Udayavni Special

ಮಾಯದ ವಸ್ತ್ರ!


Team Udayavani, Aug 23, 2018, 6:00 AM IST

s-1.jpg

ನಾಣ್ಯವನ್ನು ಮಾಯ ಮಾಡುವ ಕಲೆ ಗೊತ್ತಿದೆಯಾ? ಅಯ್ಯೋ, ಹಾಗಂದ್ರೆ ದುಡ್ಡನ್ನು ಕದಿಯೋದಲ್ಲ. ಬಟ್ಟೆಯ ಚೂರಿನಲ್ಲಿ ನಾಣ್ಯವನ್ನಿಟ್ಟು ಮಡಚಿ “ಉಫ್’ ಅಂತ ಕೈಮೇಲೆ ಊದಿ ಮಾಯ ಮಾಡುವುದು. ಸಿನಿಮಾಗಳಲ್ಲಿ ನಾಯಕರು ಹೀಗೆ ಮಾಡುವುದನ್ನು ನೋಡಿರುತ್ತೀರಿ. ಈ ಜಾದೂವನ್ನು ನೀವೂ ಮಾಡಬಹುದು.

ಬೇಕಾಗುವ ವಸ್ತು: ಬಟ್ಟೆ ಚೂರು, ನಾಣ್ಯ, ಸಿಲ್ವರ್‌ ಪೇಪರ್‌, ಕತ್ತರಿ

ಪ್ರದರ್ಶನ: ಜಾದೂಗಾರನ ಕೈಯಲ್ಲಿ ಕೆಂಪು ಬಟ್ಟೆ ಚೂರು ಹಾಗೂ ಒಂದು ನಾಣ್ಯ ಇದೆ. ಆತ ಅದನ್ನು ಎಲ್ಲರಿಗೂ ಎತ್ತಿ ತೋರಿಸುತ್ತಾನೆ. ನಂತರ ನಾಣ್ಯವನ್ನು, ಬಟ್ಟೆಯ ಒಳಗಿಟ್ಟು ಮಡಚುತ್ತಾನೆ. ಬಾಯಲ್ಲಿ ಏನೇನೋ ಮಂತ್ರ ಪಠಿಸುತ್ತಾ, ಬಟ್ಟೆ ಚೂರಿನ ಮುದ್ದೆಯನ್ನು ಬಿಡಿಸಿದರೆ ಅದರೊಳಗೆ ನಾಣ್ಯವೇ ಇಲ್ಲ! ಹಾಗಾದ್ರೆ ಆ ನಾಣ್ಯ ಎಲ್ಲಿ ಹೋಯ್ತು? ಜಾದೂಗಾರ ಹೇಳಿದ ಮಂತ್ರ ಯಾವುದು?

ತಯಾರಿ: ಅಚ್ಚರಿಯ ವಿಷಯ ಏನು ಎಂದರೆ ಜಾದೂಗಾರ ಜನರಿಗೆ ತೋರಿಸುವ ನಾಣ್ಯ ನಿಜವಾದ ನಾಣ್ಯವೇ ಅಲ್ಲ. ಅದು ನಾಣ್ಯವನ್ನೇ ಹೋಲುವ, ಅದೇ ಆಕಾರದ ಸಿಲ್ವರ್‌ ಪೇಪರ್‌! ಪ್ರದರ್ಶನಕ್ಕೆ ಮೊದಲು, ಸಿಲ್ವರ್‌ ಪೇಪರ್‌ಅನ್ನು ತೆಗೆದುಕೊಂಡು ನಾಣ್ಯದ ಆಕಾರಕ್ಕೆ ಕತ್ತರಿಸಿ. ನಂತರ ಪೇಪರ್‌ಅನ್ನು ನಾಣ್ಯದ ಮೇಲಿಟ್ಟು ಒತ್ತಿದರೆ, ನಾಣ್ಯದ ಮೇಲಿರುವ ಅಚ್ಚು ಸಿಲ್ವರ್‌ ಪೇಪರ್‌ ಮೇಲೆ ಮೂಡುತ್ತದೆ. ಆಗ ದೂರದಿಂದ ನೋಡುವವರಿಗೆ ಸಿಲ್ವರ್‌ ಪೇಪರ್‌ ಕೂಡ ನಾಣ್ಯದಂತೆಯೇ ತೋರುತ್ತದೆ. ನಕಲಿ ನಾಣ್ಯವನ್ನು, ಬಟ್ಟೆ ಚೂರಿನ ಒಳಗಿಟ್ಟು ಮುದ್ದೆ ಮಾಡಿ. ಸಿಲ್ವರ್‌ ಪೇಪರ್‌ ಕೂಡ ಬಟ್ಟೆಯ ಜೊತೆಗೇ ಮುದ್ದೆಯಾಗುತ್ತದೆ. ಒಂದು ಮಾತು ನೆನಪಿರಲಿ… ಸಿಲ್ವರ್‌ ಪೇಪರ್‌ ಪೂರ್ತಿಯಾಗಿ ಮುದ್ದೆಯಾಗಬೇಕು. ಇಲ್ಲದಿದ್ದರೆ ರಹಸ್ಯ ಬಯಲಾಗಿಬಿಡುತ್ತದೆ. ಪೇಪರ್‌ ಮುದ್ದೆಯಾಗುವವರೆಗೂ, ಬಾಯಲ್ಲಿ ಮಂತ್ರ ಹೇಳಿದಂತೆ ಮಾಡುತ್ತಾ ಜನರ ಗಮನವನ್ನು ಬೇರೆ ಕಡೆಗೆ ಸೆಳೆಯಿರಿ. ಆಮೇಲೆ ಪೇಪರ್‌ ಚೂರನ್ನು ಬೆರಳಿನ ಹಿಂಬದಿಯಲ್ಲಿ ಅಡಗಿಸಿಟ್ಟು, ಬಟ್ಟೆಯ ಚೂರನ್ನು ಬಿಡಿಸಿ, ನಾಣ್ಯ ಮಾಯವಾಗಿದೆ ಎಂದು ವೀಕ್ಷಕರು ಮೂಕವಿಸ್ಮಿತರಾಗುವರು. 

ವಿನ್ಸೆಂಟ್‌ ಲೋಬೋ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕೋವಿಡ್ ಸೋಂಕಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದೇ ದಿನ 5  ಬಲಿ!

ಕೋವಿಡ್ ಸೋಂಕಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದೇ ದಿನ 5 ಬಲಿ!

ಅಂತಾರಾಷ್ಟ್ರೀಯ ವಿಮಾನ ಯಾನ ಆಗಸ್ಟ್‌ನಿಂದ?

ಅಂತಾರಾಷ್ಟ್ರೀಯ ವಿಮಾನ ಯಾನ ಆಗಸ್ಟ್‌ನಿಂದ?

chamarajanagara1

ಚಾಮರಾಜನಗರದಲ್ಲಿ 10 ಕೋವಿಡ್ ಪ್ರಕರಣಗಳು ದೃಢ!

ಕಲಬುರಗಿ ಸಹ ಒಂದು ವಾರ ಲಾಕ್‌ಡೌನ್? ಮಾಹಿತಿ ನೀಡಿದ ಜಿಲ್ಲಾಧಿಕಾರಿ

ಕಲಬುರಗಿ ಸಹ ಒಂದು ವಾರ ಲಾಕ್‌ಡೌನ್?

ಉಡುಪಿ ಜಿಲ್ಲೆಯಲ್ಲಿಂದು 41 ಪಾಸಿಟಿವ್, 573 ನೆಗೆಟಿವ್ ಪ್ರಕರಣಗಳು

ಉಡುಪಿ ಜಿಲ್ಲೆಯಲ್ಲಿಂದು 41 ಪಾಸಿಟಿವ್, 573 ನೆಗೆಟಿವ್ ಪ್ರಕರಣಗಳು

ಕೊಪ್ಪಳ ಕೋವಿಡ್ ಸೋಂಕಿಗೆ ಮತ್ತಿಬ್ಬರು ಬಲಿ! ಜಿಲ್ಲೆಯಲ್ಲಿ ಸಾವಿನ ಸಂಖ್ಯೆಯು 8ಕ್ಕೆ ಏರಿಕೆ

ಕೊಪ್ಪಳ ಕೋವಿಡ್ ಸೋಂಕಿಗೆ ಮತ್ತಿಬ್ಬರು ಬಲಿ! ಜಿಲ್ಲೆಯಲ್ಲಿ ಸಾವಿನ ಸಂಖ್ಯೆಯು 8ಕ್ಕೆ ಏರಿಕೆ

ಹಿರಿಯ ಸಾಹಿತಿ ಎ.ಕೃಷ್ಣ ಸುರಪುರ ನಿಧನ

ಹಿರಿಯ ಸಾಹಿತಿ ಎ.ಕೃಷ್ಣ ಸುರಪುರ ನಿಧನ
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vishmaya

ಪ್ರಪಂಚ ಪರ್ಯಟನೆ; ಅಚ್ಚರಿಯ ಜಗತ್ತು ಇದು…

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

MUST WATCH

udayavani youtube

Dragon Fruit ಬೆಳೆದು ಯಶಸ್ವಿಯಾದ ರೈತ | Successful Farmer Vegetable | Udayavani

udayavani youtube

ವಿಶ್ವಾದ್ಯಂತ COVID-19 ಸ್ಥಿತಿಗತಿ & Vaccine ಪ್ರಗತಿ | Udayavani Straight Talk

udayavani youtube

Covid Bus Basin : A new invention by students of SMVIT College Bantakal

udayavani youtube

ಗಾಲ್ವಾನ್ ಕಣಿವೆ: ಚೀನಾದ ಉದ್ಧಟತನಕ್ಕೆ ಏನು ಕಾರಣ? | Udayavani Straight Talk

udayavani youtube

ಮಡಹಾಗಲ ಕಾಯಿ – Spiny gourd ಬೆಳೆದು ಯಶಸ್ವಿಯಾದ ರೈತ | Successful Farmer Vegetable


ಹೊಸ ಸೇರ್ಪಡೆ

ಕೋವಿಡ್ ಸೋಂಕಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದೇ ದಿನ 5  ಬಲಿ!

ಕೋವಿಡ್ ಸೋಂಕಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದೇ ದಿನ 5 ಬಲಿ!

ಅಂತಾರಾಷ್ಟ್ರೀಯ ವಿಮಾನ ಯಾನ ಆಗಸ್ಟ್‌ನಿಂದ?

ಅಂತಾರಾಷ್ಟ್ರೀಯ ವಿಮಾನ ಯಾನ ಆಗಸ್ಟ್‌ನಿಂದ?

chamarajanagara1

ಚಾಮರಾಜನಗರದಲ್ಲಿ 10 ಕೋವಿಡ್ ಪ್ರಕರಣಗಳು ದೃಢ!

ಕಲಬುರಗಿ ಸಹ ಒಂದು ವಾರ ಲಾಕ್‌ಡೌನ್? ಮಾಹಿತಿ ನೀಡಿದ ಜಿಲ್ಲಾಧಿಕಾರಿ

ಕಲಬುರಗಿ ಸಹ ಒಂದು ವಾರ ಲಾಕ್‌ಡೌನ್?

ಉಡುಪಿ ಜಿಲ್ಲೆಯಲ್ಲಿಂದು 41 ಪಾಸಿಟಿವ್, 573 ನೆಗೆಟಿವ್ ಪ್ರಕರಣಗಳು

ಉಡುಪಿ ಜಿಲ್ಲೆಯಲ್ಲಿಂದು 41 ಪಾಸಿಟಿವ್, 573 ನೆಗೆಟಿವ್ ಪ್ರಕರಣಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.