ವೈದ್ಯಕೀಯ ಕ್ಷೇತ್ರದಿಂದ ಬಣ್ಣದ ಜಗತ್ತಿಗೆ : ಸಿನಿ ರಂಗದಲ್ಲಿ ಡಾಕ್ಟರ್ಸ್!


Team Udayavani, Dec 11, 2020, 2:57 PM IST

ವೈದ್ಯಕೀಯ ಕ್ಷೇತ್ರದಿಂದ ಬಣ್ಣದ ಜಗತ್ತಿಗೆ : ಸಿನಿ ರಂಗದಲ್ಲಿ ಡಾಕ್ಟರ್ಸ್!

ಚಿತ್ರರಂಗದ ಶಕ್ತಿಯೇ ಅದು. ಬೇರೆ ಬೇರೆಕ್ಷೇತ್ರದವರನ್ನು ತನ್ನತ್ತ ಆಕರ್ಷಿಸುತ್ತದೆ. ಈ ಕ್ಷೇತ್ರಕ್ಕೆ ಬೇಕಾದ ಅರ್ಹತೆ ಎಂದರೆ ಪ್ರತಿಭೆ. ಜೊತೆಗೆ ಸಿನಿಮಾವನ್ನು ಪ್ರೀತಿಸುವ ಮನಸ್ಸು. ಅದೇ ಕಾರಣದಿಂದ ಚಿತ್ರರಂಗಕ್ಕೆ ಯಾವುದೇ ಒಂದು ಕ್ಷೇತ್ರದ ಹಂಗಿಲ್ಲದೇ ಬರುತ್ತಿದ್ದಾರೆ.

ಕೆಲ ವರ್ಷಗಳ ಹಿಂದೆ ಚಿತ್ರರಂಗದತ್ತ ಅತಿ ಹೆಚ್ಚು ಆಕರ್ಷಿತರಾಗಿದ್ದು ಇಂಜಿನಿಯರ್. ಇಂಜಿನಿಯರಿಂಗ್‌ ಓದಿ,ಕೈ ತುಂಬಾ ಸಂಬಳ ತರುವ ಉದ್ಯೋಗದಲ್ಲಿದ್ದ ಅದೆಷ್ಟೋ ಮಂದಿ ಇಂಜಿನಿಯರ್‌ಗಳು ಆ ಕೆಲಸಕ್ಕೆ ಗುಡ್‌ ಬೈ ಹೇಳಿ ಸಿನಿಮಾದತ್ತ ಬಂದಿದ್ದಾರೆ. ಇನ್ನು ಕೆಲವರು ಇಂಜಿನಿಯರಿಂಗ್‌ ಮುಗಿಸಿಕೊಂಡು, ಉದ್ಯೋಗದತ್ತ ಮುಖವೂ ಮಾಡದೇ ನೇರವಾಗಿ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದಾರೆ. ಇದು ಕೆಲವು ವರ್ಷಗಳ ಹಿಂದಿನ ಮಾತಾದರೆ, ಈಗ ಚಿತ್ರರಂಗಕ್ಕೆ ಮತ್ತೂಂದು ಕ್ಷೇತ್ರದ ಮಂದಿ ಆಕರ್ಷಿತರಾಗುತ್ತಿದ್ದಾರೆ. ಅದು ವೈದ್ಯರು.

ಇದನ್ನೂ ಓದಿ : ಕ್ರೈಂ ಥ್ರಿಲ್ಲರ್ ‌ಯೆಲ್ಲೋ ಗ್ಯಾಂಗ್‌ : ಟೀಸರ್ ಔಟ್

ಹೌದು, ನೀವು ಸೂಕ್ಷ್ಮವಾಗಿ ಗಮನಿಸಿದರೆ ವೈದ್ಯಕೀಯ ಕ್ಷೇತ್ರದ ಹಲವು ಮಂದಿ ಸಿನಿಮಾದತ್ತ ಆಕರ್ಷಿರಾಗುತ್ತಿದ್ದಾರೆ. ಅದು ನಟನೆ, ನಿರ್ದೇಶನ, ನಿರ್ಮಾಣ, ಸಂಗೀತ … ಹೀಗೆ ಬೇರೆ ಬೇರೆ ವಿಭಾಗಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಇದಕ್ಕೆಕಾರಣ ಅವರಲ್ಲಿರುವ ಸಿನಿಮಾ ಪ್ರೀತಿ. ಸದ್ಯ ಸಿನಿಮಾ ಮಾಡಿ, ಬಿಡುಗಡೆಗೆ ರೆಡಿಯಾಗಿರುವ ಹಾಗೂ ಸಿನಿಮಾ ಮಾಡುತ್ತಿರುವ ವೈದ್ಯಕೀಯ ಕ್ಷೇತ್ರದವರು ಯಾರೆಂದು ನೀವು ಕೇಳಬಹುದು. ಡಾ.ರಾಘವೇಂದ್ರ, ಡಾ.ಜಾಕ್ಲೀನ್‌ ಫ್ರಾನ್ಸಿಸ್‌, ಡಾ.ಶೈಲೇಶ್‌, ಡಾ.ಕಾಮಿನಿ ರಾವ್‌ ಹಾಗೂ ವೈದ್ಯಕೀಯ ಕ್ಷೇತ್ರದ ತಾರಕ್‌.

ಡಾ.ರಾಘವೇಂದ್ರ :

ವೃತ್ತಿಯಲ್ಲಿ ನ್ಯೂರಾಲಜಿಸ್ಟ್‌ ಆಗಿರುವ ಡಾ. ರಾಘವೇಂದ್ರ ಚಿಕ್ಕ ವಯಸ್ಸಿನಿಂದಲೇ ಸಿನಿಮಾದ ಕಡೆಗೆ ಆಸಕ್ತಿ ಬೆಳೆಸಿಕೊಂಡವರು. ತಮ್ಮ ವೈದ್ಯಕೀಯ ಶಿಕ್ಷಣ ಪೂರ್ಣಗೊಂಡ ಬಳಿಕ, ವೈದ್ಯಕೀಯ ವೃತ್ತಿಯಲ್ಲೇ ತೊಡಗಿಕೊಂಡ ಡಾ. ರಾಘವೇಂದ್ರ, ಜೊತೆ ಜೊತೆಗೆ ಸಿನಿಮಾ ರಂಗದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಲವ್ಲಿ ಸ್ಟಾರ್‌ ಪ್ರೇಮ್‌ ಅಭಿನಯದ “ಪ್ರೇಮಂ ಪೂಜ್ಯಂ’ ಚಿತ್ರವನ್ನು ನಿರ್ದೇಶಿಸಿ, ನಿರ್ದೇಶಕನಾಗಿ ಸ್ಯಾಂಡಲ್‌ ವುಡ್‌ನ‌ಲ್ಲಿ ಗುರುತಿಸಿಕೊಳ್ಳುತ್ತಿರುವ ಡಾ. ರಾಘವೇಂದ್ರ, ಆದಷ್ಟು ಬೇಗ ತಮ್ಮ ಚೊಚ್ಚಲ ಚಿತ್ರವನ್ನು ತೆರೆಗೆ ತರಲು ಅಣಿಯಾಗಿದ್ದಾರೆ.

ಡಾ.ಜಾಕ್ಲೀನ್‌ ಫ್ರಾನ್ಸಿಸ್‌ :

ಜಾಕ್ಲಿನ್‌ ಫ್ರಾನ್ಸಿಸ್‌ ಅವರು “ನಾನೊಂಥರ’ ಎಂಬ ಸಿನಿಮಾ ನಿರ್ಮಿಸಿದ್ದಾರೆ. ಈ ಚಿತ್ರ ಡಿಸೆಂಬರ್‌ 18 ರಂದು ತೆರೆಕಾಣುತ್ತಿದೆ. ತಮ್ಮದೇ ಆಸ್ಪತ್ರೆ ಹೊಂದಿರುವ ಜಾಕ್ಲಿನ್‌ ಅವರು ಸಿನಿಮಾ ಕ್ಷೇತ್ರದ ಮೇಲಿನ ಆಸಕ್ತಿಯಿಂದ ಬಂದವರು. “ಧ್ರುವತಾರೆ’ ಚಿತ್ರದಲ್ಲಿ ಬಾಲ ನಟಿಯಾಗಿ ಕಾಣಿಸಿಕೊಂಡಿದ್ದಾರೆಕೂಡಾ. ವೈದ್ಯೆಯಾಗಿರುವ ಅವರು ಈಗ ಸಿನಿಮಾ ನಿರ್ಮಾಣ ಮಾಡಲು ಕಾರಣ ಚಿತ್ರದ ಕಥೆ. “ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ತುಂಬಾ ಹೊಸತನದಿಂದ ಕೂಡಿದೆ. ಹಾಗಾಗಿ, ನಿರ್ಮಾಣಕ್ಕೆ ಮುಂದಾದೆ. ಸಿನಿಮಾ ಅಂದುಕೊಂಡಂತೆ ಬಂದಿದೆ’ ಎನ್ನುತ್ತಾರೆ ಅವರು.

ಡಾ.ಶೈಲೇಶ್‌ :

ವೃತ್ತಿಯಲ್ಲಿ ವೈದ್ಯರಾಗಿರುವ ಶೈಲೇಶ್‌ ಅವರು ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ವಸಿಷ್ಠ ಸಿಂಹ ಮುಖ್ಯಭೂಮಿಕೆಯಲ್ಲಿರುವ “ತಲ್ವಾರ್‌ಪೇಟೆ’ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟುಚಿತ್ರಗಳನ್ನುನಿರ್ಮಿಸುವ ಉದ್ದೇಶ ಅವರಿಗಿದೆ.

ಡಾ.ಕಾಮಿನಿ ರಾವ್‌  :

ಪ್ರಸೂತಿ ಮತ್ತು ಸ್ರೀರೋಗ ತಜ್ಞೆಯಾಗಿ ವೈದ್ಯಕೀಯ ರಂಗದಲ್ಲಿ ದೊಡ್ಡ ಹೆಸರು ಮಾಡಿರುವ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಖ್ಯಾತ ವೈದ್ಯೆ ಡಾ.ಕಾಮಿನಿ ರಾವ್‌, ವೈದ್ಯಕೀಯ ರಂಗದ ಜೊತೆಗೆ ಅನೇಕ ಸಾಮಾಜಿಕ ಕಾರ್ಯಗಳಲ್ಲೂ ಗುರುತಿಸಿಕೊಂಡವರು.ಇದೀಗ ವೈದ್ಯಕೀಯ ಮತ್ತು ಸಾಮಾಜಿಕ ಕಾರ್ಯಗಳ ಜೊತೆಗೆ ಡಾ.ಕಾಮಿನಿ ರಾವ್‌, ಮನರಂಜನಾಕ್ಷೇತ್ರಕ್ಕೂ ಅಡಿಯಿಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಸದ್ಯ “ಪೂರ್ವಿ ಪ್ರೊಡಕ್ಷನ್ಸ್‌’ ಹೆಸರಿನಲ್ಲಿ ತಮ್ಮದೇ ಆದ ಸ್ವಂತ ನಿರ್ಮಾಣ ಸಂಸ್ಥೆಯನ್ನು ಆರಂಭಿಸುತ್ತಿರುವ ಡಾ.ಕಾಮಿನಿ ರಾವ್‌, ಈ ಮೂಲಕ ಒಂದಷ್ಟು ಮನರಂಜನಾ ಚಟುವಟಿಕೆಗಳ ಮೂಲಕ ಪ್ರೇಕ್ಷರ ಮುಂದೆ ಬರಲು ತಯಾರಿ ನಡೆಸಿದ್ದಾರೆ.

ಇನ್ನೂ ವೈದ್ಯಕೀಯಕ್ಷೇತ್ರದ ಅನೇಕರು ನಟನೆ, ಸಂಗೀತ, ಗಾಯನ … ಹೀಗೆ ಬೇರೆ ಬೇರೆ ವಿಭಾಗಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಒಂದು ರೀತಿಯಲ್ಲಿ ಇದು ಒಳ್ಳೆಯ ಬೆಳವಣಿಗೆಕೂಡಾ. ಬೇರೆ ಬೇರೆಕ್ಷೇತ್ರದವರು ಚಿತ್ರರಂಗಕ್ಕೆ ಬಂದಂತೆ ಹೊಸ ಹೊಸಆಲೋಚನೆಗಳು ಹುಟ್ಟುತ್ತವೆ. ಈ ಮೂಲಕ ಚಿತ್ರರಂಗ ಹೆಚ್ಚು ಸಮೃದ್ಧಿಯಾಗುತ್ತಾ ಹೊಗುತ್ತದೆ.

 

ರವಿ ರೈ

ಟಾಪ್ ನ್ಯೂಸ್

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qeeqwewqwqe

Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.