ಹಾಡುಹಕ್ಕಿಗೆ ಬೇಕೆ ಬಿರುದುಸಮ್ಮಾನ!


Team Udayavani, Feb 17, 2019, 12:30 AM IST

3.jpg

ಚಂದಾದ ಹೂದೋಟ
ಚಂದಾಗೆ ಇರುತೈತಿ…
ತೋಟಕ್ಕೆ ಹೋದಾವ
ಹೂವಾ ಕೊಯ್ನಾ ಬೇಡ… 
ಕೊಯ್ದ ಹೂವಾ ಮತ್ತೆ ಜೋಡಿಸಾಕೆ
ಆಗದಾ ಮ್ಯಾಲೆ ನೀ 
ತೋಟದ ಚಂದಾ ಕೆಡಿಸಬ್ಯಾಡ

ಹುಡುಗಿಯರ ಬದುಕಿನಲ್ಲಿ ಚಕ್ಕಂದವಾಡಿ, ಕೈಬಿಟ್ಟು, ಅವರ ಬಾಳನ್ನು ಕೆಡಿಸುವ ವಿಕೃತ ಹುಡುಗರ ಬಗ್ಗೆ ಹೂವನ್ನು ಸಾಂಕೇತಿಕವಾಗಿ ಬಳಸಿಕೊಂಡು ಈ ಹಾಡು ರಚಿಸಿದವರು ಹಾಲಕ್ಕಿ ಬುಡಕಟ್ಟು ಸಮುದಾಯದ ನಾಯಕಿ, ಜಾನಪದ‌ ಹಾಡು ಗಾರ್ತಿ ಪದ್ಮಶ್ರೀ ಪುರಸ್ಕೃತರಾದ ಸುಕ್ರಿ ಬೊಮ್ಮ ಗೌಡ. ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬಡಿಗೇರ ಖೇಣಿಯ ಹಾಲಕ್ಕಿ ಹಾಡುಹಕ್ಕಿ ಸುಕ್ರಜ್ಜಿಯವರ ವಯಸ್ಸು ಈಗ 84 ದಾಟಿದ್ದರೂ ಅವರ ಬದುಕಿನ ಉತ್ಸಾಹ, ಲವಲವಿಕೆ, ಹಾಡು ಮತ್ತು ಪದಗಳ ಸ್ಮರಣಶಕ್ತಿ ಅದಕ್ಕಿಂತಲೂ ಹೆಚ್ಚಾಗಿ ಅವರ ಮಾನವೀಯ ಪ್ರೀತಿ ಆಕಾಶದೆತ್ತರ. ಸುಕ್ರಜ್ಜಿಯವರು ಪರಿಸರ ಪರ, ಮಾನವೀಯತೆಯ ಪರ ಹೋರಾಟ ಮಾಡುತ್ತಲೇ ಬಂದವರು. ಶಾಲೆಯ ಮೆಟ್ಟಿಲನ್ನೇ ಏರದ ಹಳ್ಳಿಯ ಈ ಬಡ ಮಹಿಳೆ ಕರ್ನಾಟಕ ವಿಶ್ವವಿದ್ಯಾನಿಲಯದ ಜಾನಪದ ವಿಭಾಗಕ್ಕೆ ವಿಶೇಷ ಉಪನ್ಯಾಸಕಿಯಾಗಿದ್ದಾರೆ. ದೇಶದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಸುಕ್ರಿ ಅಜ್ಜಿಯವರ ತಂದೆ ಸುಬ್ಬಣ್ಣ, ತಾಯಿ ದೇವಮ್ಮ, ಗಂಡ ಬೊಮ್ಮ ಗೌಡರಿಂದ ಕಲಿತ ಶ್ರಮ ಜೀವನವೇ ಇಂದು ಇವರು ಹಾಲಕ್ಕಿ ಸಮುದಾಯಕ್ಕೆ ನೀಡಿದ ಕೊಡುಗೆ. ಹಾಲಕ್ಕಿ ಜನಾಂಗವೆಂದರೆ ಇದ್ದುದರಲ್ಲೇ ತೃಪ್ತಿ ಪಡುವ, ನಾಳೆಯ ಬಗ್ಗೆ ಯೋಚಿಸದ ಹಳೆಯ ಸಂಪ್ರದಾಯಗಳನ್ನು ಬಿಡದ, ಬದಲಾವಣೆಗೂ ಒಪ್ಪದ, ಹಣ, ಆಸ್ತಿ, ಪ್ರಚಾರಗಳ ಯಾವುದೇ ವ್ಯಾಮೋಹವೂ ಇಲ್ಲದವರಾಗಿದ್ದರೂ ಸಾಂಸ್ಕೃತಿಕ ಶ್ರೀಮಂತಿಕೆ ಸಾಹಿತ್ಯ ಸಿರಿ ಇರುವ ವಿಶಿಷ್ಟ ಸಮುದಾಯದವರು. 

ಹಾಲು+ಅಕ್ಕಿ = ಹಾಲಕ್ಕಿ !
ಸರ್ವರಿಗೂ ಸಮಪಾಲು, ಸಮಬಾಳು ಎಂದು ಬದುಕುವ ಹಾಲಕ್ಕಿ ಜನಾಂಗ ಉತ್ತರಕನ್ನಡದ ಕಾಳೀನದಿಯಿಂದ ಶರಾವತಿ ವ್ಯಾಪ್ತಿಯವರೆಗೆ ಕಡವಾಡ, ಅಂಕೋಲಾ, ನುಸಿಕೋಟೆ, ಕುಂಬಾರಗದ್ದೆ, ಗೋಕರ್ಣ, ಹರೀಟ, ಚಂದಾವರ ಎಂಬ 7 ಸೀಮೆಗಳಲ್ಲಿ ಕೇರಿ, ಕೊಪ್ಪ, ಓಣಿ, ಊರು, ಸೀಮೆಗಳಿಗೆ ಬುದವಂತ, ಅರಸುಗೌಡ, ಗುರುಗೌಡ, ಪರ್ಧಾನಿಗೌಡ, ಮಾನಾಡಗೌಡ, ಕೋಲಕಾರ, ಗಾಂವಕಾರ ಎಂದು ಪ್ರಾದೇಶಿಕ ವಿಂಗಡಣೆ ಇರುತ್ತದೆ. ಅಮದಳ್ಳಿ, ಮಚ°ಳ್ಳಿ , ಬಿಣಗ, ಕಿನ್ನರ, ಸಿದ್ದರ, ಶಿರ್ವೆ ಮುಂತಾದ ಸಿದ್ದರಾಮೇಶ್ವರ ಗದ್ದುಗೆಗಳಲ್ಲಿ ಹಾಲಕ್ಕಿ ಒಕ್ಕಲಿಗರ ಇನ್ನೊಂದು ಪಂಗಡವಾದ ಗೊಂಡರೊಂದಿಗೆ ವಾಸಿಸುತ್ತಿದ್ದಾರೆ. ಹಾಲಕ್ಕಿ ಜನರ ಜೀವನಶೈಲಿ, ಉಡುಗೆ, ಸಂಸ್ಕೃತಿ, ಪದ್ಧತಿ, ಆಚಾರ-ವಿಚಾರಗಳು ಕಾಡು, ಸದಿ, ಪರಿಸರಕ್ಕೆ ಪೂರಕವಾದಂತಿದ್ದು ಹಾಡು, ಕುಣಿತ, ಸಂಭ್ರಮವೆಂಬ ಗ್ರಾಮೀಣ ಸೊಗಡು ವಿಶಿಷ್ಟವಾಗಿರುತ್ತದೆ. ಗುಮಟೆ, ತಾರ್ಲೆ, ನಾಟಿ, ಪುಗುಡಿ, ಮದುವೆ ಹಾಡುಗಳನ್ನು ಹಾಡುತ್ತಾ ಜಾನಪದ ಕ್ಷೇತ್ರದಲ್ಲಿ ವಿಶಿಷ್ಟವಾಗಿ ಗುರುತಿಸಿಕೊಂಡ ಹಾಲಕ್ಕಿಗಳ ಉಡುಗೆ-ತೊಡುಗೆಯೂ ವಿಭಿನ್ನ. ರವಿಕೆ ಉಡದೆ ಸೀರೆಯನ್ನು ಜಟಿಕೆ ಕಟ್ಟುವುದು (ಮಂಡಿಯವರೆಗೆ ಸೀರೆ ಉಟ್ಟು, ಕುತ್ತಿಗೆಯ ಎರಡೂ ಭಾಗಕ್ಕೆ ಸೀರೆಯನ್ನು ಹಾಯಿಸಿ ಹಿಂದಿನಿಂದ ಅದನ್ನು ಗಂಟು ಹಾಕಿ ಕಟ್ಟುವುದು) ಬಣ್ಣಗಳ ಮಣಿಸರವನ್ನು ಹಾಕಿಕೊಳ್ಳುವುದು ಇವರ ಸಾಂಪ್ರದಾಯಿಕ ಉಡುಗೆ. ನಾರೇಣಸ್ವಾಮಿ ಗದ್ದೆಗೆ ಹೊರಟಾಗ ಅವನ ಹೆಂಡತಿ ಲಚುಮೀದೇವಿ ಹಾಲು ಮತ್ತು ಅನ್ನದ ಬುತ್ತಿಯನ್ನು ಹಿಡ್ಕೊಂಡು ಹೊಲಕ್ಕೆ ಹೋಗುತ್ತಿದ್ದಾಗ, ಕಲ್ಲಿಗೆ ಕಾಲು ಎಡವಿ ಬಿದ್ದು ಹಾಲು-ಅನ್ನ ನೆಲಕ್ಕೆ ಬಿದ್ದಾಗ, ಆ ಹಾಲು-ಅನ್ನವನ್ನು ಎರಡು ಮುದ್ದೆ ಮಾಡಿ ನೆಲದ ಮೇಲೆ ಇಟ್ಟಾಗ, ಅದು ಒಂದು ಗಂಡು ಇನ್ನೊಂದು ಹೆಣ್ಣು ಆಗಿ ಜೀವ ಪಡೆಯಿತೆಂದೂ ಹಾಲು ಮತ್ತು ಅಕ್ಕಿ ಜೀವವಾದುದರಿಂದ ಹಾಲಕ್ಕಿ ಎಂದು ಕರೆಯುತ್ತಾರೆ. ಆದರೆ, ಇದರಲ್ಲಿ ಪಾಠಾಂತರಗಳಿವೆ. ಹಾಲಿನಂತೆ ಬಿಳಿಯಾದ ಮೇಲ್ತರದ ಅಕ್ಕಿಯನ್ನು ಇವರು ಬೆಳೆಸುವುದರಿಂದ, ಹಾಲು ಮತ್ತು ಅಕ್ಕಿ ಇವರ ಕುಲಕಸುಬು ಆದುದರಿಂದ, ಹಾಳಾದ ಅಕ್ಕಿಯನ್ನು ಇವರಿಗೆ ಕೊಟ್ಟು ಹಾಳಕ್ಕಿ (ಹಲಾಕ್‌, ಹಾಲಿಕ…) ಅದುವೇ ಹಾಲಕ್ಕಿ ಆಯಿತಂತೆೆ. ಹಾಲಕ್ಕಿಯವರ ಸಾಮಾಜಿಕ ಉಪಭಾಷೆಗಳಲ್ಲಿ ಣ, ನ, ಳ, ಲ, ಸ, ಚ- ತೆಲುಗು ಶಬ್ದಗಳಿರುವುದರಿಂದ ಆಂಧ್ರಪ್ರದೇಶದ ಹಾಲಿಕರೇ ಇಲ್ಲಿಗೆ ವಲಸೆ ಬಂದವರೆಂದೂ, ಮಹಾರಾಷ್ಟ್ರ, ಗೋವಾದಿಂದ ಕಾರವಾರದ ಬೈತಕೋಲು, ಕಡವಾಳುಗೆ ಬಂದವರೆಂದೂ ಹೇಳುತ್ತಾರೆ. 

ಇಂತಹ ಹಾಲಕ್ಕಿ ಸಮುದಾಯದಲ್ಲಿ ಸುಕ್ರಿಬೊಮ್ಮ ಗೌಡರು ಹಲವು ಹೋರಾಟಗಳ ಆಯಾಮಗಳಲ್ಲೇ ತನ್ನ ಸ್ವಬದುಕಿನ ಚೌಕಟ್ಟು ಕಟ್ಟಿಕೊಂಡವರು. ಗೇಣಿ ಜಮೀನಿನಲ್ಲಿ ದುಡಿಯುವುದನ್ನು ವಿರೋಧಿಸಿ ದುಡಿಯುವ ರೈತರಿಗೋಸ್ಕರ 1960ರಲ್ಲಿ ಪೊರಕೆ ಹಿಡಿದು ಪ್ರತಿಭಟನಾ ಹೋರಾಟ ಆರಂಭಿಸಿದ ಸುಕ್ರಿ ಅಜ್ಜಿ ಸಾಂಪ್ರದಾಯಿಕ ಹಾಡುಗಳ ಜೊತೆಗೆ ವ್ಯವಸ್ಥೆಯ ವಿರುದ್ಧ ಪ್ರತಿಭಟನಾತ್ಮಕ ಕಾವ್ಯಶಕ್ತಿಯೂ ಆದರು. ಸುಕ್ರಿ ಅಜ್ಜಿಯವರ ನೆನಪಿನ ಭಂಡಾರವೆಂದರೆ ಅದೊಂದು ಹಾಡುಗಳ ಅಕ್ಷಯಪಾತ್ರೆ. ಹೇಳಿದ‌ಷ್ಟೂ, ಹಾಡಿದಷ್ಟೂ ಮುಗಿಯದ ಇವರ ಹಾಡುಗಳ ಸಂಗ್ರಹ ಎಷ್ಟೆಂದು ಲೆಕ್ಕ ಇಟ್ಟವರಿಲ್ಲ. ರಾಮಾಯಣ, ಮಹಾಭಾರತಗಳಂತಹ ಪುರಾಣಗಳಿಂದ ಹಿಡಿದು ಬಲೀಂದ್ರ ಮಾದೇವರಾಯ, ಚಂದನರಾಯದಂತಹ ಕಥನಕಾವ್ಯಗಳು, ಐರಾವತ, ಕರಿದೇವರು, ತಂಗಿ ತುಳಸಿ ಮೊದಲಾದ ಜನಪದ ಐತಿಹ್ಯ ಹಾಡುಗಳು, ಮದುವೆ, ಸೋಬಾನ, ಜೋಗುಳದ ಹಾಡು ಗಳು, ಪರಿಸರ ಚಳುವಳಿ ಮತ್ತು ಸಾಮಾಜಿಕ ಸಮಸ್ಯೆ ಗಳನ್ನು ಬಿಂಬಿಸುವ ಹಾಡುಗಳು… ಓದಲು, ಬರೆಯಲು ಬಾರದ ಇವರ ಈ ಹಾಡುಗಳು ಯಾವುದೇ ಕೃತಿ ರೂಪದಲ್ಲಿ ದಾಖಲೆ ಯಾಗಿ ಇರದೇ ಕೇವಲ ಅಜ್ಜಿಯ ನೆನಪು ಎಂಬ “ಹಾರ್ಡ್‌ ಡಿಸ್ಕ್’ನಲ್ಲಿ ಇವೆ, ಅಷ್ಟೇ. 

ಸುಕ್ರಿ ಅಜ್ಜಿಯ ನೆನಪಿನ ಸಂಚಿ !
ಸಾಮಾಜಿಕ ಹೋರಾಟ, ಪರಿಸರ ಹೋರಾಟ, ಮದ್ಯಪಾನ ವಿರುದ್ಧ ಹೋರಾಟ, ಸ್ತ್ರೀಶೋಷಣೆ ವಿರುದ್ಧ ಹೋರಾಟ, ಅಸಮಾನತೆಯ ವಿರುದ್ಧ ಹೋರಾಟಗಳಲ್ಲೇ ಬದುಕು ಸಾಗಿಸಿದ ಅಜ್ಜಿಗೆ ಆರ್ಥಿಕವಾಗಿ ಹಿಂದುಳಿದಿದ್ದೇನೆ ಎಂಬ ಯಾವ ಬೇಸರವೂ ಇಲ್ಲ. “ನಾನು ಸಂತಸದಿಂದ ಇದ್ದೇನೆ, ಊಟತಿಂಡಿಗೇನೂ ಕಮ್ಮಿ ಆಗಿಲ್ಲ. ಹಣ ಯಾಕೆ ಬೇಕು? ಹಣದ ಅಭಿಲಾಷೆ ಇದ್ದವರ ಹತ್ತಿರ ಹೆಣದ ವಾಸನೆ ಬರುತ್ತದೆ’ ಎಂಬುದು ಸುಕ್ರಿ ಅಜ್ಜಿಯ ಸುಖದ ಗುಟ್ಟು. ಒಂದಷ್ಟು ಪ್ರಶಸ್ತಿ, ಒಂದಷ್ಟು ಸನ್ಮಾನಗಳು ಆದರೂ, ಕಾಡಿಗೆ ಹೋದರೂ, ನಾಡಿಗೆ ಹಾಡಲು ಹೋದರೂ, ಚಳುವಳಿಗೆ ಹೋದರೂ, ಪ್ರಶಸ್ತಿ ಸ್ವೀಕರಿಸಲು ಬೆಂಗಳೂರು, ದೆಹಲಿಗೆ ಹೋದರೂ ಅದೇ ಮೊಣಕಾಲಿನವರೆಗಿನ ಸೀರೆ, ಮಣಿಸರ, ಸಾಂಸ್ಕೃತಿಕ ಶುದ್ಧ ಹಾಲಕ್ಕಿ ಒಕ್ಕಲು ಮಹಿಳೆಯ ಪ್ರತಿರೂಪವಾಗಿರುವ ಸುಕ್ರಿ ಅಜ್ಜಿ ಯಾವತ್ತಿಗೂ ತಮ್ಮ ಸಮುದಾಯದ ಸಂಸ್ಕೃತಿ, ಸಂಪ್ರದಾಯವನ್ನು ಬದಲಿಸಿದವರಲ್ಲ. 

ಇದೀಗ ಆದಿವಾಸಿ ಕಲ್ಯಾಣ ಸಮಿತಿಯವರು ಮೇ ತಿಂಗಳಲ್ಲಿ ಅಮೆರಿಕಾದಲ್ಲಿ ನಡೆಸಲಿರುವ ವನವಾಸಿ ಸಮ್ಮೇಳನದಲ್ಲಿ ಸುಕ್ರಿ ಅಜ್ಜಿ ಭಾಗವಹಿಸಲಿದ್ದಾರೆ. ಹಾಗಂತ ಇವರಿಗೆ ಲಭಿಸಿರುವ ಸನ್ಮಾನ, ಪ್ರಶಸ್ತಿಗಳಿಂದ ಲಭಿಸಿದ ದುಡ್ಡಾದರೂ ಇವರ ಬದುಕನ್ನು ಬದಲಿಸಲಿಲ್ಲ. ಆ ಹಣ ತನ್ನೊಡನೆ ಇರುವ ಸಹ ಹಾಡುಗಾರರಿಗೆ, ಊರಿನ ಬಡವರಿಗೆ, ಸಾರ್ವಜನಿಕ ಕಾರ್ಯಕ್ರಮಗಳಿಗೆ ಕೊಡುಗೆಯಾಗಿ ನೀಡುತ್ತ ಬಂದಿರುತ್ತಾರೆ. ಉತ್ತರಕನ್ನಡ ಜಿಲ್ಲೆಯ ಪಶ್ಚಿಮಘಟ್ಟದ ಅಡವಿ ನಾಶಕ್ಕೆ ಪೂರಕವಾದ ಬೃಹತ್‌ ಯೋಜನೆಗಳ ವಿರುದ್ಧ ಪರಿಸರದ ಧ್ವನಿ ಎತ್ತಿ, ಯೋಜನೆಗಳಿಂದ ಜಾಗ ಕಳೆದುಕೊಂಡು ನಿರಾಶ್ರಿತರಾದವರ ಬದುಕಿಗೆ ಹೋರಾಡುತ್ತ¤ ನಿರಾಶ್ರಿತರ ಪರವಾಗಿ ಅಧಿಕಾರಿ ಗಳನ್ನು ಭೇಟಿ ಮಾಡಿ, ವಾದ ಮಾಡಿ, ಶೋಷಿತರ ಹಕ್ಕುಗಳನ್ನು ಕಾಪಾಡುವ ಹೊಣೆಯನ್ನು ಹೊತ್ತುಕೊಂಡು ಗೆದ್ದವರು ಕೂಡ ಇದೇ ಸುಕ್ರಿ ಅಜ್ಜಿ. ಶಿರ್ಕಾಲಿಯ ತನ್ನ ತವರೂರಿನಲ್ಲಿ ಮತ್ತು ಮದುವೆಯಾದ ನಂತರ ಗಂಡನ ಊರಾದ ಬಡಿಗೇರ ಖೇಣಿಯಲ್ಲೂ ಗಂಡಸರೆಲ್ಲ ದುಡಿಯದೇ ಕುಡಿದು ಮದ್ಯವ್ಯಸನಿಗಳಾದಾಗ ಮದ್ಯಪಾನ ಚಳುವಳಿಗೂ ಕಾಲಿರಿಸಿದರು. ತನಗೆ ಕರಗತವಾಗಿದ್ದ ಪದ ಕಟ್ಟುವ ಕಲೆಯಿಂದ ಕುಡಿತದ ಕೆಟ್ಟ ಪರಿಣಾಮಗಳ ಬಗ್ಗೆ, ವಿಧವೆ-ತಬ್ಬಲಿ ಬದುಕಿನ ಬಗ್ಗೆ ನೂರಾರು ಹಾಡುಗಳನ್ನು ತಾನೇ ಸ್ವಯಂ ಸೃಷ್ಟಿಸಿ ಹಾಡುತ್ತ ತನ್ನ ಒಕ್ಕಲಿನ ಸಮಸ್ತ ಮಹಿಳೆಯರನ್ನೂ ಒಗ್ಗೂಡಿಸಿಕೊಂಡು ಚಳವಳಿಗೆ ಬಲ ತುಂಬಿದರು. ಪ್ರತೀ ಮನೆಗಳಲ್ಲೂ ಪ್ರತಿರೋಧದ ಕಿಚ್ಚು ಹೆಚ್ಚಾದಾಗ ಗಂಡಸರ ಮದ್ಯಸೇವನೆ ಕಡಿಮೆಯಾಗಿ ಚಳುವಳಿ ಯಶಸ್ಸು ಪಡೆಯಿತು. ಇಂತಹ ಹಲವಾರು ಸಾಮಾಜಿಕ ಸುಧಾರಣೆಗಳನ್ನು ಮಾಡಿ ತೋರಿಸಿವರು ಸುಕ್ರಿಬೊಮ್ಮ ಗೌಡ. 

ದಿನೇಶ ಹೊಳ್ಳ

ಟಾಪ್ ನ್ಯೂಸ್

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.