ಒನ್ ಪ್ಲಸ್ 7 ಸರಣಿ ; ಜಿಯೋ ಒನ್‌ಪ್ಲಸ್ 7 ಸರಣಿ ಬಿಯಾಂಡ್ ಸ್ಪೀಡ್ ಆಫರ್


Team Udayavani, May 14, 2019, 4:05 PM IST

One-plus-01

ಮುಂಬೈ: ಪ್ರಮುಖ ಪ್ರೀಮಿಯಂ ಸ್ಮಾರ್ಟ್‌ಫೋನ್ ತಯಾರಕ ಕಂಪನಿಯಾದ ಒನ್‌ಪ್ಲಸ್, ಪ್ರಪಂಚದ ಅತಿದೊಡ್ಡ ಮೊಬೈಲ್ ಡಾಟಾ ನೆಟ್‌ವರ್ಕ್‌ ಜಿಯೋ ಜೊತೆಗಿನ ಸಹಯೋಗವನ್ನು ಮುಂದುವರೆಸಿದ್ದು, ಒಂದು ವಿಸ್ತೃತ ಡಿಜಿಟಲ್ ಅನುಭವವನ್ನು ಮಿತಿಯಿಲ್ಲದ ವೇಗದ ಡೇಟಾದೊಂದಿಗೆ ಒನ್‌ಪ್ಲಸ್ ಮತ್ತು ಜಿಯೋ ಬಳಕೆದಾರರಿಗೆ ಗ್ರಾಹಕ ಸ್ನೇಹಿ ಕೊಡುಗೆಯೊಂದನ್ನು ನೀಡುತ್ತಿದೆ.

ಒನ್‌ಪ್ಲಸ್‌ 7 ಸರಣಿಯ ಸ್ಮಾರ್ಟ್‌ಫೋನ್ ಬಿಡುಗಡೆಯ ಸಂದರ್ಭದಲ್ಲಿ ತನ್ನ ಗ್ರಾಹಕರಿಗೆ ಒಂದು ಅನನ್ಯ ಆಫರ್ ನೀಡುವ ಸಲುವಾಗಿ ‘ಜಿಯೋ ಒನ್‌ಪ್ಲಸ್ 7  ಸೀರಿಸ್ ಬಿಯಾಂಡ್ ಸ್ಪೀಡ್ ಆಫರ್’ ಅನ್ನು ನೀಡಲು ಮುಂದಾಗಿದೆ. ಒನ್‌ಪ್ಲಸ್ 7, ಒನ್‌ಪ್ಲಸ್ 7 ಪ್ರೊ ಮತ್ತು ಜಿಯೋ ಬಳಕೆದಾರಿಗೆ ಈ ಆಫರ್ ಲಭ್ಯವಾಗಲಿದೆ.

ಬೆಂಗಳೂರು ಇಂಟರ್ ನ್ಯಾಶನಲ್ ಎಕ್ಸಿಬಿಶನ್ ಸೆಂಟರ್ ನಲ್ಲಿ  ಮೇ 14ರಂದು ರಾತ್ರಿ 8.15ಕ್ಕೆಒನ್‌ಪ್ಲಸ್ 7 ಸರಣಿಯನ್ನು ಲಾಂಚ್ ಮಾಡಲಿದೆ. ಕಾರ್ಯಕ್ರಮಕ್ಕೆ ಆಗಮಿಸಲು ಸಾಧ್ಯವಾಗದವರು, ಲೈವ್ ನಲ್ಲಿ ಕಾರ್ಯಕ್ರಮ ನೋಡಬಹುದಾಗಿದೆ.  

ಜಿಯೋ ಒನ್‌ಪ್ಲಸ್ 7 ಸರಣಿ ಬಿಯಾಂಡ್ ಸ್ಪೀಡ್ ಆಫರ್:

ಈ ಆಫರ್‌ನಲ್ಲಿ ಜಿಯೋ ಬಳಕೆದಾರರು 299 ರೂ.ಗೆ ಮೊದಲ ಪ್ರೀಪೇಯ್ಡ್‌ ರಿಚಾರ್ಜ್ ಮಾಡಿಸಿದರೆ 5,400 ರೂ. ತ್ವರಿತ ಕ್ಯಾಷ್‌ಬ್ಯಾಕ್ ದೊರೆಯಲಿದೆ. ಇದು ಮೈ ಜಿಯೋ ಆಪ್‌ನಲ್ಲಿ ಕಾಣಿಸಿಕೊಳ್ಳಲಿದ್ದು, 150 ರೂ. ಮೌಲ್ಯದ 36 ಕೂಪನ್‌ಗಳು ಬಳಕೆದಾರರಿಗೆ ದೊರೆಯಲಿದೆ. ಇದನ್ನು ಬಳಕೆದಾರರು ರೀಚಾರ್ಜ್ ಮಾಡಿಕೊಳ್ಳುವ ಸಂದರ್ಭದಲ್ಲಿ ಬಳಸಬಹುದಾಗಿದೆ. ಇದರಿಂದಾಗಿ ಗ್ರಾಹಕರಿಗೆ 299 ರೂ. ಮೌಲ್ಯದ ರೀಚಾರ್ಜ್‌ ಕೇವಲ 149 ರೂ.ಗೆ ದೊರೆಯಲಿದೆ.

ಈ ಯೋಜನೆಯು 4G ವೇಗದ 3GB  ಡೇಟಾವನ್ನು ಪ್ರತಿ ನಿತ್ಯ ನೀಡಲಿದ್ದು, ಈ ಆಫರ್ 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿರಲಿದೆ. ಅಲ್ಲದೇ ಅನಿಯಮಿತ ಕರೆಗಳು, ಎಸ್ಎಂಎಸ್ ಮತ್ತು ಜಿಯೋ ಟಿವಿ, ಜಿಯೋ ಸಿಮೆನಾ, ಜಿಯೋ ನ್ಯೂಸ್ ಮತ್ತು ಇತರಂತಹ ಜಿಯೋಗಳ ವಿಶೇಷ ಅಪ್ಲಿಕೇಶನ್‌ಗಳನ್ನು ಉಚಿತವಾಗಿ ಬಳಕೆ ಮಾಡಿಕೊಳ್ಳುವ ಅವಕಾಶವು ದೊರೆಯಲಿದೆ. ಇದರೊಂದಿಗೆ ಈ ಆಫರ್ ನಲ್ಲಿ ರೂ 3,900 ರೂ. ಮೌಲ್ಯದ ಹೆಚ್ಚುವರಿ ಪಾಲುದಾರ ಪ್ರಯೋಜನಗಳು ದೊರೆಯಲಿದೆ.

ಜೂಮ್‌ ಕಾರ್ ನಲ್ಲಿ ರೂ.2000 ಅಥವಾ 20% ವರೆಗೆ ಕಡಿತವನ್ನು, ಇಸಿ ಮೈಟ್ರಿಪ್ ನಲ್ಲಿ: ಫ್ಲೈಟ್ ಟಿಕೆಟ್ ಗಳು, ಹೋಟೆಲ್ ಬುಕಿಂಗ್ ನಲ್ಲಿ 1550 ರೂ. ಮತ್ತು ಬಸ್ ಬುಕಿಂಗ್ ನಲ್ಲಿ 15% ಕಡಿತವವನ್ನು ಮತ್ತು ಚಂಬಕ್ ನಲ್ಲಿ 1699 ರೂ. ವೆಚ್ಚ ಮಾಡಿದರೆ 350 ರೂ.  ರಷ್ಟು ಕಡಿತವನ್ನು ಪಡೆಯಬಹುದಾಗಿದೆ.

ಜಿಯೋ ಒನ್‌ಪ್ಲಸ್ 7 ಸೀರಿಸ್ ಸ್ಪೀಡ್ ಆಫರ್ ಬಿಯಾಂಡ್ ಆಫರ್ ಮತ್ತು ಒನ್‌ಪ್ಲಸ್ 7 ಸರಣಿ ಸಾಧನಗಳು: ಜಿಯೋ ಬಿಯಾಂಡ್ ಸ್ಪೀಡ್ ಆಫರ್ ಪಡೆಯಲು ಈಗಾಗಲೇ ಜಿಯೋ ಬಳಸುತ್ತಿರುವ ಗ್ರಾಹಕರು ಮತ್ತು ಹೊಸ ಜಿಯೋ ಬಳಕೆದಾರರು ಒನ್‌ಪ್ಲಸ್ 7 ಮತ್ತು ಒನ್‌ಪ್ಲಸ್ 7 ಪ್ರೊ ಸ್ಮಾರ್ಟ್‌ಪೋನ್ ಅನ್ನು ಮೇ 19, 2019 ನಂತರ ಖರೀದಿಸಬೇಕಾಗಿದೆ. ಖರೀದಿಸಿದ ನಂತರದಲ್ಲಿ ಈ ಯೋಜನೆಯ ಲಾಭವನ್ನು ಪಡೆಯಲು  www.jio.com, ರಿಲಯನ್ಸ್ ಡಿಜಿಟಲ್ ಅಂಗಡಿಗಳು, ಮೈಜಿಯೋ ಸ್ಟೋರ್ಸ್, ಜಿಯೋ ಚಿಲ್ಲರೆ ವ್ಯಾಪಾರಿಗಳು ಮತ್ತು ಮೈಜಿಯೊ ಅಪ್ಲಿಕೇಶನ್ ನಲ್ಲಿ ರೂ.299ಕ್ಕೆ ಮೊದಲ ರೀಚಾರ್ಜ್ ಮಾಡಿಸಿಕೊಳ್ಳಬೇಕಾಗಿದೆ. ನಂತರ ವೋಚರ್ ಮೂಲಕ ರಿಚಾರ್ಜ್ ಮಾಡಿಕೊಳ್ಳಲು MyJio ಆಪ್ ಬಳಕೆ ಮಾಡಿಕೊಳ್ಳಬೇಕಾಗಿದೆ. ಇಲ್ಲಿ ಮಾತ್ರವೇ ಕ್ಯಾಷ್ ಬ್ಯಾಕ್ ಲಾಭ ದೊರೆಯಲಿದೆ.

ನೆಟ್ವರ್ಕ್ ಲಾಭ: ಪ್ರಪಂಚದ ಅತಿದೊಡ್ಡ ಮೊಬೈಲ್ ಡಾಟಾ ನೆಟ್‌ವರ್ಕ್‌ ಆದ ಜಿಯೋ, ಭಾರತ ಮತ್ತು ಭಾರತೀಯರಿಗೆ ಹೊಸ ಅವಕಾಶವನ್ನು ಮಾಡಿಕೊಟ್ಟಿದೆ. ಜಿಯೋ ಇಂದು ವಿಶ್ವದ ಅತಿ ದೊಡ್ಡ ಮೊಬೈಲ್ ಡಾಟಾ ನೆಟ್ವರ್ಕ್ ಆಗಿದ್ದು, ದೇಶದಲ್ಲಿ ವೇಗವಾಗಿ ನೆಟ್ವರ್ಕ್ ಅನ್ನು ನೀಡುವುದರಲ್ಲಿ ಮುಂಚೂಣಿಯಲ್ಲಿದೆ. ಜಿಯೋ ಮುಂದುವರಿದ ತಂತ್ರಜ್ಞಾನದೊಂದಿಗೆ, ಹೆಚ್ಚಿನ ವೇಗ ಡೇಟಾ, ಉಚಿತ HD  ಧ್ವನಿ ಮತ್ತು ಪ್ರೀಮಿಯಂ ಕಂಟೆಟ್‌ ಅನ್ನು ನೀಡುತ್ತಿದೆ.

ಒನ್‌ಪ್ಲಸ್ 7 ಮತ್ತು ಒನ್‌ಪ್ಲಸ್ 7 ಪ್ರೊ ಬಳಕೆದಾರರು ಮಿತಿಯಿಲ್ಲದ ವೇಗದೊಂದಿಗೆ  ವೇಗದ ಡೇಟಾ ಅನುಭವವನ್ನು ಅನುಭವಿಸಲು ಮತ್ತು ಸಾಧನದ ನಿಜವಾದ ಸಾಮರ್ಥ್ಯವನ್ನು ತಿಳಿಯಲು ಜಿಯೋ ಸಹಾಯ ಮಾಡಲಿದೆ.  ಸರಿಸಾಟಿಯಿಲ್ಲದ ಅನುಭವವನ್ನು ಒದಗಿಸುವ ಪ್ಯಾನ್ ಇಂಡಿಯಾ 4 ಜಿ ಡೇಟಾ ಮತ್ತು ಧ್ವನಿ ಸೇವೆಗಳು (VoLTE) ಹೊಂದಿರುವ ಏಕೈಕ ನೆಟ್ವರ್ಕ್ ಜಿಯೋ ಆಗಿದೆ.

ಟಾಪ್ ನ್ಯೂಸ್

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

1-wqeqeqwewq

HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ

9-upi

Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.