ಅಖಿಲಾ ನಿರೀಕ್ಷೆಯ ರತ್ನಮಂಜರಿ

ಫ್ಯಾಷನ್‌ ಡಿಸೈನರ್‌ ಗೌರಿಯಾಗಿ ನಟನೆ

Team Udayavani, May 3, 2019, 6:25 AM IST

ಅನಿವಾಸಿ ಕನ್ನಡಿಗರು ಸೇರಿ ನಿರ್ಮಿಸುತ್ತಿರುವ “ರತ್ನಮಂಜರಿ’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಸದ್ಯ ಚಿತ್ರದ ಅಂತಿಮ ಹಂತದ ಪ್ರಮೋಷನ್‌ ಕೆಲಸಗಳಲ್ಲಿ ನಿರತವಾಗಿರುವ ಚಿತ್ರತಂಡ, ಇದೇ ಮೇ. 17ರಂದು ಚಿತ್ರವನ್ನು ಪ್ರೇಕ್ಷಕರ ಮುಂದೆ ತರಲು ಮುಹೂರ್ತ ಫಿಕ್ಸ್‌ ಮಾಡಿಕೊಂಡಿದೆ. ಚಿತ್ರದ ಬಿಡುಗಡೆಗೂ ಮುನ್ನ ಮಾತಿಗೆ ಸಿಕ್ಕ ಚಿತ್ರದ ನಾಯಕಿ ಅಖಿಲಾ ಪ್ರಕಾಶ್‌, “ರತ್ನಮಂಜರಿ’ಯ ಜರ್ನಿಯ ಬಗ್ಗೆ ಒಂದಷ್ಟು ಅನುಭವಗಳನ್ನು ಹಂಚಿಕೊಂಡಿದ್ದಾರೆ.

“ನನ್ನ ಹಿಂದಿನ ನಾಲ್ಕು ಚಿತ್ರಗಳಿಗೆ ಹೋಲಿಸಿದರೆ “ರತ್ನಮಂಜರಿ’ ಸಾಕಷ್ಟು ಅನುಭವಗಳನ್ನು ತಂದುಕೊಟ್ಟಂತಹ ಚಿತ್ರ. ನನ್ನ ಸಿನಿಮಾ ಕೆರೆಯರ್‌ನಲ್ಲಿ “ರತ್ನಮಂಜರಿ’ ಒಂದು ವಂಡರ್‌ಫ‌ುಲ್‌ ಜರ್ನಿ. ಆರಂಭದಲ್ಲಿ ಸಿನಿಮಾ ಯಾವಾಗ ಮುಗಿಯುತ್ತದೆಯೋ, ಅಂತ ಅನಿಸುತ್ತಿತ್ತು. ಆದ್ರೆ ಈಗ ಸಿನಿಮಾ ಇಷ್ಟು ಬೇಗ ಮುಗಿದು ಹೋಯಿತಾ ಅಂತ ಅನಿಸುತ್ತಿದೆ.

ದೊಡ್ಡ ಪ್ರಾಜೆಕ್ಟ್‌ನ ಹೇಗೆ ಪ್ಲಾನಿಂಗ್‌ ಮಾಡಬೇಕು, ಅದನ್ನು ಹೇಗೆ ಎಕ್ಸಿಕ್ಯೂಟ್‌ ಮಾಡಬೇಕು. ಸಮಯಕ್ಕೆ ಸರಿಯಾಗಿ ತುಂಬಾ ಪ್ರೊಫೇಷನಲ್‌ ಆಗಿ ಹೇಗೆ ಮುಗಿಸಬೇಕು ಅನ್ನೋದನ್ನ ಈ ಸಿನಿಮಾ ಕಲಿಸಿಕೊಟ್ಟಿದೆ. ಒಟ್ಟಿನಲ್ಲಿ ಸಿನಿಮಾ ಮುಗಿದಿದ್ದೇ ಗೊತ್ತಾಗಲಿಲ್ಲ’ ಎನ್ನುತ್ತಾರೆ ಅಖಿಲಾ ಪ್ರಕಾಶ್‌.

ಇನ್ನು “ರತ್ನ­ಮಂಜರಿ’ ಚಿತ್ರದಲ್ಲಿ ಮೂವರು ನಾಯಕಿ­ಯರಿ­­ದ್ದಾರಂತೆ. ಚಿತ್ರದಲ್ಲಿ ಅಖಿಲಾ, ಫ್ಯಾಷನ್‌ ಡಿಸೈನರ್‌ ಗೌರಿ ಎನ್ನುವ ಪಾತ್ರವನ್ನು ನಿರ್ವಹಿಸಿದ್ದಾರೆ. ಆದರೆ ಚಿತ್ರದಲ್ಲಿ ನಿಜವಾದ “ರತ್ನಮಂಜರಿ’ ಯಾರು ಅನ್ನೋದು ಸಸ್ಪೆನ್ಸ್‌ ಅದನ್ನ ಸಿನಿಮಾದಲ್ಲೇ ನೋಡಬೇಕು ಅಂತಾರೆ ಅಖಿಲಾ.

ಇತ್ತೀಚೆಗೆ ಹಂಸಲೇಖ, ಡಾ. ನಾಗತಿಹಳ್ಳಿ ಚಂದ್ರಶೇಖರ್‌ ಮೊದಲಾದ ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ “ರತ್ನಮಂಜರಿ’ ಚಿತ್ರದ ಆಡಿಯೋ ಅದ್ಧೂರಿಯಾಗಿ ಬಿಡುಗಡೆ­ಯಾಗಿದೆ. ಹರ್ಷವರ್ಧನ್‌ ಸಂಗೀತ ಸಂಯೋಜನೆಯ ಈ ಹಾಡುಗಳಿಗೆ ಪುನೀತ್‌ ರಾಜಕುಮಾರ್‌, ವಸಿಷ್ಠ ಸಿಂಹ, ಟಿಪ್ಪು ಮೊದಲಾದವರು ಧ್ವನಿಯಾಗಿದ್ದಾರೆ. ಸದ್ಯ ಬಿಡುಗಡೆಯಾಗಿರುವ “ರತ್ನಮಂಜರಿ’ ಹಾಡುಗಳ ಬಗ್ಗೆಯೂ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್‌ ಸಿಗುತ್ತಿರುವುದು ಅಖೀಲಾಗೆ ಖುಷಿ ತಂದಿದೆಯಂತೆ.

“ರತ್ನಮಂಜರಿ’ ಬಿಡುಗಡೆಗೂ ಮೊದಲೇ ಕೆಲವು ಚಿತ್ರಗಳ ಆಫ‌ರ್ ಬರುತ್ತಿದ್ದರೂ, ಸದ್ಯ “ರತ್ನಮಂಜರಿ’ ಚಿತ್ರದ ಪ್ರಮೋಷನ್‌ ಕಾರ್ಯಗಳಲ್ಲಿ ನಿರತರಾಗಿರುವ ಅಖೀಲಾ, “ರತ್ನಮಂಜರಿ’ ರಿಲೀಸ್‌ ಆದ ಮೇಲೆ ಬೇರೆ ಚಿತ್ರಗಳ ಬಗ್ಗೆ ಯೋಚನೆ ಮಾಡುತ್ತೇನೆ ಎನ್ನುತ್ತಾರೆ.

ವಿದೇಶಿ ಕನ್ನಡಿಗರಾದ ಸಂದೀಪ್‌ ಕುಮಾರ್‌, ನಟರಾಜ್‌ ಹಳೆಬೀಡು ಹಾಗೂ ಇತರರು ಸೇರಿ ನಿರ್ಮಿಸಿರುವ “ರತ್ನಮಂಜರಿ’ ಚಿತ್ರಕ್ಕೆ ನಿರ್ದೇಶಕ ಪ್ರಸಿದ್ಧ್ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್‌-ಕಟ್‌ ಹೇಳಿದ್ದಾರೆ. ಒಟ್ಟಾರೆ ಬಿಡುಗಡೆಗೂ ಮೊದಲೇ ಒಂದಷ್ಟು ಸದ್ದು ಮಾಡುತ್ತ, ಸುದ್ದಿಯಲ್ಲಿರುವ “ರತ್ನಮಂಜರಿ’ ಕನ್ನಡ ಸಿನಿಪ್ರಿಯರಿಗೆ ಎಷ್ಟರ ಮಟ್ಟಿಗೆ ಇಷ್ಟವಾಗಲಿದೆ, “ರತ್ನಮಂಜರಿ’ ಅಖಿಲಾ ಪ್ರಕಾಶ್‌ ಎಂಬ ಭರವಸೆಯ ನಾಯಕಿಗೆ ಬ್ರೇಕ್‌ ತಂದುಕೊಡುತ್ತದೆಯಾ ಅನ್ನೋದು ಇದೇ ತಿಂಗಳಾಂತ್ಯಕ್ಕೆ ಗೊತ್ತಾಗಲಿದೆ.


ಈ ವಿಭಾಗದಿಂದ ಇನ್ನಷ್ಟು

  • "ನಾನು ಏನು ಅಂದುಕೊಂಡಿದ್ದೆನೋ ಹಾಗೇ ಆಗಿದೆ...' - ಹೀಗೆ ಹೇಳಿ ಹಾಗೊಂದು ಸ್ಮೈಲ್‌ ಕೊಟ್ಟರು ನಿರ್ಮಾಪಕ ಶ್ರೀನಿವಾಸ್‌. ಅವರು ಹೀಗೆ ಹೇಳಿದ್ದು ತಮ್ಮ ನಿರ್ಮಾಣದ...

  • "ಈ ಸಿನಿಮಾದ ನಿಜವಾದ ಹೀರೋ ನಿರ್ಮಾಪಕ ಮುನಿರತ್ನ' - ಹೀಗೆ ಹೇಳಿ ಪಕ್ಕದಲ್ಲಿ ಕುಳಿತಿದ್ದ ನಿರ್ಮಾಪಕ ಮುನಿರತ್ನ ಅವರತ್ತ ನೋಡಿದರು ನಿರ್ದೇಶಕ ನಾಗಣ್ಣ. ಅವರು ಹೀಗೆ...

  • ಈಗಾಗಲೇ ಶೀರ್ಷಿಕೆ, ಫ‌ಸ್ಟ್‌ಲುಕ್‌ ಹಾಗೂ ಟೀಸರ್‌ ಮೂಲಕ ಸಾಕಷ್ಟು ಕುತೂಹಲ ಮೂಡಿಸಿರುವ "ಕಮರೊಟ್ಟು ಚೆಕ್‌ಪೋಸ್ಟ್‌' ಇದೀಗ ರಿಲೀಸ್‌ಗೆ ರೆಡಿಯಾಗಿದೆ. ಚಿತ್ರದಲ್ಲಿ...

  • ಮುಹೂರ್ತದ ಬಳಿಕ ಎಲ್ಲಿಯೂ ಮಾಧ್ಯಮಗಳ ಮುಂದೆ ಕಾಣಿಸಿಕೊಂಡಿರದ "ಅಮರ್‌' ಚಿತ್ರತಂಡ, ಚಿತ್ರದ ಬಿಡುಗಡೆಗೂ ಮುನ್ನ ಪತ್ರಿಕಾಗೋಷ್ಟಿಯನ್ನು ನಡೆಸಿ "ಅಮರ್‌' ಸಿನಿ...

  • ಶಾದಿ ಕೆ ಆಫ್ಟರ್‌ ಎಫೆಕ್ಟ್...! - ಇದು ಬಾಲಿವುಡ್‌ನ‌ಲ್ಲಿ ಬಂದ ಸಿನಿಮಾದ ಹೆಸರು. ಈಗ ಇಲ್ಲೇಕೆ ಈ ಹೆಸರಿನ ಪ್ರಸ್ತಾಪ ಎಂಬ ಸಣ್ಣದ್ದೊಂದು ಪ್ರಶ್ನೆ ಕಾಡಬಹುದು. ಹಾಗಂತ,...

ಹೊಸ ಸೇರ್ಪಡೆ