‘ಪುಕ್ಸಟ್ಟೆ ಲೈಫು’ ಇನ್‌ಸೈಡ್‌ ಸ್ಟೋರಿ: ಸಂಚಾರಿ ವಿಜಯ್‌ ಚಿತ್ರಕ್ಕೆ ಕಿಚ್ಚನ ಮೆಚ್ಚುಗೆ


Team Udayavani, Sep 17, 2021, 1:57 PM IST

ಪುಕ್ಸಟ್ಟೆ  ಲೈಫು

ನಟ ಸಂಚಾರಿ ವಿಜಯ್‌ ಅಭಿನಯಿಸಿದ್ದ ಚಿತ್ರಗಳು ಅವರ ನಿಧನದ ನಂತರ ಒಂದೊಂದಾಗಿ ತೆರೆಗೆ ಬರುತ್ತಿವೆ. ಅದರಲ್ಲಿ “ಪುಕ್ಸಟ್ಟೆ ಲೈಫ‌ು’ ಕೂಡ ಒಂದು. ಎಲ್ಲ ಅಂದುಕೊಂಡಂತೆ ಆಗಿದ್ದರೆ, ಕಳೆದ ವರ್ಷ ಮೇನಲ್ಲಿ “ಪುಕ್ಸಟ್ಟೆ ಲೈಫ‌ು’ ರಿಲೀಸ್‌ ಆಗಬೇಕಿತ್ತು. ಆದರೆ ಕೋವಿಡ್‌ ಆತಂಕ, ಎರಡು ಬಾರಿ ಎದುರಾದ ಲಾಕ್‌ ಡೌನ್‌ನಿಂದ ಚಿತ್ರದ ರಿಲೀಸ್‌ ಮುಂದೂಡುತ್ತ ಬಂದಿದ್ದ ಚಿತ್ರತಂಡ ಅಂತಿಮವಾಗಿ ಇದೇ ಸೆ.24 ಚಿತ್ರವನ್ನು ತೆರೆಗೆ ತರಲು ಸಿದ್ಧತೆ ಮಾಡಿಕೊಂಡಿದೆ.

ಅಂದಹಾಗೆ, “ಸರ್ವಸ್ವ ಪ್ರೊಡಕ್ಷನ್ಸ್‌’ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ “ಪುಕ್ಸಟ್ಟೆ ಲೈಫ‌ು’ ಚಿತ್ರಕ್ಕೆ ಸ್ವತಃ ವಿಜಯ್‌ ಅವರೇಕಥೆ ನೀಡಿದ್ದು, ಅರವಿಂದ್‌ ಕುಪ್ಶಿಕರ್‌ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಇನ್ನು ಈ ಚಿತ್ರದಲ್ಲಿ ಸಂಚಾರಿ ವಿಜಯ್‌ ಬೀಗ ರಿಪೇರಿ ಮಾಡುವ ಮುಸ್ಲಿಂ ಹುಡುಗನ ಪಾತ್ರದಲ್ಲಿಕಾಣಿಸಿಕೊಂಡಿದ್ದಾರೆ. ಇನ್ನು ಈ ಚಿತ್ರದ ಪಾತ್ರಕ್ಕಾಗಿ ಸಂಚಾರಿ ವಿಜಯ್‌ ತಮ್ಮ ತೂಕವನ್ನು ಇಳಿಸಿಕೊಂಡಿದ್ದರಂತೆ. “ಯಾವುದೇ ಪಾತ್ರವಿರಲಿ ಅದಕ್ಕೆ ವಿಜಯ್‌ ತನ್ನದೇ ಆದ ಪರಿಶ್ರಮ ಹಾಕುತ್ತಿದ್ದರು.

ಚಿತ್ರೀಕರಣ ಮತ್ತಿತರ ಚಿತ್ರದಕೆಲಸಕ್ಕೆಕೂಡ ಸೈಕಲ್‌ನಲ್ಲೇ ಓಡಾಡುತ್ತಿದ್ದರು. ಈ ಚಿತ್ರದಲ್ಲೂಕೂಡ ಪಾತ್ರಕ್ಕೆ ಬೇಕಾದಷ್ಟು ತೂಕ ಇಳಿಸಿಕೊಂಡು, ಸಣ್ಣಗಾಗಿದ್ದರು. ಸಾಮಾನ್ಯವಾಗಿ ಸಿನಿಮಾಗಳಲ್ಲಿ ಮುಸ್ಲಿಂ ಪಾತ್ರಗಳು ಉರ್ದು, ಹಿಂದಿ ಮಿಶ್ರಿತ ಅರೆಬರೆಕನ್ನಡದಲ್ಲಿ ಮಾತನಾಡುತ್ತವೆ. ಆದ್ರೆ ತುಂಬಾ ಚೆನ್ನಾಗಿ ಕನ್ನಡ ಮಾತನಾಡುವ ಮುಸ್ಲಿಮರೂ ಇ¨ªಾರೆ. ಹಾಗೆ ಅಪ್ಪಟ ಕನ್ನಡದಲ್ಲೇ ಮಾತನಾಡುವ ಮುಸ್ಲಿಂ ಯುವಕನ ಪಾತ್ರ ವಿಜಯ್‌ ಅವರದ್ದು’ ಎನ್ನುತ್ತದೆ ಚಿತ್ರತಂಡ.

ಇತ್ತೀಚೆಗೆ “ಪುಕ್ಸಟ್ಟೆ ಲೈಫ‌ು’ ಚಿತ್ರದ ಟ್ರೇಲರ್‌ ಮತ್ತು ಹಾಡುಗಳು ಬಿಡುಗಡೆಯಾಗಿದ್ದು, ನೋಡುಗರಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅದರಲ್ಲೂ ವಿಜಯ್‌ ಅವರ ಪಾತ್ರ ನಿರ್ವಹಣೆ ಬಗ್ಗೆ ಚಿತ್ರರಂಗದಿಂದಲೂ ಪ್ರಶಂಸೆಯ ಮಾತುಗಳು ವ್ಯಕ್ತವಾಗುತ್ತಿವೆ. ಇನ್ನು ವಿಜಯ್‌ ಬದುಕಿದ್ದಾಗಲೇ, “ಪುಕ್ಸಟ್ಟೆ ಲೈಫ‌ು’ ಚಿತ್ರವನ್ನು ವೀಕ್ಷಿಸಿದ್ದ ನಟ ಕಿಚ್ಚ ಸುದೀಪ್‌, “ಬೀಗ ರಿಪೇರಿ ಮಾಡುವ ಹುಡುಗನ ಪಾತ್ರದಲ್ಲಿ ವಿಜಯ್‌ ಅದ್ಭುತವಾಗಿ ನಟಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು.  ಅಲ್ಲದೆ, ಇಂಥದ್ದೇ ವಿಭಿನ್ನ ಪಾತ್ರಗಳಲ್ಲಿ ನಟಿಸುವಂತೆ ಹೇಳಿದ್ದರು’ ಎನ್ನುತ್ತದೆ ಚಿತ್ರತಂಡ.

“ಪುಕ್ಸಟ್ಟೆ ಲೈಫ‌ು’ ಚಿತ್ರದಲ್ಲಿ ಸಂಚಾರಿ ವಿಜಯ್‌ ಅವರಿಗೆ ಮಾತಂಗಿ ಪ್ರಸನ್ನ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ರಂಗಾಯಣ ರಘು, ಅಚ್ಯುತ ಕುಮಾರ್‌ ಮೊದಲಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಒಟ್ಟಾರೆ ತನ್ನ ಟೈಟಲ್‌ ಮತ್ತು ಸಬ್ಜೆಕ್ಟ್ ಮೂಲಕ ಸಿನಿಮಂದಿಯ ಗಮನ ಸೆಳೆದಿರುವ “ಪುಕ್ಸಟ್ಟೆ ಲೈಫ‌ು’ ನೋಡುಗರಿಗೆ ಎಷ್ಟರ ಇಷ್ಟವಾಗಲಿದೆ ಅನ್ನೋದು ಮುಂದಿನವಾರ ಗೊತ್ತಾಗಲಿದೆ.

ಟಾಪ್ ನ್ಯೂಸ್

police

ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಕೇಸ್ : ಪೋಲೀಸರ ಅಮಾನತು

bike insurance

ಬೈಕ್ 150 ಸಿಸಿಗಿಂತ ಹೆಚ್ಚಿನದ್ದಾಗಿದ್ದರೆ ಇನ್ಶುರೆನ್ಸ್‌  ಕ್ಲೈಮ್  ಆಗುವುದಿಲ್ಲವೇ..?

goa

ಗೋವಾ ವಿದೇಶಿ ಪ್ರವಾಸಿಗರಿಗೆ RTPCR ಕಡ್ಡಾಯ: ಖಾಸಗಿ ಸಂಸ್ಥೆಗೆ ಗುತ್ತಿಗೆ

21ananya

ಅನನ್ಯ-ಆರ್ಯನ್ ವಾಟ್ಸ್ಯಾಪ್ ಚಾಟ್: ಡ್ರಗ್ಸ್ ಅಲ್ಲಂತೆ ಸಿಗರೇಟ್ ಅಂತೆ!?

1-111

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ಹಿಂಸಾಚಾರ : ಪ್ರಮುಖ ಸೂತ್ರಧಾರನ ಬಂಧನ

2012 ಟಿ20 ವಿಶ್ವಕಪ್ ನಲ್ಲಿ ಅಫ್ಘಾನ್ ತಂಡಕ್ಕೆ ಚಿಯರ್ ಮಾಡಿದ್ದು ಮೂವರು ಮಾತ್ರ!

2012 ಟಿ20 ವಿಶ್ವಕಪ್ ನಲ್ಲಿ ಅಫ್ಘಾನ್ ತಂಡಕ್ಕೆ ಚಿಯರ್ ಮಾಡಿದ್ದು ಮೂವರು ಮಾತ್ರ!

1-belur

ರಾಘವೇಂದ್ರ ಮತ್ತು ವಿಜಯೇಂದ್ರರ ಹಣವೆಲ್ಲವೂ ಷಡಕ್ಷರಿ ಬಳಿ : ಬೇಳೂರು ಬಾಂಬ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಿನಿಮಾದ ‘ಸರ್‌ಪ್ರೈಸ್‌’ ಟೈಟಲ್‌

ಸಿನಿಮಾದ ‘ಸರ್‌ಪ್ರೈಸ್‌’ ಟೈಟಲ್‌

ಟಾಮ್‌ ಅಂಡ್‌ ಜೆರ್ರಿ ಗೇಮ್‌ಗೆ ರೆಡಿ: ಡೈರೆಕ್ಟರ್‌ ಕ್ಯಾಪ್‌ ತೊಟ್ಟ “KGF’ ಡೈಲಾಗ್‌ ರೈಟರ್‌

ಟಾಮ್‌ ಅಂಡ್‌ ಜೆರ್ರಿ ಗೇಮ್‌ಗೆ ರೆಡಿ: ಡೈರೆಕ್ಟರ್‌ ಕ್ಯಾಪ್‌ ತೊಟ್ಟ “KGF’ ಡೈಲಾಗ್‌ ರೈಟರ್‌

kannada actress prema

ವಕಾಲತ್ತು ವಹಿಸಿ ಬಂದರು ಪ್ರೇಮಾ

ಸಕೂಚಿ

ಹೊರಬಂತು ಹೊಸಬರ ಹಾರರ್‌-ಥ್ರಿಲ್ಲರ್‌ “ಸಕೂಚಿ’ ಟ್ರೇಲರ್‌

sakath movie

ಅ. 24ಕ್ಕೆ ಗಣಿ-ಸುನಿ ಕಾಂಬಿನೇಶನ್‌ “ಸಖತ್‌’ ಟೀಸರ್‌

MUST WATCH

udayavani youtube

ನಮ್ಮ ದೇಶ ಕರ್ತವ್ಯ ಪಾಲಿಸಿದೆ : ಪ್ರಧಾನಿ ನರೇಂದ್ರ ಮೋದಿ

udayavani youtube

ಶೆಟ್ಟಿ ನೀನು ಹುಡುಗಿ ತರ ಮಾತಾಡ್ತೀಯ

udayavani youtube

POLYHOUSE ನಲ್ಲಿ ಸೌತೆಕಾಯಿ ತರಕಾರಿ ಕೃಷಿ; ಇಲ್ಲಿದೆ ಸಂಪೂರ್ಣ ಮಾಹಿತಿ…

udayavani youtube

ನೂರು ಕೋಟಿ ಡೋಸ್‌ ಲಸಿಕಾ ಗುರಿ ತಲುಪಿದ ಸಂಭ್ರಮ

udayavani youtube

Video Viral : ಜಾನಪದ ಶೈಲಿಯ ಹಾಡಿನ ಮೂಲಕ ಒಡ್ಡೋಲಗದ ಆಮಂತ್ರಣ

ಹೊಸ ಸೇರ್ಪಡೆ

ಪಕ್ಷ ಸಂಘಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕರ ವೈಫ‌ಲ್ಯ

ಪಕ್ಷ ಸಂಘಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕರ ವೈಫ‌ಲ್ಯ

police

ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಕೇಸ್ : ಪೋಲೀಸರ ಅಮಾನತು

by-election-24

ದೇಗಲೂರ ಉಪ ಕದನ; ಚವ್ಹಾಣ ಪ್ರಚಾರ

devadasi23

ಬಾಕಿ ಪಿಂಚಣಿ ಬಿಡುಗಡೆಗೆ ದೇವದಾಸಿಯರ ಒತ್ತಾಯ

shasana-22

ಬಳ್ಳಮಂಜ: 14-15 ನೇ ಶತಮಾನದ ಶಾಸನದ‌ ಅಧ್ಯಯನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.