ದಿಗ್ಗಜ ಐಟಿ ಕಂಪನಿಗಳ “ವರ್ಕ್‌ ಫ್ರಮ್‌ ಹೋಮ್”‌ ಅಂತ್ಯ?

ಟಿಸಿಎಸ್, ಇನ್ಫೋಸಿಸ್, ವಿಪ್ರೋಗಳಿಂದ ಹೊಸ ಮಾರ್ಗಸೂಚಿ.

Team Udayavani, Oct 25, 2021, 4:17 PM IST

IT companies

ನವದೆಹಲಿ: ದಿಗ್ಗಜ ಐಟಿ ಕಂಪನಿಗಳು ಕೋವಿಡ್-19 ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಸುಮಾರು ಒಂದೂವರೆ ವರ್ಷಗಳ ನಂತರ “ವರ್ಕ್‌ ಫ್ರಮ್‌ ಹೋಮ್”‌ ಅನ್ನು ನಿಧಾನವಾಗಿ ಸ್ಥಗಿತಗೊಳಿಸಿವೆ.

ಆದರೆ, ಟಿಸಿಎಸ್‌ ಮತ್ತು ವಿಪ್ರೋ ಉದ್ಯೋಗಿಗಳಿಗೆ “ವರ್ಕ್‌ ಫ್ರಮ್‌ ಹೋಮ್”ನ ಮಾದರಿಗಳನ್ನೇ ಕಛೇರಿಯಲ್ಲಿ ಮುಂದುವರಿಸಲು ಚಿಂತನೆಗಳು ನಡೆಯುತ್ತಿವೆ. ಹೆಚ್ಚಿನ ಕೆಲಸಗಾರರನ್ನು ಮತ್ತೆ ಕಛೇರಿಗೆ ಬರಮಾಡಿಕೊಳ್ಳುವ ನಿರ್ಧಾರಗಳಾಗಿವೆ. ಆದರೆ ಇನ್ಫೋಸಿಸ್‌ ತನ್ನ ಉದ್ಯೋಗಿಗಳ ಕೆಲಸದ ವಿಧಾನಗಳನ್ನು ಮನೆಯಿಂದಲೇ ಆಧುನಿಕ ಸ್ಪರ್ಶ ನೀಡಲು ನಿರ್ಧರಿಸಿದೆ.

“ಶೇ.95 ರಷ್ಟು ನಮ್ಮ ಉದ್ಯೋಗಿಗಳು ಕನಿಷ್ಠ ಒಂದು ಡೋಸ್‌ ಲಸಿಕೆ ಪಡೆದಿದ್ದಾರೆ ಇದರಲ್ಲಿ ಶೇ.70ರಷ್ಟು ಮಂದಿ ಪೂರ್ತಿಯಾಗಿ 2 ಡೋಸ್‌ ಲಸಿಕೆಗಳನ್ನೂ ಪಡೆದಿದ್ದಾರೆ. ಈ ವರ್ಷದ ಅಂತ್ಯಕ್ಕೆ ಎಲ್ಲಾ ಉದ್ಯೋಗಿಗಳೂ ಕೂಡ ಮತ್ತೆ ಕಚೇರಿಗೆ ಬಂದು ಕೆಲಸ ನಿರ್ವಹಿಸುವ ಬಗ್ಗೆ ಯೋಜನೆಗಳನ್ನು ಮಾಡುತ್ತಿದ್ದೇವೆ ” ಎಂದು ಟಿಸಿಎಸ್‌ ಕಂಪನಿಯ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಮಿಲಿಂದ್ ಲಕ್ಕಾಡ್ ತಿಳಿಸಿದರು. ಅವರು ಸೆಪ್ಟೆಂಬರ್‌ನಲ್ಲಿ ಕೊನೆಗೊಳ್ಳುವ ತ್ರೈಮಾಸಿಕದ ಗಳಿಕೆಯ ಬಗ್ಗೆ ಮಾಹಿತಿ ಪ್ರಕಟಿಸುವಾಗ ಈ ವಿಷಯವನ್ನು ತಿಳಿಸಿದರು .

2021 ರ ಕ್ಯಾಲೆಂಡರ್ ವರ್ಷದ ಅಂತ್ಯದ ವೇಳೆಗೆ ಉದ್ಯೋಗಿಗಳನ್ನು ಕಚೇರಿಗಳಿಗೆ ಮರಳಲು ಪ್ರೋತ್ಸಾಹಿಸುವುದಾಗಿ ಟಿಸಿಎಸ್ ಈ ಹಿಂದೆ ಹೇಳಿತ್ತು. ಸುಮಾರು 5 ಪ್ರತಿಶತ ಐಟಿಯ ಪ್ರಮುಖ ಉದ್ಯೋಗಿಗಳು ಅಕ್ಟೋಬರ್‌ ಆರಂಭದಿಂದ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.

“CY’21 (ಕ್ಯಾಲೆಂಡ್‌ ವರ್ಷ)ದ  ಅಂತ್ಯದ ವೇಳೆಗೆ, ’25/25′ ಹಾಜರಾತಿಯ ಮಾದರಿಯಲ್ಲಿ ಕೆಲಸದ ನಿರ್ವಹಣೆಯನ್ನು  ಬದಲಾಯಿಸುವ ಮೊದಲು ಕನಿಷ್ಠ ಆರಂಭದಲ್ಲಿ ಕಚೇರಿಗಳಿಗೆ ಮರಳಲು ನಾವು ನಮ್ಮ ಸಹವರ್ತಿಗಳನ್ನು ಪ್ರೋತ್ಸಾಹಿಸುತ್ತೇವೆ. ಈ ಮಾದರಿಯನ್ನು ಹಂತ ಹಂತವಾಗಿ ಮತ್ತು ಹೊಂದಿಕೊಳ್ಳುವ ರೀತಿಯಲ್ಲಿ ಕಾರ್ಯರೂಪಕ್ಕೆ ತರಲಾಗುತ್ತದೆ. ತಂಡದ ನಾಯಕರ ನೇತ್ರತ್ವದಲ್ಲಿ ಆಯಾಯ ಪ್ರೊಜೆಕ್ಟ್‌ಗಳು ಮತ್ತು ಅವುಗಳ ಅವಶ್ಯಕತೆಗಳಿಗನುಗುನವಾಗಿ ತಂಡಗಳನ್ನು ಯೋಜಿಸಲಾಗುವುದು  ಎಂದು ಟಿಸಿಎಸ್‌ ಕಂಪನಿಯು ತಿಳಿಸಿದೆ.

ಇದನ್ನೂ ಓದಿ:-  ವಾಕ್ಸಮರದ ಮಧ್ಯೆ ಮತದಾನಕ್ಕೆ ದಿನಗಣನೆ

ಈ ಮಾದರಿಯ ಪ್ರಕಾರ, 2025 ರ ವೇಳೆಗೆ, ಕಂಪನಿಯ ಶೇಕಡಾ 25 ಕ್ಕಿಂತ ಹೆಚ್ಚು ಉದ್ಯೋಗಿಗಳು ಯಾವುದೇ ಹಂತದಲ್ಲಿ ಕಚೇರಿಯಿಂದ ಕೆಲಸ ಮಾಡಬೇಕಾಗಿಲ್ಲ ಮತ್ತು ಉದ್ಯೋಗಿ ತಮ್ಮ ಸಮಯವನ್ನು ಕಚೇರಿಯಲ್ಲಿ 25 ಪ್ರತಿಶತಕ್ಕಿಂತ ಹೆಚ್ಚು ಕಳೆಯಬೇಕಾಗಿಲ್ಲ.

“18 ತಿಂಗಳ ದೀರ್ಘಕಾಲದ ನಂತರ, ನಮ್ಮ ನಾಯಕರು @Wipro ನಾಳೆ (ವಾರಕ್ಕೆ ಎರಡು ಬಾರಿ) ಕಚೇರಿಗೆ ಬರುತ್ತಿದ್ದಾರೆ. ಎಲ್ಲರಿಗೂ ಸಂಪೂರ್ಣವಾಗಿ ಲಸಿಕೆ ಹಾಕಲಾಗಿದೆ, ಎಲ್ಲಾ ಮುಂಜಾಗ್ರತಾ ಕ್ರಮಗಳೂ ಸಿದ್ಧವಾಗಿದೆ – ಸುರಕ್ಷಿತವಾಗಿ ಮತ್ತು ಸಾಮಾಜಿಕವಾಗಿ ಅಂತರಗಳ ಬಗ್ಗೆ ನಾವು ಸೂಕ್ಷ್ಮವಾಗಿ ಗಮನಿಸುತ್ತೇವೆ.” ಎಂದು ವಿಪ್ರೋ ಚೇರ್ಮನ್ ರಿಷಾದ್ ಪ್ರೇಮ್‌ಜಿ ಕಳೆದ ತಿಂಗಳು ಟ್ವಿಟರ್‌ನಲ್ಲಿ ಈ ಘೋಷಣೆಯನ್ನು ಮಾಡಿದ್ದರು.

ಇನ್ಫೋಸಿಸ್ ಕೂಡ ಮುಂದಿನ ದಿನಗಳಲ್ಲಿ ಹೈಬ್ರಿಡ್ ವರ್ಕ್ ಮಾಡೆಲ್ ಅನ್ನು ಅನುಸರಿಸಲು ಯೋಜಿಸುತ್ತಿದೆ. “ಭಾರತದಲ್ಲಿ ಶೇಕಡಾ 86 ರಷ್ಟು ಇನ್ಫೋಸಿಸ್ ಉದ್ಯೋಗಿಗಳು (Infoscions) ಕನಿಷ್ಠ ಒಂದು ಡೋಸ್ ‘ವ್ಯಾಕ್ಸಿನೇಷನ್’ ಅನ್ನು ಪಡೆದಿರುವುದರಿಂದ, ನಾವು ಈಗ ಹೈಬ್ರಿಡ್ ಕೆಲಸದ ಮಾದರಿಯನ್ನು ಅಳವಡಿಸಿಕೊಳ್ಳಲು ತಯಾರಿ ನಡೆಸುತ್ತಿದ್ದೇವೆ. ಉದ್ಯೋಗಿಗಳಿಗೆ ಉತ್ಪಾದಕತೆ, ಸೈಬರ್ ಸುರಕ್ಷತೆಯ ಜೊತೆಗೆ ಸಂಪರ್ಕದಲ್ಲಿರಲು ಕಾರ್ಯ ಯೋಜನೆ ರೂಪಿಸುತ್ತಿದ್ದೇವೆ.  ಕೆಲಸ ಮತ್ತು ಜೀವನ ಸಮತೋಲನವನ್ನು ಕಾಪಾಡಿಕೊಳ್ಳಲು ಬೇಕಾದ ಸಂಪನ್ಮೂಲಗಳನ್ನು ನಾವು ಸಜ್ಜುಗೊಳಿಸಿದ್ದೇವೆ. ನಮ್ಮ ಕಾರ್ಯತಂತ್ರವು ಹೊಸ ಉದ್ಯೋಗಿಗಳು ಮತ್ತು ಅವರ ಕೆಲಸದ ಸ್ಥಳಗಳ ನೀಯೋಜನೆಯ ಬಗ್ಗೆಯೂ ಈ ಯೋಜನೆಯಲ್ಲಿ ಒಳಗೊಂಡಿದೆ ಎಂದು ಇನ್ಫೋಸಿಸ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರವೀಣ್ ರಾವ್ ಹೇಳಿದರು.

ಟಾಪ್ ನ್ಯೂಸ್

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?

2

Bengaluru: ಬಿಸಿಲು; ಹೋಟೆಲ್‌ ವ್ಯಾಪಾರ ಶೇ.30 ಕುಸಿತ

Mahadev Betting App Case; Actor Sahil Khan arrested by Mumbai police

Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

1-wqeqeqwewq

HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ

9-upi

Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?

Bengaluru: ಬ್ರೇಕ್‌ ಬದಲು ಆ್ಯಕ್ಸಿಲೇಟರ್‌ ಒತ್ತಿದ ಆ್ಯಂಬುಲೆನ್ಸ್‌ ಚಾಲಕ: ಸರಣಿ ಅಪಘಾತ

Bengaluru: ಬ್ರೇಕ್‌ ಬದಲು ಆ್ಯಕ್ಸಿಲೇಟರ್‌ ಒತ್ತಿದ ಆ್ಯಂಬುಲೆನ್ಸ್‌ ಚಾಲಕ: ಸರಣಿ ಅಪಘಾತ

2

Bengaluru: ಬಿಸಿಲು; ಹೋಟೆಲ್‌ ವ್ಯಾಪಾರ ಶೇ.30 ಕುಸಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.