ಮೆಕ್‍ಡೊವೆಲ್ಸ್ ನಂ.1 ಸೋಡಾ ನಂ.1 ಯಾರಿ ವಿಥ್ ಶಿವಣ್ಣ ಕಾರ್ಯಕ್ರಮಕ್ಕೆ

Team Udayavani, Feb 24, 2018, 2:15 PM IST

No1-Yaari-with-Shivanna.jpg

ಬೆಂಗಳೂರು: ಮಿತ್ರತ್ವ ಮತ್ತು ಸೋದರತ್ವ ಎರಡೂಮಿಲೆನಿಯಲ್‍ಗಳಿಗೆ ಸ್ವಯಂ-ಸಂಶಯ ಅಥವಾ ಅಡೆತಡೆ ಎದುರಾದಾಗ ಬೆಂಬಲಿಸುವ ಮತ್ತು ಅವರನ್ನು ರೂಪಿಸಲು ಜವಾಬ್ದಾರಿಯಾಗಿರುವ ವ್ಯವಸ್ಥೆಯಾಗಿದೆ. ಡಿಯಾಜಿಯೊ ಇಂಡಿಯಾದಿಂದ ಮೆಕ್‍ಡೊವೆಲ್ಸ್ ನಂ.1 ಸೋಡಾ ಮತ್ತು ವುಕ್ಲಿಪ್ ಮತ್ತು ಪಿಸಿಸಿಡಬ್ಲ್ಯೂ ಜಾಗತಿಕ ವಿಡಿಯೋ-ಆನ್-ಡಿಮ್ಯಾಂಡ್ ಒಟಿಟಿ ಸೇವೆಯ ವಿಯು ಈಗ ಅಂತಹ ಮಿತ್ರತ್ವವನ್ನು ನಿಜಜೀವನದಿಂದ ಚಿತ್ರಜಗತ್ತಿನವರೆಗೆ ಹೊಚ್ಚಹೊಸ ಟಾಕ್ ಶೋ ನಂ.1 ಯಾರಿ ವಿಥ್ ಶಿವಣ್ಣ ಕಾರ್ಯಕ್ರಮದಲ್ಲಿ ತರಲಿದ್ದು ಇದು ಮೈಂಡ್‍ಶೇರ್ ಅಂಡ್ ಗ್ರೂಪ್ ಎಂ ಸಹಯೋಗದಲ್ಲಿ ನಡೆಯುತ್ತಿದೆ. ಈ ಸರಣಿಯನ್ನು ಕನ್ನಡ ಚಲನಚಿತ್ರೋದ್ಯಮದ ಸೂಪರ್‍ಸ್ಟಾರ್ ಶಿವರಾಜ್‍ಕುಮಾರ್ ಅವರು ನಡೆಸಿಕೊಡಲಿದ್ದಾರೆ. ಈ ಕಾರ್ಯಕ್ರಮ ವಿಯು ಮತ್ತು ಸ್ಟಾರ್ ಸುವರ್ಣದಲ್ಲಿ ಫೆಬ್ರವರಿ 25, 2018ರಿಂದ ಪ್ರತಿ ಭಾನುವಾರ ಸಂಜೆ 8.00ರಿಂದ 9.00ರವರೆಗೆ ಪ್ರಸಾರವಾಗಲಿದೆ.

ಈ ಕಾರ್ಯಕ್ರಮ ಮೊಟ್ಟಮೊದಲ ಬಾರಿಗೆ ಅತಿಥಿಗಳಾಗಿ ಚಿತ್ರತಾರೆಯರು ಮತ್ತು ಅವರ ನಿಜಜೀವನದ ಬಿಎಫ್‍ಎಫ್‍ಗಳನ್ನು ಒಗ್ಗೂಡಿಸಲಿದ್ದು ಅವರು ತಮ್ಮ ಮಿತ್ರತ್ವ ಬಾಂಧವ್ಯದ ಗುಟ್ಟುಗಳನ್ನು ಹಂಚಿಕೊಳ್ಳಲಿದ್ದು ಆಸಕ್ತಿದಾಯ ಆಟಗಳನ್ನೂ ಕೂಡಾ ಶಿವರಾಜ್‍ಕುಮಾರ್ ಅವರೊಂದಿಗೆ ಆಡಲು ಅವಕಾಶ ಕಲ್ಪಿಸುತ್ತದೆ. ಅಭಿಮಾನಿಗಳು ಮತ್ತು ಪ್ರೇಕ್ಷಕರಿಗೆ ಹಿಂದೆಂದೂ ಕಾಣದ ವಿಡಿಯೋಗಳ ಪ್ರದರ್ಶನ ನೀಡುವುದಲ್ಲದೆ ಅವರ ಅಚ್ಚುಮೆಚ್ಚಿನ ತಾರೆಯರೊಂದಿಗೆ ಸಂವಹನ ನಡೆಸುವ ಅವಕಾಶ ಕಲ್ಪಿಸುತ್ತದೆ.

ನಂ.1 ಯಾರಿ ವಿನೂತನ ಬಗೆಯ ಮನರಂಜನೆಯ ಕಾರ್ಯಕ್ರಮವಾಗಿದ್ದು ಸೋದರತ್ವ ಮತ್ತು ಮಿತ್ರತ್ವದ ಸ್ಫೂರ್ತಿಯನ್ನು ಸಂಭ್ರಮಿಸುವ ವೀಕ್ಷಕರಿಗೆಂದೇ ರೂಪಿಸಲಾಗಿದೆ. ನಾನು ಮಿತ್ರತ್ವಕ್ಕೆ ಮೌಲ್ಯ ನೀಡುತ್ತೇನೆ. ಏಕೆಂದರೆ ಅದು ನನ್ನ ವೈಯಕ್ತಿಕ ಯಾನದಲ್ಲಿ ಬಲವಾದ ಆಧಾರಸ್ತಂಭವಾಗಿದೆ. ತಾರೆಯರು ಸಾರ್ವಜನಿಕ ವ್ಯಕ್ತಿಗಳಾಗಿರುವಂತೆ ಅವರ ಖಾಸಗಿ ವಿಷಯಗಳೂ ಇರುತ್ತವೆ ಮತ್ತು ನನ್ನ ಕೆಲಸ ಅವರ ಅತ್ಯಂತ ಖಾಸಗಿ ಸಂಗತಿಗಳನ್ನು ಹಂಚಿಕೊಳ್ಳುವಂತೆ ಮಾಡುವುದು. ಅವರ ಮಿತ್ರತ್ವ ಅವರನ್ನು ವ್ಯಕ್ತಿಯಾಗಿ ಹೇಗೆ ರೂಪಿಸಿದೆ ಎಂದು ಅಲ್ಲದೆ ಅವರ ಜೀವನದಲ್ಲಿನ ವಿನೋದಮಯ ಕ್ಷಣಗಳನ್ನು ಅಭಿಮಾನಿಗಳಿಗೆ ತಿಳಿಯುವಂತೆ ಮಾಡುವುದು ಎಂದು ಹಂಚಿಕೊಳ್ಳಲಿದ್ದಾರೆ’ ಎಂದು ಖ್ಯಾತ ನಟ ಮತ್ತು ನಂ.1 ಯಾರಿ ಕಾರ್ಯಕ್ರಮದ ನಿರೂಪಕ ಶಿವರಾಜ್‍ಕುಮಾರ್ ಹೇಳಿದರು.

ಡಿಯಾಜಿಯೊ ಇಂಡಿಯಾದ ಎಕ್ಸಿಕ್ಯೂಟಿವ್ ವೈಸ್ ಪ್ರೆಸಿಡೆಂಟ್ ಮತ್ತು ಪೋರ್ಟ್‍ಫೋಲಿಯೊ ಹೆಡ್ ಅಮರ್‍ಪ್ರೀತ್ ಸಿಂಗ್, `ಸಮಾಜದ ಪ್ರಮುಖರೊಂದಿಗೆ ಕೈ ಜೋಡಿಸುವ ಮೂಲಕ ಕಾರ್ಯಕ್ರಮವೊಂದನ್ನು ರೂಪಿಸುವುದು ಸದಾ ನಮ್ಮ ಪ್ರಯತ್ನವಾಗಿದೆ. ಮೆಕ್‍ಡೊವೆಲ್ಸ್ ನಂ.1 ಸೋಡಾ ನಂ.1 ಯಾರಿ ವಿಥ್ ಶಿವಣ್ಣ ಮೂಲಕ ನಾವು ಈ ಕಾರ್ಯಕ್ರಮದ ಸಹ ನಿರ್ಮಾಣಕ್ಕೆ ಬಹಳ ಉತ್ಸುಕರಾಗಿದ್ದು ಖ್ಯಾತ ಕಲಾವಿದರ ಸೋದರತ್ವದ ಕಥೆಗಳನ್ನು ವೀಕ್ಷಕರೊಂದಿಗೆ ಹಂಚಿಕೊಳ್ಳುವಂತೆ ಮಾಡುವ ಮೂಲಕ ಮತ್ತಷ್ಟು ಹತ್ತಿರಕ್ಕೆ ತರುತ್ತೇವೆ. ಅಲ್ಲದೆ ಇದರೊಂದಿಗೆ ನಾವು ಇಂದಿನ ಮಿಲೆನಿಯಲ್ಸ್‍ಗೆ ಸಂಪರ್ಕಿಸಲು

ಮತ್ತು ಸಕ್ರಿಯವಾಗಿರಲು ಮತ್ತಷ್ಟು ಸಕ್ರಿಯ ಮಾಹಿತಿ ಸೃಷ್ಟಿಸುವಲ್ಲಿ ಮತ್ತೊಂದು ಹೆಜ್ಜೆ ಇರಿಸಲು ಎದುರು ನೋಡುತ್ತಿದ್ದೇವೆ’ ಎಂದರು.

ಈ ಕಾರ್ಯಕ್ರಮ ಕುರಿತು ವಿಯು ಇಂಡಿಯಾದ ಮಾನಿಟೈಸೇಷನ್ ಅಂಡ್ ಡಿಸ್ಟ್ರಿಬ್ಯೂಷನ್ ಮುಖ್ಯಸ್ಥ ಸಮೀರ್ ಗೊಗಟೆ, `ಪ್ರೀಮಿಯಂ ಕಂಟೆಂಟ್ ನೀಡುವ ನಿಟ್ಟಿನಲ್ಲಿ ನಾವು ವಿಯುವಿನಲ್ಲಿ ರಾಷ್ಟ್ರವ್ಯಾಪಿ ಮಿಲೆನಿಯಲ್ಸ್‍ಗೆ ಇಷ್ಟವಾಗುವ ಕಂಟೆಂಟ್ ಫ್ರಾಂಚೈಸಿಗಳನ್ನು ಸೃಷ್ಟಿಸುತ್ತಿದ್ದೇವೆ. `ನಂ.1 ಯಾರಿ’ ಫ್ರಾಂಚೈಸಿ ಅಂತಹ ಒಂದು ಉತ್ಸಾಹಕರ ಸೇರ್ಪಡೆಯಾಗಿದ್ದು ಅಭಿಮಾನಿಗಳನ್ನು ಖ್ಯಾತನಾಮರ ವೈಯಕ್ತಿಕ ಬದುಕಿನ ಸ್ಪರ್ಶ ನೀಡುವ ಮೂಲ ಮಾಹಿತಿಯ ಗ್ರಂಥಾಲಯ ರೂಪಿಸುತ್ತಿದ್ದೇವೆ. ತೆಲುಗು ಭಾಷೆಯಲ್ಲಿ ಈ ಕಾರ್ಯಕ್ರಮ ಯಶಸ್ವಿಯಾದ ನಂತರ ನಾವು ಗ್ರೂಪ್ ಎಂ ನೊಂದಿಗೆ ನಮ್ಮ ಬಾಂಧವ್ಯ ವಿಸ್ತರಿಸಲು ಸಂತೋಷಪಡುತ್ತಿದ್ದು ಕನ್ನಡ ಚಲನಚಿತ್ರೋದ್ಯಮದ ಸೂಪರ್‍ಸ್ಟಾರ್‍ರಿಂದ ಮತ್ತೊಂದು ಎಲ್ಲರನ್ನೂ ಆಕರ್ಷಿಸುವ ಕಾರ್ಯಕ್ರಮ ರೂಪಿಸಿದ್ದೇವೆ’ ಎಂದರು.

`ಶಿವಣ್ಣ ಅತ್ಯಂತ ಭಾವನಾತ್ಮಕ ಮತ್ತು ಫೀಲ್ ಗುಡ್ ಕಾರ್ಯಕ್ರಮದ ನಿರೂಪಕರಾಗಿರುವುದು ನಮಗೆ ಅತ್ಯಂತ ಸಂತೋಷದ ಕ್ಷಣವಾಗಿದೆ. ತಾರೆಯರು ಪರಸ್ಪರ ಸಂಪರ್ಕ ಹೊಂದಿರುವುದು ಮತ್ತು ವೀಕ್ಷಕರಿಗೆ ಭಾನುವಾರ 8 ಗಂಟೆಗೆ ಆನಂದದಾಯಕ ಸಮಯ ನೀಡುವುದು ನಿಜಕ್ಕೂ ಮಹತ್ವಪೂರ್ಣವಾಗಿದೆ’ ಎಂದು ಸ್ಟಾರ್ ಸುವರ್ಣದ ವಕ್ತಾರರು ಹೇಳಿದರು.

ಮೈಂಡ್‍ಶೇರ್ ಏಷ್ಯಾದ ಚೀಫ್ ಇನ್ನೊವೇಷನ್ ಆಫೀಸರ್ ಮ್ಯಾಕ್ ಮಾಚಯ್ಯ, `ಹಿಂದಿನ ಕಾರ್ಯಕ್ರಮಗಳಲ್ಲಿ ಅಪಾರ ಯಶಸ್ಸು ಪಡೆದ ನಂತರ ಈ ಬಾರಿ ನಂ.1 ಯಾರಿ ಕನ್ನಡ ಚಲನಚಿತ್ರ ರಂಗದ ತಾರೆಯರ ನಡುವಿನ ಸಮಯರಹಿತ ಮಿತ್ರತ್ವವನ್ನು ಸಂಭ್ರಮಿಸುತ್ತದೆ. ಮೈಂಡ್‍ಶೇರ್ ಅದರ ಸಹ-ನಿರ್ಮಾಣಕ್ಕೆ ಮತ್ತು ಅಂತಹ ಸಕ್ರಿಯ ಬ್ರಾಂಡೆಡ್ ಕಾರ್ಯಕ್ರಮವನ್ನು ಭಾರತದ ವೀಕ್ಷಕರಿಗೆ ನೀಡಲು ಹೆಮ್ಮೆಪಡುತ್ತದೆ. ಪರದೆಯ ಹಿಂದಿನ ಸಂದರ್ಭಗಳ ಅಗೋಚರ ಬಂಧಗಳ ಕುರಿತು ಬೆಳಕು ಚೆಲ್ಲುವ ಮೂಲಕ ಸೋದರತ್ವ ಮತ್ತು ಮಿತ್ರತ್ವದ ಸ್ಫೂರ್ತಿಯನ್ನು ಸಂಭ್ರಮಿಸುತ್ತದೆ. ದೇಶದಲ್ಲಿ ವಿಶಿಷ್ಟ ಕಾರ್ಯಕ್ರಮಗಳನ್ನು ನಿರ್ಮಿಸುತ್ತಿರುವ ಪ್ರಯಾಣದಲ್ಲಿ ಇದು ಮತ್ತೊಂದು ಹೆಜ್ಜೆಯಾಗಿದ್ದು ಹಲವು ಕ್ಷೇತ್ರಗಳು ಮತ್ತು ವಿಷಯಗಳಿಗೆ ವಿಸ್ತರಿಸಿದ್ದು ಮೆಷಿನ್ ಲರ್ನಿಂಗ್, ಸೃಜನಶೀಲತೆ, ಅಡಾಪ್ಟಿವ್ ಮಾರ್ಕೆಟಿಂಗ್ ಮತ್ತಿತರೆ ಬಳಸಿಕೊಳ್ಳುತ್ತಿದೆ’ ಎಂದರು.

ಕಾರ್ಯಕ್ರಮದ ಎಲ್ಲ ಕಂತುಗಳನ್ನು ವಿಯು ಆಪ್-ಮುಂಚೂಣಿಯ ಮೂಲ ವಿಷಯ ವಸ್ತುವಿನ ಒನ್-ಸ್ಟಾಪ್ ತಾಣದಲ್ಲಿ ವಿಶೇಷವಾಗಿ ವೀಕ್ಷಿಸಬಹುದು.

ಟಾಪ್ ನ್ಯೂಸ್

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ಲವೇ…? ಸಂಸದನ ವಿವಾದಾತ್ಮಕ ಹೇಳಿಕೆ

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್

Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್

BJP-JDS ಒಟ್ಟಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ… : ಬಿಎಸ್ ವೈ

BJP-JDS ಒಟ್ಟಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ… : ಬಿಎಸ್ ವೈ

16

Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್‌ ಮೈಂಡ್; ಗೋಲ್ಡಿ ಬ್ರಾರ್‌ ಶೂಟೌಟ್ – ವರದಿ

ಸತ್ಯ ಆದಷ್ಟು ಬೇಗ ಹೊರಬರಲಿದೆ… ವಿಚಾರಣೆಗೆ ಕಾಲಾವಕಾಶ ಕೋರಿದ ಪ್ರಜ್ವಲ್ ರೇವಣ್ಣ

ಸತ್ಯ ಆದಷ್ಟು ಬೇಗ ಹೊರಬರಲಿದೆ… ವಿಚಾರಣೆಗೆ ಕಾಲಾವಕಾಶ ಕೋರಿದ ಪ್ರಜ್ವಲ್ ರೇವಣ್ಣ

Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್‌ಗೆ ಮತಹಾಕಲಿ: ಯೋಗೇಂದ್ರ ಯಾದವ್

Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್‌ಗೆ ಮತಹಾಕಲಿ: ಯೋಗೇಂದ್ರ ಯಾದವ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ಲವೇ…? ಸಂಸದನ ವಿವಾದಾತ್ಮಕ ಹೇಳಿಕೆ

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ

ಮುಸ್ಲಿಮರು ಮೋದಿ ಬೆಂಬಲಿಸಲಿ: ರಮೇಶ ಜಾರಕಿಹೊಳಿ

ಮುಸ್ಲಿಮರು ಮೋದಿ ಬೆಂಬಲಿಸಲಿ: ರಮೇಶ ಜಾರಕಿಹೊಳಿ

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್

Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್

BJP-JDS ಒಟ್ಟಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ… : ಬಿಎಸ್ ವೈ

BJP-JDS ಒಟ್ಟಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ… : ಬಿಎಸ್ ವೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.