ಈ ಚಿಟ್ಟೆ ಹೆದರಿಸುತ್ತೆ…

Team Udayavani, Jun 29, 2018, 6:00 AM IST

x-26.jpg

“ಕಳೆದ ಬಾರಿ ನೀವು ಸ್ವಲ್ಪ ಜಾಸ್ತಿ ಮಾತಾಡಿದ್ರಿ …’
ಹಾಗಂತ ಪ್ರಸನ್ನಗೆ ಚಿತ್ರತಂಡದವರು ಹೇಳಿದ್ದರಂತೆ. ಹಾಗಾಗಿ “ಚಿಟ್ಟೆ’ ಬಿಡುಗಡೆಯ ಪತ್ರಿಕಾಗೋಷ್ಠಿಯಲ್ಲಿ ಕಡಿಮೆ ಮಾತಾಡೋಕೆ ನಿರ್ಧರಿಸಿದ್ದರು ಪ್ರಸನ್ನ. ಹಾಗಂತ ಅವರು ಥ್ಯಾಂಕ್ಸ್‌ ಹೇಳಿ ಮೈಕು ಕೊಟ್ಟಿರಬಹುದು ಎಂದುಕೊಂಡಿದ್ದರೆ ನಿಮ್ಮ ಊಹೆ ತಪ್ಪು. ಕಳೆದ ಬಾರಿಯಷ್ಟಿಲ್ಲದಿದ್ದರೂ ಒಂದು ಲೆವೆಲ್‌ಗೆ ಮಾತಾಡಿಯೇ ಕೂತರು ಪ್ರಸನ್ನ.

“ಚಿಟ್ಟೆ’ ಚಿತ್ರದ ಬಗ್ಗೆ ಅವರು ಹೇಳದ್ದೇನೂ ಇಲ್ಲ. ಈ ಹಿಂದಿನ ಪತ್ರಿಕಾಗೋಷ್ಠಿಗಳಲ್ಲಿ ಅವರು ಚಿತ್ರದ ಬಗ್ಗೆ, ಮೇಕಿಂಗ್‌ ಬಗ್ಗೆ, ಸಹಕಾರ-ಪ್ರೋತ್ಸಾಹಗಳು ಕುರಿತು ಮಾತಾಡಿದ್ದರು. ಅದರ ಜೊತೆಗೆ ಈ ಬಾರಿ ಇನ್ನೂ ಎರಡು ವಿಷಯಗಳನ್ನು ಹೇಳುವುದಿತ್ತು ಅವರಿಗೆ. ಒಂದು ಚಿತ್ರ ಇಂದು ಬಿಡುಗಡೆಯಾಗುತ್ತಿರುವುದು. ಇನ್ನೊಂದು, ಇದು ಹಾರರ್‌ ಚಿತ್ರ ಎಂದು ಅವರು ಇದುವರೆಗೂ ಎಲ್ಲೂ ಹೇಳಿರಲಿಲ್ಲ. ಈಗ ಅದನ್ನು ಒಪ್ಪಿಕೊಂಡರು. ಇದೊಂದು ಹಾರರ್‌ ಚಿತ್ರ ಎಂದು ಹೇಳುವ ಮನಸ್ಸಿರಲಿಲ್ಲವಂತೆ ಅವರಿಗೆ. ಸಸ್ಪೆನ್ಸ್‌ ಆಗಿ ಇರಲಿ, ಜನ ಚಿತ್ರದಲ್ಲೇ ನೋಡಲಿ ಅಂತಿದ್ದರಂತೆ. ಆದರೆ, ಚಿತ್ರದ ಒಂದು ಡಿಸೈನ್‌ ನೋಡಿ ಖುಷಿಯಾದ ವಿತರಕರು, ಇದೊಂದು ಹಾರರ್‌ ಚಿತ್ರ ಎಂದು ಮುಚ್ಚಿಡಬೇಡಿ ಎಂದರಂತೆ. ವಿತರಕರು ಹೇಳಿದ್ದರಿಂದ ಪ್ರಸನ್ನ ಸಹ ಒಪ್ಪಿ, ಇದೊಂದು ಹಾರರ್‌ ಚಿತ್ರ ಎಂದು ಘೋಷಿಸಿದ್ದಾರೆ.

“ಈ ಚಿತ್ರ ನಿರ್ಮಿಸುವ ಯಾವುದೇ ಯೋಚನೆ ಇರಲಿಲ್ಲ. ಕೊನೆಗೆ ಸ್ನೇಹಿತರ ಸಹಕಾರದಿಂದ ನಿರ್ಮಾಪಕನಾದೆ. ಲಾಭ ಅಲ್ಲದಿದ್ದರೂ ಅಸಲಾದರೂ ಕೊಡು, ಅದೂ ಇಲ್ಲದಿದ್ದರೆ ದುಡಿದು ತೀರಿಸುವುದಕ್ಕಾದರೂ ಅವಕಾಶ ಕೊಡು ಎಂದು ದೇವರಲ್ಲಿ ಕೇಳಿಕೊಳ್ಳುತ್ತಿದ್ದೇನೆ. ಚಿತ್ರ ಚೆನ್ನಾಗಿ ಬಂದಿದೆ. ಇದು ಜನರಿಗೆ ಇಷ್ಟವಾಗುತ್ತದೆ ಎಂಬ ನಂಬಿಕೆ ಇದೆ. ಸೆಕೆಂಡ್‌ ಹಾಫ್ನಲ್ಲಿ ಹರ್ಷಿಕಾ ಮತ್ತು ದೀಪಿಕಾ ಇಬ್ಬರೂ ಅದ್ಭುತವಾಗಿ ನಟಿಸಿದ್ದಾರೆ. ಇಂಥದ್ದೊಂದು ಚಿತ್ರ ಮಾಡಿದ್ದಿಕ್ಕೆ ತೃಪ್ತಿ ಇದೆ’ ಎಂದು ಹೇಳಿಕೊಂಡರು.

ಅಂದು ಹರ್ಷಿಕಾ, ದೀಪಿಕಾ, ನಾಗೇಶ್‌, ವಿತರಕ ವೆಂಕಟೇಶ್‌ ಮುಂತಾದವರು ಇದ್ದರು. ಇದುವರೆಗೂ ಯಾವ ಚಿತ್ರಕ್ಕೂ ಮಾಡದಷ್ಟು ಪ್ರಚಾರವನ್ನು ಈ ಚಿತ್ರಕ್ಕೆ ಮಾಡಿದ್ದಾಗಿ ಹರ್ಷಿಕಾ ಹೇಳಿಕೊಂಡರು. ಇನ್ನು ತನಗೆ ಇಂಥದ್ದೊಂದು ಪಾತ್ರ ನಿಭಾಯಿಸುವ ಶಕ್ತಿ ಇದೆ ಎಂದೇ ಗೊತ್ತಿರಲಿಲ್ಲ ಎಂದು ದೀಪಿಕಾ ಹೇಳಿಕೊಂಡರು. ಇನ್ನು ನೆಗೆಟಿವ್‌ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಾಗೇಶ್‌, ಇವತ್ತಿನ ಜನರೇಶನ್‌ಗೆ ಏನು ಬೇಕೋ, ಅವೆಲ್ಲವೂ ಚಿತ್ರದಲ್ಲಿದೆ ಎಂದರು.

ಟಾಪ್ ನ್ಯೂಸ್

11-

Sulya: ಕಾರು-ಬೈಕ್‌ ಅಪಘಾತ; ಸವಾರನಿಗೆ ಗಾಯ

G. T. Devegowda; ಲೈಂಗಿಕ ದೌರ್ಜನ್ಯ ಪ್ರಕರಣ ಗೊತ್ತಿದ್ದರೆ ಟಿಕೆಟ್‌ ನೀಡುತ್ತಿರಲಿಲ್ಲ

G. T. Devegowda; ಲೈಂಗಿಕ ದೌರ್ಜನ್ಯ ಪ್ರಕರಣ ಗೊತ್ತಿದ್ದರೆ ಟಿಕೆಟ್‌ ನೀಡುತ್ತಿರಲಿಲ್ಲ

Dharwad; ಮತದಾನಕ್ಕಾಗಿ ತವರಿಗೆ ಮರಳಿದ ವಿನಯ್ ಕುಲಕರ್ಣಿ; ಸಪ್ತಾಪೂರದಲ್ಲಿ ಕಿಕ್ಕಿರದ ಜನರು

Dharwad; ಮತದಾನಕ್ಕಾಗಿ ತವರಿಗೆ ಮರಳಿದ ವಿನಯ್ ಕುಲಕರ್ಣಿ; ಸಪ್ತಾಪೂರದಲ್ಲಿ ಕಿಕ್ಕಿರಿದ ಜನರು

Prajwal Revanna ಪ್ರಕರಣವನ್ನು ಸಿಬಿಐಗೆ ವಹಿಸಲಿ: ಜಗದೀಶ್‌ ಶೆಟ್ಟರ್‌

Prajwal Revanna ಪ್ರಕರಣವನ್ನು ಸಿಬಿಐಗೆ ವಹಿಸಲಿ: ಜಗದೀಶ್‌ ಶೆಟ್ಟರ್‌

Karnataka BJP ಪೋಸ್ಟ್ ಡಿಲೀಟ್ ಮಾಡಲು ಟ್ವಿಟರ್ ಗೆ ಸೂಚಿಸಿದ ಚುನಾವಣಾ ಆಯೋಗ

Karnataka BJP ಪೋಸ್ಟ್ ಡಿಲೀಟ್ ಮಾಡಲು ಟ್ವಿಟರ್ ಗೆ ಸೂಚಿಸಿದ ಚುನಾವಣಾ ಆಯೋಗ

Dandeli ಮತದಾನದ ದಿನವೇ ಗ್ಯಾರೇಜ್ ಸೇರಿದ ಪಿಎಸ್ಐ ವಾಹನ

Dandeli ಮತದಾನದ ದಿನವೇ ಗ್ಯಾರೇಜ್ ಸೇರಿದ ಪಿಎಸ್ಐ ವಾಹನ

8-panaji

Panaji: ಮತದಾರರನ್ನು ಸೆಳೆದ ಇಕೋ ಫ್ರೆಂಡ್ಲಿ ಮತಕೇಂದ್ರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kannada Cinema; ನಮ್ ಜನ, ನಮ್ ಸಿನಿಮಾ… ತಗ್ಗಿದ ಪ್ಯಾನ್ ಇಂಡಿಯಾ ಕ್ರೇಜ್

Kannada Cinema; ನಮ್ ಜನ, ನಮ್ ಸಿನಿಮಾ… ತಗ್ಗಿದ ಪ್ಯಾನ್ ಇಂಡಿಯಾ ಕ್ರೇಜ್

Aditya’s kangaroo movie released

Kangaroo; ಥ್ರಿಲ್ಲರ್‌ ಹಾದಿಯಲ್ಲಿ ಆದಿತ್ಯ ಹೆಜ್ಜೆ ಗುರುತು

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

11-

Sulya: ಕಾರು-ಬೈಕ್‌ ಅಪಘಾತ; ಸವಾರನಿಗೆ ಗಾಯ

Raichur; ಚುನಾವಣೆ ನಿರತ ಬಿಎಲ್‌ಒ ಸಾವು

Raichur; ಚುನಾವಣೆ ಕರ್ತವ್ಯನಿರತ ಬಿಎಲ್‌ಒ ಸಾವು

10-

Koratagere: ಪಟ್ಟಣಕ್ಕೆ 10 ದಿನಕ್ಕೊಮ್ಮೆ ನೀರು ಸರಬರಾಜು

G. T. Devegowda; ಲೈಂಗಿಕ ದೌರ್ಜನ್ಯ ಪ್ರಕರಣ ಗೊತ್ತಿದ್ದರೆ ಟಿಕೆಟ್‌ ನೀಡುತ್ತಿರಲಿಲ್ಲ

G. T. Devegowda; ಲೈಂಗಿಕ ದೌರ್ಜನ್ಯ ಪ್ರಕರಣ ಗೊತ್ತಿದ್ದರೆ ಟಿಕೆಟ್‌ ನೀಡುತ್ತಿರಲಿಲ್ಲ

Dharwad; ಮತದಾನಕ್ಕಾಗಿ ತವರಿಗೆ ಮರಳಿದ ವಿನಯ್ ಕುಲಕರ್ಣಿ; ಸಪ್ತಾಪೂರದಲ್ಲಿ ಕಿಕ್ಕಿರದ ಜನರು

Dharwad; ಮತದಾನಕ್ಕಾಗಿ ತವರಿಗೆ ಮರಳಿದ ವಿನಯ್ ಕುಲಕರ್ಣಿ; ಸಪ್ತಾಪೂರದಲ್ಲಿ ಕಿಕ್ಕಿರಿದ ಜನರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.