ಪಾತಕ ಲೋಕದ ರೋಚಕ ಕಥೆ

Team Udayavani, Oct 25, 2019, 5:02 AM IST

q-71

ಕೆಲ ವರ್ಷಗಳ ಹಿಂದೆ ಬಂದ “ದಂಡುಪಾಳ್ಯ’ ಚಿತ್ರದ ಬಗ್ಗೆ ನಿಮಗೆ ಗೊತ್ತಿರಬಹುದು. ದಂಡುಪಾಳ್ಯ ಹಂತಕರ ಕ್ರೌರ್ಯದ ಕಥೆಯನ್ನು ತೆರೆಮೇಲೆ ತಂದ ಈ ಚಿತ್ರಕ್ಕೆ ಬಾಕ್ಸಾಫೀಸ್‌ನಲ್ಲಿ ಭರ್ಜರಿ ರೆಸ್ಪಾನ್ಸ್‌ ಸಿಕ್ಕಿತ್ತು. ಅದಾದ ನಂತರ “ದಂಡುಪಾಳ್ಯ’ ಟೈಟಲ್‌ನಲ್ಲಿ ಸರಣಿ ಚಿತ್ರಗಳು ತೆರೆಗೆ ಬರಲು ಶುರುವಾದವು. “ದಂಡುಪಾಳ್ಯ’, “ದಂಡುಪಾಳ್ಯ-2′ ಆದ ನಂತರ “ದಂಡುಪಾಳ್ಯಂ-3′ ಕೂಡ ತೆರೆಗೆ ಬಂದಿತ್ತು. ಈಗ ಇದೇ ಸರಣಿಯ ಮುಂದುವರೆದ ಭಾಗವಾಗಿ “ದಂಡುಪಾಳ್ಯಂ-4′ ಚಿತ್ರ ತೆರೆಗೆ ಬರುತ್ತಿದೆ.

ಇನ್ನು “ದಂಡುಪಾಳ್ಯಂ-4′ ಚಿತ್ರದ ಟೈಟಲ್‌ಗೆ “ದಿ ಕ್ರೈಮ್ಸ್‌ ಟು ಬಿ ಕಂಟಿನ್ಯೂಡ್‌’ ಎಂಬ ಟ್ಯಾಗ್‌ಲೈನ್‌ ಇರುವುದರಿಂದ, “ದಂಡುಪಾಳ್ಯ’ದ ಈ ಹಿಂದಿನ ಮೂರೂ ಸರಣಿಯಲ್ಲಿದ್ದಂತೆ ಈ ಚಿತ್ರದಲ್ಲೂ ಕ್ರೌರ್ಯದ ಕಥಾನಕ ಮುಂದುವರೆಯಲಿದೆ. “ವೆಂಕಟ್‌ ಮೂವೀಸ್‌ ಪ್ರೊಡಕ್ಷನ್ಸ್‌’ ಬ್ಯಾನರ್‌ನಲ್ಲಿ ನಿರ್ಮಾಪಕ ವೆಂಕಟ್‌ ಕಥೆ, ಚಿತ್ರಕಥೆ ಮತ್ತು ಸಾಹಿತ್ಯವನ್ನು ಬರೆದು ಚಿತ್ರವನ್ನು ನಿರ್ಮಿಸಿದ್ದಾರೆ. ಕೆ.ಟಿ ನಾಯಕ್‌ “ದಂಡುಪಾಳ್ಯಂ-4′ ಚಿತ್ರವನ್ನು ನಿರ್ದೇಶಿಸಿ¨ªಾರೆ. ಈ ಬಾರಿ “ದಂಡುಪಾಳ್ಯಂ-4’ನಲ್ಲಿ ಸುಮನ್‌ ರಂಗನಾಥ್‌, ವೆಂಕಟ್‌, ಮುಮೈತ್‌ ಖಾನ್‌, ಸಂತೋಷ್‌, ವೀಣಾ, ಸಂಜು, ಅರುಣ್‌ ಬಚ್ಚನ್‌, ಸೋಮು, ಜೀವ, ವಿಠಲ… ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಈಗಾಗಲೇ ಸೆನ್ಸಾರ್‌ನಿಂದ ರಿಲೀಸ್‌ಗೆ ಅನುಮತಿ ಪಡೆದುಕೊಂಡಿರುವ “ದಂಡುಪಾಳ್ಯಂ-4′ ಚಿತ್ರ ಇದೇ ನವೆಂಬರ್‌ 1ರಂದು ತೆರೆಗೆ ಬರುತ್ತಿದೆ. ಸದ್ಯ ಚಿತ್ರದ ಪ್ರಮೋಶನ್‌ ಕೆಲಸಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಇತ್ತೀಚೆಗೆ ಚಿತ್ರದ ಆಡಿಯೋ ಮತ್ತು ಟ್ರೇಲರ್‌ನ್ನು ಹೊರತಂದಿದೆ. ಇದೇ ವೇಳೆ ಮಾತಿಗೆ ಸಿಕ್ಕ ಚಿತ್ರತಂಡ “ದಂಡುಪಾಳ್ಯಂ-4’ನ ವಿಶೇಷತೆಗಳ ಬಗ್ಗೆ ಒಂದಷ್ಟು ಮಾಹಿತಿ ಹಂಚಿಕೊಂಡಿತು.

ಚಿತ್ರದ ಬಗ್ಗೆ ಮೊದಲು ಮಾತಿಗಿಳಿದ ನಿರ್ಮಾಪಕ ವೆಂಕಟ್‌, “ಚಿತ್ರದ ಟೈಟಲ್ಲೇ ಹೇಳುವಂತೆ ಇದೊಂದು ಕ್ರೈಮ್‌-ಥ್ರಿಲ್ಲರ್‌ ಚಿತ್ರ. ಸುಮಾರು ಒಂದೂವರೆ ವರ್ಷ ಸಮಯ ತೆಗೆದುಕೊಂಡು ಚಿತ್ರವನ್ನು ಮಾಡಿದ್ದೇವೆ. ಪೊಲೀಸ್‌, ಕ್ರಿಮಿನಲ್ಸ್‌, ಪಬ್ಲಿಕ್‌ ಎಲ್ಲದರ ಬಗ್ಗೆಯೂ ಚಿತ್ರದಲ್ಲಿ ಹೇಳಿದ್ದೇವೆ. ಚಿತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆ. ಸಮಾಜದಲ್ಲಿ ಅಪರಾಧಗಳನ್ನು ಮಾಡಿ ತಾವೇ ಬುದ್ಧಿವಂತರು ಅಂದುಕೊಂಡವರಿಗೆ ಎಂತಹ ಅಂತ್ಯ ಆಗುತ್ತದೆ ಎನ್ನುವ ಮೆಸೇಜ್‌ ಚಿತ್ರದಲ್ಲಿದೆ’ ಎಂದು ವಿವರಣೆ ನೀಡಿದರು.

ಈ ಬಾರಿ “ದಂಡುಪಾಳ್ಯಂ-4′ ಚಿತ್ರದ ನಿರ್ದೇಶನದ ಹೊಣೆಯನ್ನು ಕೆ.ಟಿ ನಾಯಕ್‌ ವಹಿಸಿಕೊಂಡಿದ್ದಾರೆ. ಚಿತ್ರದ ಬಗ್ಗೆ ಮಾತನಾಡುವ ಕೆ.ಟಿ ನಾಯಕ್‌, “ಮೆಸೇಜ್‌ ಕೊಡುವಂತ ಸಬೆjಕ್ಟ್ ಇಟ್ಟುಕೊಂಡು ಅದನ್ನು ಎಂಟರ್‌ಟೈನ್ಮೆಂಟ್‌ ಆಗಿ ಜನಕ್ಕೆ ಈ ಚಿತ್ರದಲ್ಲಿ ಹೇಳುತ್ತಿದ್ದೇವೆ. ಚಿತ್ರ ಜನಕ್ಕೆ ಇಷ್ಟವಾಗುತ್ತದೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಇನ್ನು ಚಿರಯೌವ್ವನೆ ಸುಮನ್‌ ರಂಗನಾಥ್‌ “ದಂಡುಪಾಳ್ಯಂ-4’ನಲ್ಲಿ ಡಿ-ಗ್ಲಾಮರಸ್‌ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತಮ್ಮ ಪಾತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಯ ಮಾತುಗಳನ್ನಾಡುವ ಸುಮನ್‌ ರಂಗನಾಥ್‌, “ನಾನು ಇಲ್ಲಿಯವರೆಗೆ ಬಂದಿರುವ “ದಂಡುಪಾಳ್ಯ’ ಸೀರಿಸ್‌ನ ಚಿತ್ರಗಳನ್ನು ನೋಡಿಲ್ಲ. ಆದ್ರೆ ಚಿತ್ರತಂಡದ ಸ್ಟೋರಿ ಕೇಳುತ್ತಿದ್ದಂತೆ, ಕ್ಯಾರೆಕ್ಟರ್‌ ಇಷ್ಟವಾಯ್ತು. ಹಾಗಾಗಿ, ಚಿತ್ರವನ್ನು ಒಪ್ಪಿಕೊಂಡೆ. ಇಲ್ಲಿ ನನ್ನದು ಅಭಿನಯಕ್ಕೆ ತುಂಬಾ ಪ್ರಾಮುಖ್ಯತೆಯಿರುವ, ಡಿ-ಗ್ಲಾಮರಸ್‌ ಕ್ಯಾರೆಕ್ಟರ್‌. ಇಡೀ ಚಿತ್ರದಲ್ಲಿ ರಗಡ್‌ ಲುಕ್‌ನಲ್ಲಿ ಕಾಣುತ್ತೇನೆ. ಕಲಾವಿದೆಯಾಗಿ ಚಿತ್ರಕ್ಕೆ ಕಂಪ್ಲೀಟ್‌ ಎಫ‌ರ್ಟ್‌ ಹಾಕಿದ್ದೇನೆ. ಫ‌ಸ್ಟ್‌ಟೈಮ್‌ ಇಂಥದ್ದೊಂದು ಕ್ಯಾರೆಕ್ಟರ್‌ ಮಾಡುತ್ತಿರುವುದಕ್ಕೆ ಖುಷಿ ಇದೆ. ಟೀಮ್‌ ಜೊತೆ ಕೆಲಸ ಮಾಡಿದ್ದು ಒಳ್ಳೆಯ ಅನುಭವ’ ಎಂದರು.

“ದಂಡುಪಾಳ್ಯಂ-4′ ಕನ್ನಡ, ತಮಿಳು, ತೆಲುಗು, ಮಲೆಯಾಳಂ, ಹಿಂದಿಯಲ್ಲಿ ಏಕಕಾಲಕ್ಕೆ ತೆರೆಗೆ ತರಲು ಚಿತ್ರತಂಡ ಪ್ಲಾನ್‌ ಮಾಡಿಕೊಳ್ಳುತ್ತಿದೆ. ಚಿತ್ರಕ್ಕೆ ಆರ್‌.ಗಿರಿ, ಬೆನಕ ರಾಜು ಛಾಯಾಗ್ರಹಣವಿದೆ. ಬಾಬು ಎ ಶ್ರೀವಾತ್ಸವ, ಪ್ರೀತಿ ಮೋಹನ್‌ ಸಂಕಲನ ಕಾರ್ಯವಿದೆ. ಚಿತ್ರದಲ್ಲಿ ಎರಡು ಹಾಡುಗಳಿದ್ದು, ಆನಂದ ರಾಜ ವಿಕ್ರಮ ಸಂಗೀತ ಸಂಯೋಜಿಸಿದ್ದಾರೆ. ಶಿವ ಸಮಯ್‌ ಚಿತ್ರಕ್ಕೆ ಸಂಭಾಷಣೆ ಬರೆದಿ¨ªಾರೆ. “ದಂಡುಪಾಳ್ಯಂ-4′ ಹಿಂದಿನ ಮೂರು ಚಿತ್ರಗಳಂತೆ ಸಕ್ಸಸ್‌ ಲೀಸ್ಟ್‌ ಸೇರಿಲಿದೆಯಾ ಅನ್ನೋದು ನವೆಂಬರ್‌ ಮೊದಲ ವಾರ ಗೊತ್ತಾಗಲಿದೆ.

ಟಾಪ್ ನ್ಯೂಸ್

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

3-uv-fusion

Devotion: ಭಕ್ತಿಯ ಅರ್ಥವಾದರೂ ಏನು?

Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ

Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.