ಒಡೆಯ ದರ್ಶನ

ಕ್ಲಾಸಿಗೂ, ಮಾಸಿಗೂ ಬಾಸ್‌...

Team Udayavani, Dec 6, 2019, 6:15 AM IST

ದರ್ಶನ್‌ ನಾಯಕರಾಗಿ ನಟಿಸಿರುವ “ಒಡೆಯ’ ಚಿತ್ರದ ಹಾಡು, ಟ್ರೇಲರ್‌ ಈಗಾಗಲೇ ಬಿಡುಗಡೆಯಾಗಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬಿಡುಗಡೆಯ ಹಂತದಲ್ಲಿರುವ “ಒಡೆಯ’ ಬಗ್ಗೆ ಸ್ವತಃ ದರ್ಶನ್‌ ಮಾತನಾಡಿದ್ದಾರೆ. ಫ್ಯಾಮಿಲಿ ಕಂ ಮಾಸ್‌ ಎಂಟರ್‌ಟೈನರ್‌ ಆಗಿ ಪ್ರೇಕ್ಷಕರನ್ನು ರಂಜಿಸುತ್ತದೆ ಎಂಬ ವಿಶ್ವಾಸ ದರ್ಶನ್‌ ಅವರಿಗಿದೆ.

“ನನ್ನ ಕೆರಿಯರ್‌ನಲ್ಲಿ ಒಂದು ಸಿನಿಮಾ ಮುಗಿಯುವ ಮುನ್ನ ಮತ್ತೂಂದು ಸಿನಿಮಾಕ್ಕೆ ಅಡ್ವಾನ್ಸ್‌ ಕೊಟ್ಟವರಲ್ಲಿ ಶೈಲಜಾ ನಾಗ್‌ ಬಿಟ್ಟರೆ ಸಂದೇಶ್‌ ಪ್ರೊಡಕ್ಷನ್ಸ್‌ …

– ಹೀಗೆ ಹೇಳಿ ನಕ್ಕರು ದರ್ಶನ್‌. ಅವರು ಹೀಗೆ ಹೇಳಲು ಕಾರಣ “ಒಡೆಯ’. ದರ್ಶನ್‌ ನಾಯಕರಾಗಿರುವ “ಒಡೆಯ’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಚಿತ್ರ ಡಿ.12ರಂದು ತೆರೆಕಾಣುತ್ತಿದೆ. “ಒಡೆಯ’ ಚಿತ್ರವನ್ನು ಸಂದೇಶ್‌ ಪ್ರೊಡಕ್ಷನ್ಸ್‌ನಡಿ ಸಂದೇಶ್‌ ನಿರ್ಮಿಸಿದ್ದಾರೆ. ಈಗಾಗಲೇ ದರ್ಶನ್‌ ಆ ಬ್ಯಾನರ್‌ನಲ್ಲಿ “ಪ್ರಿನ್ಸ್‌’ ಹಾಗೂ “ಐರಾವತ’ ಸಿನಿಮಾ ಮಾಡಿದ್ದು, “ಒಡೆಯ’ ಮೂರನೇ ಸಿನಿಮಾ. ಈ ಸಿನಿಮಾ ಬಿಡುಗಡೆಗೂ ಮುನ್ನವೇ ಮತ್ತೂಂದು ಸಿನಿಮಾಕ್ಕೆ ಸಂದೇಶ್‌, ದರ್ಶನ್‌ಗೆ ಅಡ್ವಾನ್ಸ್‌ ಮಾಡಿದ್ದಾರೆ. ಈ ಮೂಲಕ ಸಂದೇಶ್‌ ಬ್ಯಾನರ್‌ನಲ್ಲಿ ದರ್ಶನ್‌ ಅವರ ಮತ್ತೂಂದು ಸಿನಿಮಾ ಆಗೋದು ಪಕ್ಕಾ.

ಸದ್ಯ ದರ್ಶನ್‌ “ಒಡೆಯ’ನ ನಿರೀಕ್ಷೆಯಲ್ಲಿದ್ದಾರೆ. ಅದಕ್ಕೆ ಕಾರಣ ಫ್ಯಾಮಿಲಿ ಕಂ ಮಾಸ್‌ ಎಂಟರ್‌ಟೈನರ್‌. “ಇದು ಪಕ್ಕಾ ಫ್ಯಾಮಿಲಿ ಸಿನಿಮಾ. ಜೊತೆಗೆ ಮಾಸ್‌ ಅಂಶಗಳು ಕೂಡಾ ಇವೆ. ಅಭಿಮಾನಿಗಳು ಏನೇನು ಇಷ್ಟಪಡುತ್ತಾರೋ ಆ ಎಲ್ಲಾ ಅಂಶಗಳು ಇವೆ’ ಎನ್ನುತ್ತಾರೆ. ಅಂದಹಾಗೆ, ಇದು ತಮಿಳಿನ “ವೀರಂ’ ಚಿತ್ರದ ರೀಮೇಕ್‌. ಸಾಕಷ್ಟು ಬದಲಾವಣೆಗಳೊಂದಿಗೆ ಈ ಸಿನಿಮಾ ಮಾಡಲಾಗಿದೆಯಂತೆ. “ನಾವು ಈ ಸಿನಿಮಾವನ್ನು ನೋಡಿದ್ದು ಫ್ಲೈಟ್‌ನಲ್ಲಿ. ಫಾರಿನ್‌ಗೆ ಹೋಗುತ್ತಿದ್ದಾಗ “ವೀರಂ’ ನೋಡಿದ್ವಿ. ಚೆನ್ನಾಗಿದೆಯಲ್ಲ, ಯಾಕೆ ನಾವು ಮಾಡಬಾರದು ಎಂದು ಆರಂಭವಾದ ಮಾತು ಈಗ ಸಿನಿಮಾ ಆಗುವ ಹಂತಕ್ಕೆ ಬಂದಿದೆ. ನಮ್ಮ ನೇಟಿವಿಟಿಗೆ ಏನೇನು ಬದಲಾವಣೆ ಮಾಡಿಕೊಳ್ಳಬೇಕೋ, ಅವೆಲ್ಲವನ್ನು ಮಾಡಿಕೊಂಡಿದ್ದೇವೆ. ಹಾಗಂತ ಮೂಲ ಅಂಶವನ್ನು ಬಿಟ್ಟು ಏನೂ ಮಾಡಿಲ್ಲ. ಮೂಲ ಸಿನಿಮಾದ ಅವಧಿ ಹೆಚ್ಚಿತ್ತು. ಆದರೆ, ನಾವಿಲ್ಲಿ ಅವಧಿ ಕಡಿತಗೊಳಿಸಿದ್ದೇವೆ’ ಎಂದು ವಿವರ ನೀಡಿದರು.

ದರ್ಶನ್‌ ಸಿನಿಮಾ ಎಂದರೆ ಭರ್ಜರಿ ಆ್ಯಕ್ಷನ್‌ ಇರುತ್ತದೆ ಎಂದು ಹೊಸದಾಗಿ ಹೇಳಬೇಕಿಲ್ಲ. “ಒಡೆಯ’ ಟ್ರೇಲರ್‌ ನೋಡಿದವರಿಗೆ ಚಿತ್ರದಲ್ಲಿ ಮಾಸ್‌ ಅಂಶಗಳಿರುವುದು ಗೊತ್ತಾಗುತ್ತದೆ. ಈ ಬಗ್ಗೆಯೂ ದರ್ಶನ್‌ ಮಾತನಾಡಿದ್ದಾರೆ. “ಚಿತ್ರದಲ್ಲಿ ಸಾಕಷ್ಟು ಮಾಸ್‌ ಅಂಶಗಳಿವೆ. ಹಾಗಂತ ಮಕ್ಕಳು, ಮನೆ ಮಂದಿಯೆಲ್ಲ ಅತಿಯಾಯಿತು ಎನ್ನುವಂತಹ ಹಾಗೂ ಸೆನ್ಸಾರ್‌ನಲ್ಲಿ ಪ್ರಾಬ್ಲಿಂ ಆಗುವಂತಹ ಫೈಟ್ಸ್‌ ಇಲ್ಲ’ ಎನ್ನುತ್ತಾರೆ.

ಸದಾ ಸಿನಿಮಾದ ಚಿತ್ರೀಕರಣದಲ್ಲಿ ಬಿಝಿಯಾಗಿರುವ ದರ್ಶನ್‌ಗೆ ಅವರ ವೈದ್ಯರು ಆಗಾಗ, “ದರ್ಶನ್‌ ರಾಡ್‌ ತೆಗೆಸೋಕೆ ಯಾವತ್ತು ಬರಿ¤àರಾ’ ಎಂದು ಕೇಳುತ್ತಿರುತ್ತಾರಂತೆ. ನಿಮಗೆ ಗೊತ್ತಿರುವಂತೆ ಕಾರು ಅಪಘಾತದಲ್ಲಿ ದರ್ಶನ್‌ ಕೈಗೆ ಗಾಯಕವಾಗಿ ರಾಡ್‌ ಹಾಕಲಾಗಿದೆ. ಒಂದು ವರ್ಷವಾದರೂ ರಾಡ್‌ ತೆಗೆದಿಲ್ಲ. ಅದಕ್ಕೆ ಕಾರಣ ದರ್ಶನ್‌ ಚಿತ್ರೀಕರಣದಲ್ಲಿ ಬಿಝಿ. “ರಾಡ್‌ ತೆಗೆಸಲು ಹೋದರೆ ಮತ್ತೆ ಮೂರು ತಿಂಗಳು ರೆಸ್ಟ್‌ ಬೇಕು. ಅದಕ್ಕಾಗಿ ಒಂದಷ್ಟು ಚಿತ್ರೀಕರಣ ಮಾಡಿ, ಬ್ಯಾಕಪ್‌ ಮಾಡಿಕೊಂಡೇ ಹೋಗುವ ಎಂದು ಸುಮ್ಮನಿದ್ದೇನೆ’ ಎನ್ನುತ್ತಾರೆ.

ಅಂದಹಾಗೆ, ಇತ್ತೀಚೆಗೆ “ಒಡೆಯ’ ಚಿತ್ರದ ಹಾಡು ಹಾಗೂ ಟ್ರೇಲರ್‌ ಬಿಡುಗಡೆ ನಡೆಯಿತು. ನಿರ್ಮಾಪಕರಾದ ಸಂದೇಶ್‌ ನಾಗರಾಜ್‌, ಸಂದೇಶ್‌, ಎಂ.ಡಿ.ಶ್ರೀಧರ್‌, ನಾಯಕಿ ಸನಾ ಸೇರಿದಂತೆ ಚಿತ್ರತಂಡ ಹಾಜರಿತ್ತು.

– ರವಿಪ್ರಕಾಶ್‌ ರೈ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • "ಗಾಳಿಪಟ ಅಂದ ಕೂಡಲೇ ಮೊದಲು ನೆನಪಿಗೆ ಬರೋದು ಆ ಹಸಿರು, ಮಂಜು, ಪ್ರೀತಿ, ಒಂದಷ್ಟು ಹುಡುಕಾಟ, ಒಂದಷ್ಟು ತಮಾಷೆ, ಹೀಗೆ... ಇಲ್ಲೂ ಅದೆಲ್ಲವನ್ನೂ ನೋಡ­ಬಹುದು. ಈ ಬಾರಿ "ಗಾಳಿಪಟ-2'ನ್ನು...

  • "ಇಷ್ಟು ದಿನ ನನಗೆ ಸನ್ನಿವೇಶ, ಸಂದರ್ಭಗಳೇ ನನಗೆ ವಿಲನ್‌ ಆಗಿದ್ದವು. ಆದರೆ, ಮೊದಲ ಬಾರಿಗೆ ಚಿತ್ರದಲ್ಲಿ ಒಬ್ಬ ಖಡಕ್‌ ವಿಲನ್‌ ಇದ್ದಾನೆ ಮತ್ತು ಆತನ ಜೊತೆ ಹೊಡೆದಾಡುತ್ತೇನೆ...

  • ಚಿತ್ರರಂಗಕ್ಕೂ, ಗೋವಿಂದನಿಗೂ ಮೊದಲಿನಿಂದಲೂ ಒಂಥರಾ ಬಿಡಿಸಲಾಗದ ನಂಟು. ಅದೆಷ್ಟೋ ನಿರ್ಮಾಪಕರು, ನಿರ್ದೇಶಕರು, ಸ್ಟಾರ್ಗೆ ಗೋವಿಂದನೇ ಫೇವರೆಟ್‌ ಗಾಡ್‌. ಇನ್ನು...

  • ಕೆಲವರಿಗೆ ಪ್ರತಿಭೆ ಇರುತ್ತೆ. ಅವಕಾಶ ಇರಲ್ಲ. ಇನ್ನೂ ಕೆಲವರಿಗೆ ಅವಕಾಶ ಸಿಕ್ಕರೂ ಪ್ರತಿಭೆ ಮೂಲಕ ಗುರುತಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇಲ್ಲೊಂದು ಚಿತ್ರತಂಡ...

  • "ಆ ರಾಜುನೇ ಬೇರೆ ಇಲ್ಲಿ ಕಾಣುವ ರಾಜುನೇ ಬೇರೆ..' - ಹೀಗೆ ಹೇಳುತ್ತಾ ಹೋದರು ನಿರ್ಮಾಪಕ ಮಂಜುನಾಥ್‌ ವಿಶ್ವಕರ್ಮ. ಅವರು ಹೇಳಿದ್ದು "ರಾಜು ಜೇಮ್ಸ್‌ ಬಾಂಡ್‌' ಬಗ್ಗೆ....

ಹೊಸ ಸೇರ್ಪಡೆ