ಆಧುನಿಕ ಪ್ರಾಚೀನ


Team Udayavani, Dec 2, 2018, 6:00 AM IST

s-3.jpg

ಚೀನಾಕ್ಕೆ ಹೊರಟು ನಿಂತಾಗ ಬಹುತೇಕ ಮಂದಿ, “ಯಾಕೆ ಅಲ್ಲಿಗೆ ಹೋಗುತ್ತಿದ್ದೀರಿ?’ ಎಂದು ಕೇಳುವವರೇ. ಯಾಕೆ ಹಾಗೆ ಕೇಳುತ್ತಾರೆಂದು ನನಗಿನ್ನೂ ಅರ್ಥವಾಗಿಲ್ಲ. ಬಹುಶಃ “ಮೇಡ್‌ ಇನ್‌ ಚೈನಾ’ ಎಂದಾಗಲೆಲ್ಲ ನಮ್ಮ ಮನಸ್ಸಿಗೆ ಬರುವುದು ಅದೊಂದು ಅಗ್ಗದ ವಸ್ತು. ಆದರೆ, ಪ್ರವಾಸದ ಉದ್ದೇಶದಿಂದ ನಾನು, ಪತ್ನಿ , ಮಗಳು, ಅಳಿಯನೊಂದಿಗೆ ಈ ದೇಶಕ್ಕೆ ಬಂದಿಳಿದಾಗ ಈ ದೇಶ ಅಗ್ಗದ ಮಾಲನ್ನು ತಯಾರಿಸುವುದೆ ಎಂಬ ಪ್ರಶ್ನೆ ನನ್ನ ಮನಸ್ಸಿನಲ್ಲಿ ಮೂಡಿ ಮರೆಯಾಯಿತು. ಇವರು ಗಟ್ಟಿಮುಟ್ಟಾದ ವಸ್ತುವನ್ನೇ ಬಳಸಿ ಅಗ್ಗದ ಮಾಲುಗಳನ್ನು ನಮ್ಮ ದೇಶದ ಕಡೆಗೆ ದಾಟಿಸುತ್ತಾರೊ ಎಂಬ ಲಘು ಸಂದೇಹವನ್ನೂ ಒಮ್ಮೆ ತಳೆದದ್ದು ನಿಜವೇ. ಯಾಕೆಂ ದರೆ, ಕಣ್ಣು ಹರಿಸಿದಲ್ಲೆಲ್ಲ ಆ ದೇಶ ಸ್ವತ್ಛ , ಸುಂದರ, ಶಿಸ್ತುಬದ್ಧ !

ಬೆಂಗಳೂರಿನಿಂದ ಮಧ್ಯರಾತ್ರಿ ಹಾಂಕಾಂಗ್‌ ಮೂಲಕ ಚೀನಾದ ಬೀಜಿಂಗ್‌ ವಿಮಾನ ನಿಲ್ದಾಣದಲ್ಲಿ ಇಳಿದಾಗ ಅಪರಾಹ್ನ 3.30 ಗಂಟೆ. ಕಾರು ಚಾಲಕ ನಮ್ಮ ಹೆಸರು ಹಿಡಿದ  ಬೋರ್ಡು ಹಿಡಿದು ಕಾದು ನಿಂತಿದ್ದ. ಅದಲ್ಲದೆ ಹೋದರೆ ಅವನನ್ನು ಹುಡುಕುವುದು ಸರ್ವಥಾ ಸಾಧ್ಯವಿರಲಿಲ್ಲ. ಎಲ್ಲೆಡೆ ಚೀನೀ ಭಾಷೆಯೇ. ಇಂಗ್ಲಿಶ್‌ ಇಲ್ಲವೇ ಇಲ್ಲ. ಅವನ ಜೊತೆ ಕಾರಿನಲ್ಲಿ ಬರುವಾಗಲೂ ಸನ್ನೆಯ ಭಾಷೆಯೇ. ಬೀಜಿಂಗ್‌ ಪಟ್ಟಣದ ಮಧ್ಯೆ ಇರುವ ಹೋವಾರ್ಡ್‌ ಜಾನ್ಸನ್‌ ಪ್ಯಾರಗಾನ್‌ ಹೊಟೇಲು ತಲುಪುವಾಗ ರಾತ್ರಿ ಎಂಟು ಗಂಟೆ. ಅಲ್ಲಿನ ಕಾಲ ನಮಗಿಂತ 2.30 ತಾಸು ಮುಂದೆ- ಅಭಿವೃದ್ಧಿಯಲ್ಲಿಯೂ ಹಾಗೆಯೇ ಅಲ್ಲವೆ! ಮರುದಿನ ಗೈಡ್‌ನ‌ ನಿರ್ದೇಶನದಂತೆ ನಮ್ಮ ಚೀನಾ ಪ್ರವಾಸದ ಮೊದಲ ಹಂತ ಆರಂಭವಾಯಿತು. ಗೈಡ್‌ನ‌ದ್ದು ಕೂಡ ಚೀನೀ ಇಂಗ್ಲಿಶ್‌! ಅವನು ಮಾತನಾಡಿದ್ದನ್ನು ಅರ್ಥಮಾಡಿಕೊಳ್ಳಲು ಸ್ವಲ್ಪ ಸಮಯ ಬೇಕಾಗುತ್ತಿತ್ತು.

ಮಿಂಗ್‌ ಟೋಂಬ್‌
ನಾವು ಮೊದಲ ಬಾರಿಗೆ ಭೇಟಿಕೊಟ್ಟದ್ದು ಮಿಂಗ್‌ ಟೋಂಬ್‌ಗ. 1368ರಿಂದ 1644ರ ವರೆಗಿನ ಮಿಂಗ್‌ ಸಾಮ್ರಾಜ್ಯದ 13 ಮಂದಿ ರಾಜರ ಸಮಾಧಿ ಸ್ಥಳವೇ ಮಿಂಗ್‌ ಟೋಂಬ್‌. ಬೀಜಿಂಗ್‌ ಪಟ್ಟಣದಿಂದ ಸುಮಾರು ನೈರುತ್ಯ ದಿಕ್ಕಿಗೆ 50 ಕಿ. ಮೀ.ನಷ್ಟು ದೂರದಲ್ಲಿ ತಿಯಾನ್‌ ಸೌ ಪರ್ವತ ಸಾಲಿನ ಬುಡದಲ್ಲಿ ಇದು ನಿರ್ಮಾಣಗೊಂಡಿದೆ. ಇದರ ವಿಸ್ತೀರ್ಣ 120 ಚ. ಕಿ.ಮೀ.ಗಳಷ್ಟು. ಹದಿಮೂರು ಸಮಾಧಿ ಸ್ಥಳಗಳೂ ಒಂದಕ್ಕಿಂತ ಒಂದು ಭಿನ್ನ. ಸಮಾಧಿಗಳ ಅಂತರ ಅರ್ಧ ಕಿ.ಮೀ.ನಿಂದ ಎಂಟು ಕಿ.ಮೀ. ಪ್ರಥಮ ಪ್ರವೇಶದ್ವಾರವನ್ನು ಪ್ರವೇಶಿಸುವಾಗ ಪುರುಷರು ಎಡಕಾಲನ್ನೂ , ಮಹಿಳೆಯರೂ ಬಲಗಾಲನ್ನೂ ಮುಂದಿಡುವುದು ಕಡ್ಡಾಯ ಸಂಪ್ರದಾಯ. ಈ ಸಮಾಧಿ ಸ್ಥಳದಿಂದ ಹಿಂತಿರುಗುವಾಗ “ವಾ ವೇ ಲೇ ಲಾ’ ಎಂದು ಜೋರಾಗಿ ಹೇಳಲೇಬೇಕು. “ನಾನು ಹಿಂತಿರುಗಿ ಹೋಗುತ್ತಿದ್ದೇನೆ’ ಎಂದು ಇದರ ಅರ್ಥ. ಅದು ಸಮಾಧಿಯಲ್ಲವೆ?

ಮಹಾಸೇತುವೆಯಾದ ಮಹಾಗೋಡೆ

ಹೇಳಿದಷ್ಟೂ ಮುಗಿಯದಷ್ಟು ಕತೆಗಳು ಈ ಮಹಾಗೋಡೆಯ ಆಚೆಗಿವೆ. “ಚೈನಾ ಮೇಡ್‌’ನಲ್ಲಿ ದೀರ್ಘ‌ಕಾಲ ಬಾಳ್ವಿಕೆ ಬಂದದ್ದು ಇದೊಂದು ಮಾತ್ರ ಎಂಬ ಜೋಕ್‌ ಕೂಡ ಪ್ರಚಲಿತದಲ್ಲಿದೆ. ಕಣ್ಣಾರೆ ಕಂಡರೆ ಮಾತ್ರ ತಿಳಿಯುತ್ತದೆ, ಇದರ ಗ್ರೇಟ್‌ನೆಸ್‌! ಇದು ನಿಜವಾಗಿಯೂ ಗ್ರೇಟ್‌ವಾಲ್‌! ಚೀನಾದ ಪ್ರಥಮ ದೊರೆ ಕ್ವಿನ್‌ ಶಿ ಹ್ವಾಂಗ್‌ ಕ್ರಿ. ಪೂ. 220ರಲ್ಲಿ ಇದನ್ನು ಕಟ್ಟಿಸಲು ಆರಂಭಿಸಿದನಂತೆ. ಮಧ್ಯಕಾಲದಲ್ಲಿ ಅದು ಹಾಗೆಯೇ ಇತ್ತು. ಮುಂದೆ ಮಿಂಗ್‌ ರಾಜರುಗಳು ಕ್ರಿ.ಶ. 1368ರಿಂದ 1644ರ ಅವಧಿಯಲ್ಲಿ ಈ ಗೋಡೆಯನ್ನು ಸಾವಿರಾರು ಮೈಲಿಗಳಿಗೆ ವಿಸ್ತರಿಸಿದರು. ಇದರ ಎಲ್ಲ ಕವಲುಗೋಡೆಗಳನ್ನು ಕೂಡಿದರೆ ಒಟ್ಟು ಉದ್ದ 21,196 ಕಿ. ಮೀ. ಗಳಂತೆ ! ಒಂದು ಕಾಲದಲ್ಲಿ ಮಂಗೋಲಿಯನ್ನರು ಮತ್ತು ಯುರೇಶಿಯಾದ ಅಲೆಮಾರಿಗಳ ಒಳ ಪ್ರವೇಶವನ್ನು  ತಡೆಯುವುದಕ್ಕಾಗಿ ಮತ್ತು ಶತ್ರುಗಳಿಂದ ರಕ್ಷಣೆಗಾಗಿ ಈ ಗೋಡೆಯನ್ನು ನಿರ್ಮಿಸಲಾಗಿತ್ತು. ಆದರೆ, ಇವತ್ತು ಇದು ಬೇರ್ಪಡಿಸುವ ಗೋಡೆಯಾಗಿ ಉಳಿದಿಲ್ಲ, ಜಗತ್ತಿನ ಪ್ರವಾಸಪ್ರಿಯ ಜನ ಮತ್ತು ಚೀನೀಯರ ನಡುವಿನ ಭಾವನಾತ್ಮಕ ಸೇತುವೆಯಂತಾಗಿದೆ. 

ಫಾರ್ಬಿಡನ್‌ ಸಿಟಿ
ಯುನೆಸ್ಕೋದ ವಿಶ್ವ ಪಾರಂಪರಿಕ ತಾಣವೆಂಬ ಮನ್ನಣೆಗೆ ಪಾತ್ರವಾದ ಮತ್ತೂಂದು ಸ್ಥಳವೆಂದರೆ ಫಾರ್ಬಿಡನ್‌ ಸಿಟಿ. ಇದು ಬೀಜಿಂಗ್‌ನ ಹೃದಯ ಭಾಗದಲ್ಲಿದೆ. ಇದು ಭವ್ಯವಾದ ಅರಮನೆ ಸಂಕೀರ್ಣ. ಮಿಂಗ್‌ನಿಂದ ಕ್ವಿಂಗ್‌ ರಾಜಮನೆತನದವರೆಗಿನ ರಾಜರುಗಳು ಇಲ್ಲಿಯೇ ವಾಸವಿದ್ದರು. ಇದರ ವಿಸ್ತೀರ್ಣವೇ 180 ಎಕರೆಗಳಷ್ಟು. ಈ ಅರಮನೆ ಸಂಕೀರ್ಣದಲ್ಲಿ ಪ್ರಸ್ತುತ ಎರಡು ವಿಭಾಗಗಳಿವೆ. ಒಂದು ಕೇವಲ ಆಡಳಿತಕ್ಕೆ ಸಂಬಂಧಿಸಿದ ಕಟ್ಟಡ. ಎರಡನೆಯ ಭಾಗ ಅರಸರ ಮನೆಗಳು! ಈ ಪ್ಯಾಲೇಸ್‌ ಕಾಂಪ್ಲೆಕ್ಸ್‌ಗೆ ಮೂರು ಪ್ರವೇಶ ದ್ವಾರಗಳಿವೆ. ಮುಖ್ಯದ್ವಾರದಲ್ಲಿ ರಾಜ ಮಾತ್ರ ಇದರಲ್ಲಿ ಪ್ರವೇಶಿಸಬಹುದು. ಇನ್ನೊಂದು ದ್ವಾರ ರಾಜಮನೆತನದವರಿಗಾಗಿ, ಮತ್ತೂಂದು ಆಡಳಿತಾತ್ಮಕ ವಿಭಾಗದವರಿಗೆ. ಮದುವೆಯಾಗಿ ಬರುವ ರಾಜಕುಮಾರಿಯ ಪ್ರವೇಶಕ್ಕೂ ಇಲ್ಲಿ ಅವಕಾಶ ಇದೆ ; ಒಮ್ಮೆ ಮಾತ್ರ. ಇಲ್ಲಿರುವ ಮರದ ಕೆತ್ತನೆಗಳಲ್ಲಿ ಕೆಂಪು ಮತ್ತು ಹಳದಿ ಬಣ್ಣಗಳ ಬಳಕೆ ಇದೆ. ಕೆಂಪು ಸಂತೋಷದ ಸಂಕೇತವಾದರೆ ಹಳದಿ ರಾಜತ್ವದ ಪ್ರತೀಕ. ಇಲ್ಲಿ ನಡೆಯುತ್ತಿದ್ದ ರಾಜರ ಕಲಾಪ-ಕತೆಗಳು ಸ್ವಾರಸ್ಯಕರವಾಗಿವೆೆ. ಪ್ರತಿ ಮೂರು ಮೂರು ವರ್ಷಗಳಿಗೊಮ್ಮೆ ಇಲ್ಲಿ ಪುರಜನರನ್ನು  ಆಹ್ವಾನಿಸಿ, ಅವರಿಗೆ ಪರೀಕ್ಷೆ ನಡೆಸಿ ಬುದ್ಧಿವಂತನೊಬ್ಬನನ್ನು ಆಯ್ಕೆ ಮಾಡಲಾಗುತ್ತಿತ್ತಂತೆ. ಅವನನ್ನು ವಿಶೇಷವಾಗಿ ಸಂಮಾನಿಸಿ ರಾಜನ ದ್ವಾರದಲ್ಲಿಯೇ ನಿರ್ಗಮಿಸುವ ಅವಕಾಶ ಮಾಡಿಕೊಡಲಾಗುತ್ತಿತ್ತು. ರಾಜ ಇಷ್ಟಪಟ್ಟರೆ ರಾಜಮನೆತನದ ಹೆಣ್ಣಿನೊಂದಿಗೆ ಆತನ ವಿವಾಹ ನೆರವೇರಿಸುವ ಸಂದರ್ಭವೂ ಇತ್ತು. ಇದೊಂದು ಡ್ರ್ಯಾಗನ್‌ಗಳ ಜಗತ್ತು. ಅರಮನೆಯ ಮುಂದೆ ಒಂಬತ್ತು ಬೃಹತ್‌ ಡ್ರ್ಯಾಗನ್‌ಗಳು ಸಮುದ್ರಕ್ಕೆ ಹಾರುವ ಕೆತ್ತನೆಗಳಿವೆ. ಮರಿಸಿಂಹವನ್ನು ಹಿಡಿದುಕೊಂಡಿರುವ ಬೃಹತ್‌ ಸಿಂಹದ ಪ್ರತಿಮೆಯೂ ಇದೆ. ಇದು ರಕ್ಷಣೆಯ ಪ್ರತೀಕ. ಎಲ್ಲ ಕಟ್ಟಡಗಳ ಸುತ್ತಲೂ ಛಾವಣಿಯಲ್ಲಿಯೂ ಲಕ್ಷಾಂತರ ಡ್ರ್ಯಾಗನ್‌ಗಳ ಕೆತ್ತನೆಗಳಿವೆ.

ಇಲ್ಲಿಯೇ ಸನಿಹದಲ್ಲಿ ಇನ್ನೊಂದು ಕಟ್ಟಡವಿದೆ: ಹಾಲ್‌ ಆಫ್ ಹೆವನ್‌ (ಸ್ವರ್ಗದ ಮಹಲು) ಇದರಲ್ಲಿ ಎರಡು ಅಂತಸ್ತುಗಳಿವೆ. ಇಲ್ಲಿ ರಾಣೀವಾಸ ಮತ್ತು 27 ಹಾಸುಗೆಗಳ ದೊಡ್ಡ ಕೊಠಡಿ ಇದೆ. ಇದು ಒಂದು ಕಾಲದಲ್ಲಿ ರಾಜಮನೆತನದವರನ್ನು ಶತ್ರುಗಳಿಂದ ರಕ್ಷಿಸುವ ತಾಣವಾಗಿತ್ತು. ಕೊಂಚ ಮುಂದೆ ಮತ್ತೂಂದು ಬೃಹತ್‌ ಕಟ್ಟಡ ಹಾಲ್‌ ಆಫ್ ಯೂನಿಯನ್‌ (ಐಕ್ಯತೆಯ ಮಹಲು) ಇದೆ.

ಟೆಂಪಲ್‌ ಆಫ್ ಹೆವನ್‌
ಇದು 1406ರಿಂದ 1420ರ ಯೋಂಗಲ್‌ ಚಕ್ರವರ್ತಿಗಳ ಆಡಳಿತಾವಧಿಯಲ್ಲಿ ನಿರ್ಮಾಣಗೊಂಡ‌ ದೇವಾಲಯ. ಈ ದೇವಾಲಯದ ಆವರಣಗಳನ್ನು 16ನೆಯ ಶತಮಾನದಲ್ಲಿ ಜಿಯಾಂಜಿಂಗ್‌ ಚಕ್ರವರ್ತಿಗಳ ಕಾಲದಲ್ಲಿ ಇನ್ನಷ್ಟು ವಿಸ್ತರಿಸಲಾಯಿತು. ಜಿಯಾಂಜಿಂಗ್‌ ರಾಜ ತನ್ನ ಆಡಳಿತಾವಧಿಯಲ್ಲಿ ಬೀಜಿಂಗ್‌ನಲ್ಲಿ ಇನ್ನೂ ಮೂರು ದೇವಾಲಯಗಳನ್ನು ನಿರ್ಮಿಸಿದ. ಪೂರ್ವದಲ್ಲಿ ಸೂರ್ಯ ದೇವಾಲಯ, ಉತ್ತರದಲ್ಲಿ ಪ್ರಕೃತಿ ದೇವಾಲಯ ಹಾಗೂ ಪಶ್ಚಿಮದಲ್ಲಿ ಚಂದ್ರ ದೇವಾಲಯ. ಪ್ರಕೃತ ದೇವಾಲಯವು ಬೀಜಿಂಗ್‌ನ ಆಗ್ನೇಯ ದಿಕ್ಕಿನಲ್ಲಿದೆ.

ಈ ದೇವಾಲಯದಲ್ಲಿ ಯಾವುದೇ ದೇವರ ಪ್ರತಿಮೆಗಳಿಲ್ಲ. ದೇವರಿಗೆ ಹೆಸರೂ ಇಲ್ಲ. ಪೂಜೆ-ಪುನಸ್ಕಾರಗಳಿಲ್ಲ. ಜನರು ಬಂದು ತಮ್ಮ ಇಷ್ಟಾರ್ಥದ ಸಿದ್ಧಿಗಾಗಿ ಪ್ರಾರ್ಥಿಸುವುದು ವಾಡಿಕೆ. ಪೂರ್ಣ ವೃತ್ತಾಕಾರದಲ್ಲಿರುವ ಈ ದೇವಾಲಯದ ಶಿಲ್ಪ ನೋಡುವುದಕ್ಕೆ  ಬಹಳ ಸುಂದರ. ಇದು ಬೀಜಿಂಗ್‌ನ ಲಾಂಛನವಾಗಿ ಪರಿಗಣಿತವಾಗಿದೆ. 

ಸಮ್ಮರ್‌ ಪ್ಯಾಲೇಸ್‌
ಇದು ಕ್ವಿಂಗ್‌ ಸಾಮ್ರಾಜ್ಯದ ಪ್ರಮುಖ ಆಕರ್ಷಣೀಯ ಅರಮನೆಗಳಲ್ಲಿ ಒಂದು. ಪ್ರಕೃತಿಯ ಮಡಿಲಲ್ಲಿ ನಿರ್ಮಾಣಗೊಂಡಿರುವ ಈ ಭವ್ಯ ಅರಮನೆಗಳ ಸೌಂದರ್ಯವನ್ನು ಹೆಚ್ಚಿಸುವಂತೆ ಎದುರಿಗೆ ಕುನಿ¾ಂಗ್‌ ಸರೋವರ ಇದೆ. ಈ ಸರೋವರಕ್ಕೆ ಅಡ್ಡವಾಗಿ ಸೇತುವೆ ಇದ್ದು ಇದನ್ನು 17 ಜನ ಕಟ್ಟಿಸಿರುವ ಸಂಕೇತವಾಗಿ 17 ಕಮಾನುಗಳನ್ನು ಹೊಂದಿದೆ.

ಚೀನಾದ ಯಾವ ಸ್ಥಳಕ್ಕೆ ಹೋದರೂ ಸುಮ್ಮನೆ ಕಾಲಕ್ಷೇಪ ಮಾಡಿ ಬರುವ ಹಾಗಿಲ್ಲ. ಅಲ್ಲಿನ ಹಿನ್ನೆಲೆ ತಿಳಿಯುವ ಕುತೂಹಲ ಉಂಟಾಗುತ್ತದೆ. ಆಗ ಅದು ಸಣ್ಣಮಟ್ಟದ ಚಾರಿತ್ರಿಕ ಅಧ್ಯಯನವೇ ಆಗುತ್ತದೆ. ಭೌತಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಭಾರತದ ಮತ್ತೂಂದು ಮಗ್ಗುಲಿನಂತೆ ಇರುವ ಈ ದೇಶದಲ್ಲಿ ಇನ್ನೇನೆಲ್ಲ ಕಾಣುವುದಕ್ಕಿದೆಯೋ ಎಂದು ಬೆರಗು ಪಡುತ್ತಿರುವಾಗಲೇ ಶಾಂಘೈಗೆ ತೆರಳುವ  ಬುಲೆಟ್‌ ಟ್ರೈನ್‌ ಸಿದ್ಧವಾಗಿ ನಿಂತಿತ್ತು. 1,310 ಕಿ. ಮೀ. ದೂರವನ್ನು ಕ್ರಮಿಸಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂದು ಸೋಜಿಗ ಪಡುತ್ತ ಟ್ರೈನ್‌ ಹಿಡಿದೆ !

 ಅಶೋಕ ಆಳ್ವ

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.