ಪೆಬ್ಬಲ್ ಫ್ರಾಸ್ಟ್ ಸ್ಮಾರ್ಟ್‌ವಾಚ್ ಬಿಡುಗಡೆ; ಫಿಟ್ನೆಸ್ ಮತ್ತು ಹೆಲ್ತ್ ಟ್ರ್ಯಾಕಿಂಗ್ ಸೌಲಭ್ಯ
Team Udayavani, Dec 8, 2022, 8:00 AM IST
ಭಾರತದಲ್ಲಿ ಪೆಬ್ಬಲ್ ಫ್ರಾಸ್ಟ್ ಸ್ಮಾರ್ಟ್‌ವಾಚ್ ಬಿಡುಗಡೆಯಾಗಿದೆ. ಇದು ಬ್ಲೂಟೂತ್ ಕಾಲಿಂಗ್ ವ್ಯವಸ್ಥೆ ಹಾಗೂ 1.87 ಇಂಚು ಐಪಿಎಸ್ ಟಚ್ ಸ್ಕ್ರೀನ್ ಹೊಂದಿದೆ. ಅದರ ಬೆಲೆ 1,999 ರೂ. ಇದ್ದು, ಫ್ಲಿಫ್ಕಾರ್ಟ್ ಮೂಲಕ ಇದನ್ನು ಖರೀದಿಸಬಹುದಾಗಿದೆ.
ಕಪ್ಪು, ನೀಲಿ, ಬೂದು ಮತ್ತು ಕಿತ್ತಳೆ ಬಣ್ಣಗಳಲ್ಲಿ ಸ್ಮಾರ್ಟ್‌ವಾಚ್ ಲಭ್ಯವಿದೆ. ಆ್ಯಪಲ್ ಸ್ಮಾರ್ಟ್‌ವಾಚ್ ತದ್ರೂಪಿಯಂತೆ ಕಾಣುವ ಇದರಲ್ಲಿ ಕ್ಯಾಮೆರಾ ಕಂಟ್ರೋಲ್, ಮ್ಯೂಸಿಕ್ ಕಂಟ್ರೋಲ್, ಕ್ಯಾಲೆಂಡರ್, ಕ್ಯಾಲ್ಕುಲೇಟರ್ ಇದೆ. ಜತೆಗೆ ಫಿಟ್ನೆಸ್ ಮತ್ತು ಹೆಲ್ತ್ ಟ್ರ್ಯಾಕಿಂಗ್ ಸೌಲಭ್ಯವಿದೆ.