ಗಿಣಿ ಹೇಳುವ ರೋಚ ಕಥೆ


Team Udayavani, Jan 11, 2019, 12:30 AM IST

q-23.jpg

“ಒಂದು ಕಥೆ ಕೇಳಿದ್ದೆ. ತುಂಬಾನೇ ಚೆನ್ನಾಗಿತ್ತು. ಕಥೆ ಹೇಳಿದವರ ಜೊತೆ ಮಾತನಾಡುತ್ತ, ಈ ಕಥೆ ಚೆನ್ನಾಗಿದೆ. ಮಾಡಿದರೆ ಒಂದೊಳ್ಳೆಯ ಸಿನಿಮಾ ಆಗುತ್ತೆ ಅಂತ ಹೇಳಿದ್ದೆ. ಆದರೆ, ಅವರು ಆ ಕಥೆ ಇಟ್ಟುಕೊಂಡು ಸಿನಿಮಾ ಮಾಡುತ್ತಾರೆ ಅಂತ ಖಂಡಿತವಾಗಿಯೂ ಭಾವಿಸಿರಲಿಲ್ಲ. ಎರಡು ದಿನ ಚಿತ್ರೀಕರಣ ಶುರು ಮಾಡಿ, ಅಂದು ಹೇಳಿದ ಕಥೆಯನ್ನು ಚಿತ್ರ ಮಾಡುತ್ತಿರುವುದಾಗಿ ಹೇಳಿ, ಇದೀಗ ಚಿತ್ರ ಬಿಡುಗಡೆವರೆಗೂ ತಂದಿದ್ದಾರೆ…’

– ಹೀಗೆ ಹೇಳಿದ್ದು ನಿರ್ದೇಶಕ ರವಿ ಆರ್‌.ಗರಣಿ. ಅವರು ಹೇಳಿದ್ದು, “ಗಿಣಿ ಹೇಳಿದ ಕಥೆ’ ಚಿತ್ರದ ನಿರ್ಮಾಪಕ ಕಮ್‌ ನಾಯಕ ದೇವರಾಜ್‌ ಬಗ್ಗೆ. ಚಿತ್ರ ಈ ವಾರ ತೆರೆಗೆ ಬರುತ್ತಿದೆ. ಚಿತ್ರದ ಬಗ್ಗೆ ಹೇಳಲೆಂದೇ ನಿರ್ದೇಶಕ ನಾಗರಾಜ್‌ ಉಪ್ಪುಂದ ಮಾಧ್ಯಮ ಮುಂದೆ ಬಂದಿದ್ದರು. ರವಿ ಆರ್‌. ಗರಣಿ ಅಂದು ಚಿತ್ರತಂಡದ ಶ್ರಮ ಮತ್ತು ಪ್ರತಿಭೆ ಕುರಿತು ಹೇಳುತ್ತಾ ಹೋದರು.

“ದೇವ್‌ ಒಬ್ಬ ಒಳ್ಳೆಯ ಕಥೆಗಾರ. ಸಾಕಷ್ಟು ಕನಸು ಕಟ್ಟಿಕೊಂಡಾತ. ರಂಗಭೂಮಿ ಹಿನ್ನೆಲೆಯಿರುವ ಅವನಿಗೆ ಏನಾದರೊಂದು ಸಾಧಿಸುವ ಛಲ. ರಂಗಭೂಮಿಯ ಬಹುತೇಕ ಕಲಾವಿದರನ್ನು ಒಟ್ಟುಗೂಡಿಸಿ, ಚಿತ್ರದಲ್ಲಿ ಕಾಣುವಂತೆ ಮಾಡಿದ್ದಾರೆ. ಸಿನಿಮಾ ಬಗ್ಗೆ ಹೇಳುವುದಾದರೆ, ಇಲ್ಲಿ ಮೂರು ಜನ ಹೀರೋಗಳು. ಮೊದಲಿಗೆ ಕಥೆ ಹೀರೋ. ನಾಗರಾಜ್‌ ಉಪ್ಪುಂದ ಇನ್ನೊಬ್ಬ ಹೀರೋ. ಎಲ್ಲವನ್ನೂ ಸರಿದೂಗಿಸಿಕೊಂಡು, ಸಿನಿಮಾ ಮಾಡಿ ಜನರ ಮುಂದೆ ತರುತ್ತಿರುವ ದೇವ್‌ ಇನ್ನೊಬ್ಬ ಹೀರೋ. ಹಾಗಾಗಿ ನಾನು ಇದನ್ನ ಮಲ್ಟಿಸ್ಟಾರರ್‌ ಚಿತ್ರ ಎನ್ನುತ್ತೇನೆ. ಇದು ಎಲ್ಲರಿಗೂ ಗೆಲುವು ಕೊಡಲಿ’ ಅಂದರು ರವಿ ಆರ್‌.ಗರಣಿ.

ನಿರ್ದೇಶಕ ನಾಗರಾಜ್‌ ಉಪ್ಪುಂದ ಇಲ್ಲಿ ನಿರ್ದೇಶನದ ಜೊತೆಗೆ ಛಾಯಾಗ್ರಹಣವನ್ನೂ ಮಾಡಿದ್ದಾರೆ. ಈ ವಾರ ಚಿತ್ರ ಬರುತ್ತಿದ್ದು, ಸುಮಾರು 60 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ತಯಾರಿ ನಡೆಸಲಾಗಿದೆ. ಇದೊಂದು ವಿಶೇಷ ಕಥೆ. ನಾಯಕ ಇಲ್ಲಿ ಡ್ರೈವರ್‌ ತನ್ನ ಕಾರಿನ ಪ್ರಯಾಣಿಕನೊಬ್ಬನಿಗೆ ಒಂದು ಕಥೆ ಹೇಳುತ್ತಾನೆ. ಅದೇ ಸಿನಿಮಾದ ವಿಶೇಷತೆ. ಇಲ್ಲಿ ಗಿಣಿ ಹೇಳುವ ಕಥೆಯೂ ಇದೆ. ಅದು ಬೇರೊಂದು ಕಥೆ ಹೇಳುತ್ತದೆ. ಇನ್ನೊಂದು ವಿಶೇಷವೆಂದರೆ, ಈ ಚಿತ್ರದಲ್ಲಿ ರಂಗಭೂಮಿಯ ನೂರಕ್ಕೂ ಹೆಚ್ಚು ಕಲಾವಿದರು ನಟಿಸಿದ್ದಾರೆ ಎಂದು ವಿವರ ಕೊಟ್ಟರು ನಿರ್ದೇಶಕರು.

ಸಂಗೀತ ನಿರ್ದೇಶಕ ಹಿತನ್‌ ಹಾಸನ್‌ ಅವರಿಲ್ಲಿ ಒಳ್ಳೆಯ ತಂಡದ ಜೊತೆ ಕೆಲಸ ಮಾಡಿದ ಖುಷಿಯಲ್ಲಿದ್ದಾರೆ. ಚಿತ್ರದಲ್ಲಿ ಹೀರೋ ಎಂಬ ಹಾಡು ಈಗಾಗಲೇ ಎಲ್ಲೆಡೆ ಮೆಚ್ಚುಗೆ ಪಡೆದಿರುವುದರಿಂದ ಅವರಿಗೆ ಸಿನಿಮಾವನ್ನೂ ಸಹ ಎಲ್ಲರೂ ಮೆಚ್ಚುತ್ತಾರೆ ಎಂಬ ನಂಬಿಕೆಯಲ್ಲಿದ್ದಾರೆ. ಒಳ್ಳೆಯ ಕಥೆ, ಚಿತ್ರಕಥೆ ಇದ್ದುದರಿಂದ ಹಿನ್ನೆಲೆ ಸಂಗೀತವನ್ನೂ ಸಹ ಚೆನ್ನಾಗಿ ಮಾಡಲು ಸಾಧ್ಯವಾಗಿದೆ ಎಂದು ಹೇಳಿಕೊಂಡರು ಅವರು.

ನಾಯಕಿ ಗೀತಾಂಜಲಿ ತಮ್ಮ ಪಾತ್ರದ ಬಗ್ಗೆ ಹೇಳುವುದಕ್ಕಿಂತ ಚಿತ್ರದಲ್ಲಿರುವ ಕನ್ನಡ ಸತ್ವ ಬಗ್ಗೆಯೇ ಹೆಚ್ಚು ಮಾತನಾಡಿದರು. “ಅಪ್ಪಟ ಕನ್ನಡ ಭಾಷೆ ಇಲ್ಲಿದೆ. ತಂಡದ ಎಫ‌ರ್ಟ್‌ ಚೆನ್ನಾಗಿತ್ತು. ಹಾಗಾಗಿ ಚಿತ್ರ ಕೂಡ ಅಷ್ಟೇ ಚೆನ್ನಾಗಿ ಮೂಡಿಬಂದಿದೆ. ರಂಗಭೂಮಿಯ ಬಹುತೇಕ ಕಲಾವಿದರು ಇಲ್ಲಿದ್ದಾರೆ. ನನಗೆ ಖುಷಿ ಮತ್ತು ಭಯ ಎರಡೂ ಇದೆ. ಯಾಕೆಂದರೆ, ಜನರು ಈ ಚಿತ್ರವನ್ನು ಹೇಗೆ ಸ್ವೀಕರಿಸುತ್ತಾರೋ ಏನೋ ಎಂಬ ಕುತೂಹಲವು ಇದೆ. ಆದರೆ, ಎಲ್ಲರ ಶ್ರಮ ಇಲ್ಲಿ ವ್ಯರ್ಥ ಆಗಲ್ಲ ಎಂಬ ನಂಬಿಕೆಯೂ ಇದೆ’ ಎಂದರು ಗೀತಾಂಜಲಿ.

ದೀಪಕ್‌ ಸುಮಾರು 60 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆ ಮಾಡಲು ತಯಾರಿ ನಡೆಸಿದ ಬಗ್ಗೆ ಹೇಳಿಕೊಂಡರು. ರಾಜಶೇಖರ್‌ ಇಲ್ಲೊಂದು ಹಾಡು ಬರೆದಿದ್ದು, ನಿರ್ದೇಶಕರ ಜೊತೆ ದಶಕಗಳ ಸ್ನೇಹವಿದೆ. ಆ ಕಾರಣದಿಂದ ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾಗಿ ಹೇಳಿಕೊಂಡರು.

ಟಾಪ್ ನ್ಯೂಸ್

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾಣೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewq-ewq

Yadgir; ಮೇ.1 ರಂದು ಕಾಂಗ್ರೆಸ್ ನಾಯಕರ ಸಮಾಗಮ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.