ಅಚ್ಚರಿಯ ಬೆಳವಣಿಗೆ: ಗೂಗಲ್ ಪ್ಲೇಸ್ಟೋರ್ ನಿಂದ Paytm App ರಿಮೂವ್

Team Udayavani, Sep 18, 2020, 3:05 PM IST

paytm

ನವದೆಹಲಿ: ಪೇಮೆಂಟ್ ಆ್ಯಪ್ ಪೇಟಿಎಂ ಅಚ್ಚರಿ ಎಂಬಂತೆ ಗೂಗಲ್ ಪ್ಲೇ ಸ್ಟೋರ್ ನಿಂದ ಕಣ್ಮರೆಯಾಗಿದೆ. ಅದಾಗ್ಯೂ ಪೇಟಿಎಂ ಬ್ಯುಸಿನೆಸ್, ಪೇಟಿಎಂ ಮನಿ, ಪೇಟಿಎಂ ಮಾಲ್, ಮತ್ತು ಇತರ ಆ್ಯಪ್ ಗಳು ಪ್ಲೇಸ್ಟೋರ್ ನಲ್ಲಿ ಲಭ್ಯವಿದೆ.

One 97 Communication Ltd. ಪೇಟಿಎಂ ಮಾಲಿಕತ್ವವನ್ನು ಹೊಂದಿತ್ತು. ಇದೀಗ ಈ ಆ್ಯಪ್ ಗೂಗಲ್ ಪ್ಲೇ ಸ್ಟೋರ್ ನಿಂದ ರಿಮೂವ್ ಆಗಿದ್ದು ಆ್ಯಪಲ್ ಸ್ಟೋರ್ ನಲ್ಲಿ ಮಾತ್ರ ಲಭ್ಯವಿದೆ.

ಈ ಕುರಿತು ಟ್ವಿಟ್ಟರ್ ನಲ್ಲಿ ಸ್ಪಷ್ಟನೆ ನೀಡಿದ ಪೇಟಿಎಂ “ಪೇಟಿಎಂ ಆ್ಯಂಡ್ರಾಯ್ಡ್ ಆ್ಯಪ್ ತಾತ್ಕಲಿಕವಾಗಿ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿಲ್ಲ. ಮಾತ್ರವಲ್ಲದೆ ಯಾವುದೇ ಹೊಸ ಅಪ್ ಡೆಟ್ ಗಳು ಕೂಡ ದೊರಕುವುದಿಲ್ಲ. ಶೀಘ್ರದಲ್ಲಿ ವಾಪಾಸಾಗುತ್ತೇವೆ. ನಿಮ್ಮ ಎಲ್ಲಾ ಪಾವತಿ ಸೇವೆಗಳು ಸಂಪೂರ್ಣ ಭದ್ರವಾಗಿದೆ’ ಎಂದಿದೆ.

ಗೂಗಲ್ ಹೊಸ ನೀತಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಈ ಆ್ಯಪ್ ಅನ್ನು ತೆಗೆದುಹಾಕಲಾಗಿದೆ ಎಂದು ಪ್ರಾಥಮಿಕವಾಗಿ ತಿಳಿದುಬಂದಿದೆ.

ಕೆಲವೊಂದು ಸಂಭಾವ್ಯ ಹಾನಿಯಿಂದ ಬಳಕೆದಾರರನ್ನು ರಕ್ಷಿಸಲು ಹೊಸ ನೀತಿಗಳನ್ನು ಜಾರಿಗೆ ತರಲಾಗಿದೆ. ಯಾವುದೇ ಅಪ್ಲಿಕೇಶನ್ ಗಳು ಈ ನೀತಿಗಳನ್ನು ಉಲ್ಲಂಘಿಸಿದಾಗ, ಅದರ ಡೆವಲಪರ್‌ಗೆ ಮಾಹಿತಿ ನೀಡುತ್ತೇವೆ.  ಆದರೇ ಆ್ಯಪ್ ಡೆವಲಪರ್ ಗಳು ಈ ನೀತಿಗಳನ್ನು ಅನುಸರಿಸದಿದ್ದರೇ ಪ್ಲೇಸ್ಟೋರ್ ನಿಂದ ಅವನ್ನು ತೆಗೆದುಹಾಕಲಾಗುವುದು. ಹೊಸ ನೀತಿಗಳನ್ನು ಅಳವಡಿಸಿಕೊಂಡರೇ ಮಾತ್ರ ಅಂತಹ ಆ್ಯಪ್ ಗಳಿಗೆ ಪ್ಲೇಸ್ಟೋರ್ ನಲ್ಲಿ ಜಾಗವಿರುತ್ತದೆ. ಅದಾಗ್ಯೂ 2ನೇ ಬಾರಿ ಗೂಗಲ್ ನಿಯಮ ಉಲ್ಲಂಘಿಸಿದರೇ ಹೆಚ್ಚು ಗಂಭೀರವಾದ ಕ್ರಮವನ್ನು ಕೈಗೊಳ್ಳುತ್ತೇವೆ ಎಂದು ಗೂಗಲ್ ಆ್ಯಂಡ್ರಾಯ್ಡ್ ಸೆಕ್ಯೂರಿಟಿ ಮತ್ತು ಪ್ರೈವಸಿಯ ಉಪಾಧ್ಯಕ್ಷ ಸುಝಾನೆ ಫ್ರೇ ತಿಳಿಸಿದ್ದಾರೆ.

ಆನ್ ಲೈನ್ ಕ್ಯಾಸಿನೋ ಮತ್ತು ಜೂಜು ಅಥವಾ ಸ್ಪೋರ್ಟ್ಸ್ ಬೆಟ್ಟಿಂಗ್ ಕುರಿತಾದ ಆ್ಯಪ್ ಗಳನ್ನು ಗೂಗಲ್ ಪ್ರೋತ್ಸಾಹಿಸುವುದಿಲ್ಲ.  ಇಂತಹ ಆ್ಯಪ್ ಗಳ  ಜಾಹೀರಾತು ಅಥವಾ ಲಿಂಕ್ ಹಂಚಿಕೊಳ್ಳುವುದು ಹಾಗೂ ಥರ್ಢ್ ಪಾರ್ಟಿ ಆ್ಯಪ್ ಗಳಿಗೆ ಬಳಕೆದಾರರನ್ನು ಸೆಳೆಯುವುದು ಗೂಗಲ್ ಪಾಲಿಸಿಯ ಉಲ್ಲಂಘನೆಯಾಗುತ್ತದೆ ಎಂದು ಸುಝಾನೆ ತಿಳಿಸಿದ್ದಾರೆ.

ಈ ಕಾರಣಕ್ಕಾಗಿ ಪೇಟಿಎಂ ಅಪ್ಲಿಕೇಶನ್ ನನ್ನು ರಿಮೂವ್ ಮಾಡಲಾಗಿದೆ. ಪೇಟಿಎಂ ಭಾರತೀಯ ಮೂಲದ ಕಂಪೆನಿ One 97 Communication Ltd. ಮಾಲಿಕತ್ವವನ್ನು ಹೊಂದಿದ್ದು, ವಿಜಯ್ ಶಂಕರ್ ಶರ್ಮಾ ಇದರ ಸಂಸ್ಥಾಪಕರಾಗಿದ್ದಾರೆ. ಈ ಕಂಪೆನಿ ಚೀನಾದ ಆಲಿಬಾಬ ಗ್ರೂಪ್ ನ ಮಿತ್ರ ಸಂಸ್ಥೆ  fintech firm Ant Financials ನಿಂದ ಭಾರೀ ಹಣವನ್ನು ಪಡೆದಿದೆ ಎಂದು ವರದಿಯಾಗಿದೆ.

ಟಾಪ್ ನ್ಯೂಸ್

Crime: ನಿಶ್ಚಿತಾರ್ಥವಾಗಿದ್ದ ಸೊಸೆಯನ್ನೇ ಹತ್ಯೆಗೈದ ಮಾವ

Crime: ನಿಶ್ಚಿತಾರ್ಥವಾಗಿದ್ದ ಸೊಸೆಯನ್ನೇ ಹತ್ಯೆಗೈದ ಮಾವ

Arrested: 3 ಕೋಟಿ ರೂ. ನಕಲಿ ಡೈಮಂಡ್‌ ತೋರಿಸಿ ವಂಚನೆಗೆ ಯತ್ನ; 4 ಸೆರೆ

Arrested: 3 ಕೋಟಿ ರೂ. ನಕಲಿ ಡೈಮಂಡ್‌ ತೋರಿಸಿ ವಂಚನೆಗೆ ಯತ್ನ; 4 ಸೆರೆ

Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್‌ ಗೆ RLJP ಮುಖಂಡ ಪರಾಸ್‌ ರಾಜೀನಾಮೆ

Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್‌ ಗೆ RLJP ಮುಖಂಡ ಪರಾಸ್‌ ರಾಜೀನಾಮೆ

ಮಗಳ ಸಾವಿಗೆ ನೀವೇ ಕಾರಣವೆಂದು ಗಂಡನ ಮನೆಗೆ ಬೆಂಕಿಯಿಟ್ಟ ಕುಟುಂಬಸ್ಥರು: ಅತ್ತೆ – ಮಾವ ಮೃತ್ಯು

ಮಗಳ ಸಾವಿಗೆ ನೀವೇ ಕಾರಣವೆಂದು ಗಂಡನ ಮನೆಗೆ ಬೆಂಕಿಯಿಟ್ಟ ಕುಟುಂಬಸ್ಥರು: ಅತ್ತೆ – ಮಾವ ಮೃತ್ಯು

4-dandeli

Dandeli: ಯಂತ್ರದಡಿ ಸಿಲುಕಿದ ಕಾರ್ಮಿಕ: ಕಾಲುಗಳಿಗೆ ಗಂಭೀರ ಗಾಯ

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewe

Nothing ಫೋನ್ (2ಎ), ನಥಿಂಗ್ಸ್ ಬಡ್ಸ್ ಮತ್ತು ನೆಕ್‌ಬ್ಯಾಂಡ್ ಪ್ರೋ ಬಿಡುಗಡೆ

1-wqeqwe

Flipkart ನಿಂದ ಯುಪಿಐ ಹ್ಯಾಂಡಲ್ ಆರಂಭ

1-weqweqweqwe

Boult Z40 Ultra TWS ಬಿಡುಗಡೆ: ಅತ್ಯುತ್ತಮ ಗುಣಮಟ್ಟದ ಸೌಂಡ್

1 ಮಿಲಿಯನ್ ಮಾರಾಟ ಕಂಡ ಭಾರತೀಯ ಬ್ರಾಂಡ್ ಇಯರ್ ಬಡ್ ಯಾವುದಿದು?

1 ಮಿಲಿಯನ್ ಮಾರಾಟ ಕಂಡ ಭಾರತೀಯ ಬ್ರಾಂಡ್ ಇಯರ್ ಬಡ್ ಯಾವುದಿದು?

18

ಅಧಿಕ ಹೃದಯ ಬಡಿತದ ಸೂಚನೆ ನೀಡಿದ ಆಪಲ್ ವಾಚ್: ಅಪಾಯದಿಂದ ಪಾರಾದ ಬೆಂಗಳೂರಿನ ಟೆಕಿ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

8-wenlock

Wenlockನಲ್ಲಿ ಮೂಲಸೌಕರ್ಯ ಕೊರತೆ; ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಪೊಲೀಸ್‌ಗೆ ದೂರು

Crime: ನಿಶ್ಚಿತಾರ್ಥವಾಗಿದ್ದ ಸೊಸೆಯನ್ನೇ ಹತ್ಯೆಗೈದ ಮಾವ

Crime: ನಿಶ್ಚಿತಾರ್ಥವಾಗಿದ್ದ ಸೊಸೆಯನ್ನೇ ಹತ್ಯೆಗೈದ ಮಾವ

7-mng

ಚೆಂಡೆ ಬಡಿಯುತ್ತ ಬಂದು ತಂಡದಿಂದ ಪ್ರಶ್ನೆ: ಚಕಮಕಿ, ದೂರು ದಾಖಲು

Arrested: 3 ಕೋಟಿ ರೂ. ನಕಲಿ ಡೈಮಂಡ್‌ ತೋರಿಸಿ ವಂಚನೆಗೆ ಯತ್ನ; 4 ಸೆರೆ

Arrested: 3 ಕೋಟಿ ರೂ. ನಕಲಿ ಡೈಮಂಡ್‌ ತೋರಿಸಿ ವಂಚನೆಗೆ ಯತ್ನ; 4 ಸೆರೆ

6-mng

Nandini Brand: 50 ಐಸ್‌ ಕ್ರೀಂ ಮಾರುಕಟ್ಟೆಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.