ಹಳೆ ಶ್ರುತಿ, ಹೊಸ ರಾಗ ಚಟ್ನೀ ಸಂಗೀತ!


Team Udayavani, Dec 17, 2017, 10:31 AM IST

hale-shruti.jpg

ಸಾಮಾನ್ಯವಾಗಿ ತನ್ನ ನೆಲ ಮತ್ತು ಭಾಷೆಯಿಂದ ದೂರವಿರುವ ಮನುಷ್ಯನಿಗೆ ತನ್ನ ಮೂಲವನ್ನು ಕಳೆದುಕೊಳ್ಳುವುದು ಮತ್ತು ಉಳಿಸಿಕೊಳ್ಳುವುದು - ಎರಡೂ ಕಷ್ಟದ ಯತ್ನವೇ. ಹಾಗೆ ನೋಡಿದರೆ ಬದಲಾಗುವ ಸಂಸ್ಕೃತಿಯ ತಾಕಲಾಟದಲ್ಲಿ ಕಳೆದುಕೊಳ್ಳುವುದು ಎಷ್ಟು ಅನಿವಾರ್ಯವಾಗುತ್ತ ಹೋಗುತ್ತದೆಯೋ ಅಷ್ಟೇ ಅನಿವಾರ್ಯತೆಯು ಉಳಿಸಿಕೊಳ್ಳುವುದರ ಬಗ್ಗೆಯೂ ಹುಟ್ಟುತ್ತದೆ. ರೋಮಿನಲ್ಲಿದ್ದವನು ರೋಮನ್‌ನಂತಿರಬೇಕು ಎಂಬಂಥ ಪ್ರಚಲಿತ ಮಾತುಗಳ ಆಳದ ಉದ್ದೇಶ ಮತ್ತು ಅದರ ಫ‌ಲಿತಾಂಶ ಈ ಕಳೆದುಕೊಳ್ಳುವುದು ಮತ್ತು ಉಳಿಸಿಕೊಳ್ಳುವುದರ ತಾಕಲಾಟಕ್ಕೆ ಕಾರಣವಾಗುತ್ತದೆ. 1850ರ ಆಸುಪಾಸಿನಲ್ಲಿ ಬ್ರಿಟಿಶರು ಲಕ್ಷಾಂತರ ಭಾರತೀಯರನ್ನು ಪ್ರಪಂಚದ ವಿವಿಧ ಭಾಗಗಳಿಗೆ ತಮ್ಮ ಕಬ್ಬಿನ ಗ¨ªೆಗಳಲ್ಲಿ ಕೆಲಸ ಮಾಡುವ ಕೂಲಿಗಳನ್ನಾಗಿ ಕರೆದೊಯ್ದರು. ದಕ್ಷಿಣ ಆಫ್ರಿಕಾ, ಮಾರಿಷಸ್‌, ಫ್ರೆಂಚ್‌ ರಿಯುನಿಯನ್‌ ದ್ವೀಪಗಳು, ಬ್ರಿಟಿಶ್‌ ಗಯಾನಾ, ಕೆರಿಬಿಯನ್‌ ದ್ವೀಪಗಳಾದ ಟ್ರಿನಿಡಾಡ್‌ ಮತ್ತು ಟೊಬಾಗೊ, ಜಮೈಕಾ, ಫಿಜಿ ಇÇÉೆಲ್ಲ ಲಕ್ಷಾಂತರ ಸಂಖ್ಯೆಯಲ್ಲಿ ಭಾರತೀಯರು ವಾಸವಾಗಿ¨ªಾರೆ. ಅವರಲ್ಲಿ ಬಹುತೇಕರು ಕೂಲಿಗಳಾಗಿ ಬಂದವರು. 

ಒಂದು ದೇಶದ ಅಥವಾ ಸಮುದಾಯವೊಂದರ ಶ್ರೀಮಂತಿಕೆಯನ್ನು ಅದರ ಲಲಿತಕಲೆಗಳ ಮೂಲಕ ಅರಿಯುವುದು ಸುಲಭವಾಗುತ್ತದೆ. ನಮ್ಮ ಭಾರತದ ಲಲಿತಕಲೆಗಳು, ಅದರಲ್ಲೂ ಮುಖ್ಯವಾಗಿ ಸಂಗೀತವು, ಈ ಭಾರತೀಯರಲ್ಲಿ ಭಾರತದಿಂದ ಬರೋಬ್ಬರಿ ನೂರಾ ಎಪ್ಪತ್ತು ವರ್ಷಗಳ ಹಿಂದೆ ಹೊರಬಂದು ತಮ್ಮ ಮೂಲ ಮಣ್ಣಿನ ವಾಸನೆಯಿಂದ ಐದರಿಂದ ಆರು ತಲೆಮಾರುಗಳಷ್ಟು ದೀರ್ಘ‌ವಾದ ದಾರಿಯನ್ನು ಸಾಗಿದರೂ ಸಂಸ್ಕೃತಿಯ ಮುಖ್ಯಭೂಮಿಕೆಯಾಗಿ ಮತ್ತು ಮಹತ್ವದ ಗುರುತಾಗಿ ಉಳಿದೊಂಡಿದೆ. 

ಇಲ್ಲಿ ಗಮನಿಸಬೇಕಾದ ಒಂದು ಮುಖ್ಯವಾದ ಅಂಶವೆಂದರೆ, ಅಂದು ಭಾರತದಿಂದ ಕೂಲಿಗಳಾಗಿ ಹೊರಬಂದವರಲ್ಲಿ ಬಹುತೇಕರು, ಪ್ರಾಯಶಃ ಶೇ. 90ರಷ್ಟು ಜನರು ಮೂಲತಃ ಕೂಲಿಗಳೇ ಆಗಿದ್ದರು ಅಥವಾ ದೈನಂದಿನ ಬದುಕಿಗಾಗಿ ಕಷ್ಟಪಡುವ ಬಡ ಜನರೇ ಆಗಿದ್ದರು. ಟೆಕ್ನಾಲಜಿಯೆಂಬ ಶಬ್ದವೇ ಹುಟ್ಟಿರದ ಆ ಕಾಲದಲ್ಲಿ ಹಗಲೆಲ್ಲ ಕಬ್ಬಿನ ಗ¨ªೆಗಳಲ್ಲಿ ದುಡಿದ ನಂತರ ಸಂಜೆಯ ಮನರಂಜನೆಯೆಂದರೆ ಹಾಡುವುದು, ಕುಣಿಯುವುದು. ಆ ಗುಂಪಿನÇÉೆ ಒಬ್ಬ ಸೀರೆ ಸುತ್ತಿಕೊಂಡು ಹೆಂಗಸಿನ ವೇಷ ಹಾಕಿಕೊಂಡು ಕುಣಿಯುತ್ತಿದ್ದ. ಹಾಡುಬಲ್ಲವ ತನಗೆ ಗೊತ್ತಿದ್ದ ಜನಪದ ಗೀತೆಗಳನ್ನು ಹಾಡುತ್ತಿದ್ದ. ಇಂಥ ಹಾಡುಗಳು ಆ ಜನರ ಮೂಲ ಭಾರತದಲ್ಲಿನ ಪ್ರಾದೇಶಿಕ ಹಿನ್ನೆಲೆಗೆ ಅನುಗುಣವಾಗಿ ತಮಿಳು, ಭೋಜಪುರಿ ಅಥವಾ ತೆಲುಗಿನಲ್ಲಿರುತ್ತಿದ್ದವು. 

ಹೊಸ ಸಂಗೀತ ಪ್ರಕಾರ
ಕಾಲಕ್ರಮೇಣ ಮೊದಲ ತಲೆಮಾರಿಗೆ ಬಾರದಿದ್ದ ಆಯಾ ದೇಶಗಳ ಭಾಷೆಯನ್ನು ಎರಡನೆಯ ತಲೆಮಾರು ಕಲಿತುಕೊಂಡಿತು. ಮತ್ತು ಹೊಸ ಭಾಷೆಯು ಅಲ್ಲಿನ ಭಾರತೀಯ ಸಮುದಾಯದ ಮೂಲ ಭಾಷೆಯ ಜನಪದ ಗೀತೆಗಳ ಮೇಲೆಯೂ ಪ್ರಭಾವಿಸತೊಡಗಿತು. ಹೀಗೆ ಮೂಲ ಭಾರತೀಯ ಪ್ರಭಾವದ ಸಂಗೀತದ ಹಿನ್ನೆಲೆಯಲ್ಲಿ ಮೂಲ ತಮಿಳಿನ ಅಥವಾ ಭೋಜಪುರಿ ಇತ್ಯಾದಿ ಭಾಷೆಗಳ ಜೊತೆಗೆ ಸ್ಥಳೀಯ ಭಾಷೆಯ ಸಾಲುಗಳು ಸೇರಿ ಹುಟ್ಟಿದ್ದು ಚಟ್ನಿ- Chutney  ಎಂಬ ಸಂಗೀತ ಪ್ರಕಾರ! ಮನುಷ್ಯನ ಜಂಗಮ ಸಂಸ್ಕೃತಿಯು ಮಾಡುವ ಅವಘಡಕ್ಕೊಂದು ದೊಡª ಉದಾಹರಣೆ ಚಟ್ನಿ! ಸದ್ಯ ಈ ಸಂಗೀತ ಪ್ರಕಾರವು ಕೆರಿಬಿಯನ್‌ ದ್ವೀಪ ಸಮೂಹದ ಭಾರತೀಯ ಸಮುದಾಯದಲ್ಲಿ ಮತ್ತು ದಕ್ಷಿಣ ಆಫ್ರಿಕಾದ ನಟಾಲ್‌  ಪ್ರಾಂತ್ಯದ ಭಾರತೀಯ ಸಮುದಾಯದಲ್ಲಿ ಬಹಳ ಪ್ರಸಿದ್ಧವಾದ ಸಂಗೀತ ಪ್ರಕಾರ. ಒಂದಷ್ಟು ಡಬ್ಬಲ್‌ ಮೀನಿಂಗಿನ ಇಂಗ್ಲಿಶ್‌ ಸಾಲುಗಳು, ಸಾಲುಗಳ ಅಂತ್ಯದಲ್ಲಿ ಆಗಾಗ ಬರುವ ಯಾವುದಾದರೂ ಒಂದು ಹಿಂದಿಯ ಅಥವಾ ತಮಿಳಿನ ಸಾಲು ಮತ್ತು ನೂರೈವತ್ತು ವರ್ಷಗಳ ಹಿಂದಿನಂತೆಯೇ ಇಂದೂ ಲಂಗ-ದಾವಣಿ ಉಟ್ಟು ಗಿರಗಿರನೆ ತಿರುಗುತ್ತ ಕುಣಿಯುವ ಹುಡುಗರು, ಹೀಗೆ ಚಟ್ನೀ ಕಾನ್ಸರ್ಟುಗಳು ಮೂಲ ಮಣ್ಣಿನ ಹಳೇ ವಾಸನೆಗೆ ಹೊಸಬಗೆಯ ರಾಪ್‌ ಮತ್ತು ಹಿಪ್‌ ಹಾಪ್‌ ಶೈಲಿಯ ಫ್ಲೇವರನ್ನು ಹಚ್ಚಿ ವಾರಾಂತ್ಯದ ಅಮಲಿನಲ್ಲಿ ಈಗ ರಾತ್ರಿಯಡೀ ನಡೆಯುತ್ತವೆ. ಐವತ್ತಕ್ಕೂ ಹೆಚ್ಚು ಇಂಥ ಬ್ಯಾಂಡುಗಳು ಡರ್ಬನ್‌ನಲ್ಲಿಯೇ ಇ¨ªಾವೆ ಮತ್ತು ಇಂಥ ಬ್ಯಾಂಡುಗಳನ್ನು ನಗಾರಾ ಬ್ಯಾಂಡ್‌ ಎಂದು ಕರೆಯುತ್ತಾರೆ.

ಇದ್ದವರಲ್ಲಿಯೇ ಸ್ವಲ್ಪ ಸ್ವರ ಶುದ್ಧಿ ಇರುವ ಇಂಥ ಚಟ್ನೀ ಹಾಡುಗಾರರು ತಮ್ಮ ಹಾಡುಗಳ ಸಿಡಿಗಳನ್ನು ಹೊರತಂದಿ¨ªಾರೆ. ಅಂಥ ಹಾಡುಗಾರರು ಉದಯೋನ್ಮುಖ ಚಟ್ನೀ ಹಾಡುಗಾರರಿಗಾಗಿ ಚಟ್ನೀ ಸಂಗೀತದ ಸ್ಪರ್ಧೆಗಳನ್ನು ಆಗಾಗ ಏರ್ಪಡಿಸುತ್ತಾರೆ. ಹೀಗೆ ತಲೆಮಾರಿನಿಂದ ತಲೆಮಾರಿಗೆ ಅಂದೆಂದೋ ಪ್ರಸಿದ್ಧವಾಗಿದ್ದ ಶುದ್ಧವಾದ ಮೂಲ ಟ್ಯೂನ್‌ ಒಂದು ಕಾಲ ಮತ್ತು ಬದಲಾಗುತ್ತಿರುವ ಸಂಸ್ಕೃತಿಯ ಪ್ರಭಾವದಿಂದ ಚಟ್ನಿಯಾಗಿಬಿಡುತ್ತದೆ!

ಡರ್ಬನ್‌ನ ಪ್ರಖ್ಯಾತ ಸಂಗೀತಗಾರರೊಬ್ಬರೊಂದಿಗೆ ಕುಶಾಲಿನ ಸಮಯವನ್ನು ಕಳೆಯುವಾಗ ಅವರು ಹೇಳುತ್ತಿದ್ದರು, “ಈ ಚಟ್ನಿ ಸಂಗೀತವು ನಮ್ಮ ಅಜ್ಜನ ಕಾಲದಲ್ಲಿ ನಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಬೇಕಾಗಿತ್ತು. ಈಗ ನಾವು ಬೇಡ ಎಂದರೆ ಹೇಗೆ? ಅವರನ್ನೆಲ್ಲ ಕರೆದು ನಾವು ಸರಳ ವರಸೆಗಳ ಪಾಠ ಹೇಳಲು ಸಾಧ್ಯವಿಲ್ಲ. ಅವರಿಗೂ ಅದು ಬೇಕಾಗಿರುವುದಿಲ್ಲ ಮತ್ತು ಬೇಡ ಕೂಡ. ಒಂದು ಲೆಕ್ಕದಲ್ಲಿ ಹಿಪ್‌ಹಾಪ್‌ ಕೇಳುವುದಕ್ಕಿಂತ ಚಟ್ನಿ ಹಾಡುಗಳನ್ನು ಕೇಳುವುದೇ ವಾಸಿ!’

ಇದ್ದಕ್ಕಿದ್ದಂತೆ ಮೂಲವನ್ನು ತೊರೆದು ತನ್ನದಲ್ಲದ ನಾಡು ನುಡಿಯನ್ನು ಅಪ್ಪಿಕೊಂಡ ನಂತರ ಕಳೆದುಕೊಳ್ಳುವುದು ಮತ್ತು ಉಳಿಸಿಕೊಳ್ಳುವುದು ಎಂಬುದು ಸಾಮಾನ್ಯವಾಗಿ ಲೆಕ್ಕಾಚಾರಗಳನ್ನು ಮೀರಿದ ತಾಕಲಾಟ. ಇಲ್ಲಿ ಸಂಸ್ಕೃತಿಯು ಉಳಿಯುತ್ತದಾ ಅಥವಾ ಬೆಳೆಯುತ್ತದಾ ಎಂಬ ಲೆಕ್ಕಾಚಾರಕ್ಕಿಂತ ನಾವು ಅದೆಷ್ಟು ಕಳೆದುಕೊಂಡೆವು ಎಂಬ ಕೊರಗೇ ಎದ್ದು ನಿಲ್ಲುತ್ತದೆ ಮತ್ತು ಮೇಲ್ನೋಟಕ್ಕೆ ಇದು ಸರಿ ಅಥವಾ ಇದು ಸರಿಯಲ್ಲ ಎಂಬ ಸಿದ್ಧಾಂತದಂಥ ಮಾತುಗಳನ್ನಾಡುವುದು ಸುಲಭವಾದರೂ ತನ್ನದಲ್ಲದ ನೆಲದಲ್ಲಿ ಅದೂ ಸ್ವಾತಂತ್ರ್ಯಕ್ಕಿಂತ ಮುಂಚಿನ ಆ ಕಾಲಘಟ್ಟದಲ್ಲಿ ಮನುಷ್ಯ ಎಲ್ಲ ರೀತಿಯ ದಬ್ಟಾಳಿಕೆಯ ನಡುವೆ ತನ್ನ ಮೂಲವನ್ನು ಉಳಿಸಿಕೊಳ್ಳುತ್ತಾನೋ ಅಥವಾ ಕಳೆದುಕೊಳ್ಳುತ್ತಾನೋ, ಅವನಂತೂ ಉಳಿದಿ¨ªಾನೆ. ಅವನು ಉಳಿದಿದ್ದರಿಂದ ಅವನ ಯಾವುದೋ ಜೀನ್‌ ಉಳಿದುಕೊಂಡಿದೆ. ಆ ಜೀನ್‌ ಅವನ ಘರಾನೆಯ ದಿಕ್ಸೂಚಿಯಷ್ಟೆ. ಒಂದು ಸಂಗೀತದ ಪ್ರಕಾರ ಹುಟ್ಟುವುದು ಸುಲಭದ ಮಾತಲ್ಲ. ನಮ್ಮಲ್ಲಿನ ಘರಾಣೆಗಳಂತೆ ಚಟ್ನೀ ಸಂಗೀತದಲ್ಲೂ ಘರಾಣೆಗಳಿವೆ. 1960ರಲ್ಲಿ ಬದುಕಿದ್ದ ಹ್ಯಾರಿ ಸಿಂಗ್‌ ಚಟ್ನೀ ಹಾಡುಗಳನ್ನು ಹಾಡುವಾಗ ನಡುವೆ ಸರಗಮ್‌ ಹಚ್ಚುತ್ತಿದ್ದನಂತೆ! ಅವನ ಕಾಲದವರೆಲ್ಲ ಇಂದಿನ ಚಟ್ನೀ ಹಾಡುಗಾರರನ್ನು ನಿಂದಿಸುತ್ತಾರೆ. ಇದು ಹೀಗಿರಲಿಲ್ಲ ಎಂದು ಕೊರಗುತ್ತಾರೆ. ನಮ್ಮಲ್ಲಿಯೂ ನಾವು ಇದನ್ನೇ ನೋಡುತ್ತೇವಲ್ಲ? ಖಯಾಲ್‌ ಹಾಡುಗಾರಿಕೆ ಬಂದಾಗ ಅದೂ ಸಂಪೂರ್ಣವಾಗಿ ಹೊಸದಾಗಿತ್ತು. ಅಲ್ಲಿಗಿಂತ ಹಿಂದಿನವರು ಹೊಸ ಬಗೆಯನ್ನು ಅಲ್ಲಿಯೂ ದೂಷಿಸಿದ್ದರು. ಮೂಲ ಕಳೆದುಹೋಗುತ್ತದೆಂದು ಕೊರಗಿದ್ದರು. ನಿಜವಾಗಿ ಗಮನಿಸಿದರೆ ಯಾವುದನ್ನೂ ನಾವು ಕಳೆದುಕೊಂಡಿಲ್ಲ, ಅಡಗಿಸಿಟ್ಟಿದ್ದೇವಷ್ಟೆ. ಹೀಗೆ ಭಾರತದಿಂದ ಬದುಕಿಗಾಗಿ ನೂಕಲ್ಪಟ್ಟ ಅಂದಿನ ಭಾರತೀಯ ಬಡ ಸಮುದಾಯದ ಜನಪದ ಹಾಡುಗಳು ಕಾಲಕ್ರಮೇಣ ಚಟ್ನೀ ಎಂಬ ಸಂಗೀತ ಪ್ರಕಾರವಾಗಿ ಇಂದು ಕೆರಿಬಿಯನ್‌ ದ್ವೀಪಗಳಲ್ಲಿ, ದಕ್ಷಿಣ ಆಫ್ರಿಕಾದ ನಟಾಲ್‌ ಪ್ರಾಂತ್ಯದ ಭಾರತೀಯ ಸಂಸ್ಕೃತಿಯಲ್ಲಿ ಹಾಸಿಹೋಗುತ್ತದೆ ಎಂದು ಮದ್ರಾಸಿನ ಬಂದರಿನಲ್ಲಿ ಹಡಗು ಹತ್ತಿದ ಸಂಗೀತ ಬಲ್ಲ ಮೊದಲ ಕೂಲಿಗೆ ನಿಜವಾಗಿಯೂ ಗೊತ್ತಿರಲಿಲ್ಲ !

– ಕಣಾದ ರಾಘವ

ಟಾಪ್ ನ್ಯೂಸ್

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.