ಸೆಂಚುರಿಗೆ ಇನ್ನೊಂದೇ ಬಾಕಿ

Team Udayavani, May 18, 2018, 6:00 AM IST

k-27.jpg

ಐಟಂ ಡ್ಯಾನ್ಸ್‌ಗಳಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುವ ಆಲಿಷಾ ಸದ್ದಿಲ್ಲದೆ ಒಂದು ಹೊಸ ದಾಖಲೆಯನ್ನು ಮಾಡಿದ್ದಾರೆ. ಅದೇನೆಂದರೆ, ಅವರು ಇದುವರೆಗೂ 99 ಚಿತ್ರಗಳನ್ನು ಮುಗಿಸಿದ್ದು, ಸದ್ಯದಲ್ಲೇ ಸೆಂಚುರಿ ಬಾರಿಸಿದ್ದಾರೆ. ಐಟಂ ಡ್ಯಾನ್ಸ್‌ ಮಾಡಿಯೇ ಒಂದು ಶತಕ ಪೂರೈಸುತ್ತಿರುವ ನಟಿ ಕನ್ನಡ ಚಿತ್ರರಂಗದಲ್ಲಿ ಇನ್ನೊಬ್ಬರು ಸಿಗುವುದು ಕಷ್ಟ ಎಂದರೆ ತಪ್ಪಿಲ್ಲ.

ಸಾಮಾನ್ಯವಾಗಿ ಐಟಂ ಸಾಂಗ್‌ಗೆ ಮುಂಬೈನಿಂದ ಅಥವಾ ಬೇರೆ ಭಾಷೆಗಳಿಂದ ಡ್ಯಾನ್ಸರ್‌ಗಳನ್ನು ಕರೆಸಲಾಗುತ್ತದೆ. ಆದರೆ, ಆಲಿಶಾ ಪಕ್ಕಾ ಕನ್ನಡದ ಹುಡುಗಿ. ಮಂಗಳೂರು ಮೂಲದ ಆಲಿಷಾ ಕನ್ನಡದ ಜೊತೆಗೆ ತೆಲುಗು, ತಮಿಳು, ಮಲಯಾಳಂ …. ಹೀಗೆ ಬೇರೆ ಬೇರೆ ಭಾಷೆಗಳಲ್ಲೂ ಅಲಿಶಾ ಕುಣಿದಿದ್ದಾರೆ. ಮುಂದಿನ ತಿಂಗಳು ಬಿಡುಗಡೆಯಾಗಲಿರುವ “ಶಿವು-ಪಾರು’ ಎಂಬ ಚಿತ್ರ ಅವರ 99ನೇ ಚಿತ್ರವಂತೆ. 99 ಚಿತ್ರಗಳಲ್ಲಿ ನೃತ್ಯ ಮಾಡಿದವರಿಗೆ ಇನ್ನೊಂದು ಚಿತ್ರ ಮಾಡುವುದು ಕಷ್ಟವಾ? ಇಷ್ಟರಲ್ಲಾಗಲೇ ಆಲಿಷಾ ತಮ್ಮ ನೂರನೆಯ ಚಿತ್ರದಲ್ಲಿ ಐಟಂ ಡ್ಯಾನ್ಸ್‌ ಮಾಡಿದ್ದರೂ ಆಶ್ಚರ್ಯವೇನಿಲ್ಲ. 

ಆಲಿಶಾ ತಾನು ಸಿನಿಮಾ ನಟಿಯಾಗಬೇಕು, ಡ್ಯಾನ್ಸರ್‌ ಆಗಬೇಕು ಎಂದುಕೊಂಡು ಬೆಂಗಳೂರಿಗೆ ಬರಲಿಲ್ಲವಂತೆ. ಮಂಗಳೂರಿನಲ್ಲಿ ಕಾಲೇಜು ಮುಗಿಸಿಕೊಂಡು ಉದ್ಯೋಗ ಅರಸಿ ಬೆಂಗಳೂರಿಗೆ ಬಂದ ಆಲಿಶಾಗೆ ಸಿಕ್ಕಿದ್ದು ಸಿನಿಮಾ ಆಫ‌ರ್‌. ಸ್ನೇಹಿತೆಯೊಬ್ಬಳ ಮೂಲಕ “ಮಾಯಾವಿ’ ಎಂಬ ಚಿತ್ರದಲ್ಲಿ ಐಟಂ ಸಾಂಗ್‌ನಲ್ಲಿ ಕಾಣಿಸಿಕೊಂಡ ಆಲಿಷಾ, ನಂತರದ ವರ್ಷಗಳಲ್ಲಿ “ಚಕ್ರವರ್ತಿ’, “ಹಾಲುತುಪ್ಪ’, “ಮದುವೆ ದಿಬ್ಬಣ’, “ಗಜಕೇಸರಿ’, “ಚಿನ್ನದ ಗೊಂಬೆ’, “ಶಿವು-ಪಾರು’ ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಬರೀ ಐಟಂ ಡ್ಯಾನ್ಸ್‌ ಮಾಡಿ ಆಲಿಷಾಗೆ ಬೇಸರ
ಬಂದಿಲ್ಲವಾ ಎಂಬ ಪ್ರಶ್ನೆ ಬರಬಹುದು. “ನನಗೆ ಡ್ಯಾನ್ಸ್‌ ಎಂದರೆ ಬಹಳ ಇಷ್ಟ. ಖುಷಿಯಿಂದಲೇ ಪ್ರತಿ ಸಿನಿಮಾಗಳನ್ನು ಒಪ್ಪಿಕೊಂಡು, ಮಾಡುತ್ತೇನೆ. ಇಲ್ಲಿವರೆಗೆ ಮಾಡಿದ ಯಾವ ಸಿನಿಮಾಗಳ ಬಗ್ಗೆಯೂ ನನಗೆ ಬೇಸರವಿಲ್ಲ’ ಎಂಬ ಉತ್ತರ ಬರುತ್ತದೆ. ಮುಂದಿನ ದಿನಗಳಲ್ಲೂ ಆಲಿಶಾ, ಐಟಂ ಡ್ಯಾನ್ಸ್‌ ಮಾಡುವ ಮೂಲಕವೇ ಮುಂದುವರೆಯುವುದಕ್ಕೆ ಯೋಚಿಸುತ್ತಿದ್ದಾರೆ. “ಒಂದು ಮಗು ಪ್ರತಿದಿನ ಹೇಗೆ ಹೊಸತನ್ನು ಕಲಿಯುತ್ತಾ ಮುಂದೆ ಸಾಗುತ್ತದೋ, ಅದೇ ರೀತಿ ನಾನು ಕೂಡಾ ಪ್ರತಿ ಸಿನಿಮಾ, ಹಾಡಿನಲ್ಲೂ ಹೊಸ ಅಂಶವನ್ನು ಕಲಿಯುತ್ತೇನೆ. ನಾನೇನಾದರೂ ಬೇಸರಪಟ್ಟುಕೊಂಡಿದ್ದರೆ, ಇವತ್ತು ಅಲಿಶಾ ಎಂಬ ಹೆಸರು ಕೇಳಿಬರುತ್ತಿರಲಿಲ್ಲ. ನಾನು ಹಾಡಿನ ಮೂಲಕವೇ ಗುರುತಿಸಿಕೊಂಡವಳು.  ಅದನ್ನೇ ಮುಂದುವರೆಸಿಕೊಂಡು ಹೋಗುತ್ತಿದ್ದೇನೆ’ ಎನ್ನುತ್ತಾರೆ ಆಲಿಷಾ. 

ಅಲಿಶಾ ಚಿತ್ರರಂಗಕ್ಕೆ ಬಂದು ಆರು ವರ್ಷಗಳಾಗಿವೆ. ಅಂದಿನಿಂದ ಇಂದಿನವರೆಗೂ ಬಿಝಿಯಾಗಿರುವ ಅವರು, ತಿಂಗಳಲ್ಲಿ 25 ದಿನ ಕೆಲಸ ಮಾಡಿದ ಉದಾಹರಣೆಯೂ ಇದೆಯಂತೆ. “ಚಿತ್ರರಂಗದವರ ಸಹಕಾರವಿಲ್ಲದೇ ನಾವು ಬೆಳೆಯಲು ಸಾಧ್ಯವಿಲ್ಲ. ಆ ನಿಟ್ಟಿನಲ್ಲಿ ಚಿತ್ರರಂಗದ ಪ್ರತಿಯೊಬ್ಬರನ್ನು ನಾನು ನೆನಪಿಸಿಕೊಳ್ಳಲೇ ಬೇಕು. ನಟ-ನಟಿಯರು, ತಂತ್ರಜ್ಞರು ಸೇರಿದಂತೆ ಪ್ರತಿಯೊಬ್ಬರ ಪ್ರೋತ್ಸಾಹದಿಂದ ಇವತ್ತು ಚಿತ್ರರಂಗದಲ್ಲಿ ಬಿಝಿಯಾಗಿದ್ದೇನೆ’ ಎನ್ನುತ್ತಾರೆ ಆಲಿಶಾ.

ಟಾಪ್ ನ್ಯೂಸ್

Smiling Buddha; ಬುದ್ಧ ನಕ್ಕ ಗಳಿಗೆಗೆ ಸ್ವರ್ಣ ಸಂಭ್ರಮ; ಮೊದಲ ಪರಮಾಣು ಪರೀಕ್ಷೆಗೆ 50 ವರ್ಷ

Smiling Buddha; ಬುದ್ಧ ನಕ್ಕ ಗಳಿಗೆಗೆ ಸ್ವರ್ಣ ಸಂಭ್ರಮ; ಮೊದಲ ಪರಮಾಣು ಪರೀಕ್ಷೆಗೆ 50 ವರ್ಷ

Agra: ಆಗ್ರಾದಲ್ಲಿ ತಲೆ ಎತ್ತಿದೆ ತಾಜ್‌ ಮಹಲ್‌ ಪ್ರತಿಸ್ಪರ್ಧಿ

Agra: ಆಗ್ರಾದಲ್ಲಿ ತಲೆ ಎತ್ತಿದೆ ತಾಜ್‌ ಮಹಲ್‌ ಪ್ರತಿಸ್ಪರ್ಧಿ

2

ಎಸ್‌ಎಸ್‌ಎಲ್‌ಸಿ ಗ್ರೇಸ್‌ ಮಾರ್ಕ್ಸ್ ರದ್ದು: ಪ್ರತಿಭಾವಂತರ ಶ್ರಮಕ್ಕೆ ಮನ್ನಣೆ 

ಕ್ಯಾಂಟರ್ ಅಡ್ಡಗಟ್ಟಿ 32 ಲಕ್ಷ ರೂ. ದರೋಡೆ: ಖಾರದ ಪುಡಿ ಎರಚಿ ಹಲ್ಲೆ, ಇಬ್ಬರಿಗೆ ಗಾಯ

ಕ್ಯಾಂಟರ್ ಅಡ್ಡಗಟ್ಟಿ 32 ಲಕ್ಷ ರೂ. ದರೋಡೆ: ಖಾರದ ಪುಡಿ ಎರಚಿ ಹಲ್ಲೆ, ಇಬ್ಬರಿಗೆ ಗಾಯ

Bengaluru ಎಷ್ಟೇ ಮಳೆ ಬಂದರೂ ಪಂದ್ಯ ನಡೆಸಬಹುದು; ಏನಿದು ಚಿನ್ನಸ್ವಾಮಿಯ ಸಬ್ ಏರ್ ಸಿಸ್ಟಂ?

Bengaluru ಎಷ್ಟೇ ಮಳೆ ಬಂದರೂ ಪಂದ್ಯ ನಡೆಸಬಹುದು; ಏನಿದು ಚಿನ್ನಸ್ವಾಮಿಯ ಸಬ್ ಏರ್ ಸಿಸ್ಟಂ?

Untitled-1

ಪವಿತ್ರಾ – ಚಂದು ಪ್ರೀತಿಯಲ್ಲಿದ್ದರು.. ಆತ ನನ್ನ ಗಂಡ ಎಂದಿದ್ದರಂತೆ ಪವಿತ್ರಾ – ಚಂದು ಪತ್ನಿ

Untitled-1

Bihar: ಕಸ್ಟಡಿಯಲ್ಲಿದ್ದ ಅಪ್ರಾಪ್ತ ವಯಸ್ಕ ಪತ್ನಿ,ಪತಿ ಸಾವು; ಗ್ರಾಮಸ್ಥರಿಂದ ಠಾಣೆ ಧ್ವಂಸ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಯಾರಿಗೆ ಹೇಳೋಣ ನಮ್‌ ಪ್ರಾಬ್ಲಂ… ಸಿನಿಮಾ ಕೊರತೆಯಿಂದ ಥಿಯೇಟರ್‌ಗಳು ತಾತ್ಕಾಲಿಕ ಸ್ಥಗಿತ

ಯಾರಿಗೆ ಹೇಳೋಣ ನಮ್‌ ಪ್ರಾಬ್ಲಂ… ಸಿನಿಮಾ ಕೊರತೆಯಿಂದ ಥಿಯೇಟರ್‌ಗಳು ತಾತ್ಕಾಲಿಕ ಸ್ಥಗಿತ

Dhruva Sarja ಮಾರ್ಟಿನ್‌ ರಿಸಲ್ಟ್ ಚಂದನವನಕ್ಕೆ ಹೆಮ್ಮೆ ತರಲಿದೆ…ನಿರ್ಮಾಪಕ ಉದಯ್‌ ಮೆಹ್ತಾ

Dhruva Sarja ಮಾರ್ಟಿನ್‌ ರಿಸಲ್ಟ್ ಚಂದನವನಕ್ಕೆ ಹೆಮ್ಮೆ ತರಲಿದೆ…ನಿರ್ಮಾಪಕ ಉದಯ್‌ ಮೆಹ್ತಾ

movies

Sandalwood; ಇಂದು ತೆರೆಗೆ ಬರುತ್ತಿದೆ ನಾಲ್ಕು ಸಿನಿಮಾಗಳು

Kannada Cinema; ನಮ್ ಜನ, ನಮ್ ಸಿನಿಮಾ… ತಗ್ಗಿದ ಪ್ಯಾನ್ ಇಂಡಿಯಾ ಕ್ರೇಜ್

Kannada Cinema; ನಮ್ ಜನ, ನಮ್ ಸಿನಿಮಾ… ತಗ್ಗಿದ ಪ್ಯಾನ್ ಇಂಡಿಯಾ ಕ್ರೇಜ್

Aditya’s kangaroo movie released

Kangaroo; ಥ್ರಿಲ್ಲರ್‌ ಹಾದಿಯಲ್ಲಿ ಆದಿತ್ಯ ಹೆಜ್ಜೆ ಗುರುತು

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

Hubli; ಅಂಜಲಿ ಅಂಬಿಗೇರ ಪ್ರಕರಣ ತನಿಖೆ ಸಿಐಡಿಗೆ ವಹಿಸಲಿ: ಸಂತೋಷ್ ಲಾಡ್

Hubli; ಅಂಜಲಿ ಅಂಬಿಗೇರ ಪ್ರಕರಣ ತನಿಖೆ ಸಿಐಡಿಗೆ ವಹಿಸಲಿ: ಸಂತೋಷ್ ಲಾಡ್

Smiling Buddha; ಬುದ್ಧ ನಕ್ಕ ಗಳಿಗೆಗೆ ಸ್ವರ್ಣ ಸಂಭ್ರಮ; ಮೊದಲ ಪರಮಾಣು ಪರೀಕ್ಷೆಗೆ 50 ವರ್ಷ

Smiling Buddha; ಬುದ್ಧ ನಕ್ಕ ಗಳಿಗೆಗೆ ಸ್ವರ್ಣ ಸಂಭ್ರಮ; ಮೊದಲ ಪರಮಾಣು ಪರೀಕ್ಷೆಗೆ 50 ವರ್ಷ

Crime: ಜಗಳ ವೇಳೆ ತಳ್ಳಿದಾಗ ವಿದ್ಯುತ್‌ ತಂತಿ ಮೇಲೆ ಬಿದ್ದ ಯುವಕ ಸಾವು: 2 ಆರೋಪಿಗಳ ಬಂಧನ

Crime: ಜಗಳ ವೇಳೆ ತಳ್ಳಿದಾಗ ವಿದ್ಯುತ್‌ ತಂತಿ ಮೇಲೆ ಬಿದ್ದ ಯುವಕ ಸಾವು: 2 ಆರೋಪಿಗಳ ಬಂಧನ

7

ಇನ್‌ಸ್ಪೆಕ್ಟರ್‌ ಹೆಸರಲ್ಲಿ ಸುಲಿಗೆ: ಬೆಸ್ಕಾಂ ಎಂಜಿನಿಯರ್‌ ಸೆರೆ

Bengaluru: 14 ಲಕ್ಷ ರೂ. ಒಡವೆ ಕದಿದ್ದ ಬಾಲಕ ವಶಕ್ಕೆ

Bengaluru: 14 ಲಕ್ಷ ರೂ. ಒಡವೆ ಕದಿದ್ದ ಬಾಲಕ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.