Sony Float Run: ಓಟ, ವಾಕಿಂಗ್, ಜಿಮ್ ಮಾಡುವವರಿಗೆ ವಿನ್ಯಾಸಗೊಳಿಸಿದ ಹೆಡ್ ಫೋನ್

Team Udayavani, Mar 20, 2024, 9:32 PM IST

1-qweewqe

ಇಯರ್ ಫೋನ್, ಇಯರ್ ಬಡ್, ಸ್ಪೀಕರ್ ಗಳ ಮಾರುಕಟ್ಟೆಯಲ್ಲಿ ತನ್ನದೇ ಸ್ಥಾನ ಗಳಿಸಿರುವ ಸೋನಿ ಕಂಪೆನಿ, ಓಟ, ಸೈಕ್ಲಿಂಗ್, ಹೈಕಿಂಗ್, ಜಿಮ್ ಮಾಡುವವರಿಗಾಗಿ ವಿಶೇಷ ವಿನ್ಯಾಸದ ಫ್ಲೋಟ್ ರನ್ ಹೆಡ್ ಫೊನ್ ಹೊರತಂದಿದೆ.

ವಾಕಿಂಗ್, ಓಟದಲ್ಲಿ ತೊಡಗಿರುವವರು, ಸಾಂಪ್ರದಾಯಿಕ ಇಯರ್ ಬಡ್, ನೆಕ್ ಬ್ಯಾಂಡ್ ಧರಿಸಿದ್ದರೆ, ಸುತ್ತಮುತ್ತಲ ಶಬ್ದ ಕೇಳದೇ ಅವಘಡಗಳಾಗಿರುವ ಘಟನೆಗಳನ್ನು ನೋಡಿದ್ದೇವೆ. ಅಂಥವರಿಗಾಗಿಯೇ ಕಿವಿಯ ಕೊಳವೆಯ ಒಳಗೆ ಹೋಗದೇ ಒಂದು ಅಂತರದಲ್ಲೇ ಇರುವಂತೆ ವಿನ್ಯಾಸ ಮಾಡಲಾದ ನೂತನ ಶೈಲಿಯ ಹೆಡ್ ಫೋನ್ ಇದು. ಇದರ ದರ 10,990 ರೂ. ಇದ್ದು, ಪ್ರಸ್ತುತ ಅಮೆಜಾನ್ನಲ್ಲಿ 9,990 ರೂ. ಗೆ ಲಭ್ಯ.

ವಿನ್ಯಾಸ: ಫ್ಲೋಟ್ ರನ್ ನೆಕ್ ಬ್ಯಾಂಡ್ ಮಾದರಿಯ ಹೆಡ್ ಫೋನ್ ಇದನ್ನು ನಮ್ಮ ತಲೆ ಮತ್ತು ಕಿವಿಯ ಮಧ್ಯೆ ಕನ್ನಡಕದಂತೆ ಕೂರುವಂತೆ ವಿನ್ಯಾಸ ಮಾಡಲಾಗಿದ್ದು, ಹೆಡ್ ಫೋನ್ ಸ್ಪೀಕರ್ ಗಳು ಕಿವಿಯಿಂದ ಸ್ವಲ್ಪ ಮೇಲೆ, ಕಿವಿಗೆ ಸ್ಪರ್ಶವಾಗದಂತೆ ತುಸು ಅಂತರದಲ್ಲಿರುತ್ತವೆ. ಕನ್ನಡಕದಂಥ ಕೊಕ್ಕೆಗಳ ಪ್ರತಿ ಬದಿಯಲ್ಲಿ ಒಂದು ಡೈನಾಮಿಕ್ ಡ್ರೈವರ್ ಇದೆ, ನಿಮ್ಮ ಕಿವಿ ಕಾಲುವೆಯಿಂದ ಸುಮಾರು 1 ಸೆಂ.ಮೀ ದೂರದಲ್ಲಿ ತೇಲುವಂತೆ ಇರಿಸಲಾಗಿದೆ. ಇದರಿಂದ ನಿಮ್ಮ ಕಿವಿ ಕಾಲುವೆಗಳನ್ನು ಸಂಪೂರ್ಣವಾಗಿ ತೆರೆದುಕೊಳ್ಳುತ್ತವೆ. ಪರಿಸರದ ಶಬ್ದವು ಕಿವಿ ಪ್ರವೇಶಿಸಲು ಅಡ್ಡಿ ಮಾಡುವುದಿಲ್ಲ.

ಪ್ರತಿ ಇಯರ್ ಹುಕ್ ನ ತುದಿಯಲ್ಲಿ ದೊಡ್ಡ ವೃತ್ತಾಕಾರದ ಚಾಸಿಸ್ 16mm ಡೈನಾಮಿಕ್ ಡ್ರೈವರ್ ಗಳನ್ನು ಹೊಂದಿರುತ್ತದೆ ಮತ್ತು ಬಲಭಾಗದಲ್ಲಿ ಪ್ಲೇಬ್ಯಾಕ್ ನಿಯಂತ್ರಣಗಳನ್ನು ಹೊಂದಿದೆ. 32g ತೂಕವಿದೆ.
ಓಟಗಾರರು ಮತ್ತು ಜಿಮ್ ಪ್ರಿಯರಿಗೆ ಅನುಕೂಲವಾಗುವಂತೆ ಫ್ಲೋಟ್ ರನ್ IPX4 ರೇಟಿಂಗ್ ಅನ್ನು ಬೆಂಬಲಿಸುತ್ತದೆ, ನೀರಿನ ಮತ್ತು ಬೆವರುವಿಕೆಯನ್ನು ತಡೆದುಕೊಳ್ಳುತ್ತದೆ.

ಹೆಡ್ ಫೋನ್ ನ  ಬಲ ಕಿವಿಯ ಹುಕ್ ನಲ್ಲಿ ಪ್ಲೇಬ್ಯಾಕ್ ಕಂಟ್ರೋಲ್ ಮಾಡುವ ಮೂರು ಬಟನ್ ಗಳಿವೆ. ಇದರಿಂದ ಧ್ವಿನಿ ಹೆಚ್ಚು ಕಡಿಮೆ ಮತ್ತು ಕರೆ ಸ್ವೀಕರಿಸಬಹುದಾಗಿದೆ.

ಧ್ವನಿ ಗುಣಮಟ್ಟ

ಇದು ಓಟಗಾರರ ಅನುಕೂಲಕ್ಕಾಗಿಯೇ ರೂಪಿಸಲಾಗಿರುವ ಹೆಡ್ ಫೋನ್. ಹೊರಗಿನ ಶಬ್ದವೂ ಕೇಳಿಸಬೇಕು. ಸಂಗೀತವನ್ನೂ ಆಲಿಸಬೇಕು ಎಂಬ ಉದ್ದೇಶದಿಂದ ತಯಾರಿಸಲಾಗಿದೆ. ಕಿವಿಯ ಕಾಲುವೆ ಒಳಗೆ ಕೂರುವ ಬಡ್ಗಳಲ್ಲಿ ಬರುವ ಸಂಗೀತ ಆಲಿಕೆಯ ಗುಣಮಟ್ಟವನ್ನು ನಿರೀಕ್ಷಿಸುವಂತಿಲ್ಲ. ಆದರೂ ಒಂದು ಮಟ್ಟಕ್ಕೆ ಸಂಗೀತ ಹಾಡು ಎಫ್ ಎಂ ಇತ್ಯಾದಿ ಕೇಳಲು ಸಾಕು. ಸೌಂಡ್ ಸಿಗ್ನೇಚರ್ ಅಕಾಸ್ಟಿಕ್, ಕ್ಲಾಸಿಕಲ್, ಜಾಝ್ ಮತ್ತು ಪಾಡ್ಕಾಸ್ಟ್ ಗಳಂತಹವುಗಳನ್ನು ಕೇಳಬಹುದು.

ಮೈಕ್ರೊಫೋನ್

ಇದರಲ್ಲಿ ಮೈಕ್ರೊಫೋನ್ ಚೆನ್ನಾಗಿದೆ. ಅತ್ತ ಕಡೆಯವರಿಗೆ ನಮ್ಮ ಧ್ವನಿ ಸ್ಪಷ್ಟವಾಗಿ ಕೇಳಿಸುತ್ತದೆ. ಕಿವಿಯೊಳಗೆ ಬಡ್ಗಳಿದ್ದರೆ ಕಿರಿಕಿರಿಯಾಗುತ್ತದೆ ಎನ್ನುವವರಿಗೆ ಇದು ಸೂಕ್ತವಾಗಿದೆ. ನಾವು ಇತರ ಕೆಲಸಗಳಲ್ಲಿ ತೊಡಗಿರುವಾಗ ಹ್ಯಾಂಡ್ಸ್ ಫ್ರೀ ಆಗಿ ಮಾತನಾಡಲು ಬಳಸಬಹುದು.

ಬ್ಯಾಟರಿ: ಸರಿಸುಮಾರು 10 ಗಂಟೆಗಳ ನಿರಂತರ ಪ್ಲೇಬ್ಯಾಕ್ ಮಾಡಬಹುದು.USB-C ತ್ವರಿತ ಚಾರ್ಜ್ ಮಾಡಬಹುದು. ಪೂರ್ಣ ಚಾರ್ಜಾಗಲು ಸುಮಾರು 1.5 ಗಂಟೆ ತೆಗೆದುಕೊಳ್ಳುತ್ತದೆ.

-ಕೆ.ಎಸ್. ಬನಶಂಕರ ಆರಾಧ್ಯ

ಟಾಪ್ ನ್ಯೂಸ್

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

“ನಾನು ಬಟ್ಟೆ ಬದಲಾಯಿಸುವಾಗ ಬಾಗಿಲು..” ನಿರ್ಮಾಪಕರ ಕಿರುಕುಳದ ಬಗ್ಗೆ ಮೌನ ಮುರಿದ ನಟಿ

“ನಾನು ಬಟ್ಟೆ ಬದಲಾಯಿಸುವಾಗ ಬಾಗಿಲು..” ನಿರ್ಮಾಪಕರ ಕಿರುಕುಳದ ಬಗ್ಗೆ ಮೌನ ಮುರಿದ ನಟಿ

20

State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

19

Shahapura: ಎರಡು ಕೆಟ್ಟ ಕಾನೂನು ಜಾರಿಗೆ ಕಾಂಗ್ರೆಸ್ ಸಿದ್ಧತೆ: ಯತ್ನಾಳ ಆರೋಪ

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

1-wqeqeqwewq

HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ

9-upi

Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್

Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್

“ನಾನು ಬಟ್ಟೆ ಬದಲಾಯಿಸುವಾಗ ಬಾಗಿಲು..” ನಿರ್ಮಾಪಕರ ಕಿರುಕುಳದ ಬಗ್ಗೆ ಮೌನ ಮುರಿದ ನಟಿ

“ನಾನು ಬಟ್ಟೆ ಬದಲಾಯಿಸುವಾಗ ಬಾಗಿಲು..” ನಿರ್ಮಾಪಕರ ಕಿರುಕುಳದ ಬಗ್ಗೆ ಮೌನ ಮುರಿದ ನಟಿ

20

State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.