ಸತ್ಯ ಹೇಳ್ತೀನಿ ಇದು ಮಕ್ಕಳ ಚಿತ್ರವಲ್ಲ


Team Udayavani, Aug 10, 2018, 6:00 AM IST

x-38.jpg

“ನಾನು “ರಾಮಾ ರಾಮ ರೇ’ ಚಿತ್ರವನ್ನು ಬ್ರೇಕ್‌ ಮಾಡಬೇಕಿತ್ತು. ಅದೊಂದು ಫಿಲಾಸಫಿಕಲ್‌ ಚಿತ್ರವಾಗಿತ್ತು. ಭಗವದ್ಗೀತೆ, ವೇದಾಂತ, ಸಿದ್ಧಾಂತ ಅಂಶಗಳನ್ನು ಒಳಗೊಂಡಿತ್ತು. ಅದಕ್ಕಾಗಿ ಮಾಡಿದ ಸಾಹಸ ಒಂದಾ, ಎರಡಾ…!’ 

– ಹೀಗೆ ಹೇಳಿ ಹಾಗೊಂದು ಸಮಾಧಾನದ ನಿಟ್ಟುಸಿರು ಬಿಟ್ಟರು “ರಾಮಾ ರಾಮ ರೇ’ ಖ್ಯಾತಿಯ ನಿರ್ದೇಶಕ ಸತ್ಯಪ್ರಕಾಶ್‌.
“ರಾಮಾ ರಾಮ ರೇ’ ಬಳಿಕ ಸತ್ಯಪ್ರಕಾಶ್‌ ಕಮರ್ಷಿಯಲ್‌ ಚಿತ್ರವನ್ನು ಮಾಡಬಹುದು ಎಂಬ ನಿರೀಕ್ಷೆ ಹಲವರಲ್ಲಿತ್ತು. ಆದರೆ, ಸತ್ಯಪ್ರಕಾಶ್‌ ಮಾತ್ರ ಹಾಗೆ ಮಾಡಲಿಲ್ಲ. ಕಾರಣ, ಅವರಿಗೆ “ರಾಮಾ ರಾಮ ರೇ’ ಚಿತ್ರವನ್ನು ಬ್ರೇಕ್‌ ಮಾಡಬೇಕೆಂಬ ಹಪಾಹಪಿ. ಆ ಕಾರಣಕ್ಕೆ ಅವರು ಆಯ್ಕೆ ಮಾಡಿಕೊಂಡಿದ್ದು ಕಂಟೆಂಟ್‌ ಇರುವ ಚಿತ್ರ. ಅದಕ್ಕೆಂದೇ ಎರಡು ವರ್ಷಗಳ ಕಾಲ ಕಥೆ ಬರೆಯೋಕೆ ಕುಳಿತರು. ಹಾಗೆ ಹುಟ್ಟಿಕೊಂಡಿದ್ದೇ, “ಒಂದಲ್ಲಾ ಎರಡಲ್ಲಾ’.

ಹೌದು, “ರಾಮಾ ರಾಮ ರೇ’ ಹಿಟ್‌ ಆಗಿದ್ದೇ ತಡ, ಸತ್ಯಪ್ರಕಾಶ್‌ ಅವರ ಬಳಿ ಬಂದ ನಿರ್ಮಾಪಕರ ಸಂಖ್ಯೆಗೇನು ಲೆಕ್ಕವಿಲ್ಲ. ಹಾಗಂತ ಸತ್ಯಪ್ರಕಾಶ್‌ ಎಲ್ಲರನ್ನೂ ಅಪ್ಪಿಕೊಳ್ಳಲಿಲ್ಲ. “ರಾಮಾ ರಾಮ ರೇ’ ಚಿತ್ರವನ್ನು ತೆಲುಗು, ತಮಿಳು ಭಾಷೆಗೂ ನಿರ್ದೇಶನ ಮಾಡುವ ಅವಕಾಶ ಬಂತಾದರೂ, ಭಾಷೆಯ ಸಮಸ್ಯೆಯಿಂದಾಗಿ ಆ ಅವಕಾಶ ಕೈ ಚೆಲ್ಲಿದರು. ಕನ್ನಡ ಭಾಷೆ ಮೇಲಿದ್ದ ಹಿಡಿತ ಅನ್ಯ ಭಾಷೆ ಮೇಲಿರಲಿಲ್ಲ ಎಂಬ ಕಾರಣಕ್ಕೆ ಕೈ ಬಿಟ್ಟರು. ಮುಂದೇನು ಎಂಬ ಯೋಚನೆ ಕೂಡ ಅವರಲ್ಲಿರಲಿಲ್ಲ. ಯಾವ ಕಥೆಯೂ ತಲೆಯಲ್ಲಿರಲಿಲ್ಲ. ಅದೇ ವೇಳೆಗೆ ಸತ್ಯಪ್ರಕಾಶ್‌ ಅವರನ್ನು ಹುಡುಕಿ ಹೋದವರು ನಿರ್ಮಾಪಕ ಉಮಾಪತಿ. “ಹೆಬ್ಬುಲಿ’ ಅಂತಹ ಬಿಗ್‌ ಕಮರ್ಷಿಯಲ್‌ ಚಿತ್ರ ನಿರ್ಮಿಸಿದ ನಿರ್ಮಾಪಕರು ಬಂದು ಸಿನಿಮಾ ಮಾಡಿ ಅಂದಾಗ, ಸತ್ಯಪ್ರಕಾಶ್‌ ಗೊಂದಲಕ್ಕೀಡಾಗಿದ್ದು ನಿಜ. ಕೋಟಿ ಹಾಕುವ ನಿರ್ಮಾಪಕರು ಬಂದರೆ, ಬಿಟ್ಟವರುಂಟೇ? ಆದರೆ, ಸತ್ಯಪ್ರಕಾಶ್‌ ಹಾಗೆ ಮಾಡಲಿಲ್ಲ. “ನನ್ನಲ್ಲಿ ಯಾವ ಕಥೆಯೂ ಇಲ್ಲ. ನನಗೆ ಹತ್ತು ತಿಂಗಳು ಸಮಯ ಕೊಡಿ. ಒಂದು ಕಥೆ ಮಾಡ್ತೀನಿ. ಆಮೇಲೆ ನಿಮ್ಮ ಬಳಿ ಬರಿ¤àನಿ. ನಿಮಗೆ ಓಕೆ ಅನಿಸಿ ದರೆ ಚಿತ್ರ ಮಾಡೋಣ’ ಅಂತ ಹೇಳಿದ ಸತ್ಯಪ್ರಕಾಶ್‌, ಮಾತು ಕೊಟ್ಟಂತೆ, ಒಂದು ಕಥೆ ಮಾಡಿಕೊಂಡು ಬಂದರು.  ಆ ಕಥೆ ಉಮಾಪತಿಗೆ ಹಿಡಿಸಿತು. “ಒಂದಲ್ಲಾ ಎರಡಲ್ಲಾ’ ಚಿತ್ರ ಶುರುವಾಯ್ತು. ಆಗಸ್ಟ್‌ 24 ರಂದು ಬಿಡುಗಡೆಯೂ ಆಗುತ್ತಿದೆ.

ಮೊದಲ ಪ್ರಯತ್ನದಲ್ಲೇ ಗೆಲುವು ಕೊಟ್ಟು, ಬುದ್ಧಿವಂತ ನಿರ್ದೇಶಕ ಎಂಬ ಹೆಸರು ಪಡೆದವರಿಗೆ ಕಮರ್ಷಿಯಲ್‌ ಚಿತ್ರಗಳನ್ನು ಮಾಡುವುದು ದೊಡ್ಡ ವಿಷಯವೇನಲ್ಲ. ಆದರೆ, ಸತ್ಯಪ್ರಕಾಶ್‌ಗೆ ತಾನು ತನ್ನ ಚಿತ್ರವನ್ನೇ ಬ್ರೇಕ್‌ ಮಾಡಬೇಕು ಅಂತ ಆಯ್ಕೆ ಮಾಡಿಕೊಂಡ ಕಥೆಯ ಜಾಡು ಬೇರೆಯದ್ದಾಗಿತ್ತು. ಅವರೇ ಹೇಳುವಂತೆ, “ಇದು ಸರ್ಕಾರಿ ಶಾಲೆಗೆ ಸಂಬಂಧಿಸಿದ ಚಿತ್ರವಲ್ಲ. ಹಾಗೇ, ಮಕ್ಕಳ ಚಿತ್ರವೂ ಅಲ್ಲ. “ರಾಮಾ ರಾಮರೇ’ ಚಿತ್ರ ಫಿಲಾಸಫಿಕಲ್‌ ಆಗಿತ್ತು. 

ಭಗವದ್ಗೀತೆ, ಸಿದ್ಧಾಂತ, ವೇದಾಂತಗಳ ಅಂಶಗಳಿದ್ದವು. ಮುಂದಿನ ಚಿತ್ರ ಅಬ್ಬರವಿರದೆ, ಸರಳವಾಗಿರಬೇಕು ಅಂತಹ ಸ್ಕ್ರಿಪ್ಟ್ ಮಾಡಬೇಕು, ಅದು ಮೊದಲ ಚಿತ್ರವನ್ನೇ ಮರೆಸಬೇಕು ಅಂತ ಕಥೆ ಬರೆಯೋಕೆ ಕುಳಿತೆ. ಹಾಗೆ ತಯಾರಾಗಿದ್ದೇ “ಒಂದಲ್ಲಾ ಎರಡಲ್ಲಾ” ಎಂದು ವಿವರ ಕೊಡುತ್ತಾರೆ ಸತ್ಯ.
“ಇದೊಂದು ಮುಗ್ಧತೆ ವಿಷಯ ಇಟ್ಟುಕೊಂಡು ಮಾಡಿರುವ ಕಥೆ. ಮನುಷ್ಯ ತನ್ನೊಳಗೆ ಮುಗ್ಧತೆ ಇಟ್ಟುಕೊಂಡೇ ಬೆಳೆಯುತ್ತಾನೆ. ಹಂತ ಹಂತವಾಗಿ ಬೆಳೆಯುತ್ತಲೇ ಆ ಮುಗ್ಧತೆ ಮರೆತು ಓಡಾಡುತ್ತಾನೆ. ಆ ಅಂಶಕ್ಕೆ ಒಂದಷ್ಟು ವಿಷಯಗಳನ್ನು ಹೆಕ್ಕಿ ಪೋಣಿಸುತ್ತಾ ಹೋದೆ. ಕಥೆಗೊಂದು ಚೌಕಟ್ಟು ಸಿಕು¤. ಮೊದಲೇ ಹೇಳಿದಂತೆ ಇದು ಶಾಲೆ ಕುರಿತ ಚಿತ್ರವಲ್ಲ, ಮಕ್ಕಳ ಸಿನಿಮಾನೂ ಅಲ್ಲ. ಇಲ್ಲೊಬ್ಬ ಹುಡುಗನಿದ್ದಾನೆ. ಅವನ ಸುತ್ತವೇ ಕಥೆ ಸುತ್ತುತ್ತದೆ. ಮುಗ್ಧತೆಯ ರೂಪ ಅವನು. ಆ ಹುಡುಗನನ್ನು ಹೊರತುಪಡಿಸಿದರೆ, ಮಿಕ್ಕವರೆಲ್ಲಾ ಹಿರಿಯ ಕಲಾವಿದರೇ ಇರಲಿದ್ದಾರೆ. ಒಬ್ಬ ಮುಗ್ಧ ಹುಡುಗ ಪೇಟೆ ಎಂಬ ಊರಿಗೆ ಹೋದಾಗ, ಅವನ ಎದುರು ಸಿಗುವ ಜನ ಇವನಿಂದ ಹೇಗೆ ಬದಲಾಗುತ್ತಾರೆ. ಅವನಿಗೆ ಆ ಜನರಿಂದ ಏನೆಲ್ಲಾ ಆಗುತ್ತೆ ಅನ್ನೋದು ಕಥೆ. ಇದೊಂದು ಸೋಷಿಯಲ್‌ ಡ್ರಾಮ. ಸ್ವಲ್ಪ ಹ್ಯೂಮರ್‌ ಮಿಕ್ಸ್‌ ಇದೆ. ನನ್ನಿಷ್ಟದ ಕಥೆ ಆಗಿರುವುದರಿಂದ ಎಲ್ಲಾ ಮಕ್ಕಳೂ ಈ ಚಿತ್ರ ನೋಡಬೇಕೆಂಬ ಆಸೆ ಇದೆ. ಪ್ರತಿಯೊಬ್ಬರಿಗೂ ಒಂದು ವಸ್ತು ಬೇಕಾಗಿರುತ್ತೆ. ಅದನ್ನ ಜೀವನ ಪರ್ಯಂತ ಹುಡುಕ್ತಾನೇ ಇರಿ¤àವಿ. ಅದನ್ನೇ ಆ ಮುಗ್ಧ ಹುಡುಗ ಹುಡುಕಲು ಹೋದಾಗ, ನೇಚರ್‌ ಮತ್ತು ಸಮಾಜ ಅವನಿಗೆ ಸಹಕರಿಸುತ್ತೆ. ಅದೇ ಬಲವಾದ ಕಾನ್ಸೆಪ್ಟ್. ಇಡೀ ಚಿತ್ರ ನೋಡಿದವರಿಗೆ ತನ್ನೊಳಗಿರುವ ಮುಗ್ಧತೆ ಆಚೆ ಬರುತ್ತೆ’ ಎನ್ನುತ್ತಾರೆ ಸತ್ಯಪ್ರಕಾಶ್‌.

ಸವಾಲು ಹೆಚ್ಚು: ಇಂತಹ ಸಿನಿಮಾ ಮಾಡುವಾಗ ಸಾಕಷ್ಟು ಸವಾಲುಗಳು ಎದುರಾಗುವುದು ಸಹಜ. ಅಂತಹ ಸವಾಲುಗಳನ್ನು ಎದುರಿಸಿರುವ ಸತ್ಯ, “ಮೊದಲನೆ ಚಾಲೆಂಜ್‌ ಅಂದರೆ ಕಥೆ. ಇಲ್ಲಿ ರೆಗ್ಯುಲರ್‌ ಫಾರ್ಮೆಟ್‌ ಇಲ್ಲ. ದ್ವೇಷ, ಪ್ರೀತಿ, ಪುನರ್ಜನ್ಮ, ಆ್ಯಕ್ಷನ್‌, ಸೆಂಟಿಮೆಂಟ್‌ ಇತ್ಯಾದಿ ಏನೂ ಇರಲ್ಲ. ಗಟ್ಟಿ ಕಥೆ ಕಟ್ಟೋದೇ ದೊಡ್ಡ ಚಾಲೆಂಜ್‌. 

ನಾವು ಹೊಸದಾಗಿ ಕಥೆ ಹೆಣೆಯುವಾಗ ಅದು ವಕೌìಟ್‌ ಆಗುತ್ತೋ, ಇಲ್ಲವೋ ಅದೂ ಗೊತ್ತಿರಲ್ಲ. ಈ ರೀತಿಯ ಕಥೆಗಳಿಗೆ ಬರವಣಿಗೆ ಚಾಲೆಂಜ್‌ ಆಗಿರುತ್ತೆ. ಅದರಲ್ಲೂ ಅದನ್ನು ಜನರಿಗೆ ಕನ್ವಿನ್ಸ್‌ ಮಾಡೋದು ಇನ್ನೂ ದೊಡ್ಡ ಚಾಲೆಂಜ್‌. ಇಂಥದ್ದೇ ಸೀನ್‌ಗಳಿಗೆ ಜನ ನಗ್ತಾರೆ, ನಗಲ್ಲ ಎಂಬುದೂ ಗೊತ್ತಾಗಲ್ಲ. ಅದು ವರ್ಕ್‌ ಆಗಬಹುದಷ್ಟೇ ಅಂದುಕೊಂಡು ಕಥೆ ನಂಬಿ ಕೆಲಸ ಮಾಡಬೇಕು. ನಮಗೆ ಆ ಕಥೆ ಇಟ್ಟುಕೊಂಡು, ಪಾತ್ರ ಕಟ್ಟಿಕೊಂಡು ಚಿತ್ರೀಕರಿಸಿ ನೋಡೋವರೆಗೆ ನಮಗೂ ಅದರ ಜಡ್ಜ್ಮೆಂಟ್‌ ಸಿಗೋದಿಲ್ಲ. “ರಾಮಾ ರಾಮ ರೇ’ ಮಾಡುವಾಗಲೂ ಇಂಥದ್ದೇ ಸವಾಲಿತ್ತು. ಹಾಗಾಗಿ ಈ ರೀತಿಯ ಸಬೆjಕ್ಟ್ ಗಳು ತುಂಬಾ ಕಷ್ಟ. ಅದು ವರ್ಕೌಟ್‌ ಆದಾಗಲಷ್ಟೇ ಗೊತ್ತಾಗೋದು’ ಎನ್ನುತ್ತಾರೆ ಸತ್ಯಪ್ರಕಾಶ್‌.

ಇದು ತಮ್ಮ ಮೊದಲ ಚಿತ್ರಕ್ಕಿಂತ ವಿಭಿನ್ನವಾಗಿದೆ ಎನ್ನುವ ಸತ್ಯ, “ಸಾಮಾನ್ಯವಾಗಿ ಅದೇ ರೀತಿಯ ಚಿತ್ರ ಮಾಡಿದರೆ “ಬ್ರಾಂಡ್‌’ ನಿರ್ದೇಶಕನೆಂಬ ಹೆಸರಾಗುತ್ತೆ. ಇದು “ರಾಮಾ ರಾಮ ರೇ’ ಜಾತಿಗೆ ಸೇರಿಲ್ಲ. “ಒಂದಲ್ಲಾ ಎರಡಲ್ಲಾ’ ಚಿತ್ರ ನೋಡಿದವರಿಗೆ ಆ ಚಿತ್ರ ಮಾಡಿದ್ದ ನಿರ್ದೇಶಕರ ಸಿನಿಮಾನಾ ಇದು ಅನಿಸುವಷ್ಟರ ಮಟ್ಟಿಗೆ ವಿಭಿನ್ನವಾಗಿದೆ ಎಂಬ ಗ್ಯಾರಂಟಿ ಕೊಡ್ತೀನಿ. ನನಗೆ ಕಂಟೆಂಟ್‌ ಇಷ್ಟ. ಹೊಸ ಪ್ರಯೋಗ ಇಷ್ಟ. ದೊಡ್ಡ ವಿಷಯವನ್ನು ತುಂಬಾ ಸರಳವಾಗಿ ಹೇಳಲು ಬಯಸುತ್ತೇನೆ. ಪ್ರತಿಯೊಬ್ಬ ನೋಡುಗನಿಗೂ ಅರ್ಥ ಆಗಬೇಕು. ಅವನು ಹಳ್ಳಿಯವನಿರಲಿ, ಅನಕ್ಷರಸ್ಥನಿರಲಿ, ಸಿನಿಮಾದ ಆಸಕ್ತಿ ಇಲ್ಲದ ವ್ಯಕ್ತಿಯೇ ಇರಲಿ, ಚಿತ್ರ ನೋಡಿದಾಗ ನಗ್ತಾ ನಗ್ತಾ ನೊಡಬೇಕು, ಹೇಳಿದ್ದು ಆರ್ಥ ಆಗಬೇಕು. ಅದು ಅವರಿಗೆ ಕನೆಕ್ಟ್ ಆಗಬೇಕು. ಅಂಥದ್ದೊಂದು ಕಥೆ ಇಲ್ಲಿದೆ. “ರಾಮಾ ರಾಮ ರೇ’ ಚಿತ್ರವನ್ನು ಯಾವುದೇ ಕಾರಣಕ್ಕೂ ಜನ ನೆನಪಿಸಬಾರದು ಎಂಬ ಉದ್ದೇಶದಿಂದ ಈ ಚಿತ್ರ ಮಾಡಿದ್ದೇನೆ’ ಎಂದು ಹೇಳುವ ಸತ್ಯಪ್ರಕಾಶ್‌, “ಒಂದು ಸಮಸ್ಯೆ ಏನೆಂದರೆ, ಹೊಸ ಆರ್ಟಿಸ್ಟ್‌ ಇಟ್ಟುಕೊಂಡರೆ “ಬ್ರಾಂಡ್‌ ಫೀಲ್‌’ ಆಗಬಹುದೇನೋ. ನನಗೆ ಬ್ರಾಂಡ್‌ ಆಗ್ತಿàನಿ ಎಂಬ ಭಯವಿಲ್ಲ. ಕಂಟೆಂಟ್‌ ಸಿನಿಮಾ ಮೂಲಕ ಹೊಸದೇನನ್ನೋ ಕೊಡಬೇಕೆಂಬ ಛಲವಿದೆ. ಖುಷಿ ಅಂದರೆ, ಕಮರ್ಷಿಯಲ್‌ ಸಿನಿಮಾ ಮಾಡಿದ್ದ ಉಮಾಪತಿ ಅಂತಹ ನಿರ್ಮಾಪಕರು ಇಂತಹ ಸಬೆjಕ್ಟ್ ಒಪ್ಪಿ, ಸಹಕರಿಸಿದ್ದು ವಿಶೇಷ’ ಎನ್ನುತ್ತಾರೆ ಸತ್ಯ.

“ಇಂತಹ ಚಿತ್ರಗಳಿಗೆ ಕಥೆ ಬರೆಯುವಾಗ ಯಾವ ಹೀರೋಗಳು ತಲೆಯಲ್ಲಿರಲ್ಲ. ನಾನು ನಿತ್ಯ ನೋಡೋ ಪಾತ್ರ, ಲೈಫ‌ಲ್ಲಿ ಬಂದ ಪಾತ್ರಗಳೇ ಇಲ್ಲಿವೆ. ಅವನು ಹಂಗಾ, ಇವನು ಹಿಂಗಾ ಎಂಬ ಪಾತ್ರಗಳನ್ನೇ ಹುಡುಕ್ತೀನಿ. ಒಂದು ಭಯವೆಂದರೆ, ಸೀರಿಯಸ್‌ ನಟರನ್ನು ಕರೆತಂದು ಕಾಮಿಡಿ ಮಾಡಿದರೆ ಸರಿ ಇರುತ್ತಾ? ಅಷ್ಟಕ್ಕೂ ಇಂತಹ ಕಥೆಗಳನ್ನು ಒಪ್ಪಲು ಅವರು ರೆಡಿ ಇರಲ್ಲ. ತಮ್ಮ ಇಮೇಜ್‌ ಬಿಟ್ಟು ಬರಲ್ಲ.  ಹಾಗೊಮ್ಮೆ ಬಂದರೂ ಜನ ಹೇಗೆ ಸ್ವೀಕರಿಸುತ್ತಾರೆ ಎಂಬ ಭಯ. ಅದು ನಮ್ಮಂತಹ ನಿರ್ದೇಶಕರಿಗೂ ಇರುತ್ತೆ. ಅದೇ ಹೊಸ ಪಾತ್ರಧಾರಿಗಳಾದರೆ, ನಮಗೆ ಬೇಕಾದಂತೆ ನಗಿಸಿ, ಅಳಿಸಬಹುದು. ಏನೇ ಮಾಡಿದರೂ ಹೊಸದೆನಿಸುತ್ತೆ. ಜನರೂ ಒಪ್ತಾರೆ. ಈ ರೀತಿಯ ಚಿತ್ರಗಳು ಎಲ್ಲರಿಗೂ ತಲುಪಬೇಕು. ಕಂಟೆಂಟ್‌ ಬೇಸ್ಡ್ ಸಿನಿಮಾಗಳಿಗೆ ಹೆಚ್ಚು ಬಜೆಟ್‌ ಬೇಕಿಲ್ಲ. ಆದರೆ, ಒಂದು ಕಮರ್ಷಿಯಲ್‌ ಸಿನಿಮಾಗೆ ಹಾಕಿಸಿದಷ್ಟೇ ಶ್ರಮ ಹಾಕಬೇಕು. ಚಿತ್ರೀಕರಣ ಅಬ್ಬರವಿರಲ್ಲ, ರೆಗ್ಯುಲರ್‌ ಫಾರ್ಮೆಟ್‌ ಹೊರತಾಗಿರುತ್ತೆ, ದೊಡ್ಡ ಆರ್ಟಿಸ್ಟ್‌ ಇರಲ್ಲ, ಎಲ್ಲೆಂದರಲ್ಲಿ ಶೂಟಿಂಗ್‌ ವೇಳೆ ಜನ ಮುತ್ತಿಕೊಳ್ಳಲ್ಲ, ಕ್ಯಾರವಾನ್‌ ಬೇಕಿಲ್ಲ, ಫೈಟು, ಸಾಂಗು ಇತ್ಯಾದಿ ಇರಲ್ಲ. ಒಂದೇ ಒಂದು ದೊಡ್ಡ ಶ್ರಮ ಅಂದರೆ, ಬರವಣಿಗೆ ಮೂಲಕವೇ ಕನ್ವಿನ್ಸ್‌ ಮಾಡಬೇಕಷ್ಟೇ. ಅದೊಂದೇ ಇಂತಹ ಚಿತ್ರಗಳಿಗಿರುವ ಚಾಲೆಂಜ್‌. “ಒಂದಲ್ಲಾ ಎರಡಲ್ಲಾ’ ಎಂಬ ಚಿತ್ರದ ಆಶಯ ಟೈಟಲ್‌ ಕಾರ್ಡ್‌ ಸಾಂಗ್‌ನಲ್ಲಿದೆ. “ಒಗ್ಗಟ್ಟಿನಲ್ಲಿ ಬಲವೆಂದರು, ಬಲದಲ್ಲೇ ಇರುವನು ಆ ದೇವರು’ ಎಂಬ ಹಾಡು ಇಡೀ ಚಿತ್ರದ ತಾತ್ಪರ್ಯವನ್ನು ಹೇಳುತ್ತೆ’ ಎನ್ನುತ್ತಲೇ ಮಾತು ಮುಗಿಸುತ್ತಾರೆ ಸತ್ಯಪ್ರಕಾಶ್‌. 

 ವಿಜಯ್‌ ಭರಮ ಸಾಗರ

ಟಾಪ್ ನ್ಯೂಸ್

DK-Shivakumar

Cauvery Water; ತಮಿಳುನಾಡಿಗೆ ಹರಿಯುತ್ತಿದೆ ನಿತ್ಯ 1.5 ಟಿಎಂಸಿ ನೀರು: ಡಿ.ಕೆ ಶಿವಕುಮಾರ್‌

Truck Terminal ಖಾತೆಯಿಂದ ವೀರಯ್ಯಗೆ 3 ಕೋಟಿ ವರ್ಗ?

Truck Terminal ಖಾತೆಯಿಂದ ವೀರಯ್ಯಗೆ 3 ಕೋಟಿ ವರ್ಗ?

Subrahmanya: ಇನ್ನೂ ಸಿಗದ ನೆರೆ ನೀರಲ್ಲಿ ಕೊಚ್ಚಿ ಹೋದ ಆನೆ ಮೃತದೇಹ

Subrahmanya: ಇನ್ನೂ ಸಿಗದ ನೆರೆ ನೀರಲ್ಲಿ ಕೊಚ್ಚಿ ಹೋದ ಆನೆ ಮೃತದೇಹ

Dakshina Kannada District : ಧಾರಾಕಾರ ಮಳೆ; ಕೆಲವೆಡೆ ಹಾನಿ

Dakshina Kannada District : ಧಾರಾಕಾರ ಮಳೆ; ಕೆಲವೆಡೆ ಹಾನಿ

Heavy Rain ಉಡುಪಿ: 40ಕ್ಕೂ ಅಧಿಕ ಮನೆಗಳಿಗೆ ಹಾನಿ

Heavy Rain ಉಡುಪಿ: 40ಕ್ಕೂ ಅಧಿಕ ಮನೆಗಳಿಗೆ ಹಾನಿ

Heavy Rain ಕುಸಿಯುವ ಭೀತಿಯಲ್ಲಿ ಬೈಂದೂರು ಸೋಮೇಶ್ವರ ಗುಡ್ಡ

Heavy Rain ಕುಸಿಯುವ ಭೀತಿಯಲ್ಲಿ ಬೈಂದೂರು ಸೋಮೇಶ್ವರ ಗುಡ್ಡ

Moodabidri: ಬಿರುಗಾಳಿಗೆ ಮನೆ, ಕಾರಿನ ಮೇಲೆ ಮರ ಬಿದ್ದು ಹಾನಿ

Moodabidri: ಬಿರುಗಾಳಿಗೆ ಮನೆ, ಕಾರಿನ ಮೇಲೆ ಮರ ಬಿದ್ದು ಹಾನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Happy Birthday Shivanna

Happy Birthday Shivanna: ಶಿವಣ್ಣ ಎಂಬ 62ರ ಹುಡುಗ; ಕೈಯಲ್ಲಿರುವ ಸಿನಿಮಾ ಒಂದಾ, ಎರಡಾ..

Kalki

Indian Cinema; ಕಲ್ಕಿ ಗೆಲುವಲ್ಲಿ ಸ್ಟಾರ್ ನಗು

Jigar

Jigar; ತೆರೆಗೆ ಬಂತು ಪ್ರವೀಣ್ ತೇಜ್ ನಟನೆಯ ಜಿಗರ್

ronny

Ronny; ಆಗಸ್ಟ್ ಗೆ ತೆರೆಗೆ ಬರಲಿದೆ ಕಿರಣ್ ರಾಜ್ ನಟನೆಯ ರಾನಿ

Sandalwood: ಜುಲೈ ತಿಂಗಳ ಪೂರ್ತಿ ಹೊಸಬರ ಮೆರವಣಿಗೆ; 20+ ಸಿನಿಮಾ ರಿಲೀಸ್

Sandalwood: ಜುಲೈ ತಿಂಗಳ ಪೂರ್ತಿ ಹೊಸಬರ ಮೆರವಣಿಗೆ; 20+ ಸಿನಿಮಾ ರಿಲೀಸ್

MUST WATCH

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

udayavani youtube

ಅಘನಾಶಿನಿ ಆರ್ಭಟ

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

udayavani youtube

ವಿಷಪ್ರಾಶನ ತಡೆ: ಜಾಗೃತಿ ಮತ್ತು ಮುನ್ನೆಚ್ಚರಿಕೆ ವಹಿಸುವುದು ಹೇಗೆ?

udayavani youtube

ಬೆಂಗಳೂರಿನಲ್ಲೊಂದು ಟ್ರಡಿಶನಲ್ ಮುಳಬಾಗಿಲು ದೋಸೆ

ಹೊಸ ಸೇರ್ಪಡೆ

Congress-Symbol

Prajwal Case: ನಿಲುವಳಿಗೆ ಅನುಮತಿ ಕೋರಿ ಸ್ಪೀಕರ್‌ಗೆ ಪತ್ರ

DK-Shivakumar

Cauvery Water; ತಮಿಳುನಾಡಿಗೆ ಹರಿಯುತ್ತಿದೆ ನಿತ್ಯ 1.5 ಟಿಎಂಸಿ ನೀರು: ಡಿ.ಕೆ ಶಿವಕುಮಾರ್‌

Truck Terminal ಖಾತೆಯಿಂದ ವೀರಯ್ಯಗೆ 3 ಕೋಟಿ ವರ್ಗ?

Truck Terminal ಖಾತೆಯಿಂದ ವೀರಯ್ಯಗೆ 3 ಕೋಟಿ ವರ್ಗ?

Subrahmanya: ಇನ್ನೂ ಸಿಗದ ನೆರೆ ನೀರಲ್ಲಿ ಕೊಚ್ಚಿ ಹೋದ ಆನೆ ಮೃತದೇಹ

Subrahmanya: ಇನ್ನೂ ಸಿಗದ ನೆರೆ ನೀರಲ್ಲಿ ಕೊಚ್ಚಿ ಹೋದ ಆನೆ ಮೃತದೇಹ

Dakshina Kannada District : ಧಾರಾಕಾರ ಮಳೆ; ಕೆಲವೆಡೆ ಹಾನಿ

Dakshina Kannada District : ಧಾರಾಕಾರ ಮಳೆ; ಕೆಲವೆಡೆ ಹಾನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.