ಕ್ರೇಜಿ ದೃಶ್ಯ ವೈಭವ

ವಿಭಿನ್ನ ಗೆಟಪ್‌ನಲ್ಲಿ ರವಿಚಂದ್ರನ್‌

Team Udayavani, Nov 8, 2019, 6:01 AM IST

ಡಾಕ್ಟರೇಟ್‌ ಸಿಕ್ಕಿದ್ದು ಖುಷಿ ಇದೆ. ಜವಾಬ್ದಾರಿಯೂ ಹೆಚ್ಚಿದೆ. ಗೌರವದಿಂದ ನೀಡಿದ ಆ ಪದವಿಯನ್ನು ಅಷ್ಟೇ ಪ್ರೀತಿಯಿಂದ ಸ್ವೀಕರಿಸಿದ್ದೇನೆ. ಎಷ್ಟೋ ಜನ ತಡವಾಗಿ ಬಂತು ಅಂತಾರೆ. ಬರುವ ಸಮಯಕ್ಕೇ ಎಲ್ಲವೂ ಬರೋದು…

“ನಾನು ಯಾವುದನ್ನೂ ಹುಡುಕುವುದಿಲ್ಲ. ಎಲ್ಲವೂ ನನ್ನನ್ನೇ ಹುಡುಕಿಕೊಂಡು ಬರಬೇಕು. ಹಾಗೆಯೇ ಯಾವುದಕ್ಕೂ ಕಾದಿಲ್ಲ. ಆ ಸಮಯಕ್ಕೆ ಏನೆಲ್ಲಾ ಬರಬೇಕೋ ಅದು ಬಂದೇ ಬರುತ್ತೆ…’

-ಹೀಗೆ ತಮ್ಮದೇ ಶೈಲಿಯ ಮಾತಲ್ಲಿ ಹೇಳುತ್ತಾ ಹೋದರು ರವಿಚಂದ್ರನ್‌. ಅವರು ಹೇಳಿಕೊಂಡಿದ್ದು ತಮಗೆ ಬಂದ ಗೌರವ ಡಾಕ್ಟರೇಟ್‌ ವಿಷಯ ಸೇರಿದಂತೆ ಇತ್ತೀಚೆಗೆ ಅರಸಿ ಬರುತ್ತಿರುವ ಬಗೆ ಬಗೆಯ ಪಾತ್ರಗಳ ಕುರಿತು. ಅವರೀಗ “ಆ ದೃಶ್ಯ’ದ ಮೇಲೆ ಭರವಸೆ ಇಟ್ಟುಕೊಂಡಿದ್ದಾರೆ. ಆ ಬಗ್ಗೆ ಅವರು ಹೇಳಿಕೊಂಡಿದ್ದು ಅವರ ಮಾತಲ್ಲೇ …

ಇಂದು ಬಿಡುಗಡೆಯಾಗುತ್ತಿರುವ “ಆ ದೃಶ್ಯ’ ನನ್ನ ಇನ್ನೊಂದು ಇಮೇಜ್‌ ಬದಲಿಸುವ ಚಿತ್ರ ಆಗುತ್ತೆ. “ದೃಶ್ಯ’ ಹೇಗೆ ಒಂದು ಹೊಸ ಇಮೇಜ್‌ ಕೊಟ್ಟಿತ್ತೋ, “ಆ ದೃಶ್ಯ’ ಕೂಡ ಹೊಸದೊಂದು ಇಮೇಜ್‌ ಸಿಗುವ ಪಾತ್ರ ಮಾಡಿದ್ದೇನೆ. ನಿರ್ದೇಶಕ ಶಿವಗಣೇಶ್‌ ಅವರಿಲ್ಲಿ ನನ್ನನ್ನು ಯಂಗ್‌ ಗೆಟಪ್‌ನಲ್ಲಿ ತೋರಿಸಿದ್ದಾರೆ. “ರವಿ ಬೋಪಣ್ಣ’ ಚಿತ್ರದಲ್ಲಿ ಓಲ್ಡ್‌ ಏಜ್‌ ಪಾತ್ರ ಮಾಡಿದ್ದೇನೆ. ಆ ಚಿತ್ರದಲ್ಲಿ 60 ದಾಟಿಸಿದರು. ಇಲ್ಲಿ 30 ದಾಟಿಸಿದ್ದಾರೆ. ಈ ವರ್ಷ ನಾನಾ ರೀತಿಯ ಅವತಾರ ತಾಳಿದೆ. ಕೃಷ್ಣನ ಪಾತ್ರದಿಂದ ಹಿಡಿದು ಹಲವು ಮುಖಗಳನ್ನು ನೋಡಿದ್ದಾಯ್ತು. ಗಡ್ಡ ಬಿಟ್ಟೆ, ಮೀಸೆ ಬಿಟ್ಟೆ, ಯಂಗ್‌ ಆಗಿ ಕಾಣಿಸಿಕೊಂಡೆ. “ಆ ದೃಶ್ಯ’ ಒಂದು ಯೂತ್‌ಫ‌ುಲ್‌ ಟೀಮ್‌. ಎಲ್ಲರೂ ಇಲ್ಲಿ ಯಂಗ್‌ಸ್ಟರ್. ನಾನೊಬ್ಬ ಹಳಬ. ಅವರೆಲ್ಲರೂ ಹೊಸಬರು ಅಂತಾರೆ. ಆದರೆ, ನನ್ನ ಪ್ರಕಾರ ಪ್ರತಿ ಸಿನಿಮಾ ಮಾಡುವಾಗಲೂ ಪ್ರತಿಯೊಬ್ಬ ಕಲಾವಿದನೂ ಹೊಸಬನೇ. ನಾನು ಯಾವ ಚಿತ್ರ ಮಾಡಿದರೂ, ಹೊಸಬನಂತೆಯೇ ಕೆಲಸ ಮಾಡ್ತೀನಿ. ಇನ್ನು, “ಆ ದೃಶ್ಯ’ ಚಿತ್ರ ಮಾಡೋಕೆ ಕಾರಣ, ಕಥೆ ಮತ್ತು ಪಾತ್ರ. ಅದರಲ್ಲೂ ನಿರ್ಮಾಪಕ ಕೆ.ಮಂಜು ಒಡನಾಟ ಚೆನ್ನಾಗಿದೆ. ನನಗೆ ಸಾಕಷ್ಟು ಸಿನಿಮಾ ಮಾಡಿದ ನಿರ್ಮಾಪಕರಲ್ಲಿ ಕೆ.ಮಂಜು ಒಬ್ಬರು.

ಎಂಟರ ನಂಟು
ಸಾಮಾನ್ಯವಾಗಿ ಚಿತ್ರ ಬಿಡುಗಡೆ ಮುಂದಕ್ಕೆ ಹೋಗುವುದನ್ನು ಕೇಳಿದ್ದೀರಿ. ಆದರೆ, “ಆ ದೃಶ್ಯ’ ಒಂದು ವಾರ ಮೊದಲೇ ರಿಲೀಸ್‌ ಆಗುತ್ತಿದೆ. ನ.8 ನನ್ನ ಲಕ್ಕಿ ನಂಬರ್‌. ಯಾಕೆಂದರೆ, ಆ ಡೇಟ್‌ ಅಪ್ಪನನ್ನು ನೆನಪಿಸುತ್ತೆ. ಏ.17 ಅವರ ಬರ್ತ್‌ಡೇ. ನನ್ನ ಕಾರ್‌ ನಂಬರ್‌ ಕೂಡ 6884. ಹಾಗಾಗಿ ಅವರ ಆಶೀರ್ವಾದ ಈ ಚಿತ್ರದ ಮೇಲಿರಲಿದೆ. ಇದೆಲ್ಲವೂ ನನಗೆ ಹೊಸ ಚಾಪ್ಟರ್‌. ಮೊದಲ ಸಲ ಸಸ್ಪೆನ್ಸ್‌ ಥ್ರಿಲ್ಲರ್‌ ಜಾನರ್‌ ಮಾಡಿದ್ದೇನೆ. “ರವಿ ಬೋಪಣ್ಣ’ ಬೇರೆಯದ್ದೇ ಜಾನರ್‌ ಹೊಂದಿರುವ ಚಿತ್ರ. “ರಾಜೇಂದ್ರ ಪೊನ್ನಪ್ಪ’ ಕೂಡ ಹೊಸತನದ ಚಿತ್ರ ಆಗಲಿದೆ.

ಬಯಸದೇ ಬಂದ ಡಾಕ್ಟರೇಟ್‌
ನನಗೆ ಆ.18 ತುಂಬ ವಿಶೇಷವಾದ ದಿನ. ಕಾರಣ, ಅಂದು ನನ್ನ ಮಗಳ ಬರ್ತ್‌ಡೇ. ಅಂದೇ ನನಗೆ ಯುನಿರ್ವಸಿಟಿಯಿಂದ ನಿಮಗೆ ಡಾಕ್ಟರೇಟ್‌ ಕೊಡುತ್ತಿದ್ದೇವೆ ಎಂದು ಕಾಲ್‌ ಬರುತ್ತೆ. ಆವತ್ತೇ ನಾನು ನನ್ನ ಕನಸಿನ ಸಿನಿಮಾ ಚಟುವಟಿಕೆಗೂ ಚಾಲನೆ ಕೊಡ್ತೀನಿ. ಹಾಗಾಗಿ ಅ.18 ಮುಖ್ಯವಾದ ದಿನ ನನಗೆ. ಅಂದು ಸಾಕಷ್ಟು ಮೆಸೇಜ್‌ ಬರುತ್ತವೆ. ಎಲ್ಲರ ಮೆಸೇಜ್‌ನಲ್ಲೂ ಡಾಕ್ಟರೇಟ್‌ ಸಿಗುತ್ತಿರುವ ವಿಷಯ ಕೇಳಿ, “ಯು ಡಿಸವ್ರಿಟ್‌ ಸರ್‌’ ಅಂತ ಸಂದೇಶವಿರುತ್ತೆ. ನಾನು ಯಾವುದಕ್ಕೂ ಕಾದಿಲ್ಲ. ಕಾಯುವುದೂ ಇಲ್ಲ. ಆ ಸಮಯಕ್ಕೆ ಏನೆಲ್ಲಾ ಬರಬೇಕೋ, ಅದು ಬರುತ್ತೆ. ಹಾಗಾಗಿ, ನಾನು ಹೀಗೆ ನನ್ನ ಕೆಲಸದ ಮೂಲಕ ನಗಿಸುತ್ತ ಸಾಗುತ್ತೇನೆ.

ಡಾಕ್ಟರೇಟ್‌ ಸಿಕ್ಕಿದ್ದು ಖುಷಿ ಇದೆ. ಜವಾಬ್ದಾರಿಯೂ ಹೆಚ್ಚಿದೆ. ಗೌರವದಿಂದ ನೀಡಿದ ಆ ಪದವಿಯನ್ನು ಅಷ್ಟೇ ಪ್ರೀತಿಯಿಂದ ಸ್ವೀಕರಿಸಿದ್ದೇನೆ. ಎಷ್ಟೋ ಜನ ತಡವಾಗಿ ಬಂತು ಅಂತಾರೆ. ಬರುವ ಸಮಯಕ್ಕೇ ಎಲ್ಲವೂ ಬರೋದು. ಈಗಲೇ ಬೇಕು ಅಂತ ಕಿತ್ತುಕೊಂಡು ಬರುವಂತಹ ವಸ್ತುವಲ್ಲ ಅದು. ಕೆಲವರು ತಗೊಂಡ್ರು. ನನಗೆ ಕೊಟ್ಟಿದ್ದಾರೆ ಅಷ್ಟೇ ವ್ಯತ್ಯಾಸ. ಎಷ್ಟೋ ಜನ ಬಂದು ನಿಮಗೆ ಡಾಕ್ಟರೇಟ್‌ ಕೊಡಿಸ್ತೀವಿ ಸರ್‌ ಅಂದ್ರು. ಆಗ, ನಾನು ಅದಾಗಿಯೇ ಬರಬೇಕು. ಯಾವತ್ತೂ ಕೇಳಬಾರದು ಅಂದೆ. ನನಗೆ ಥಿಯೇಟರ್‌ನಲ್ಲಿ ನನ್ನ ಸಿನಿಮಾ ನೋಡಿ ಜನ ಖುಷಿಪಟ್ಟರೆ ಅದಕ್ಕಿಂತ ದೊಡ್ಡ ಖುಷಿ ಬೇರೊಂದಿಲ್ಲ. ಯುನಿರ್ವಸಿಟಿ ನನ್ನ ಕೆಲಸ ಗುರುತಿಸಿ ಕೊಡುತ್ತಿದೆ ಅಂದಮೇಲೆ ಗೌರವ ಕೊಡಬೇಕಲ್ಲವೇ? ನನ್ನ ಕೆಲಸ ಗುರುತಿಸಿದ್ದಾರೆ ವಿನಃ ವ್ಯಕ್ತಿಯನ್ನಲ್ಲ. ನಾನು ಅದಕ್ಕೆ ಅರ್ಹನೋ ಇಲ್ಲವೋ ಗೊತ್ತಿಲ್ಲ.

ಮಕ್ಕಳು ಬಿಝಿ
ನನ್ನ ಮಕ್ಕಳಿಬ್ಬರು ಬಿಝಿಯಾಗಿದ್ದಾರೆ. ಮಗಳ ಜವಾಬ್ದಾರಿ ಮುಗೀತು. ಈಗ ಗಂಡು ಮಕ್ಕಳ ಜವಾಬ್ದಾರಿ ನೋಡ್ಕೊಬೇಕು. “ರವಿ ಬೋಪಣ್ಣ’ ಮತ್ತು “ರಾಜೇಂದ್ರ ಪೊನ್ನಪ್ಪ’ ಸಿನಿಮಾ ಮುಗಿಸಿದ ಬಳಿಕ ನನ್ನ ಕನಸಿನ ಸಿನಿಮಾದತ್ತ ಗಮನಹರಿಸುತ್ತೇನೆ. “ರಾಜೇಂದ್ರ ಪೊನ್ನಪ್ಪ’ ಹಾಗೂ “ರವಿ ಬೋಪಣ್ಣ’ ಎರಡು ಚಿತ್ರಗಳು ನನ್ನ ಗ್ರಾಮರ್‌ ಬದಲಿಸುವ ಸಿನಿಮಾಗಳಾಗುತ್ತವೆ. ಆ ಚಿತ್ರಗಳ ಬಳಿಕ ನಾನು ಮಾಡುವ ಕನಸಿನ ಚಿತ್ರದಲ್ಲಿ ನನ್ನ ಮಗ ಮನು ಇರ್ತಾನೆ. ಅವರಿಬ್ಬರಿಗೂ ಈಗ ತರಬೇತಿಯ ಸಮಯ. ಅವರಾಗಿಯೇ ಅವರ ಕಾಲ ಮೇಲೆ ನಿಂತಿದ್ದಾರೆ. ನಾನು ಯಾವತ್ತೂ ಅವರಿಗೆ ದುಡಿಮೆ ಮಾಡಿ ಎಂದಿಲ್ಲ. ಅವರ ಮನಸ್ಸಲ್ಲಿ ಅಪ್ಪ ಫೈನಾನ್ಷಿಯಲ್‌ ತೊಂದರೆಯಲ್ಲಿದ್ದಾರೆ ಅನಿಸಿದೆ. ಅದನ್ನು ಹೇಳಿಲ್ಲ. ನನ್ನ ಮೇಲೆ ಪ್ರೀತಿ ಮತ್ತು ಭಯ ಎರಡೂ ಅವರಿಗಿದೆ. ಆದರೂ, ಒಂದು ದಿನ ಮನು ನನ್ನ ಬಳಿ ಬಂದು, “ಅಪ್ಪ ನಾನೇಕೆ ಸಂಪಾದಿಸಬಾರದು. ತಂಗಿ ಮದುವೆಗೆ ನಾನು ಒಂದಷ್ಟು ಸಂಪಾದಿಸಿ ಕೊಡ್ತೀನಿ’ ಅಂದ. ನಾನು ಓಕೆ ಅಂದೆ. ಎಷ್ಟಾದರೂ ಕೊಡಲಿ, ಮೊದಲು ಅನುಭವಿಸಿಕೊಂಡು ಬಾ ಅಂದೆ. ಒಳ್ಳೆಯದು ಯಾವಾಗ ಆಗುತ್ತೋ ಗೊತ್ತಿಲ್ಲ. ಆದರೆ, ನಿಮಗೊಂದು ಅನುಭವ ಆಗಲಿ ಅಂತ ಹೇಳಿದೆ.ನನ್ನ ಅರ್ಥ ಮಾಡಿಕೊಳ್ಳೋಕೆ ಸಮಯಬೇಕು. ಅವರು ರವಿಚಂದ್ರನ್‌ ಮಕ್ಕಳಷ್ಟೇ.

ಅದಕ್ಕೊಂದು ಸಣ್ಣ ವೆಲ್‌ಕಮ್‌ ಸಿಕ್ಕಿದೆ. ಇಲ್ಲಿ ಅವರಾಗೇ ನಿಲ್ಲಬೇಕು. ಆದಕ್ಕೆ ಸಾಕಷ್ಟು ಸಮಯ ಬೇಕಾಗುತ್ತೆ. ಅವಸರವಾಗಿ ಯಶಸ್ಸು ಬೇಡ. ಅನುಭವದ ಮೇಲೆ ಫ‌ಲಿತಾಂಶ ಇರುತ್ತೆ. ನಾನು ಕೂಡ ಮೊದಲು ಸಕ್ಸಸ್‌ ಕೊಡಲಿಲ್ಲ. ನಿಧಾನವಾಗಿ ಬಂದೆ. “ಪ್ರೇಮಲೋಕ’ ಮೂಲಕ ಎದ್ದು ನಿಂತೆ.

ಕಾರ್ಪೋರೆಟ್‌ ಸಿಸ್ಟಂನಿಂದ ಶಿಸ್ತು
ಸದ್ಯಕ್ಕೆ ಕಲಾವಿದರ ಸಂಘದಲ್ಲಿ ಒಂದಷ್ಟು ಕೆಲಸ ನಡೆಯುತ್ತಿದೆ. ಅಂಬರೀಷ್‌ ಇದ್ದಾಗ ಎಲ್ಲವೂ ಚೆನ್ನಾಗಿತ್ತು. ಒಂದು ವರ್ಷ ಆಗೋಯ್ತು. ಇನ್ನು ಮೇಲೆ ಚಟುವಟಕೆಗಳು ನಡೆಯುತ್ತವೆ. ನಾನೇನು ಲೀಡರ್‌ ಅಂತಲ್ಲ. ಒಂದು ಫ್ರೆàಮ್‌ ಮಾಡಿ ಕೊಟ್ಟಿದ್ದೆ. ಅದು ಸರಿ ಹೋಗಲಿಲ್ಲ. ಬಲವಂತವಾಗಿ ಹೇಳುವುದಕ್ಕಾಗಲ್ಲ. ನಾಲ್ಕು ಗೋಡೆ ಮಧ್ಯೆ ಶಿಸ್ತಿನಿಂದ ಇರಬೇಕು. ಆಗ ಎಲ್ಲವೂ ತಾನಾಗಿಯೇ ನಡೆಯುತ್ತೆ. ಎಲ್ಲರೂ ಕರೆದಾಗ ಹೋಗ್ತಿನಿ. ಒಮ್ಮತ ಚರ್ಚೆ ನಡೆದರೆ, ಯಾರು ಏನು ಅಂತಾರೋ, ಅದಕ್ಕೆ ಜೈ ಅಂತೀನಿ. ಇಲ್ಲಿ ಮೊದಲು ಶಿಸ್ತು ಬೇಕು. ಸಿನಿಮಾರಂಗಕ್ಕೆ ಅಸೋಸಿಯೇಷನ್‌ ಕಷ್ಟ. ಇಲ್ಲಿ ಕಾರ್ಪೋರೆಟ್‌ ಸಿಸ್ಟಂ ತಂದಾಗ ಮಾತ್ರ ಶಿಸ್ತು ಸಾಧ್ಯ. ಎಲ್ಲದ್ದಕ್ಕೂ ಸಮಯ ಬರಬೇಕು. ಈಗ ಎಲ್ಲರೂ ಬಿಝಿ ಇದ್ದಾರೆ. ಅವರ ಜಗತ್ತಲ್ಲಿದ್ದಾರೆ. ಬೇಕು ಎನಿಸಿದಾಗ ಬಂದೇ ಬರ್ತಾರೆ. ದೊಡ್ಡವರಿಗೆ ಇದು ಬೇಕಾಗಿಲ್ಲ. ಹೊಸಬರಿಗೆ ಮಾತ್ರ ಅಗತ್ಯವಿದೆ.

ವಿಜಯ್‌ ಭರಮಸಾಗರ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ನಟ ವಿನೋದ್‌ ಪ್ರಭಾಕರ್‌ ಅಭಿನಯದ ಹೊಸಚಿತ್ರ "ಶ್ಯಾಡೊ' ತೆರೆಗೆ ಬರಲು ಸಿದ್ಧವಾಗುತ್ತಿದೆ. ಸದ್ಯ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ಚಿತ್ರತಂಡ, ಇತ್ತೀಚೆಗೆ...

  • ಹಿಂದಿಯಲ್ಲಿ "ಪದ್ಮಾವತ್‌', "ತಾನಾಜಿ', ತೆಲುಗಿನಲ್ಲಿ "ಸೈರಾ ನರಸಿಂಹ ರೆಡ್ಡಿ', ಮಲೆಯಾಳಂನ "ಮಾಮಂಗಮ್‌' ನಂತಹ ಐತಿಹಾಸಿಕ ಕಥಾ ಹಂದರದ ಚಿತ್ರಗಳನ್ನು ಕನ್ನಡದಲ್ಲಿ...

  • 29 ದಿನ 34 ಸಿನಿಮಾ...! -ಇದು ಫೆಬ್ರವರಿಯಲ್ಲಿ ಬಿಡುಗಡೆಗೊಂಡ ಚಿತ್ರಗಳ ವಿಷಯ. ಹೌದು. ಜನವರಿಯಲ್ಲಿ ಸಾಲು ಸಾಲು ಸಿನಿಮಾಗಳು ಬಿಡುಗಡೆ ಕಂಡಿದ್ದವು. ಆದರೆ, ಗೆಲುವಿನ ಸಂಖ್ಯೆ...

  • ಗಾಯಕ ಕಮ್‌ ನಾಯಕ ಸುನೀಲ್‌ ರಾವ್‌ ಮತ್ತೆ ಬಂದಿದ್ದಾರೆ. ವರ್ಷಗಳ ಗ್ಯಾಪ್‌ ಬಳಿಕ "ತುರ್ತು ನಿರ್ಗಮನ' ಎಂಬ ಸಿನಿಮಾ ಮೂಲಕ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ...

  • ಹ್ಯಾಟ್ರಿಕ್‌ ಹೀರೋ ಶಿವರಾಜಕುಮಾರ್‌ "ದ್ರೋಣ' ಚಿತ್ರದ ಮೂಲಕ ಈ ವರ್ಷದ ಸಿನಿ ಇನ್ನಿಂಗ್ಸ್‌ ಶುರು ಮಾಡಲು ರೆಡಿಯಾಗಿದ್ದಾರೆ. ಹೌದು, ಈ ವರ್ಷ ಶಿವಣ್ಣ ಅಭಿನಯದ ಮೊದಲ...

ಹೊಸ ಸೇರ್ಪಡೆ