ಸಿನಿ ಕನಸಿನ ಹುಡುಗನ ಸುತ್ತ ಹರಿಕಥೆ: ರಿಷಭ್‌ ಚಿತ್ರ ಜೂ.23ಕ್ಕೆ ತೆರೆಗೆ


Team Udayavani, Jun 17, 2022, 3:59 PM IST

harikathe alla giri kathe

ರಿಷಭ್‌ ಶೆಟ್ಟಿ ನಾಯಕರಾಗಿ ನಟಿಸಿರುವ “ಹರಿಕಥೆ ಅಲ್ಲ ಗಿರಿಕಥೆ’ ಚಿತ್ರ ಜೂ.23ರಂದು ತೆರೆಕಾಣುತ್ತಿದೆ. ಮೊದಲ ಹಂತವಾಗಿ ಚಿತ್ರತಂಡ ಟ್ರೇಲರ್‌ ಬಿಡುಗಡೆ ಮಾಡಿದ್ದು, ನೋಡಿದವರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಸಂದೇಶ್‌ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಂದೇಶ್‌. ಎನ್‌ ನಿರ್ಮಿಸಿರುವ ಈ ಚಿತ್ರವನ್ನು ಕರಣ್‌ ಅನಂತ್‌ ಹಾಗೂ ಅನಿರುದ್ಧ್ ಮಹೇಶ್‌ ನಿರ್ದೇಶನ ಮಾಡಿದ್ದಾರೆ.

ಚಿತ್ರದ ಬಗ್ಗೆ ಮಾತನಾಡುವ ರಿಷಭ್‌ ಶೆಟ್ಟಿ, “ಸಿನಿಮಾ ನಿರ್ದೇಶಕನಾಗುವ ಆಸೆ ಹೊತ್ತ ಮಧ್ಯಮ ವರ್ಗದ ಯುವಕನೊಬ್ಬನ ಸುತ್ತ ನಡೆಯುವ ಕಥೆ ಇದು. ಇದರಲ್ಲಿ ನಾನು ಗಿರಿಕೃಷ್ಣ ಎಂಬ ಪಾತ್ರ ಮಾಡಿದ್ದೀನಿ. ಗಿರಿ ಅಂದರೆ ನಾನೊಬ್ಬನ ಹೆಸರಲ್ಲ. ಹೀರೋಯಿನ್‌ ಹೆಸರು ಗಿರಿಜಾ ಥಾಮಸ್‌ ಹಾಗೂ ವಿಲನ್‌ ಹೆಸರು ಗಿರಿ ಅಂತ. ಹೀಗೆ ನಮ್ಮ ಚಿತ್ರದಲ್ಲಿ ಹಲವು ಗಿರಿಗಳ ಸಂಗಮವಾಗಿದೆ.ಸಿನಿಮಾ ಮಾಡಲು ಹೊರಟಿರುವ ಅನೇಕರ ಕಥೆಯಿದು. ಕಲಾವಿದರು ಹಾಗೂ ತಂತ್ರಜ್ಞರ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ’ ಎಂದರು ರಿಷಭ್‌ ಶೆಟ್ಟಿ.

“ನಮ್ಮ ಚಿತ್ರತಂಡದ ಸಹಕಾರದಿಂದ ಚೆನ್ನಾಗಿ ಬಂದಿದೆ. ನಾನು ಹಾಗೂ ರಿಷಭ್‌ ಕಥಾಸಂಗಮ ಚಿತ್ರದಲ್ಲಿ ಒಟ್ಟಾಗಿ ಕೆಲಸ ಮಾಡಿದ್ದೆವು. ಗಿರಿಕೃಷ್ಣ ಈ ಚಿತ್ರದ ಕಥೆ ಬರೆದಿದ್ದರು. ಆ ನಂತರ ನಾನು ಹಾಗೂ ಅನಿರುದ್ಧ್ ಮಹೇಶ್‌ ಸೇರಿ ಈ ಚಿತ್ರ ನಿರ್ದೇಶನ ಮಾಡಿದ್ದೇವೆ’ ಎನ್ನುವುದು ನಿರ್ದೇಶಕರಲ್ಲೊಬ್ಬರಾದ ಕರಣ್‌ ಅನಂತ್‌ ಮಾತು.

ಇದನ್ನೂ ಓದಿ:ರಜನಿಕಾಂತ್ 169 ನೇ ಚಿತ್ರಕ್ಕೆ ಟೈಟಲ್ ಫಿಕ್ಸ್ ; ಶಿವರಾಜ್ ಕುಮಾರ್ ಮುಖ್ಯಪಾತ್ರದಲ್ಲಿ !

ನಾಯಕಿ ರಚನಾ ಇಂದರ್‌ಗೆ ಈ ಚಿತ್ರದಲ್ಲಿ ಒಳ್ಳೆಯ ಪಾತ್ರ ಸಿಕ್ಕಿದೆಯಂತೆ. “ನಾನು ಈ ಚಿತ್ರದಲ್ಲಿ ಗಿರಿಜಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಸಿನಿಮಾ ನಟಿಯಾಗಬೇಕೆಂಬ ಆಸೆ ಹೊತ್ತ ಹುಡುಗಿ’ ಎಂದು ಪಾತ್ರದ ಬಗ್ಗೆ ಹೇಳಿಕೊಂಡರು.

“ನಾನು ಈ ಹಿಂದೆ ಜೋಕುಮಾರಸ್ವಾಮಿ ನಾಟಕದಲ್ಲಿ ಅಭಿನಯಿಸಿದ್ದೆ. ಇದರಲ್ಲೂ ಅದೇ ಹೆಸರು. ಆದರೆ ಮಂತ್ರಿಯಾಗಿ ಕಾಣಿಸಿಕೊಂಡಿದ್ದೇನೆ’ ಎನ್ನುವುದು ನಟ ದಿನೇಶ್‌ ಮಂಗಳೂರು ಮಾತು.

ನಿರ್ಮಾಪಕ ಸಂದೇಶ್‌ ಮಾತನಾಡಿ, “ನಾನು ಎಲ್ಲ ಜವಾಬ್ದಾರಿಗಳನ್ನು ರಿಷಭ್‌ ಅವರಿಗೆ ನೀಡಿದ್ದೇನೆ. ಅವರ ಸಹಯೋಗದೊಂದಿಗೆ ಈ ಚಿತ್ರ ನಿರ್ಮಾಣವಾಗಿದೆ. ಜಯಣ್ಣ ಈ ಚಿತ್ರದ ಹಂಚಿಕೆದಾರರು. ಚಿತ್ರವನ್ನು ನೋಡಿ. ಪ್ರೋತ್ಸಾಹಿಸಿ’ ಎಂದರು.

ಟಾಪ್ ನ್ಯೂಸ್

Nalin-kumar

ಓಡಲು ದಾರಿ ಹುಡುಕುವ ಇಟೆಲಿಯ ಅಕ್ಕ: ನಳಿನ್‍ ಕಮಾರ್ ಕಟೀಲ್ ವ್ಯಂಗ್ಯ

15

ಅಲ್ಯೂಮಿನಿಯಂ ಕೊಕ್ಕೆ ಬಳಸಿ ತೆಂಗಿನಕಾಯಿ ಕೀಳುತ್ತಿದ್ದಾಗ ವಿದ್ಯುತ್ ಶಾಕ್ ಹೊಡೆದು ಮೃತ್ಯು

ಬೀದರ್ ಐತಿಹಾಸಿಕ ಮದರಸಾಕ್ಕೆ ನುಗ್ಗಿ ಪೂಜೆ: ನಾಲ್ವರ ಬಂಧನ; ವಿಡಿಯೋ ವೈರಲ್

ಬೀದರ್ ಐತಿಹಾಸಿಕ ಮದರಸಾಕ್ಕೆ ನುಗ್ಗಿ ಪೂಜೆ: ನಾಲ್ವರ ಬಂಧನ; ವಿಡಿಯೋ ವೈರಲ್

gangoli bbi news bjp

ಬಿಸಿಸಿಐನಲ್ಲಿ ಮುಗಿಯಿತಾ ಗಂಗೂಲಿ ಅಧಿಕಾರ? ಬಿಜೆಪಿ ನಾಯಕನ ಮನೆಯಲ್ಲಿ ಸಭೆ ನಡೆದಿದ್ಯಾಕೆ?

ಮುಂಬೈನಲ್ಲಿ 120 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶ; ಮಾಜಿ ಪೈಲಟ್ ಸೇರಿ ಇಬ್ಬರ ಬಂಧನ

ಮುಂಬೈನಲ್ಲಿ 120 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶ; ಮಾಜಿ ಪೈಲಟ್ ಸೇರಿ ಇಬ್ಬರ ಬಂಧನ

13

ಕುಷ್ಟಗಿ: ವಿಚಿತ್ರ ಕರು ಜನನ

12

ಹೊಳಲ್ಕೆರೆ: ಶಾಸಕನ ವಿರುದ್ಧ ಅವಹೇಳನಕಾರಿ ಬರಹ: ಆರೋಪಿ ಬಂಧನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

totapuri

ಜಗ್ಗೇಶ್ ಮೊಗದಲ್ಲಿ ‘ತೋತಾಪುರಿ’ ಸಿಹಿ

ಕಂಟೆಂಟೇ ಸ್ಟ್ರಾಂಗು ಗುರೂ… ದೇಸಿ ಸೊಗಡಿಗೆ ಪ್ರೇಕ್ಷಕನ ಜೈಕಾರ

ಕಂಟೆಂಟೇ ಸ್ಟ್ರಾಂಗು ಗುರೂ… ದೇಸಿ ಸೊಗಡಿಗೆ ಪ್ರೇಕ್ಷಕನ ಜೈಕಾರ

1—dsadsadsad

ಪ್ಯಾನ್ ಇಂಡಿಯಾ ಫಿಕ್ಸ್ : ‘ಕಾಂತಾರ’ ಹಿಂದಿ ಟ್ರೈಲರ್ ರೆಡಿ

1-asdaad

”ಬನಾರಸ್”ಹಕ್ಕು ಪಡೆದ ಕೇರಳದ ಖ್ಯಾತ ವಿತರಣಾ ಸಂಸ್ಥೆ ಮುಲಕುಪ್ಪಡಮ್!

tdy-1

ರಮ್ಯಾ – ರಾಜ್. ಬಿ.ಶೆಟ್ಟಿ ಕಾಂಬಿನೇಷನ್‌ ನಲ್ಲಿ ಬರುತ್ತಿದೆ ‘ಸ್ವಾತಿ ಮುತ್ತಿನ ಮಳೆ ಹನಿಯೇ’

MUST WATCH

udayavani youtube

ಯುವಕನಾದ ಸಿದ್ದರಾಮಯ್ಯ… ರಾಹುಲ್ ಜತೆ ರೇಸ್ …. ವಿಡಿಯೋ ವೈರಲ್

udayavani youtube

ಮೈಸೂರು ಜಂಬೂ ಸವಾರಿಯಲ್ಲೂ ಅಪ್ಪು ಸ್ಮರಣೆ

udayavani youtube

ಉಚ್ಚಿಲ‌ ದಸರಾ‌ 2022 : ಶೋಭಾಯಾತ್ರೆ ಗೆ ಅಂತಿಮ ಹಂತದ ಸಿದ್ಧತೆ

udayavani youtube

ಭಾರತ್ ಜೋಡೋ : ಮಳೆಯಲ್ಲಿ ನೆನೆಯುತ್ತಾ ಭಾಷಣ ಮಾಡಿದ ರಾಹುಲ್

udayavani youtube

ದಿನ8 | ಮಹಾಗೌರಿ |ಮಹಾಗೌರಿಯ ಆರಾಧನೆಯನ್ನು ಯಾಕಾಗಿ ಮಾಡಬೇಕು ??

ಹೊಸ ಸೇರ್ಪಡೆ

ಮದ್ಯವ್ಯಸನ ದೇಶದ ಅತಿ ದೊಡ ಪಿಡುಗು; ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ

ಮದ್ಯವ್ಯಸನ ದೇಶದ ಅತಿ ದೊಡ ಪಿಡುಗು; ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ

ಅವ್ಯವಸ್ಥೆ, ಗೊಂದಲಗಳ ನಡುವೆಯೂ ದಸರೆಗೆ ತೆರೆ

ಅವ್ಯವಸ್ಥೆ, ಗೊಂದಲಗಳ ನಡುವೆಯೂ ದಸರೆಗೆ ತೆರೆ

Nalin-kumar

ಓಡಲು ದಾರಿ ಹುಡುಕುವ ಇಟೆಲಿಯ ಅಕ್ಕ: ನಳಿನ್‍ ಕಮಾರ್ ಕಟೀಲ್ ವ್ಯಂಗ್ಯ

ಬಂಡೀಪುರದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಳ: ಡಾ.ರಮೇಶ್‌

ಬಂಡೀಪುರದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಳ: ಡಾ.ರಮೇಶ್‌

15

ಅಲ್ಯೂಮಿನಿಯಂ ಕೊಕ್ಕೆ ಬಳಸಿ ತೆಂಗಿನಕಾಯಿ ಕೀಳುತ್ತಿದ್ದಾಗ ವಿದ್ಯುತ್ ಶಾಕ್ ಹೊಡೆದು ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.