ಫ್ಲಿಪ್ ಕಾರ್ಟ್ ಪೇ ಲೇಟರ್ : ಸಾಲದ ಮೊತ್ತ ಹಾಗೂ ಇಎಂಐ ಹೆಚ್ಚಳ

Team Udayavani, Sep 15, 2021, 9:40 AM IST

gdfghjghfd

ಬೆಂಗಳೂರು: ಮುಂಬರುವ ಹಬ್ಬದ ಸೀಸನ್ ಹಿನ್ನೆಲೆಯಲ್ಲಿ  ಇ-ಕಾಮರ್ಸ್ ಮಾರ್ಕೆಟ್ ಪ್ಲೇಸ್  ಫ್ಲಿಪ್ ಕಾರ್ಟ್ ತನ್ನ `ಫ್ಲಿಪ್ ಕಾರ್ಟ್ ಪೇ ಲೇಟರ್’ ಕೊಡುಗೆಯ ಪ್ರಯೋಜನಗಳನ್ನು ವಿಸ್ತರಣೆ ಮಾಡಿದೆ.   `ಫ್ಲಿಪ್ ಕಾರ್ಟ್ ಪೇ ಲೇಟರ್ ಮೂಲಕ’ 70,000 ರೂಪಾಯಿಗಳವರೆಗಿನ ಸಾಲಕ್ಕೆ ಇಎಂಐ ಸೌಲಭ್ಯ ದೊರಕುತ್ತದೆ.  ಈ ಸಾಲವನ್ನು 3, 6, 9 ಮತ್ತು 12 ತಿಂಗಳ

ಮರು ಪಾವತಿ ಮಾಡಲು ಅವಕಾಶವಿರುತ್ತದೆ. ಈ ಮುಂಚೆ ಪೇ ಲೇಟರ್ ಸೌಲಭ್ಯ 10,000 ರೂ.ಗಳ ಖರೀದಿಗೆ ಸೀಮಿತವಾಗಿತ್ತು. ಈ ಸೌಲಭ್ಯವನ್ನು ಬಳಸಿಕೊಂಡು ಗ್ರಾಹಕರು ಹಬ್ಬದ ಸೀಸನ್ ನಲ್ಲಿ ತಮ್ಮ ನೆಚ್ಚಿನ ಉತ್ಪನ್ನಗಳನ್ನು ಖರೀದಿಸಬಹುದಾಗಿದೆ. ಫ್ಲಿಪ್ ಕಾರ್ಟ್ ಪೇ ಲೇಟರ್’ ಎಲ್ಲಾ ಉತ್ಪನ್ನಗಳ ಖರೀದಿಗೆ ಅನ್ವಯವಾಗುತ್ತದೆ.

ಫ್ಲಿಪ್ ಕಾರ್ಟ್ ವ್ಯಾಪಕ ಶ್ರೇಣಿಯ ಉತ್ಪನ್ನಗಳಿಗೆ  ನೋ ಕಾಸ್ಟ್ (  ಬಡ್ಡಿ ರಹಿತ)  ಸಾಲ ಸೌಲಭ್ಯ ನೀಡುತ್ತಿದೆ. ಇದರ ಜೊತೆಗೆ  ಅಮೆರಿಕನ್ ಎಕ್ಸ್ ಪ್ರೆಸ್, ಆಕ್ಸಿಸ್ ಬ್ಯಾಂಕ್, ಬಜಾಜ್ ಫಿನ್ ಸರ್ವ್, ಬ್ಯಾಂಕ್ ಆಫ್ ಬರೋಡಾ, ಸಿಟಿ ಬ್ಯಾಂಕ್, ಫೆಡರಲ್ ಬ್ಯಾಂಕ್ ಸೇರಿದಂತೆ 18 ಪ್ರಮುಖ ಬ್ಯಾಂಕುಗಳು ಮತ್ತು ಹಣಕಾಸು ಕಂಪನಿಗಳ ಸಹಭಾಗಿತ್ವದಲ್ಲಿ ಕ್ರೆಡಿಟ್ ಕಾರ್ಡ್ ಹಾಗೂ ಡೆಬಿಟ್ ಕಾರ್ಡ್ ಮೂಲಕ ಸಾಮಾನ್ಯ ಇಎಂಐ ಸೌಲಭ್ಯ ದೊರಕುತ್ತಿದೆ. ಎಚ್ ಡಿಎಫ್ ಸಿ ಬ್ಯಾಂಕ್, ಹೋಂ ಕ್ರೆಡಿಟ್, ಎಚ್ಎಸ್ ಬಿಸಿ, ಐಸಿಐಸಿಐ ಬ್ಯಾಂಕ್, ಐಡಿಎಫ್ ಸಿ ಫಸ್ಟ್ ಬ್ಯಾಂಕ್, ಇಂಡಸ್ ಇಂಡ್ ಬ್ಯಾಂಕ್, ಜೆ & ಕೆ ಬ್ಯಾಂಕ್, ಕೊಟಕ್ ಬ್ಯಾಂಕ್ ಆರ್ ಬಿಎಲ್ ಬ್ಯಾಂಕ್, ಸ್ಟ್ಯಾಂಡರ್ಡ್ ಚಾರ್ಟರ್ಡ್, ಎಸ್ ಬಿಐ, ಝೆಸ್ಟ್ ಮನಿ ಮತ್ತು ಇತರೆ ಬ್ಯಾಂಕುಗಳೊಂದಿಗೆ ಸಹಭಾಗಿತ್ವವನ್ನು ಹೊಂದಿದೆ. ಈ ಸಂಸ್ಥೆಗಳು ಬಡ್ಡಿ ರಹಿತ  ಇಎಂಐ ಮತ್ತು ಸಾಮಾನ್ಯ ಇಎಂಐಗಳ ಅವಧಿಯನ್ನು ಕ್ರಮವಾಗಿ 12 ತಿಂಗಳು ಮತ್ತು 36 ತಿಂಗಳವರೆಗೆ ನೀಡುತ್ತಿವೆ.

ಪೇ ಲೇಟರ್ ಸೌಲಭ್ಯ ಪಡೆಯುವುದು ಹೇಗೆ?:

ಫ್ಲಿಪ್ ಕಾರ್ಟ್ ಪೇ ಲೇಟರ್’ ಇಎಂಐ ಸೌಲಭ್ಯ ಪಡೆಯಲು ಬಳಕೆದಾರರು ಕೇವಲ ತಮ್ಮ ಪಾನ್ ಮತ್ತು ಆಧಾರ್ ಸಂಖ್ಯೆಯನ್ನು ಆ್ಯಪ್ ನಲ್ಲಿ ನಮೂದಿಸಬೇಕು, ಒಟಿಪಿಯೊಂದಿಗೆ ಆಧಾರ್ ಸಂಖ್ಯೆಯನ್ನು ಮತ್ತು ತಮ್ಮ ಬ್ಯಾಂಕ್ ವಿವರಗಳನ್ನು ಪರಿಶೀಲಿಸಬೇಕು. ತಮ್ಮ ಖರೀದಿಗೆ ಬಳಕೆದಾರರು `ಫ್ಲಿಪ್ ಕಾರ್ಟ್ ಪೇ ಲೇಟರ್ ಇಎಂಐ’ ಆಯ್ಕೆಯನ್ನು ಮಾಡಿಕೊಳ್ಳಬೇಕು ಮತ್ತು ತಮಗೆ ಸೂಕ್ತವಾದ ಇಎಂಐ ಅವಧಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಅರ್ಜಿಯ ಪ್ರಕ್ರಿಯೆ ತ್ವರಿತವಾಗಿರುತ್ತದೆ. ಈ ಪ್ರಕ್ರಿಯೆಗಳನ್ನು ಫ್ಲಿಪ್ ಕಾರ್ಟ್ ಆ್ಯಪ್ ನಲ್ಲಿ ಅತ್ಯಂತ ಸುಲಭವಾಗಿ ನಿರ್ವಹಿಸಬಹುದಾಗಿದೆ. ಈ ವರ್ಷಾಂತ್ಯದ ವೇಳೆಗೆ ಡಿಜಿಟಲ್ ಪರಿಹಾರಗಳು ಮತ್ತು ಮೌಲ್ಯಾಧಾರಿತ ಸಾಲ ಸೌಲಭ್ಯಗಳ ಆಯ್ಕೆಗಳ ಮೂಲಕ 100 ಮಿಲಿಯನ್ ಗೂ ಅಧಿಕ ವ್ಯವಹಾರಗಳನ್ನು ನಡೆಸುವ ಗುರಿಯನ್ನು ಫ್ಲಿಪ್ ಕಾರ್ಟ್ ಹೊಂದಿದೆ.

ಬೇನ್ ಮತ್ತು ಕಂಪನಿಯ ಇತ್ತೀಚಿನ ವರದಿಯ ಪ್ರಕಾರ, ಪ್ರತಿ ಮೂರು ಜನರಲ್ಲಿ ಒಬ್ಬರು ಕಳೆದ ವರ್ಷ ಒಮ್ಮೆಯಾದರೂ ಆನ್ ಲೈನ್ ನಲ್ಲಿ ಶಾಪಿಂಗ್ ಮಾಡಿದ್ದಾರೆ. ಗ್ರಾಹಕರು ತಮ್ಮ ಆನ್ ಲೈನ್ ಖರೀದಿಗಳನ್ನು ಪೂರ್ಣಗೊಳಿಸಲು ಡಿಜಿಟಲ್ ಪಾವತಿ ಮತ್ತು ಕ್ರೆಡಿಟ್ ಅನ್ನು ಹೆಚ್ಚಾಗಿ ಅವಲಂಬಿಸಿದ್ದಾರೆ. ಪೇ ಲೇಟರ್ ಸೌಲಭ್ಯವು ಗ್ರಾಹಕರಿಗೆ ದೊಡ್ಡ ವೆಚ್ಚಗಳ ಹೊರೆಯನ್ನು  ಕಡಿಮೆ ಮಾಡಿ, ಬಡ್ಡಿ ರಹಿತ ಇಎಂಐಗಳನ್ನು ಆಯ್ಕೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದು ದೈನಂದಿನ ಅಗತ್ಯ ವಸ್ತುಗಳ ಖರೀದಿಯನ್ನು ಸರಳಗೊಳಿಸುತ್ತದೆ ಮತ್ತು ಹೆಚ್ಚು ಬೆಲೆಯ ಉತ್ಪನ್ನಗಳನ್ನು ಕೈಗೆಟುಕುವುಂತೆ ಮಾಡುತ್ತದೆ.

ಟಾಪ್ ನ್ಯೂಸ್

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

1-twin

Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

1-wqeewqe

Mumbai Indians ವಿರುದ್ಧ ತವರಿನ ಅಂಗಳ: ರಾಹುಲ್‌ಗೆ ಮಹತ್ವದ ಪಂದ್ಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

1-wqeqeqwewq

HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ

9-upi

Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

1-twin

Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.