ಕಲ್ಲು ಎಸೆಯುವ ಹಬ್ಬ

Team Udayavani, May 16, 2019, 6:00 AM IST

ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಹಲವು ಬಗೆಯ ಆಚರಣೆಗಳಿವೆ, ಹಾಗೆಯೇ ಕೆಲವು ಹಬ್ಬಗಳು ಹಿಂದಿನ ಸಂಪ್ರದಾಯವನ್ನು ಮುಂದುವರೆಸಿಕೊಂಡು ಬಂದಿವೆ. ಅಂತ ಕೆಲವು ಆಚರಣೆಗಳಲ್ಲಿ ಮಧ್ಯಪ್ರದೇಶದ ಗೋಟಾ¾ರ್‌ ಮೇಳ ಅಥವಾ ಕಲ್ಲು ಎಸೆಯುವ ಆಚರಣೆಯೂ ಒಂದು. ನೋಡುಗರಿಗೆ ಒಂದು ರೀತಿಯ ರೋಮಾಂಚನ ಉಂಟುಮಾಡುವ ಮತ್ತು ಅಷ್ಟೇ ಅಪಾಯಕಾರಿಯಾದ ಈ ಆಚರಣೆ ಇಂದಿಗೂ ಹಳೆಯ ಸಂಪ್ರದಾಯವಾಗಿದೆ.

ಮಧ್ಯಪ್ರದೇಶದ ಚಿಂದ್ವಾರದಿಂದ ಸುಮಾರು 70 ಕಿ.ಮೀ. ದೂರದಲ್ಲಿರುವ ಪಂದುರ್‌ ನಾ ಮತ್ತು ಸಾವರ್ಗಾನ್‌ ಎಂಬ ಹಳ್ಳಿಯ ನಿವಾಸಿಗಳ ನಡುವೆ ನಡೆಯುವ ಈ ಕಾಳಗ ಅತ್ಯಂತ ಕುತೂಹಲ ಮತ್ತು ಬೀಭತ್ಸವಾಗಿ ಸಾಗುತ್ತದೆ. ಈ ಎರಡು ಹಳ್ಳಿಗಳ ನಡುವೆ ಹರಿಯುವ ಜಾಮ್‌ ನದಿಯು ಈ ಆಚರಣೆಯ ಕೇಂದ್ರಬಿಂದು. ಈ ಆಚರಣೆಯು ಪ್ರತಿ ವರ್ಷದ ಭಾದ್ರಪದ ಮಾಸದ ಎರಡನೇ ದಿನ ನಡೆಯುತ್ತದೆ.

ಗೋಟಾರ್‌ ಮೇಳಕ್ಕೆ ಒಂದು ದಿನ ಬಾಕಿ ಇರುವಾಗಲೇ ಜಾಮ್‌ ನದಿಯ ಮಧ್ಯಭಾಗದಲ್ಲಿ ದೊಡ್ಡ ಮರದ ಕಾಂಡವನ್ನು ನಿಲ್ಲಿಸಿ ಅದರ ತುದಿಯಲ್ಲಿ ಧ್ವಜ ಹಾರಿಸಲಾಗುತ್ತದೆ. ಹಾಗೂ ನದಿಯ ಇಕ್ಕೆಲಗಳಲ್ಲಿ ಎರಡೂ ಹಳ್ಳಿಗಳವರು ಕಲ್ಲುಗಳನ್ನು ಗುಡ್ಡೆ ಹಾಕಿಕೊಳ್ಳುತ್ತಾರೆ. ಹಬ್ಬದ ದಿನ ಎರಡೂ ಹಳ್ಳಿಗಳ ಯಾರಾದರೂ ಒಬ್ಬ ವ್ಯಕ್ತಿ ಹೋಗಿ ಧ್ವಜವನ್ನು ತರಬೇಕು. ಯಾವ ಹಳ್ಳಿಯವರು ಧ್ವಜ ಪಡೆಯುವರೋ ಅವರೇ ವಿಜಯಶಾಲಿಗಳಾಗುತ್ತಾರೆ. ಹಾಗಾಗಿ ಆ ಕೆಲಸಕ್ಕೆ ಸಾವಿನ ಭಯವಿಲ್ಲದ ಧೃಡಕಾಯದ ಯುವಕರನ್ನು ಆಯ್ಕೆ ಮಾಡಿಕೊಂಡಿರುತ್ತಾರೆ.

ಗೋಟಾ¾ರ್‌ ಮೇಳದ ನಿಯಮ ಬಹಳ ಸರಳವಾಗಿದ್ದು ಇದರಲ್ಲಿ ಭಾಗವಹಿಸುವವರು ಅಂದರೆ ದ್ವಜವನ್ನು ತರಲು ಪ್ರಯತ್ನಿಸುವವರು ಇದೇ ತಮ್ಮ ಜೀವನದ ಅಂತಿಮ ದಿನ ಎಂದು ತಿಳಿದಿರಬೇಕು ಅಷ್ಟೆ. ಹಬ್ಬದ ದಿನ ಇಬ್ಬರೂ ನೀರಿಗೆ ಹಾರಿದಾಕ್ಷಣ ಒಮ್ಮೆಗೇ ಕಲ್ಲಿನ ಮಳೆ ಶುರುವಾಗುತ್ತದೆ. ತಮ್ಮ ಊರಿನ ಘನತೆ ಕಾಪಾಡಿಕೊಳ್ಳಲು ಎರಡೂ ಕಡೆಯವರು ಕಲ್ಲಿನ ಮಳೆ ಸುರಿಸುತ್ತಲೇ ಹೋಗುತ್ತಾರೆ. ಕೊನೆಗೆ ಧ್ವಜ ತಂದವರು ವಿಜಯಿಗಳಾಗುತ್ತಾರೆ. ಸ್ಥಳೀಯ ದಂತ ಕಥೆಯ ಪ್ರಕಾರ, ಗೋಟಾ¾ರ್‌ ಮೇಳದ ಆಚರಣೆ ಪಂದುರ್‌ ನಾ ರಾಜನ ಕತೆಯಿಂದ ಪ್ರೇರಿತವಾಗಿದೆ.

ಈ ರಾಜ, ಸಾವರ್ಗಾನ್‌ ನಗರದ ರಾಜನ ಮಗಳ ಸೌಂದರ್ಯದ ಬಗ್ಗೆ ಕೇಳಿದ ಮೇಲೆ ಆಕೆಯನ್ನು ಹೇಗಾದರೂ ಮಾಡಿ ಪಡೆಯುವ ಹಂಬಲ ಹೆಚ್ಚಾಯಿತು. ಧೈರ್ಯ ಸಾಹಸಗಳಿಗೆ ಹೆಸರಾದ ಆತ ನದಿ ದಾಟಿ ಹೋಗಿ ಆಕೆಯನ್ನು ಅಪಹರಿಸಿದ. ಸಾವರ್ಗಾನಿನ ಪ್ರಜೆಗಳಿಗೆ ಈ ವಿಷಯ ತಿಳಿಯುತ್ತಿದ್ದಂತೆ ಆವರು ಅಪಹರಣಕಾರನನ್ನು ಹಿಡಿಯಲು ದೌಡಾಯಿಸಿದರು. ಅವರು ಬರುವ ವೇಳೆಗೆ ಪಂದುರ್ನಾದ ರಾಜ ನದಿ ದಾಟಿದ್ದ. ಆದರೂ ಧೃತಿಗೆಡದ ಸಾವರ್ಗಾನ್‌ ಪ್ರಜೆಗಳು ಕಲ್ಲುಗಳನ್ನು ಆಯ್ದು ಬೀಸಿ ಆತನತ್ತ ಒಗೆದರು. ಇದನ್ನರಿತ ಪಂದುರ್‌ನಾ ರಾಜ್ಯದ ಪ್ರಜೆಗಳು ತಮ್ಮ ರಾಜನನ್ನು ಕಾಪಾಡಲು ಧಾವಿಸಿ ಅವರು ಕೂಡ ತಮ್ಮ ಕಡೆಯ ನದಿಯ ದಡದಲ್ಲಿದ್ದ ಕಲ್ಲುಗಳಿಂದ ಸಾವರ್ಗಾನ್‌ ಪ್ರಜೆಗಳತ್ತ ಬೀಸಿ ಒಗೆದು ಸೇಡು ತೀರಿಸಿಕೊಂಡರು. ತಮ್ಮ ರಾಜ ಸುರಕ್ಷಿತವಾಗಿ ಅರಮನೆಯನ್ನು ತಲುಪಲು ಅವಕಾಶ ಕಲ್ಪಿಸಿಕೊಟ್ಟರು.

ಇವತ್ತು ಗೋಟಾ¾ರ್‌ ಮೇಳ ಎನ್ನುವ ಕಲ್ಲು ಎಸೆಯುವ ಆಚರಣೆ ಸಂಪ್ರಾದಾಯವಾಗಿ ಉಳಿದಿದೆ. ಇಂಥ ಅಮಾನವೀಯ, ಭಯಾನಕ ಆಚರಣೆಯನ್ನು ಕೈಬಿಡಲು ಮಧ್ಯಪ್ರದೇಶ ಸರ್ಕಾರ ಮಾಡಿದ ಯಾವ ಮನವಿಯೂ ಕೈಗೂಡಿಲ್ಲ. ನೂರಾರು ಜನ ಗಾಯಗೊಳ್ಳುವ ಈ ಆಚರಣೆ ಅಪಾಯಕಾರಿಯಾದುದು.

– ಪುರುಷೋತ್ತಮ್‌ ವೆಂಕಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

 • ಸೌರಮಂಡಲದ ಪ್ರವಾಸ ಹೋಗುವ ತಂತಜ್ಞಾನ ಮತ್ತು ವ್ಯವಸ್ಥೆ ಇಂದು ಇಲ್ಲದೇ ಇರಬಹುದು. ಆದರೆ ಈ ಕುರಿತು ಈಗಾಗಲೇ ಚಿಂತನೆಗಳು ನಡೆಯುತ್ತಿವೆ. ಮುಂದೊಂದು ದಿನ ಅಂತರಿಕ್ಷ...

 • ಬೆರಳಿಗೂ ಕಣ್ಣಿವೆ ಎಂದರೆ ನಿಮಗೆ ಅಚ್ಚರಿಯಾಗುವುದು ಸಹಜ. ಆದರೆ ಅದನ್ನು ಉಪಯೋಗಿಸಲು ತಿಳಿದಿರಬೇಕು. ಈ ವಿಚಾರ ಜಾದೂಗಾರರಿಗೆ ಮಾತ್ರವೇ ಗೊತ್ತಿರುವುದು. ಈ ಮಾತನ್ನು...

 • ನೋಟದಿಂದ ತಪ್ಪಿಸಿಕೊಂಡ ಇತಿಹಾಸದ ಕುತೂಹಲಕಾರಿ ತುಣುಕುಗಳಿಗೊಂದು ಪುಟ್ಟ ಜಾಗ.. 1985ರಲ್ಲಿ ಸಾಗರ ತಜ್ಞ ರಾಬರ್ಟ್‌ ಬಲಾರ್ಡ್‌ ಸಾಗರದಾಳದಲ್ಲಿ ಮುಳುಗಿದ್ದ ಟೈಟಾನಿಕ್‌...

 • ಪ್ರಮುಖ ವ್ಯಕ್ತಿಗಳ ಪರಿಚಯವನ್ನು ಕೇವಲ ಹತ್ತೇ ಹತ್ತು ಪಾಯಿಂಟ್‌ಗಳಲ್ಲಿ ಕಟ್ಟಿ ಕೊಡುವ ಪ್ರಯತ್ನವಿದು... 1. ಬಾಹ್ಯಾಕಾಶ ಯಾನಗೈದ ಮೊದಲ ಭಾರತೀಯ ಮಹಿಳೆ ಹಾಗೂ...

 • ಪ್ರಾಣಿಗಳ ಜೊತೆ ಆಹಾರ ಸ್ವೀಕರಿಸುವ ವ್ಯವಸ್ಥೆಯಿರುವ ಹೋಟೆಲ್‌ ಬೇರೆಲ್ಲೂ ಇಲ್ಲ. ಆದರೆ ಈ ಹೋಟೆಲ್‌ನಲ್ಲಿ ಜಿರಾಫೆಯೊಂದಿಗೆ ಆಟವಾಡಿ, ಅದರ ಜೊತೆ ಆಹಾರ ಸ್ವೀಕರಿಸುವ...

ಹೊಸ ಸೇರ್ಪಡೆ

 • ನವದೆಹಲಿ: ಮಧ್ಯಮ ಮತ್ತು ಕಡಿಮೆ ಆದಾಯದ ರೈಲ್ವೇ ಪ್ರಯಾಣಿಕರನ್ನು ಗಮನದಲ್ಲಿರಿಸಿಕೊಂಡು ಅಂದಿನ ರೈಲ್ವೇ ಸಚಿವ ಲಾಲೂ ಪ್ರಸಾದ್ ಯಾದವ್ ಅವರು ಪ್ರಾರಂಭಿಸಿದ್ದ ‘ಗರೀಬ್...

 • ದೇವದುರ್ಗ: ಹೊಸದಾಗಿ ಖರೀದಿಸಿದ ವಾಹನಗಳ ಇನ್ಸೂರೆನ್ಸ್‌ ಮಾಡಿಸಲು ಪುರಸಭೆಯಲ್ಲಿ ಹಣವಿಲ್ಲದ್ದರಿಂದ ಅವುಗಳು ರಸ್ತೆಗಿಳಿಯದೇ ಪುರಸಭೆ ನೈರ್ಮಲ್ಯ ಕಚೇರಿ ಆವರಣದಲ್ಲಿ...

 • ಚೆನ್ನೈ:ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಿಎಸ್ ಟಿ(ಸರಕು ಮತ್ತು ಸೇವಾ ತೆರಿಗೆಯನ್ನು ಜಾರಿಗೊಳಿಸಿದ ದಿನದಿಂದ ಹೋಟೆಲ್ ಮತ್ತು ರೆಸ್ಟೋರೆಂಟ್...

 • ಶಿರಾ: ನಗರಕ್ಕೆ ಸರಬರಾಜಾಗುತ್ತಿರುವ ನೀರು ಕಲ್ಮಶ ದಿಂದ ಕೂಡಿದ್ದು, ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದ್ದರೂ, ನಗರಸಭೆ ನಿರ್ಲಕ್ಷ್ಯ ವಹಿಸಿದೆ. ನೀರು ಕಲ್ಮಶವಾಗಿರುವುದಕ್ಕೆ...

 • ಚಿಕ್ಕನಾಯಕನಹಳ್ಳಿ: ಪುರಸಭೆ ವ್ಯಾಪ್ತಿಯಲ್ಲಿ 23 ವಾರ್ಡ್‌ಗಳಿದ್ದು, ನೂರಾರು ಬೀದಿಗಳು ಇವೆ. ಆದರೆ ಬೀದಿಯ ಹೆಸರು ಸೂಚಿಸುವ ಮಾರ್ಗ ಸೂಚಕ ಫ‌ಲಕಗಳು ಇಲ್ಲದೇ ಹೊಸದಾಗಿ...

 • ಬೇಕಾಗುವ ಸಾಮಗ್ರಿಗಳು ಸುವರ್ಣ ಗೆಡ್ಡೆ: ಕಾಲು ಕೆ.ಜಿ ಬಿಳಿ ಕಡಲೆ 100 ಗ್ರಾಂ ಅಂಬಟೆ ಕಾಯಿ 2 ಹಲಸಿನ ಬೀಜ 10 ಬಾಳೆಕಾಯಿ 1 ಕಳಲೆತುಂಡುಗಳು 10 ಒಂದು ದೊಡ್ಡ ದಂಟಿನ ಸೊಪ್ಪು ಚಿಕ್ಕ...