Udayavni Special

ಗುರುದತ್ತನೆಂಬ ದುರಂತ ನಾಯಕ


Team Udayavani, Feb 23, 2020, 4:55 AM IST

ram-9

ಈ ವಾರ ಬೆಂಗಳೂರಿನಲ್ಲಿ ಪ್ರತೀವರ್ಷದಂತೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಆರಂಭವಾಗುತ್ತಿದೆ. ಸುಮಾರು 200ಕ್ಕಿಂತಲೂ ಹೆಚ್ಚಿನ ದೇಶವಿದೇಶಗಳ ಚಿತ್ರಗಳನ್ನೂ ಭಾರತೀಯ ಚಿತ್ರಗಳನ್ನೂ ಸೇರಿಸಿ ಆರೇಳು ಚಿತ್ರಮಂದಿರಗಳಲ್ಲಿ ಪ್ರದರ್ಶನ ಮಾಡಲಾಗುತ್ತಿದ್ದು, ಸಿನೆಮಾ ಆಸಕ್ತರಿಗೆ ಸಂಭ್ರಮದ ಹಬ್ಬವಿದು. ಒಂದು ಕಾಲದಲ್ಲಿ, ಇಂಥ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಬೆಂಗಳೂರಿನಿಂದ ಕೆಲವರು ಜರ್ಮನಿಗೊ ಫ್ರಾನ್ಸ್‌ಗೊ ಹೋಗಿ ಬರುತ್ತಿದ್ದರು. ಈಗ ಇದು ನಮ್ಮ ಮನೆಬಾಗಿಲಿಗೇ ಬಂದಿದೆ. ಆರು ದಿನಗಳ ಕಾಲ ನಡೆಯುವ ಈ ಉತ್ಸವದಲ್ಲಿ (ಫೆ. 26ರಂದು ಸಂಜೆ ಉದ್ಘಾಟನೆ) ಎಲ್ಲ ಚಿತ್ರಗಳನ್ನೂ ನೋಡಲಾಗುವುದಿಲ್ಲ. ದಿನಕ್ಕೆ ಐದು ಚಿತ್ರಗಳನ್ನು ನೋಡಿದರೆ ಮೂವತ್ತು ಚಿತ್ರಗಳಾಗಬಹುದು. ಅದರಲ್ಲಿ ಭಾಗವಹಿಸುವುದೇ ಒಂದು ಸಂಭ್ರಮ. ಅದರಲ್ಲೂ ಸಿನೆಮಾ ಕ್ಷೇತ್ರವು 125 ವರ್ಷ ಕಾಣುತ್ತಿರುವ ಐತಿಹಾಸಿಕ ಸಮಯದಲ್ಲಿ ಈ ಚಿತ್ರೋತ್ಸವ ಅನೇಕ ವಿಶೇಷತೆಗಳಿಂದ ಕೂಡಿದೆ.

ಚಿತ್ರೋತ್ಸವ ಎಂದಾಗ ನನಗೆ ವಸಂತಕುಮಾರ್‌ ಶಿವಶಂಕರ್‌ ಪಡುಕೋಣೆ ಎಂಬವರ ನೆನಪಾಗುತ್ತದೆ. ಹೀಗೆ ಹೇಳಿದರೆ ಯಾರೆಂದು ತಿಳಿಯಲಾರದು. ಗುರುದತ್ತ ಎಂದರೆ ಎಲ್ಲರಿಗೂ ಅರ್ಥವಾಗಬಹುದು. ಕೆಲವು ಹಿರಿಯರು, ಅವರು ನಟಿಸಿದ ಚಿತ್ರಗಳ ಚೌಧವೀ ಕಾ ಚಾಂದ್‌ ಹೋ ಎನ್ನುವುದನ್ನೊ, ನಜಾವೊ ಸೈಯ್ನಾ ಹಾಡನ್ನೊ ಗುಣುಗುಣಿಸಲು ಆರಂಭಿಸಲೂಬಹುದು. ಕಳೆದ ಶತಮಾನದ ಐವತ್ತರ-ಅರವತ್ತರ ದಶಕಗಳ ಹಿಂದೀ ಚಿತ್ರರಂಗದ ಸುಪ್ರಸಿದ್ಧ ನಾಯಕನಟ ಹಾಗೂ ನಿರ್ಮಾಪಕ ನಿರ್ದೇಶಕರೆಂದು ಜನಪ್ರಿಯರಾದವರು. ಹಾಗೆಂದು ಇತ್ತೀಚಿನವರೆಗೂ ಅವರು ನಟಿಸಿದ, ನಿರ್ದೇಶಿಸಿದ, ನಿರ್ಮಿಸಿದ ಚಿತ್ರಗಳನ್ನು ಚಿತ್ರೋತ್ಸವಗಳಲ್ಲಿ ತೋರಿಸದ, ಸಾಯುವ ತನಕ ಒಂದೇ ಒಂದು ಚಿತ್ರೋತ್ಸವದಲ್ಲಿ ಪಾಲುಗೊಳ್ಳದ ದುರ್ದೈವಕ್ಕೆ ಪಕ್ಕಾದವರು ಗುರುದತ್ತರು.

ಗುರುದತ್ತರು ಉಡುಪಿಯ ಸಮೀಪದ ಪಡುಕೋಣೆಯಲ್ಲಿ 9 ಜುಲೈ 1925ರಂದು ಹುಟ್ಟಿ, ಕೊಲ್ಕೊತಾದಲ್ಲಿ ವಿದ್ಯಾಭ್ಯಾಸ ಮಾಡಿದರು. ಕಾಲೇಜು ವಿದ್ಯಾಭ್ಯಾಸವಾದ ಮೇಲೆ 1941ರಿಂದ ಮೂರು ವರ್ಷ ಉದಯಶಂಕರರ ಇಂಡಿಯಾ ಕಲ್ಚರ್‌ ಸೆಂಟರ್‌ನಲ್ಲಿ ನೃತ್ಯ ಕಲಿತರು. ಅಲ್ಲಿಂದ ಪೂನಾಕ್ಕೆ ಬಂದು ಪ್ರಭಾತ್‌ ಫಿಲ್ಮ್ ಕಂಪೆನಿಯಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಮಾಡುತ್ತ, ಸಹಾಯಕ ನಿರ್ದೇಶಕರಾಗಿ, ನೃತ್ಯ ನಿರ್ದೇಶಕರಾಗಿ ಕೆಲಸ ಮಾಡಿದರು. ಅದು ಮುಚ್ಚುವ ಸ್ಥಿತಿಗೆ ಬಂತು. ಆಗ ನಿರುದ್ಯೋಗಿಯಾಗಿದ್ದಾಗ ಇಲ್ಲಸ್ಟ್ರೇಟೆಡ್‌ ವೀಕ್ಲಿಯಲ್ಲಿ ಇಂಗ್ಲಿಷ್‌ನಲ್ಲಿ ಸಣ್ಣಕತೆಗಳನ್ನು ಬರೆಯುತ್ತಿದ್ದರು.

ಪ್ರಭಾತ್‌ ಫಿಲ್ಮ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾಗ ಅವರಿಗೆ ನಟ ದೇವಾನಂದ್‌ ಮತ್ತು ರೆಹಮಾನನ ಗೆಳೆತನ ಸಿಕ್ಕಿದ್ದೇ ಲಾಭ. ದೇವಾನಂದರು ಅವರ ಜೊತೆ ಗುರುದತ್ತರು ನಿರ್ದೇಶಿಸಿದ ಚಿತ್ರಗಳಲ್ಲಿ ತನ್ನನ್ನು ನಾಯಕನಟನಾಗಿ ಮಾಡಬೇಕು ಹಾಗೂ ದೇವಾನಂದ ನಿರ್ಮಿಸುವ ಚಿತ್ರಗಳನ್ನು ಗುರುದತ್ತರು ನಿರ್ದೇಶಿಸಬೇಕು ಎಂದು ಒಂದು ಕರಾರು ಮಾಡಿಕೊಂಡರು. ಅಮಿಯಾ ಚಕ್ರವರ್ತಿ ಮತ್ತು ಗ್ಯಾನ್‌ ಮುಖರ್ಜಿಯವರಂಥ ಪ್ರಸಿದ್ಧ ನಿರ್ದೇಶಕರಿಗೆ ಸಹಾಯಕ ನಿರ್ದೇಶಕರಾಗಿ ದುಡಿದ ನಂತರ ಗುರುದತ್ತರು 1951ರಲ್ಲಿ ದೇವಾನಂದನೊಡನೆ ತನ್ನ ಬಾಜಿ ಎಂಬ ಮೊದಲ ಚಿತ್ರವನ್ನು ಸ್ವತಂತ್ರವಾಗಿ ನಿರ್ದೇಶಿಸಿದರು. ಒಟ್ಟು ಎಂಟು ಚಿತ್ರಗಳನ್ನು ನಿರ್ದೇಶಿಸಿದ ಗುರುದತ್ತರ ಚಿತ್ರಗಳಲ್ಲಿ ಪ್ಯಾಸಾ ಮತ್ತು ಕಾಗಜ್‌ ಕೇ ಫ‌ೂಲ್‌ ಎಲ್ಲ ಕಾಲದ ಶ್ರೇಷ್ಠ ಚಿತ್ರಗಳೆನ್ನುತ್ತಾರೆ. ತನ್ನೆಲ್ಲ ಬಂಡವಾಳ ಹಾಕಿ ತೆಗೆದ ಕಾಗಜ್‌ ಕೆ ಫ‌ೂಲ್‌ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಸೋತಾಗ ಇನ್ನು ಮುಂದೆ ತಾನು ಚಿತ್ರನಿರ್ದೇಶಕನೆಂದು ಹೆಸರು ಹಾಕಿದರೆ ಹಣಗಳಿಕೆಯಲ್ಲಿ ಸೋಲುತ್ತೇನೆಂಬ ನಂಬಿಕೆಯಿಂದ ಸಾಹಿಬ್‌ ಬೀಬಿ ಔರ್‌ ಗುಲಾಮ್‌ ಚಿತ್ರಕ್ಕೆ ನಿರ್ದೇಶಕನಾಗಿ ತನ್ನ ಸಹಾಯಕ ಅಬ್ರಾರ್‌ ಆಲ್ವಿಯ ಹೆಸರನ್ನು ಗುರುದತ್ತರು ಹಾಕಿಸಿದ್ದಾರೆ. ಒಟ್ಟು ಎಂಟು ಚಿತ್ರಗಳನ್ನು ನಿರ್ಮಿಸಿದ ಗುರುದತ್ತರು ತಾವು ನಿರ್ದೇಶಿಸಿ ನಿರ್ಮಿಸಿದ ಚಿತ್ರಗಳಲ್ಲದೇ ಬೇರೆಯವರು ನಿರ್ದೇಶಿಸಿದ ಚಿತ್ರಗಳನ್ನೂ ಸೇರಿಸಿ ಹದಿನಾರು ಚಿತ್ರಗಳಲ್ಲಿ ನಾಯಕನಟರಾಗಿ ನಟಿಸಿದ್ದಾರೆ. ತಮ್ಮ ಕೊನೆಯ ಚಿತ್ರ ಬಹಾರೇಂ ಫಿರ್‌ ಭಿ ಆಯೆಂಗೆ ನಿರ್ಮಾಣದ ಹಂತದಲ್ಲಿದ್ದಾಗ 1964 ಅಕ್ಟೋಬರ್‌ 10ರಂದು 39ನೆಯ ವಯಸ್ಸಿನಲ್ಲಿ ಅವರು ನಿಗೂಢವಾಗಿ ಸತ್ತರು.

ಬದುಕಿನಲ್ಲಿ ದುರಂತ ನಾಯಕ
ಗುರುದತ್ತ ಚಿತ್ರಗಳನ್ನು ಮಾಡುವಾಗ ಚಿತ್ರರಂಗ, ಅದರಲ್ಲೂ ವಿಶೇಷವಾಗಿ ಹಿಂದೀ ಚಿತ್ರರಂಗ, ಮೆಲೊಡ್ರಾಮಾವನ್ನು ಮುಖ್ಯ ಸಂವೇದನೆಯಾಗಿ ರೂಪಿಸುತ್ತಿತ್ತು. ಆದರೆ, ಮೆಲೊಡ್ರಾಮಾವನ್ನು ಬಳಸಿಯೂ ತನ್ನ ಕೃತಿಗಳನ್ನು ಮಹಾಕಾವ್ಯದ ಎತ್ತರಕ್ಕೆ ಕೊಂಡೊಯ್ದ ಪ್ರತಿಭೆ ಗುರುದತ್ತರದ್ದು. ಗುರುದತ್ತರು ಈ ಯುಗದ ಕರುಣೆಯ ಶ್ರೇಷ್ಠ ಪ್ರತೀಕ ಯೇಸುಕ್ರಿಸ್ತನ ರೂಪಕವನ್ನು ಹೇಗೆ ಬಳಸಿಕೊಂಡರು, ತಮ್ಮ ಚಿತ್ರಗಳಲ್ಲಿ ಬರುವ ಗೀತಚಿತ್ರಣಗಳ ದೃಶ್ಯ ವ್ಯಾಖ್ಯೆ ಎಂಥದ್ದು, ಅವರ ಕಾಲದಲ್ಲಿ ಪ್ರೇಕ್ಷಕರನ್ನು ಟಿ.ವಿ.ಯಿಂದ ಬೇರ್ಪಡಿಸಲು 1:1.6 ಚೌಕಟ್ಟಿನಿಂದ ಸಿನೆಮಾಸ್ಕೋಪ್‌ಗೆ ಅನಿವಾರ್ಯ ಬದಲಾವಣೆ ತಂದಾಗ ಹೇಗೆ ಅದನ್ನು ಅರ್ಥವತ್ತಾಗಿ ಬಳಸಿಕೊಂಡರು, ವಿ. ಕೆ. ಮೂರ್ತಿಯವರ ಜೊತೆಗೂಡಿ ಹೇಗೆ ನೆರಳುಬೆಳಕುಗಳ ಲಯವನ್ನು ಸಾಧಿಸಿದರು, ಸೃಜನಶೀಲ ಕಲಾವಿದನೊಬ್ಬ ಯಾಕೆ ಆಂತರ್ಯದಲ್ಲಿ ಆತ್ಮನಾಶದತ್ತ ಒಲವು ತೋರಿಸುತ್ತಾನೆ ಎಂಬುದು ಅಭ್ಯಾಸಯೋಗ್ಯ ವಿಚಾರಗಳಾಗಿವೆ. ಅಲ್ಲದೆ, ಸಿನೆಮಾದ ಪರಿಭಾಷೆಗಳಲ್ಲಿ ಸಾಮಾನ್ಯವಾಗಿ ಬಳಸುವ ಮೆಲೊಡ್ರಾಮಾ, ಮಿಸ್‌-ಎನ್‌-ಶಾಂ, ಲೈಟ್‌ ಮೋಟಿಫ್, ದೃಷ್ಟಿಕ್ಷೇತ್ರ, ಪರಿವೇಷ ಈ ಪರಿಭಾಷೆಗಳನ್ನು ದೃಶ್ಯಕಲೆಯಲ್ಲಿ ಸ್ಥಾಯಿ ಪರಿಕರಗಳಾಗಿ ಗುರುದತ್ತರು ಚಿತ್ರಿಸಿದ ರೀತಿ ಅನನ್ಯವಾದದ್ದು.

ಈಗ ಜನಪ್ರಿಯವಾಗಿರುವ ಅವರ ಹಾಡುಗಳನ್ನೇ ತೆಗೆದುಕೊಳ್ಳಿ. ಚೌಧವೀಂ ಕಾ ಚಾಂದ್‌ ಹೊ ಚಿತ್ರದ ಅದೇ ಹಾಡು, ಪ್ಯಾಸಾದ ಯೆ ಮಹಲೋಂ ಯೆ ತಖೊ¤àಂ, ಹಂ ಆಪ್‌ ಕಿ ಆಂಖೋ ಮೆ, ಅಥವಾ ಸರ್‌ ಜೊ ತೆರಾ ಚಕರಾಯೆ, ಕಾಗಜ‚… ಕೆ ಫ‌ೂಲ್‌ ಚಿತ್ರದ ವಖ್‌¤ ನೇ ಕಿಯಾ, ಸಾಹಿಬ್‌ ಬೀಬಿ ಔರ್‌ ಗುಲಾಮ್‌ ಚಿತ್ರದ ಪಿಯಾ ಐಸೊ ಜಿಯಾ ಮೈಂ, ನ್‌ ಜಾವೊ ಸೈಯಾ, ಬಂವರಾ ಬಡಾ ನಾದಾನ್‌ ಹೈ ಮುಂತಾದ ಗೀತೆಗಳು ಬರೇ ಅವುಗಳ ಸಂಗೀತಕ್ಕಾಗಿ ಅಲ್ಲ, ಚಿತ್ರೀಕರಿಸಿದ ರೀತಿ ಅದ್ಭುತವಾದದ್ದು. ಗುರುದತ್ತರು ಅವುಗಳಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ.

ಅಲ್ಲದೇ ಗುರುದತ್ತರು ಕಮೆಡಿಯನ್‌ ಜಾನಿ ವಾಕರ್‌ರನ್ನು, ಛಾಯಾಗ್ರಾಹಕ ವಿ. ಕೆ. ಮೂರ್ತಿಯವರನ್ನು, ಲೇಖಕ ಅಬ್ರಾರ್‌ ಆಲ್ವಿಯವರನ್ನು, ತಾರೆ ವಹೀದಾ ರೆಹಮಾನ್‌ರನ್ನು ಹಿಂದೀ ಚಿತ್ರರಂಗಕ್ಕೆ ಪರಿಚಯಿಸಿದವರು. ಆದರೆ, (ಚಿಕ್ಕವನಿರುವಾಗ ಅಪಘಾತವೊಂದರಲ್ಲಿ ಬದುಕುಳಿದ ಕಾರಣ ಅವರ ಹೆತ್ತವರು ಗುರುದತ್ತ ಎಂದು ಹೆಸರು ಬದಲಾಯಿಸಿದರಂತೆ) ಗುರುದತ್ತರು ಬದುಕಿನುದ್ದಕ್ಕೂ ದುರಂತವನ್ನೇ ಅನುಭವಿಸಿದವರು. ಗೀತಾರಾಯ್‌ ಚೌಧುರಿ ಎಂಬ ಗಾಯಕಿಯನ್ನು ಮದುವೆಯಾದ ಅವರ ದಾಂಪತ್ಯ ಜೀವನ ಅಷ್ಟು ಸುಖದಾಯಕವಾಗಿರಲಿಲ್ಲ. ತಾರೆ ವಹೀದಾ ರೆಹಮಾನರನ್ನು ಅತಿಯಾಗಿ ಪ್ರೀತಿಸುತ್ತಿದ್ದ ಅವರು ಆಕೆಯನ್ನು ಮದುವೆಯಾಗುವುದು ಸಾಧ್ಯವಾಗಲಿಲ್ಲ. ನಿದ್ರೆಯಿಲ್ಲದೆ ಬಳಲುತ್ತಿದ್ದ ಗುರುದತ್ತರು ಸಾಯುವ ದಿನ ತುಂಬ ನಿದ್ರೆಮಾತ್ರೆಗಳನ್ನು ಮದ್ಯದ ಜೊತೆ ತೆಗೆದುಕೊಂಡದ್ದರಿಂದ ಅವರ ಅಂತ್ಯವಾಯಿತು.

ಒಬ್ಬ ಸಿನೆ ಸಾಧಕನ ಶೈಲಿ, ಅವನು ಬಳಸಿದ ಪರಿಕರಗಳು, ಶಿಕ್ಷಣ ಅವನ ಮೇಲೆ ಬೀರಿದ ಪ್ರಭಾವ, ಆ ಪ್ರಭಾವವನ್ನು ತನ್ನ ಸೃಜನಶೀಲತೆಯಲ್ಲಿ ಬಳಸಿಕೊಂಡ ರೀತಿ, ತನ್ನ ಕಲಾಕೌಶಲವನ್ನು ಅತ್ಯುತ್ಛ ಮಟ್ಟಕ್ಕೆ ಏರಿಸಿದ ಪ್ರತಿಭೆ, ಹಾಗೆ ಮಾಡುತ್ತ ತನ್ನ ಆಂತರ್ಯದಲ್ಲಿ ಹೇಗೆ ಬೆಳೆಯುತ್ತ ಹೋದ ಎನ್ನುವುದು ಮುಖ್ಯ. ಕಲಾತ್ಮಕ ಚಿತ್ರಗಳನ್ನು ಕಮರ್ಶಿಯಲ್‌ ಚಿತ್ರಗಳ ರೀತಿಯಲ್ಲಿಯೂ ಜನಪ್ರಿಯ ಮಾಡಬಹುದೆಂದು ತೋರಿಸಿಕೊಟ್ಟವರು ಗುರುದತ್ತರು. ಕಲಾತ್ಮಕ ಚಿತ್ರ ನಿರ್ದೇಶಕರಲ್ಲಿ, ನಿರ್ಮಾತೃಗಳಲ್ಲಿ ಸತ್ಯಜಿತ್‌ ರಾಯ್‌, ಮೃಣಾಲ್‌ ಸೇನ್‌, ಮಣಿ ಕೌಲ್‌, ಕುಮಾರ ಶಹಾನಿ ಅಥವಾ ಋತ್ವಿಕ್‌ ಘಟಕ್‌ ಇವರಿಗಿದ್ದಂತೆ ಗುರುದತ್ತರಿಗೆ ಅವರು ಸಾಯುವ ತನಕ ಸ್ಥಾನವಿರಲಿಲ್ಲ. ಆದರೆ, ಅವರು ತೀರಿಕೊಂಡ ಮೇಲೆ ಟೈಮ್‌ ಮ್ಯಾಗಜೀನ್‌ನವರು ಅವರ ಚಿತ್ರಗಳನ್ನು ನೂರು ಸಾರ್ವಕಾಲಿಕ ಶ್ರೇಷ್ಠ ಚಿತ್ರಗಳಲ್ಲಿ ಒಂದೆಂದು ಸೇರಿಸಿದ್ದಾರೆ. 2002ರಲ್ಲಿ ಸೈಟ್‌ ಅಂಡ್‌ ಸೌಂಡ್‌ ಪತ್ರಿಕೆಯು ವಿಮರ್ಶಕರು ಮತ್ತು ನಿರ್ದೇಶಕರುಗಳ ಅಭಿಪ್ರಾಯದಂತೆ ಅವರು ಅತ್ಯಂತ ಶ್ರೇಷ್ಠ ನಿರ್ದೇಶಕರಲ್ಲಿ ಒಬ್ಬರೆಂದು ಆರಿಸಿದೆ. 2010ರಲ್ಲಿ ಸಿಎನ್‌ಎನ್‌ ಸುದ್ದಿವಾಹಿನಿಯು ಏಶಿಯಾದ 25 ಸಾರ್ವಕಾಲಿಕ ಶ್ರೇಷ್ಠ ನಟರಲ್ಲಿ ಗುರುದತ್ತರೂ ಒಬ್ಬರು ಎಂಬ ಮನ್ನಣೆಯನ್ನು ನೀಡಿದೆ. ಯಶ್‌ ಚೋಪ್ರಾ ಅವರು ಚಾನೆಲ್‌-4ಕ್ಕಾಗಿ ನಾಲ್ಕು ಭಾಗಗಳ ಇನ್‌ ಸರ್ಚ್‌ ಆಫ್ ಗುರುದತ್‌ ಎಂಬ ಸಾಕ್ಷ್ಯಚಿತ್ರ ಮಾಡಿದ್ದಾರೆ. 2004ರಲ್ಲಿ ಭಾರತೀಯ ಅಂಚೆಇಲಾಖೆ ಅವರ ನೆನಪಿಗೆ ಅಂಚೆಚೀಟಿಯನ್ನು ಹೊರತಂದಿದೆ. ದೂರದರ್ಶನ 2011ರಲ್ಲಿ ಗುರುದತ್ತರ ನೆನಪಿಗೆ ಒಂದು ಗಂಟೆಯ ಸಾಕ್ಷ್ಯಚಿತ್ರವನ್ನೂ ಪ್ರಸಾರಮಾಡಿದೆ. ಗುರುದತ್ತರ ಚಿತ್ರಗಳನ್ನು ಫ್ರಾನ್ಸ್‌, ಜರ್ಮನಿ ಮುಂತಾದ ಕಡೆ ಮತ್ತೆ ರಿಲೀಸ್‌ ಮಾಡಿದಾಗ ಅಭೂತಪೂರ್ವ ಸಂಖ್ಯಾ ದಾಖಲೆಯಲ್ಲಿ ಜನರು ವೀಕ್ಷಿಸಿದರು.

ಕನ್ನಡದಲ್ಲಿ ಗುರುದತ್ತರ ಬಗ್ಗೆ ಎರಡು ಕೃತಿಗಳಿವೆ. ಒಂದು, ಅವರ ತಾಯಿ ವಾಸಂತಿ ಪಡುಕೋಣೆಯವರು ಬರೆದ ನನ್ನ ಮಗ ಗುರುದತ್ತ ಎಂಬ ಬಯಾಗ್ರಫಿ. ಧಾರವಾಡದ ಮನೋಹರ ಗ್ರಂಥಮಾಲಾದವರು ಪ್ರಕಟಿಸಿದ್ದು. ಇನ್ನೊಂದು, ಬೆಂಗಳೂರು ಚಿತ್ರೋತ್ಸವವನ್ನು ಆಯೋಜಿಸುತ್ತಿರುವ ಕರ್ನಾಟಕ ಚಲನಚಿತ್ರ ಮಂಡಳಿಯವರು 2016ರಲ್ಲಿ ಪ್ರಕಟಿಸಿದ ಗುರುದತ್ತ: ಮೂರು ಅಂಕಗಳ ದುರಂತ ನಾಟಕ. ಇದನ್ನು ಅರುಣ ಖೋಪ್‌ಕರ್‌ ಮೂಲ ಮರಾಠಿಯಲ್ಲಿ ಬರೆದು 1983ರಲ್ಲಿ ಪ್ರಕಟಿಸಿದರು. ಅದಕ್ಕಾಗಿ ಖೋಪ್‌ಕರ್‌ ಅವರಿಗೆ ರಾಷ್ಟ್ರೀಯ ಪ್ರಶಸ್ತಿ ದೊರಕಿತ್ತು. ಆಮೇಲೆ ಅವರು ಅದನ್ನು ಪರಿಷ್ಕರಿಸಿ, ಕೆಲವು ಹೊಸ ಅಧ್ಯಾಯಗಳನ್ನು ಸೇರಿಸಿ 2015ರಲ್ಲಿ ಪ್ರಕಟಿಸಿದರು. ಮರಾಠಿಯಲ್ಲಿ ಪ್ರಕಟವಾಗುವ ಮೊದಲೇ ಆ ಕೃತಿ ಇಟಾಲಿಯನ್‌, ರಶಿಯನ್‌, ಫ್ರೆಂಚ್‌, ಜಪಾನೀಸ್‌ ಮತ್ತು ಇಂಗ್ಲೀಷ್‌ ಭಾಷೆಗಳಿಗೆ ಅನುವಾದಗೊಂಡಿತ್ತು. ಮೂಲ ಮರಾಠಿಯಿಂದ ಉಮಾಕುಲಕರ್ಣಿ ಮತ್ತು ವಿರೂಪಾಕ್ಷ ಕುಲಕರ್ಣಿಯವರು ಕನ್ನಡಕ್ಕೆ ಅನುವಾದಿಸಿದ ಈ 334 ಪುಟಗಳ ಕೃತಿ ಗುರುದತ್ತರ ಪ್ಯಾಸಾ, ಕಾಗಜ್‌ ಕೆ ಫ‌ೂಲ್‌ ಮತ್ತು ಸಾಹಿಬ್‌ ಬೀಬಿ ಔರ್‌ ಗುಲಾಮ್‌ ಚಿತ್ರಗಳ ಆಳವಾದ ವಿಶ್ಲೇಷಣೆಯನ್ನು ಮಾಡುತ್ತದೆ. ನೂರಕ್ಕಿಂತ ಹೆಚ್ಚು ಸ್ಟಿಲ್‌ ಫೋಟೋಗ್ರಾಫ್ಗಳಿರುವ ಈ ಪುಸ್ತಕದ ಬೆಲೆ ಕೇವಲ ರೂ. 200. ಸಾಧ್ಯವಾದರೆ ಒಂದು ಪ್ರತಿ ಖರೀದಿಸಿ ಓದಿ.

ಗೋಪಾಲಕೃಷ್ಣ ಪೈ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

tdy-2

ಮುಂಬೈ : ಬಾಯ್‌ಫ್ರೆಂಡ್‌ ಜತೆ ಪತ್ನಿ ಪರಾರಿ: ಪತಿ ದೂರು

ಚಿಕ್ಕಬಳ್ಳಾಪುರ : ದ್ವಿತೀಯ ಹಂತದ ಕೋವಿಡ್ ಲಸಿಕೆ ಅಭಿಯಾನ ಆರಂಭ- 2358 ಫಲಾನುಭವಿಗಳಿಗೆ

ಚಿಕ್ಕಬಳ್ಳಾಪುರ : ದ್ವಿತೀಯ ಹಂತದ ಕೋವಿಡ್ ಲಸಿಕೆ ಅಭಿಯಾನ ಆರಂಭ- 2358 ಫಲಾನುಭವಿಗಳಿಗೆ

ರಸ್ತೆ ನಿರ್ಮಾಣ ವಿಚಾರ : ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರ ಮಧ್ಯೆ ಘರ್ಷಣೆ : ಹಲವರಿಗೆ ಗಾಯ

ರಸ್ತೆ ನಿರ್ಮಾಣ ವಿಚಾರ : ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರ ಮಧ್ಯೆ ಘರ್ಷಣೆ : ಹಲವರಿಗೆ ಗಾಯ

tdy-1

ರಕ್ಷಣಾ ‌ಇಲಾಖೆಯ ಸಂಸದೀಯ ಸ್ಥಾಯಿ ಸಮಿತಿ .ಜ.20 ರಂದು ಕಾರವಾರ ನೌಕಾನೆಲೆಗೆ ಭೇಟಿ

ಹುದ್ದೆ ನೇಮಕಾತಿಗೆ ವ್ಯಕ್ತಿಯಿಂದ ಹಣ ಸ್ವೀಕರಿಸುತ್ತಿದ್ದ ಮಹಿಳಾ ಅಧಿಕಾರಿ ಎಸಿಬಿ ಬಲೆಗೆ

ಹುದ್ದೆ ನೇಮಕಾತಿಗೆ ವ್ಯಕ್ತಿಯಿಂದ ಹಣ ಸ್ವೀಕರಿಸುತ್ತಿದ್ದ ಮಹಿಳಾ ಅಧಿಕಾರಿ ಎಸಿಬಿ ಬಲೆಗೆ

ಭೀಕರ ರಸ್ತೆ ಅಪಘಾತ ; ಕಂಬಕ್ಕೆ ಬೈಕ್ ಡಿಕ್ಕಿ ಹೊಡೆದು ಮೂವರು ಸ್ಥಳದಲ್ಲೇ ಸಾವು

ಕಂಬಕ್ಕೆ ಬೈಕ್ ಡಿಕ್ಕಿ ಹೊಡೆದು ಭೀಕರ ಅಪಘಾತ : ಮೂವರು ಸ್ಥಳದಲ್ಲೇ ಸಾವು

ಮುಂದಿನ ಐಪಿಎಲ್‌ನಲ್ಲಿ ಒಂದು ತಂಡ ಮಾತ್ರ ಹೆಚ್ಚಳ?

ಮುಂದಿನ ಐಪಿಎಲ್‌ನಲ್ಲಿ ಒಂದು ತಂಡ ಮಾತ್ರ ಹೆಚ್ಚಳ?ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

jagada-swasthya

ಮತ್ತೆ ಮರಳಲಿ ಜಗದ ಸ್ವಾಸ್ಥ್ಯ

ಹಾವೇರಿಯ ಹೊಕ್ಕುಳ ಬಳ್ಳಿ ಪಾಟೀಲ ಪುಟ್ಟಪ್ಪ  ಸ್ಮತಿ

ಹಾವೇರಿಯ ಹೊಕ್ಕುಳ ಬಳ್ಳಿ ಪಾಟೀಲ ಪುಟ್ಟಪ್ಪ ಸ್ಮತಿ

Suryana-neralu

ಸೂರ್ಯನ ನೆರಳು

ಚಿತ್ರೋತ್ಸವದಲ್ಲಿ ಮೌನದ ಮಾತು

ಚಿತ್ರೋತ್ಸವದಲ್ಲಿ ಮೌನದ ಮಾತು

ಕತೆ: ಸಹಯಾತ್ರಿ

ಕತೆ: ಸಹಯಾತ್ರಿ

MUST WATCH

udayavani youtube

KBCಯಲ್ಲಿ 12.5 ಲಕ್ಷ ಗೆದ್ದು ಬಡ ಮಕ್ಕಳ ಆಶಾಕಿರಣವಾದ ರವಿ ಕಟಪಾಡಿ | Udayavani

udayavani youtube

Whatsapp ಅನ್ನು ಓವರ್ ಟೇಕ್ ಮಾಡಿದ ಸಿಗ್ನಲ್!!??

udayavani youtube

ದ.ಕ ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ವಿತರಣೆ ಅಭಿಯಾನಕ್ಕೆ ಕೋಟ ಶ್ರೀನಿವಾಸ ಪೂಜಾರಿ ಚಾಲನೆ

udayavani youtube

ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ 19 ಲಸಿಕೆ ಅಭಿಯಾನ; ಪ್ರಥಮ ಡೋಸ್ ನೀಡಿ ಚಾಲನೆ

udayavani youtube

ಉಡುಪಿಯಲ್ಲಿ ಕೋರೋನಾ ಲಸಿಕೆ ಪಡೆದ ಮೊದಲ ವ್ಯಕ್ತಿಯ ಮಾತು

ಹೊಸ ಸೇರ್ಪಡೆ

ಡ್ರಾ ಆದರೂ ಟ್ರೋಫಿ ನಮ್ದೇ

ಡ್ರಾ ಆದರೂ ಟ್ರೋಫಿ ನಮ್ದೇ

ಖಾಲಿ ಜಾಗ ಗುರುತಿಸಿ ಶೀಘ್ರ ಪಾರ್ಕಿಂಗ್‌ಗೆ ವ್ಯವಸ್ಥೆ: ವೇದವ್ಯಾಸ ಕಾಮತ್‌

ಖಾಲಿ ಜಾಗ ಗುರುತಿಸಿ ಶೀಘ್ರ ಪಾರ್ಕಿಂಗ್‌ಗೆ ವ್ಯವಸ್ಥೆ: ವೇದವ್ಯಾಸ ಕಾಮತ್‌

ಸುಳ್ಯ: ನಗರದಲ್ಲಿ ಅಲೆಮಾರಿಗಳ ಕಾಟ

ಸುಳ್ಯ: ನಗರದಲ್ಲಿ ಅಲೆಮಾರಿಗಳ ಕಾಟ

ಕಡಬ: ಆರಂಭವಾಗಬೇಕಿದೆ ಸ.ಪ. ಕಾಲೇಜು

ಕಡಬ: ಆರಂಭವಾಗಬೇಕಿದೆ ಸ.ಪ. ಕಾಲೇಜು

ಕಾರ್ಕಳ ಕಜೆ ಅಕ್ಕಿ, ಬಿಳಿ ಬೆಂಡೆ ಬ್ರ್ಯಾಂಡಿಂಗ್‌ ಬಿಡುಗಡೆ

ಕಾರ್ಕಳ ಕಜೆ ಅಕ್ಕಿ, ಬಿಳಿ ಬೆಂಡೆ ಬ್ರ್ಯಾಂಡಿಂಗ್‌ ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.