ಒಂದು ಒತ್ತಿದವರ ಕಥೆ


Team Udayavani, Apr 27, 2018, 3:45 PM IST

ondu-othi.jpg

ಕನ್ನಡದಲ್ಲಿ ಈಗಾಗಲೇ ವಿಭಿನ್ನ ಶೀರ್ಷಿಕೆ ಇರುವ ಚಿತ್ರಗಳು ಬಂದಿವೆ, ಬರುತ್ತಲೂ ಇವೆ. ಆ ಸಾಲಿಗೆ “ಕನ್ನಡಕ್ಕಾಗಿ ಒಂದನ್ನು ಒತ್ತಿ’ ಎಂಬ ಚಿತ್ರವೂ ಒಂದು. ಚಿತ್ರ ಈಗ ಬಿಡುಗಡೆಗೆ ಸಿದ್ಧವಾಗಿದ್ದು, ಇತ್ತೀಚೆಗೆ ಚಿತ್ರತಂಡ ಹಾಡುಗಳನ್ನು ಬಿಡುಗಡೆ ಮಾಡಿತು. ಪಂಚರಂಗಿ ಆಡಿಯೋ ಸಂಸ್ಥೆ ಮೂಲಕ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿದ್ದು ವಿಶೇಷ.

ಅಂದು ಹಲವು ಗಣ್ಯರ ಉಪಸ್ಥಿತಿಯಲ್ಲಿ ಹಾಡುಗಳನ್ನು ಬಿಡುಗಡೆ ಮಾಡಿದ ಚಿತ್ರತಂಡ, ಮಾತು ಶುರುವಿಟ್ಟುಕೊಂಡಿತು. ಇದಕ್ಕೂ ಮುನ್ನ ಮೂರು ಹಾಡುಗಳನ್ನು ತೋರಿಸಲಾಯಿತು. ನಿರ್ದೇಶಕ ಕುಶಾಲ್‌ ಅವರಿಗೆ ಇದು ಮೊದಲ ನಿರ್ದೇಶನದ ಚಿತ್ರ. ಪತ್ರಿಕೋದ್ಯಮದಲ್ಲಿ ಕಲಿತ ಪಾಠವನ್ನು ದೃಶ್ಯಕ್ಕೆ ಅಳವಡಿಸಿಕೊಳ್ಳಲಾಗಿದೆ. “ಇದೊಂದು ಜರ್ನಿ ಕಥೆ. ಇಲ್ಲಿ ಚಿಕ್ಕಣ್ಣ ಕನ್ನಡ ಪರ ಹೋರಾಟಗಾರರಾಗಿ ಎರಡು ಶೇಡ್‌ನ‌ಲ್ಲಿ ಕಾಣಿಸಿಕೊಂಡಿದ್ದಾರೆ. ಇದೊಂದು ರೀತಿಯ ವಿಶೇಷ ಕಥೆವುಳ್ಳ ಚಿತ್ರ’ ಎಂಬುದು ನಿರ್ದೇಶಕರ ಮಾತು.

ಅವಿನಾಶ್‌ ಚಿತ್ರದ ಹೀರೋ. ಅವರಿಗೆ ಒಂದೊಳ್ಳೆಯ ಕಥೆ, ಪಾತ್ರ ಇರುವ ಚಿತ್ರದಲ್ಲಿ ನಟಿಸಬೇಕೆಂಬ ಆಸೆ ಇತ್ತಂತೆ. ಅದರಂತೆ, ಅವರಿಗೆ ಈ ಚಿತ್ರ ಸಿಕ್ಕಿದೆ. ಚಿಕ್ಕಣ್ಣ ಅವರ ಗೆಳೆಯರಾಗಿ ಕಾಣಿಸಿಕೊಂಡಿದ್ದಲ್ಲದೆ, ಸಾಕಷ್ಟು ಸಲಹೆ ಕೊಟ್ಟದ್ದನ್ನೂ ಹೇಳಿಕೊಂಡರು ಅವಿನಾಶ್‌. ಅಂದು ಅರ್ಜುನ್‌ ಜನ್ಯಾ, ತಮ್ಮ ಹಾಡುಗಳನ್ನು ಬಿಡುಗಡೆ ಮಾಡಲು ಗುರು ಹಂಸಲೇಖ ಬಂದಿದ್ದಕ್ಕೆ ಖುಷಿಗೊಂಡರು. “ಅವರ ಹಾಡುಗಳನ್ನು ಕೇಳಿಕೊಂಡು ಬಂದವನು ನಾನು. ಇಲ್ಲಿ ಒಳ್ಳೆಯ ಹಾಡು ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾಗಿ’ ಹೇಳಿಕೊಂಡರು ಅವರು.

ಯೋಗರಾಜ್‌ ಭಟ್‌ ಅವರು ಚಿತ್ರತಂಡಕ್ಕೆ ಶುಭ ಕೋರಿದರು. ಚಿಕ್ಕಣ್ಣ ಅವರಿಗಿಲ್ಲಿ ಒಳ್ಳೆಯ ಅನುಭವ ಆಗಿದೆಯಂತೆ. ಎಲ್ಲರೂ ಇಷ್ಟಪಟ್ಟು, ಕಷ್ಟಪಟ್ಟು, ಗುದ್ದಾಡಿಕೊಂಡೇ ಸಿನಿಮಾ ಮಾಡಲಾಗಿದೆ. ಯಾಕೆ ಕನ್ನಡಕ್ಕಾಗಿ ಒಂದನ್ನು ಒತ್ತಬೇಕು ಎಂಬುದನ್ನು ತಿಳಿಯಲು ಚಿತ್ರ ನೋಡಬೇಕು ಅಂದರು ಚಿಕ್ಕಣ್ಣ. ನಾಯಕಿ ಕೃಷಿ ತಾಪಂಡ ಅವರಿಗೆ ಇದೊಂದು ಹೊಸ ಬಗೆಯ ಚಿತ್ರವಾಗುವ ನಂಬಿಕೆ ಇದೆಯಂತೆ.

ಅಂದು ಹಂಸಲೇಖ ಅವರಿಗೆ ಪಂಚರಂಗಿ ಆಡಿಯೋ ಸಂಸ್ಥೆಯಿಂದ ಹಾರ್ಮೋನಿಯಂ ಕಾಣಿಕೆಯಾಗಿ ನೀಡಲಾಯಿತು. ಹಂಸಲೇಖ ಅವರು ಆ ಹಾರ್ಮೋನಿಯಂ ಮೂಲಕ “ಮುಂಗಾರು ಮಳೆ’ ಹಾಡಿನ ಸಾಲನ್ನು ನುಡಿಸಿದರು. “ಭಟ್ಟರ ಪಂಚರಂಗಿ ಆಡಿಯೋ ಸಂಸ್ಥೆ ಪ್ರಪಂಚ ರಂಗಿಯಾಗಲಿ, ಚಿತ್ರದ ಶೀರ್ಷಿಕೆ ಚೆನ್ನಾಗಿದೆ. ಚಿತ್ರವೂ ಪ್ರೇಕ್ಷಕರಿಗೆ ಇಷ್ಟವಾಗಬಹುದು. ನಮ್ಮ ಕನ್ನಡ ಚಿತ್ರಗಳು ಗಡಿಯಾಚೆ ಬೆಳೆಯಬೇಕು’ ಎಂದರು.  ನಿರ್ಮಾಪಕ ಗೌತಮ್‌ ವೆಂಕಟೇಶ್‌ ಇತರರು ಇದ್ದರು.

ಟಾಪ್ ನ್ಯೂಸ್

5-uv-fusion

UV Fusion: ಮಾಯಾ ತಾಣ

Storm: ದೆಹಲಿಯಲ್ಲಿ ಗಾಳಿ ಸಹಿತ ಮಳೆ… ಮರ ಬಿದ್ದು 2 ಮೃತ್ಯು, 20ಕ್ಕೂ ಹೆಚ್ಚು ಮಂದಿಗೆ ಗಾಯ

Storm: ದೆಹಲಿಯಲ್ಲಿ ಬಿರುಗಾಳಿ ಸಹಿತ ಮಳೆ… 2 ಮೃತ್ಯು, 20ಕ್ಕೂ ಹೆಚ್ಚು ಮಂದಿಗೆ ಗಾಯ

6-madikeri

Madikeri: ವಿದ್ಯುತ್ ತಂತಿ ತಗುಲಿ ವ್ಯಕ್ತಿ ದುರ್ಮರಣ

4-uv-fusion

UV Fusion: ಅವರು ಹಾಗೆ, ಇವರು ಹೀಗೆ, ನಾವು ಹೇಗೆ?

3-madikeri

Crime Followup: ಸೂರ್ಲಬ್ಬಿ ವಿದ್ಯಾರ್ಥಿನಿ ಕೊಲೆ ಪ್ರಕರಣದ ಆರೋಪಿ ಪೊಲೀಸ್ ವಶ

Pramod Muthalik: ಹುಣಸೂರು ಮತ್ತೊಂದು ಭಟ್ಕಳ್ಳ ಆಗಲಿದೆ… ಪ್ರಮೋದ್ ಮುತಾಲಿಕ್ ಎಚ್ಚರಿಕೆ

Pramod Muthalik: ಹುಣಸೂರು ಮತ್ತೊಂದು ಭಟ್ಕಳ್ಳ ಆಗಲಿದೆ… ಪ್ರಮೋದ್ ಮುತಾಲಿಕ್ ಎಚ್ಚರಿಕೆ

Fraud Case: ಮುಂಬೈ ಬಿಲ್ಡರ್‌ ಮನೆ ಮೇಲೆ ಇಡಿ ದಾಳಿ… 52 ಕೋಟಿ ಮೌಲ್ಯದ ಆಸ್ತಿ ಜಪ್ತಿ

Housing Fraud Case: ಇಡಿ ದಾಳಿ… ಬಿಲ್ಡರ್‌ ಗೆ ಸೇರಿದ 52 ಕೋಟಿ ಮೌಲ್ಯದ ಆಸ್ತಿ ಜಪ್ತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dhruva Sarja ಮಾರ್ಟಿನ್‌ ರಿಸಲ್ಟ್ ಚಂದನವನಕ್ಕೆ ಹೆಮ್ಮೆ ತರಲಿದೆ…ನಿರ್ಮಾಪಕ ಉದಯ್‌ ಮೆಹ್ತಾ

Dhruva Sarja ಮಾರ್ಟಿನ್‌ ರಿಸಲ್ಟ್ ಚಂದನವನಕ್ಕೆ ಹೆಮ್ಮೆ ತರಲಿದೆ…ನಿರ್ಮಾಪಕ ಉದಯ್‌ ಮೆಹ್ತಾ

movies

Sandalwood; ಇಂದು ತೆರೆಗೆ ಬರುತ್ತಿದೆ ನಾಲ್ಕು ಸಿನಿಮಾಗಳು

Kannada Cinema; ನಮ್ ಜನ, ನಮ್ ಸಿನಿಮಾ… ತಗ್ಗಿದ ಪ್ಯಾನ್ ಇಂಡಿಯಾ ಕ್ರೇಜ್

Kannada Cinema; ನಮ್ ಜನ, ನಮ್ ಸಿನಿಮಾ… ತಗ್ಗಿದ ಪ್ಯಾನ್ ಇಂಡಿಯಾ ಕ್ರೇಜ್

Aditya’s kangaroo movie released

Kangaroo; ಥ್ರಿಲ್ಲರ್‌ ಹಾದಿಯಲ್ಲಿ ಆದಿತ್ಯ ಹೆಜ್ಜೆ ಗುರುತು

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

5-uv-fusion

UV Fusion: ಮಾಯಾ ತಾಣ

Storm: ದೆಹಲಿಯಲ್ಲಿ ಗಾಳಿ ಸಹಿತ ಮಳೆ… ಮರ ಬಿದ್ದು 2 ಮೃತ್ಯು, 20ಕ್ಕೂ ಹೆಚ್ಚು ಮಂದಿಗೆ ಗಾಯ

Storm: ದೆಹಲಿಯಲ್ಲಿ ಬಿರುಗಾಳಿ ಸಹಿತ ಮಳೆ… 2 ಮೃತ್ಯು, 20ಕ್ಕೂ ಹೆಚ್ಚು ಮಂದಿಗೆ ಗಾಯ

6-madikeri

Madikeri: ವಿದ್ಯುತ್ ತಂತಿ ತಗುಲಿ ವ್ಯಕ್ತಿ ದುರ್ಮರಣ

4-uv-fusion

UV Fusion: ಅವರು ಹಾಗೆ, ಇವರು ಹೀಗೆ, ನಾವು ಹೇಗೆ?

3-madikeri

Crime Followup: ಸೂರ್ಲಬ್ಬಿ ವಿದ್ಯಾರ್ಥಿನಿ ಕೊಲೆ ಪ್ರಕರಣದ ಆರೋಪಿ ಪೊಲೀಸ್ ವಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.