Election Commission

 • ಚುನಾವಣೆ ಆಯೋಗದ ವಿರುದ್ಧ ಪ್ರತಿಭಟನೆ

  ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ 15 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ ನೀತಿ ಸಂಹಿತೆ ಉಲ್ಲಂಘಿ ಸಿದರೂ ಆಯೋಗ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ಕಾಂಗ್ರೆಸ್‌ ಕಾರ್ಯಕರ್ತರು ಚುನಾವಣೆ ಆಯೋಗದ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಚುನಾವಣೆ ಕಚೇರಿ ಎದುರು…

 • ಬಿಜೆಪಿಗೆ ಟಾಟಾದಿಂದ ಶೇ.75 ದೇಣಿಗೆ

  ಮುಂಬಯಿ: ಬಿಜೆಪಿ ದೇಶದಲ್ಲಿ ಅತೀ ಹೆಚ್ಚು ದೇಣಿಗೆ ಪಡೆದುಕೊಂಡ ರಾಜಕೀಯ ಪಕ್ಷವಾಗಿದೆ. 2018-19ರ ಹಣಕಾಸು ವರ್ಷದಲ್ಲಿ ಪಕ್ಷ 356 ಕೋಟಿ ರೂ.ಗಳನ್ನು ಕೇವಲ ದೇಣಿಗೆ ಆಧಾರದಲ್ಲಿ ಸಂಗ್ರಹಿಸಿದೆ. ಚುನಾವಣೆ ಆಯೋಗ ಬಿಡುಗಡೆ ಮಾಡಿದ ಮಾಹಿತಿಯಲ್ಲಿ ಈ ಅಂಶ ಬಹಿರಂಗವಾಗಿದೆ….

 • ಜಾರ್ಖಂಡ್: ನ.30ರಿಂದ 5 ಹಂತಗಳಲ್ಲಿ ವಿಧಾನಸಭೆ ಚುನಾವಣೆ, ಡಿಸೆಂಬರ್ 23ರಂದು ಫಲಿತಾಂಶ

  ನವದೆಹಲಿ: ಹರ್ಯಾಣ, ಮಹಾರಾಷ್ಟ್ರ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆದ ಬೆನ್ನಿಗೆ ಇದೀಗ ಜಾರ್ಖಂಡ್ ವಿಧಾನಸಭಾ ಕ್ಷೇತ್ರಕ್ಕೆ ಐದು ಹಂತಗಳಲ್ಲಿ ಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ ಶುಕ್ರವಾರ ದಿನಾಂಕ ಘೋಷಿಸಿದೆ. ನವೆಂಬರ್ 30ರಿಂದ ಮೊದಲ ಹಂತದ ಚುನಾವಣೆ ನಡೆಯಲಿದ್ದು,…

 • ಮತದಾರರ ಪಟ್ಟಿ ಪರಿಶೀಲನೆ : ಕೊನೆಯ ಸಾಲಿನಲ್ಲಿ ದಕ್ಷಿಣ ಕನ್ನಡ; ಮುಂಚೂಣಿಯಲ್ಲಿ ಉಡುಪಿ

  ಮಂಗಳೂರು: ಚುನಾವಣಾ ಆಯೋಗ ಹಮ್ಮಿಕೊಂಡಿರುವ ಮತದಾರರ ಪಟ್ಟಿ ಸಮಗ್ರ ಪರಿಶೀಲನೆ ಪ್ರಾರಂಭಗೊಂಡು ತಿಂಗಳಾಗುತ್ತಿದ್ದರೂ ಸುಶಿಕ್ಷಿತರ ಜಿಲ್ಲೆಯೆಂದು ಕರೆಸಿಕೊಂಡಿರುವ ದಕ್ಷಿಣ ಕನ್ನಡದಲ್ಲಿ ನಿರೀಕ್ಷಿತ ಸ್ಪಂದನೆ ಲಭಿಸಿಲ್ಲ. ರಾಜ್ಯದಲ್ಲಿ ಇದುವರೆಗೆ ಶೇ. 53ರಷ್ಟು ಮತದಾರರು ಪರಿಶೀಲನೆ/ತಿದ್ದುಪಡಿ ಮಾಡಿಕೊಂಡಿದ್ದರೂ ದ.ಕ. ಜಿಲ್ಲೆಯಲ್ಲಿ ಮಾತ್ರ…

 • ಅನರ್ಹ ಶಾಸಕರ ಮುಂದಿರುವ ಹಾದಿ ಏನು? ಡಿಕೆಶಿ ಹೇಳಿದಂತೆ ಸಮಾಧಿ ಮಾಡಿಬಿಟ್ರಿ!

  ಬೆಂಗಳೂರು: ರಾಜ್ಯದ 15 ಕ್ಷೇತ್ರಗಳಿಗೆ ಚುನಾವಣಾ ಆಯೋಗ ಉಪಚುನಾವಣೆ ದಿನಾಂಕ ಘೋಷಿಸಿದ ಬೆನ್ನಲ್ಲೇ ಅನರ್ಹ ಶಾಸಕರು ಹೆಚ್ಚು ಆತಂಕಕ್ಕೆ ಒಳಗಾಗುವಂತಾಗಿದೆ. ಅದಕ್ಕೆ ಕಾರಣ ಒಂದು ಸ್ಪೀಕರ್ ಕೈಗೊಂಡ ನಿರ್ಧಾರ, ಎರಡನೇಯದು ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಇಲ್ಲ ಎಂದು ಸ್ವತಃ…

 • ಅಕ್ಟೋಬರ್ 21ರಂದು ಮಹಾರಾಷ್ಟ್ರ, ಹರ್ಯಾಣ ವಿಧಾನಸಭೆ ಚುನಾವಣೆ; 24ಕ್ಕೆ ರಿಸಲ್ಟ್

  ನವದೆಹಲಿ: ಮಹಾರಾಷ್ಟ್ರ ಹಾಗೂ ಹರ್ಯಾಣ ವಿಧಾನಸಭಾ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ಶನಿವಾರ ಮುಹೂರ್ತ ನಿಗದಿಪಡಿಸಿದ್ದು, ಅಕ್ಟೋಬರ್ 21ರಂದು ಮಹಾರಾಷ್ಟ್ರ, ಹರ್ಯಾಣ ಚುನಾವಣೆ ನಡೆಯಲಿದೆ. ಅಕ್ಟೋಬರ್ 24ರಂದು ಫಲಿತಾಂಶ ಪ್ರಕಟಿಸಲಾಗುವುದು ಎಂದು ಘೋಷಿಸಿದೆ. ಹರ್ಯಾಣ ವಿಧಾನಸಭೆ 90 ಶಾಸಕ…

 • ಇಂದು ಘೋಷಣೆಯಾಗಲಿದೆ ಮಹಾರಾಷ್ಟ್ರ, ಹರ್ಯಾಣ ಚುನಾವಣಾ ದಿನಾಂಕ

  ಹೊಸದಿಲ್ಲಿ: ಲೋಕಸಭಾ ಚುನಾವಣೆಯ ನಂತರ ದೇಶದಲ್ಲಿ ಮತ್ತೆ ಚುನಾವಣೆಯ ಕಾವು ಏರಲಿದೆ. ಮಹಾರಾಷ್ಟ್ರ ಮತ್ತು ಹರ್ಯಾಣ ರಾಜ್ಯಗಳ ವಿಧಾನಸಭಾ ಚುನಾವಣೆಗೆ ಇಂದು ದಿನಾಂಕ ನಿಗಧಿಯಾಗುವ ನಿರೀಕ್ಷೆಯಿದೆ. ಚುನಾವಣಾ ಆಯೋಗ ಇಂದು ಮಧ್ಯಾಹ್ನ ಪತ್ರಿಕಾಗೋಷ್ಠಿ ಕರೆದಿದ್ದು ಅದರಲ್ಲಿ ಉಭಯ ರಾಜ್ಯಗಳ…

 • ಚುನಾವಣಾ ಆಯೋಗಕ್ಕೆ ದೂರು

  ಬೆಂಗಳೂರು: ರಾಜೀನಾಮೆ ಸಲ್ಲಿಸಿರುವ 11 ಕಾಂಗ್ರೆಸ್‌ ಹಾಗೂ 3 ಜೆಡಿಎಸ್‌ ಶಾಸಕರ ವಿರುದ್ಧ ಸಂವಿಧಾನದ ಶೆಡ್ನೂಲ್‌ 10 ಇದರ ಸೆಕ್ಷನ್‌ 2(1)(ಎ) ಹಾಗೂ ಪ್ರಜಾಪ್ರತಿನಿಧಿ ಕಾಯ್ದೆ-1951ರ ಸೆಕ್ಷನ್‌ 9ರ ಪ್ರಕಾರ ಕ್ರಮ ಜರುಗಿಸಿ “ವಜಾ ಪ್ರಮಾಣಪತ್ರ’ ನೀಡುವಂತೆ ಆಗ್ರಹಿಸಿ…

 • ಎಣಿಕೆಗೂ ಮುನ್ನ ಮತ ದೃಢೀಕರಣ ಸಾಧ್ಯ ಇಲ್ಲ

  ನವದೆಹಲಿ: ಲೋಕಸಭೆ ಚುನಾವಣೆಯ ಫ‌ಲಿತಾಂಶಕ್ಕೂ ಮೊದಲೇ ಪ್ರತಿಪಕ್ಷಗಳಿಗೆ ಬಹುದೊಡ್ಡ ಹಿನ್ನಡೆ ಆಗಿದೆ. ಮತ ಎಣಿಕೆ ಆರಂಭಿಸುವುದಕ್ಕೂ ಮುನ್ನವೇ 5 ಇವಿಎಂಗಳು ಮತ್ತು ವಿವಿಪ್ಯಾಟ್‌ಗಳ ಮತಗಳ ಹೋಲಿಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು 22 ಪ್ರತಿಪಕ್ಷಗಳು ಮಾಡಿದ್ದ ಮನವಿಯನ್ನು ಚುನಾವಣಾ ಆಯೋಗ…

 • ಮೊದಲು ಮತಗಳ ದೃಢೀಕರಣವಾಗಲಿ

  ನವದೆಹಲಿ: ಲೋಕಸಭೆ ಚುನಾವಣೆಯ ಮತ ಎಣಿಕೆ ಸಮೀಪಿಸುತ್ತಿರುವಂತೆ 22 ಪ್ರತಿಪಕ್ಷಗಳ ನಾಯಕರು ಮಂಗಳವಾರ ಮತ್ತೆ ಕೇಂದ್ರ ಚುನಾವಣಾ ಆಯೋಗದ ಮೆಟ್ಟಿಲು ಹತ್ತಿದ್ದಾರೆ. ಮೇ 23ರ ಗುರುವಾರ ಮತ ಎಣಿಕೆ ಆರಂಭಿಸುವುದಕ್ಕೂ ಮೊದಲೇ ವಿದ್ಯುನ್ಮಾನ ಮತಯಂತ್ರ ಮತ್ತು ಮತ ದೃಢೀಕರಣ…

 • ಚುನಾವಣೆ ಆಯೋಗದಲ್ಲಿ ಭಿನ್ನಾಭಿಪ್ರಾಯ ಸಹಜ

  ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಸಂಬಂಧ ಪ್ರಧಾನಿ ಮೋದಿ ವಿರುದ್ಧ ದಾಖಲಾದ ಪ್ರಕರಣಗಳ ತೀರ್ಮಾನದ ವೇಳೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದ ಚುನಾವಣಾ ಆಯುಕ್ತರಲ್ಲೊಬ್ಬರಾದ ಅಶೋಕ್‌ ಲವಾಸಾ ಮುಂದಿನ ಸಭೆಗಳಲ್ಲಿ ಭಾಗವಹಿಸುವುದಿಲ್ಲ ಎಂದು ನಿರ್ಧಾರ ಕೈಗೊಂಡಿರುವ ಬೆನ್ನಲ್ಲೇ ಈ ಬಗ್ಗೆ ಪ್ರತಿಕ್ರಿಯೆ…

 • ಚುನಾವಣೋತ್ತರ ಸಮೀಕ್ಷೆ: ಮಾಧ್ಯಮ ಸಂಸ್ಥೆಗಳಿಗೆ ನೋಟಿಸ್‌

  ಲೋಕಸಭಾ ಚುನಾವಣೆಯ ಮತದಾನ ನಡೆಯುತ್ತಿದ್ದಾಗಲೇ ಚುನಾವಣೋತ್ತರ ಸಮೀಕ್ಷೆಗಳನ್ನು ಉಲ್ಲೇಖೀಸಿ ಊಹಾತ್ಮಕ ಫ‌ಲಿತಾಂಶ ಪ್ರಕಟಿಸಿದ ಹಿನ್ನೆಲೆಯಲ್ಲಿ ಮೂರು ಮಾಧ್ಯಮ ಸಂಸ್ಥೆಗಳಿಗೆ ಕೇಂದ್ರ ಚುನಾವಣಾ ಆಯೋಗ (ಇಸಿ) ನೋಟಿಸ್‌ ಜಾರಿಗೊಳಿಸಿದೆ. 48 ಗಂಟೆಗಳೊಳಗೆ ಉತ್ತರಿಸುವಂತೆ ನೋಟಿಸ್‌ನಲ್ಲಿ ಸೂಚಿಸಲಾಗಿದೆ. ಲೋಕಸಭೆಯ ಆರಂಭಿಕ ಸುತ್ತುಗಳ‌…

 • ಮತಗಳ ತಾಳೆ: ಫ‌ಲಿತಾಂಶ ವಿಳಂಬ

  ಬೆಂಗಳೂರು: ಲೋಕಸಭಾ ಚುನಾವಣೆಯ ಮತ ಎಣಿಕೆಗೆ ದಿನಗಣನೆ ಆರಂಭವಾಗಿದ್ದು, ಚುನಾವಣಾ ಆಯೋಗ ಸಿದ್ಧತೆಗಳನ್ನು ಚುರುಕುಗೊಳಿಸಿದೆ. ಆದರೆ, ಇವಿಎಂ-ವಿವಿಪ್ಯಾಟ್‌ ಮತಗಳ ತಾಳೆ ಹಾಕುವ ಬಗ್ಗೆ ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್‌ ಆದೇಶ ಪಾಲಿಸಬೇಕಾಗಿರುವುದರಿಂದ ಈ ಬಾರಿಯ ಮತ ಎಣಿಕೆ ನಿಧಾನವಾಗಲಿದ್ದು, ಫ‌ಲಿತಾಂಶ…

 • ಸುಮಲತಾ ಮೊದಲ ಮತವೇ ಅಸಿಂಧು

  ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರಿಗೆ ಬಂದಿದ್ದ ಮೊದಲ ಮತವೇ ‘ಖೋತಾ’ ಆಗಲಿದೆ. ಎಲೆಕ್ಟ್ರಾನಿಕ್‌ ಪೋಸ್ಟಲ್ ಬ್ಯಾಲೆಟ್ ಮೂಲಕ ಯೋಧನೊಬ್ಬ ಹಾಕಿರುವ ಮತವನ್ನು ಎಣಿಕೆಗೆ ಪರಿಗಣಿಸದಂತೆ ಕೇಂದ್ರ ಚುನಾವಣಾ ಆಯೋಗ ನಿರ್ದೇಶನ ನೀಡಿದೆ. ಸೇನೆಯಲ್ಲಿ…

 • ಚುನಾವಣ ಆಯೋಗದ ವಿರುದ್ಧ ರಾಹುಲ್ ಗಾಂಧಿ ಕಿಡಿ

  ಹೊಸದಿಲ್ಲಿ: ಚುನಾವಣ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಧ್ಯಕ್ಷ ಅಮಿತ್‌ ಶಾ ನೀಡಿದ್ದ ಹೇಳಿಕೆಗಳಿಗೆ ಚುನಾವಣ ಆಯೋಗ ಕ್ಲೀನ್‌ ಚಿಟ್ ನೀಡಿದ್ದನ್ನು ಆಕ್ಷೇಪಿಸಿದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ, ಚುನಾವಣ ಆಯೋಗವು ಪಕ್ಷಪಾತ ಮಾಡುತ್ತಿದೆ ಎಂದಿದ್ದಾರೆ….

 • ಫೋನಿ ಚಂಡಮಾರುತ : ಒಡಿಶಾದ 11 ಜಿಲ್ಲೆಗಳಲ್ಲಿ ಚು.ನೀತಿ ಸಂಹಿತೆ ತೆರವು: ಆಯೋಗ

  ಹೊಸದಿಲ್ಲಿ : ಇದೇ ಶುಕ್ರವಾರದೊಳಗೆ ವಿನಾಶಕಾರಿ ಫೊನಿ ಚಂಡಮಾರುತ ಒಡಿಶಾ ಕರಾವಳಿಗೆ ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿರುವುದನ್ನು ಅನುಸರಿಸಿ ಚುನಾವಣಾ ಆಯೋಗ ಇಂದು ಬುಧವಾರ, ಫೊನಿ ಚಂಡಮಾರುತದಿಂದ ಬಾಧಿತವಾಗಲಿರುವ ಒಡಿಶಾದ 11 ಜಿಲ್ಲೆಗಳಲ್ಲಿ ಮಾದರಿ…

 • ಮೋದಿ ನಾಮಪತ್ರ ರದ್ದು ಮಾಡಿ

  “40 ಟಿಎಂಸಿ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ’ ಎಂಬ ಪ್ರಧಾನಿ ಮೋದಿ ಅವರ ಹೇಳಿಕೆ ಕುರಿತು ಪಶ್ಚಿಮ ಬಂಗಾಲದ ತೃಣಮೂಲ ಕಾಂಗ್ರೆಸ್‌ ಪಕ್ಷವು ಮಂಗಳವಾರ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಈ ಕುರಿತು ಪತ್ರ ಬರೆದಿರುವ ಟಿಎಂಸಿ, “ಮೋದಿ ಹೇಳಿಕೆಯು…

 • ಅಜಂಗೆ ಮತ್ತೆ ಬ್ಯಾನ್‌ ಬಿಸಿ

  ಪ್ರಚಾರ ವೇಳೆ ಪ್ರಚೋದನಕಾರಿ ಹಾಗೂ ಕೋಮುವಾದಿ ಹೇಳಿಕೆ ಗಳನ್ನು ನೀಡಿರುವ ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್‌ಗೆ ಮತ್ತೆ ಚುನಾವಣಾ ಆಯೋಗ ಬಿಸಿ ಮುಟ್ಟಿಸಿದೆ. ಬುಧವಾರ ಬೆಳಗ್ಗೆ 6 ಗಂಟೆಯಿಂದ 48 ಗಂಟೆಗಳ ಕಾಲ ಚುನಾವಣಾ ಪ್ರಚಾರ ಮಾಡದಂತೆ…

 • ಪಾಲಿಕೆ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು

  ಬೆಂಗಳೂರು: ನೀತಿ ಸಂಹಿತೆ ಜಾರಿಯಲ್ಲಿದ್ದರೂ ಬಿಬಿಎಂಪಿಯು 4261 ಕೋಟಿ ರೂ. ಮೊತ್ತದ ಮುಖ್ಯಮಂತ್ರಿಗಳ ನವ ಬೆಂಗಳೂರು ಯೋಜನೆಯಡಿ ಕಾಮಗಾರಿಗಳನ್ನು ಟೆಂಡರ್‌ ಆಹ್ವಾನಿಸದೆ ಕೆಆರ್‌ಐಡಿಎಲ್‌ಗೆ ವಹಿಸಲು ಮುಂದಾಗಿರುವುದು ಕಾನೂನುಬಾಹಿರ ಹಾಗೂ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಬಿಜೆಪಿಯು ಚುನಾವಣಾ…

 • ಕಳ್ಳ ಮತದಾನ ಆರೋಪ: ಜಿಲ್ಲಾಧಿಕಾರಿಗಳಿಂದ ಆಯೋಗಕ್ಕೆ ವರದಿ ಸಲ್ಲಿಕೆ

  ಕಾಸರಗೋಡು: ಕಾಸರಗೋಡು ಲೋಕಸಭಾ ಕ್ಷೇತ್ರಕ್ಕೊಳಪಟ್ಟ ಕಣ್ಣೂರು ಜಿಲ್ಲೆಗೆ ಸೇರಿದ ಕಲ್ಯಾಶೆÏàರಿ ಮತ್ತು ಪಯ್ಯನ್ನೂರು ವಿಧಾನಸಭಾ ಕ್ಷೇತ್ರಗಳ ಹಲವು ಮತಗಟ್ಟೆಗಳಲ್ಲಿ ಎಪ್ರಿಲ್‌ 23 ರಂದು ನಡೆದ ಚುನಾವಣೆ ವೇಳೆ ವ್ಯಾಪಕ ಕಳ್ಳಮತ ಚಲಾಯಿಸಿರುವ ವೀಡಿಯೋ ದೃಶ್ಯಗಳು ಹೊರ ಬಂದಿರುವಂತೆಯೇ ಆ…

ಹೊಸ ಸೇರ್ಪಡೆ