡದಲ್ಲಿ ತರಗತಿ ನಡೆಸಬೇಡಿ: ಶಿಕ್ಷಣ ಇಲಾಖೆ

ಶಿಥಿಲಾವಸ್ಥೆ ತಲುಪಿದ ಕಟ್ಟಡದಲ್ಲಿ ತರಗತಿ ನಡೆಸಬೇಡಿ: ಶಿಕ್ಷಣ ಇಲಾಖೆ

ತೈಲ ದರ ಏರಿಕೆಗೆ ಬಿಜೆಪಿ ಕೆಂಡ ರಾಜ್ಯದಲ್ಲಿ ರಾಜಕೀಯ ಬೆಂಕಿ

ತೈಲ ದರ ಏರಿಕೆಗೆ ಬಿಜೆಪಿ ಕೆಂಡ ರಾಜ್ಯದಲ್ಲಿ ರಾಜಕೀಯ ಬೆಂಕಿ

1-wqeqwewqe

Japan ಈಗ ಮಾಂಸ ಭಕ್ಷಕ ಬ್ಯಾಕ್ಟೀರಿಯಾ ಭೀತಿ!;ಸೋಂಕು ತಗಲಿದ 48 ಗಂಟೆಯಲ್ಲೇ ಸಾವು

sanjay-raut

TDP ಸ್ಪೀಕರ್‌ ಚುನಾವಣೆಗೆ ಸ್ಪರ್ಧಿಸಿದರೆ ಬೆಂಬಲ: ಉದ್ಧವ್‌ ಪಕ್ಷ

MASIDI

Bakrid; ತ್ಯಾಗದ ಮಹತ್ವವನ್ನು ಸಾರುವ ಹಬ್ಬ: ವಿಶ್ವ ಬಾಂಧವ್ಯದ ಪ್ರತೀಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.