Udayavni Special

ಚಿತ್ರರಂಗಕ್ಕೇ ಸವಾಲ್‌! ಒಂದೇ ಚಿತ್ರ; ಹಲವು ದಾಖಲೆಗಳು


Team Udayavani, Aug 25, 2017, 6:20 AM IST

Darpana-(4).jpg

ಏನೇನು ಹೇಳಬೇಕೆಂದು ಪಟ್ಟಿ ಮಾಡಿಕೊಂಡೇ ಬಂದಿದ್ದರು ನಿರ್ದೇಶಕ ಕಾರ್ತಿಕ್‌ ವೆಂಕಟೇಶ್‌. ಹೇಳ್ತಾ ಹೋಗ್ತಿನಿ, ಕೇಳ್ತಾ ಹೋಗಿ ಎಂದು ಚಿತ್ರದ ವಿಶೇಷತೆಗಳನ್ನು ಹೇಳುತ್ತಾ ಹೋದರು.

“ದರ್ಪಣ’ ಒಂದು ವೈಜ್ಞಾನಿಕ ಕಮರ್ಷಿಯಲ್‌ ಥ್ರಿಲ್ಲರ್‌ ಚಿತ್ರವಾಗಿದ್ದು, ಕನ್ನಡ ಚಿತ್ರರಂಗದಲ್ಲೇ ಇಂಥದ್ದೊಂದು ಪ್ರಯತ್ನ ಇದುವರೆಗೂ ಆಗಿಲ್ಲ.

ಚಿತ್ರದಲ್ಲಿ ನಾನೊಬ್ಬನೇ 21 ವಿಭಾಗದಲ್ಲಿ ಕೆಲಸ ಮಾಡಿದ್ದು, ಗಿನ್ನೀಸ್‌ ದಾಖಲೆ ಪುಸ್ತಕಕ್ಕೆ ಅರ್ಜಿ ಸಲ್ಲಿಸಲಾಗಿದೆ.

ಚಿತ್ರದಲ್ಲೊಂದು 3ಡಿ ಹಾಡಿದ್ದು, ಹಾಡನ್ನು ನೋಡುವುದಕ್ಕೆ ವಿಶೇಷವಾದ ಗ್ಲಾಸ್‌ ಮಾಡಿಸಿದ್ದೇವೆ.

ಒಂದು ಹಾಡನ್ನು ಗ್ರಾಫಿಕ್ಸ್‌ ಮೂಲಕ 10 ದೇಶಗಳಲ್ಲಿ ಚಿತ್ರೀಕರಣ ಮಾಡಿದ ಹಾಗೆ ತೋರಿಸಲಾಗಿದೆ.

ಚಿತ್ರಕ್ಕೆ ಸೆನ್ಸಾರ್‌ ಬೋರ್ಡ್‌ನಿಂದ “ಎ’ ಸರ್ಟಿಫಿಕೇಟ್‌ ಸಿಕ್ಕಿದ್ದು, ಸೆಪ್ಟೆಂಬರ್‌ 8ಕ್ಕೆ ಬಿಡುಗಡೆಯಾಗುವ ಸಾಧ್ಯತೆ ಇದೆ.
ಹೈಲೈಟ್‌ಗಳನ್ನೆಲ್ಲಾ ಒಂದೇ ಉಸಿರಿನಲ್ಲಿ ಹೇಳಿ ಮುಗಿಸಿದರು ಕಾರ್ತಿಕ್‌ ವೆಂಕಟೇಶ್‌. ಅವರೀಗ “ದರ್ಪಣ’ ಚಿತ್ರದ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ. ಬಿಡುಗಡೆಗೂ ಮುನ್ನ ಒಮ್ಮೆ ಚಿತ್ರದ ಹಾಡು-ಟ್ರೇಲರ್‌ ತೋರಿಸಿ, ಚಿತ್ರದ ಬಗ್ಗೆ ನಾಲ್ಕು ಮಾತಾಡಬೇಕೆಂದು ಅವರು ತಮ್ಮ ತಂಡದವರ ಜೊತೆಗೆ ಬಂದಿದ್ದರು.

ಸೈನ್ಸ್‌ ಫಿಕ್ಷನ್‌ ಚಿತ್ರಗಳು ಹೊಸದೇನಲ್ಲ. ಫಿಕ್ಷನ್‌ ಅಂದರೆ ಮುಂದೆ ಹೀಗೂ ಆಗಬಹುದು ಎಂದರ್ಥ. ಆದರೆ, ವೆಂಕಟೇಶ್‌  ಸೈನ್ಸ್‌ ಫ್ಯಾಕ್ಟ್ ಚಿತ್ರವನ್ನು ಮಾಡಿದ್ದಾರೆ. ಹಾಗಂದರೆ, ವೈಜ್ಞಾನಿಕ ನಿಜ ಎಂದರ್ಥ. ಅಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ಹೀಗಾಗುತ್ತದೆ ಎಂದು ಈ ಚಿತ್ರದ ಮೂಲಕ ಹೇಳುತ್ತಿದ್ದಾರೆ. ಇನ್ನೂ ಸರಳವಾಗಿ ಹೇಳುವುದಾದರೆ, ಮನುಷ್ಯನು ದೇವರ ನಿಯಮವನ್ನು ಬದಲಿಸುವುದಕ್ಕೆ ಹೊರಟರೆ, ಅದರಿಂದ ಏನೆಲ್ಲಾ ಆಗುತ್ತದೆ ಎಂಬುದು ಈ ಚಿತ್ರದ ಕಥೆ. ಹಾಗೆಯೇ, ದೇವರ ನಿಯಮಗಳ ವಿರುದ್ಧ ಗೆಲ್ಲುವುದು ಕಷ್ಟ ಎಂಬ ಮಾತನ್ನೂ ಹೇಳುತ್ತಿದ್ದಾರೆ.”ದರ್ಪಣ’ ಚಿತ್ರವನ್ನು ಎಡ್ವರ್ಡ್‌ ಡಿ’ಸೋಜಾ ನಿರ್ಮಿಸಿದ್ದಾರೆ. 

ಇನ್ನು ಚಿತ್ರದಲ್ಲಿ ಅರವಿಂದ್‌ ರಾವ್‌, ದುಬೈ ರಫೀಕ್‌, ಸಂದೀಪ್‌ ಮಲಾನಿ, ಯತಿರಾಜ್‌, ಸೂರ್ಯ, ಮಧುರ ಮುಂತಾದವರು ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಆ ಪೈಕಿ ಶೂಟಿಂಗ್‌ ಇದ್ದ ಕಾರಣ ಅರವಿಂದ್‌ ರಾವ್‌ ಬಂದಿರಲಿಲ್ಲ. ಮಿಕ್ಕಂತೆ ಎಲ್ಲರೂ ನಾಲ್ಕಾ$°ಲ್ಕು ಮಾತುಗಳನ್ನಾಡಿದರು. ಈ ಚಿತ್ರದಲ್ಲಿ ವಿಜ್ಞಾನಿಯ ಪಾತ್ರವನ್ನು ಮಾಡಿರುವ ದುಬೈ ರಫೀಕ್‌, ಈ ಚಿತ್ರ ತಮ್ಮ ಚಿತ್ರಜೀವನದಲ್ಲಿ ಒಂದು ಟರ್ನಿಂಗ್‌ ಪಾಯಿಂಟ್‌ ಆಗಬಹುದು ಎಂದರು. 

ನಟ ಯತಿರಾಜ್‌, ನಿರ್ದೇಶಕರ ಭಂಡಧೈರ್ಯವನ್ನು ಮೆಚ್ಚಿಕೊಂಡರು. ನಿರ್ದೇಶಕರು ಹೊಸ ಹೊಸ ಸವಾಲುಗಳನ್ನು ಹಾಕಿ ಗೆಲ್ಲುವ ಪ್ರಯತ್ನ ಮಾಡುತ್ತಾರೆ ಎಂದರು. ಸಂದೀಪ್‌ ಮಲಾನಿ, ಚಿತ್ರದಲ್ಲಿ ಡಾಕ್ಟರ್‌ ಪಾತ್ರ ಮಾಡುತ್ತಿರುವುದಾಗಿ ಹೇಳಿದರು.

ಟಾಪ್ ನ್ಯೂಸ್

ತಂಬಾಕು ಮುಕ್ತ ಹಳ್ಳಿಗೆ ಜಿಲ್ಲೆಯ 3 ಪ್ರದೇಶ ಗುರುತು

ತಂಬಾಕು ಮುಕ್ತ ಹಳ್ಳಿಗೆ ಜಿಲ್ಲೆಯ 3 ಪ್ರದೇಶ ಗುರುತು

ಕಾರ್ಕಳದ ಹೆಬ್ಟಾಗಿಲಲ್ಲೇ ಅಭದ್ರತೆ; ಬೇಕಿದೆ ಪೊಲೀಸ್‌ ಹೊರ ಠಾಣೆ

ಕಾರ್ಕಳದ ಹೆಬ್ಟಾಗಿಲಲ್ಲೇ ಅಭದ್ರತೆ; ಬೇಕಿದೆ ಪೊಲೀಸ್‌ ಹೊರ ಠಾಣೆ

ಸ್ಕ್ಯಾನ್ ಆಗುತ್ತಿಲ್ಲ ತ್ಯಾಜ್ಯ ಸಂಗ್ರಹ ಕ್ಯೂಆರ್‌ ಕೋಡ್‌ !

ಸ್ಕ್ಯಾನ್ ಆಗುತ್ತಿಲ್ಲ ತ್ಯಾಜ್ಯ ಸಂಗ್ರಹ ಕ್ಯೂಆರ್‌ ಕೋಡ್‌ !

ಆಸ್ಟ್ರೇಲಿಯದ ಮೇಲೂ ಸವಾರಿ ಮಾಡಿದ ಭಾರತ

ಆಸ್ಟ್ರೇಲಿಯದ ಮೇಲೂ ಸವಾರಿ ಮಾಡಿದ ಭಾರತ

ಉತ್ತರಾಖಂಡ ಪ್ರವಾಹ : ರಾಜ್ಯದ 92 ಮಂದಿ ರಕ್ಷಣೆ, ಸಂಪರ್ಕ ಸಮಸ್ಯೆಯಿಂದ ಸಿಕ್ಕಿಲ್ಲ ನಾಲ್ವರು

ಉತ್ತರಾಖಂಡ ಪ್ರವಾಹ : ರಾಜ್ಯದ 92 ಮಂದಿ ರಕ್ಷಣೆ, ಸಂಪರ್ಕ ಸಮಸ್ಯೆಯಿಂದ ಸಿಕ್ಕಿಲ್ಲ ನಾಲ್ವರು

“ಉತ್ತರ’ದಲ್ಲಿ ಪ್ರವಾಹ ಪ್ರಯಾಸ  : ಇದುವರೆಗೆ 52 ಮಂದಿ ಸಾವು, ಐವರು ಕಣ್ಮರೆ

“ಉತ್ತರ’ದಲ್ಲಿ ಪ್ರವಾಹ ಪ್ರಯಾಸ  : ಇದುವರೆಗೆ 52 ಮಂದಿ ಸಾವು, ಐವರು ಕಣ್ಮರೆ

ಭಾರತದಲ್ಲಿ ಡ್ರೈವರ್‌ಲೆಸ್‌ ಬೈಕ್‌?!

ಭಾರತದಲ್ಲಿ ಡ್ರೈವರ್‌ಲೆಸ್‌ ಬೈಕ್‌?!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಪೋ ಕಲ್ಪಿತಂ

ಸೆನ್ಸಾರ್‌ ಪಾಸಾದ ‘ಕಪೋ ಕಲ್ಪಿತಂ’

ಡಿಜಿಟಲ್‌ ಲೋಕದ ಸುತ್ತ ‘ಗ್ರೇ ಗೇಮ್ಸ್‌’ ಶುರು

ಡಿಜಿಟಲ್‌ ಲೋಕದ ಸುತ್ತ ‘ಗ್ರೇ ಗೇಮ್ಸ್‌’ ಶುರು

dhanya ramkumar

‘ಶೋ ಪೀಸ್‌ ಆಗಲಾರೆ’: ರಾಜ್‌ ಮೊಮ್ಮಗಳು ಧನ್ಯಾ ಉತ್ತರಿಸಿದ 5 ಪ್ರಶ್ನೆಗಳು

ಸಕ್ಸಸ್‌ ಮೀಟ್‌ ಸಂಭ್ರಮ ತಂದ ಭರವಸೆ

ಸಕ್ಸಸ್‌ ಮೀಟ್‌ ಸಂಭ್ರಮ ತಂದ ಭರವಸೆ: ಸಕ್ಸಸ್‌ ರೇಟ್‌ ಹೆಚ್ಚಾಗೋ ನಿರೀಕ್ಷೆ

ಈ ವಾರ ತೆರೆ ಕಾಣಲಿದೆ ನಾಲ್ಕು ಚಿತ್ರಗಳು

ಈ ವಾರ ತೆರೆ ಕಾಣಲಿದೆ ನಾಲ್ಕು ಚಿತ್ರಗಳು

MUST WATCH

udayavani youtube

ಗೂಟಿ ಕೃಷಿ ( air layering ) ಮಾಡುವ ಸಂಕ್ಷಿಪ್ತ ಮಾಹಿತಿ ಇಲ್ಲಿದೆ ನೋಡಿ

udayavani youtube

ಭಾರತ – ಪಾಕ್‌ ಟಿ20 ವಿಶ್ವಕಪ್‌ ಪಂದ್ಯ ರದ್ದಾಗದು

udayavani youtube

‘ಅಂಬಾರಿ’ಯಲ್ಲಿ ಕುಳಿತು ಅರಮನೆ ನಗರಿ ನೋಡಿ

udayavani youtube

ಹುಣಸೂರು : ಟಿಬೆಟ್ ಕ್ಯಾಂಪ್ ನೊಳಗೆ ನುಗ್ಗಿ ದಾಂದಲೆ ನಡೆಸಿದ ಒಂಟಿ ಸಲಗ

udayavani youtube

ಭತ್ತ ಕಟಾವು ಯಂತ್ರಕ್ಕೆ ಗಂಟೆಗೆ 2500ರೂ : ದುಬಾರಿ ಬಾಡಿಗೆಗೆ ಬೇಸತ್ತ ರೈತರು

ಹೊಸ ಸೇರ್ಪಡೆ

ಎಸ್ಸಿ, ಎಸ್ಟಿ ಸಮುದಾಯದವರಿಗೆ ಭೂ ಒಡೆತನ

ಎಸ್ಸಿ, ಎಸ್ಟಿ ಸಮುದಾಯದವರಿಗೆ ಭೂ ಒಡೆತನ

ತಂಬಾಕು ಮುಕ್ತ ಹಳ್ಳಿಗೆ ಜಿಲ್ಲೆಯ 3 ಪ್ರದೇಶ ಗುರುತು

ತಂಬಾಕು ಮುಕ್ತ ಹಳ್ಳಿಗೆ ಜಿಲ್ಲೆಯ 3 ಪ್ರದೇಶ ಗುರುತು

ಪಂಚಾಯತ್‌ನಲ್ಲೇ ಎಲ್ಲ 63 ಅರ್ಜಿ ನಮೂನೆಯ ಹೆಲ್ಪ್ ಡೆಸ್ಕ್

ಪಂಚಾಯತ್‌ನಲ್ಲೇ ಎಲ್ಲ 63 ಅರ್ಜಿ ನಮೂನೆಯ ಹೆಲ್ಪ್ ಡೆಸ್ಕ್

ಸಿಂದಗಿಯಲ್ಲಿ ಯಡಿಯೂರಪ್ಪ ಪ್ರಚಾರ ಆರಂಭ

ಸಿಂದಗಿಯಲ್ಲಿ ಯಡಿಯೂರಪ್ಪ ಪ್ರಚಾರ ಆರಂಭ

ಕಾರ್ಕಳದ ಹೆಬ್ಟಾಗಿಲಲ್ಲೇ ಅಭದ್ರತೆ; ಬೇಕಿದೆ ಪೊಲೀಸ್‌ ಹೊರ ಠಾಣೆ

ಕಾರ್ಕಳದ ಹೆಬ್ಟಾಗಿಲಲ್ಲೇ ಅಭದ್ರತೆ; ಬೇಕಿದೆ ಪೊಲೀಸ್‌ ಹೊರ ಠಾಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.