iPhone 15 Plus: ಏನೇನಿದೆ ಇದರಲ್ಲಿ ಪ್ಲಸ್ ಪಾಯಿಂಟ್?


Team Udayavani, Nov 7, 2023, 9:52 AM IST

4-iphone-plus

ಆಪಲ್ ಇತ್ತೀಚಿಗೆ ಬಿಡುಗಡೆ ಮಾಡಿದ ಐಫೋನ್ 15 ಸರಣಿಯ ಫೋನ್ ಗಳಲ್ಲಿ ಐಫೋನ್ 15 ಪ್ಲಸ್ ನ ವಿಶೇಷಣಗಳ ವಿಶ್ಲೇಷಣೆ ಇಲ್ಲಿದೆ. 15 ರ ಸರಣಿಯಲ್ಲಿ ಐಫೋನ್ 15 ಮಾದರಿ 6.1 ಇಂಚಿನ ಪರದೆ ಹೊಂದಿದ್ದರೆ, 15 ಪ್ಲಸ್ ಮಾದರಿ 6.7 ಇಂಚಿನ ಪರದೆ ಹೊಂದಿದೆ. ಕೆಲವರಿಗೆ 6.1 ಇಂಚಿನ ಪರದೆ ಚಿಕ್ಕದು ಎನಿಸಬಹುದು. ಅಂಥವರಿಗಾಗಿ 15 ಪ್ಲಸ್ ಮಾದರಿ ಇದೆ.

15 ಮಾದರಿ 171 ಗ್ರಾಂ ತೂಕ ಇದ್ದರೆ 15 ಪ್ಲಸ್ ಮಾದರಿ 201 ಗ್ರಾಂ ತೂಕ ಹೊಂದಿದೆ. ಐಫೋನ್ 15 ದರ 79,900 ರೂ.ಗಳಿಂದ ಶುರುವಾದರೆ, 15 ಪ್ಲಸ್ ನ ಆರಂಭಿಕ ದರ 89,900 ರೂ.

ವಿನ್ಯಾಸ: ಐಫೋನ್ 15 ಪ್ಲಸ್  201 ಗ್ರಾಂ ತೂಕ ಹೊಂದಿದೆ. ಪ್ರೊ ಮಾದರಿಯಲ್ಲಿ ಟೈಟಾನಿಯಂ ಚೌಕಟ್ಟು ಇದ್ದರೆ, ಇದರಲ್ಲಿ ಅಲ್ಯೂಮಿನಿಯಂ  ಚೌಕಟ್ಟಿದೆ. ಫೋನ್ ಸ್ಲಿಮ್ ಆಗಿದೆ. ಅಲ್ಯುಮಿನಿಯಂ ಫ್ರೇಂ ಫೋನಿನ ಅಂದ ಹೆಚ್ಚಿಸಿದೆ. ಫೋನಿನ ಎಡಬದಿಯಲ್ಲಿ ಧ್ವನಿ ಕಡಿಮೆ ಮತ್ತು ಹೆಚ್ಚು ಮಾಡುವ ಬಟನ್ ಗಳಿವೆ. ಅವುಗಳ ಮೇಲೆ ಆಕ್ಷನ್ ಬಟನ್ ಇದೆ. ಇದನ್ನು ಸ್ಲೈಡ್ ಮಾಡಿದರೆ ಫೋನ್ ಸೈಲೆಂಟ್ ಅಥವಾ ರಿಂಗ್ ಮೋಡ್ ಗೆ ನಿಲ್ಲಿಸಿಕೊಳ್ಳಬಹುದು. ಇದರಿಂದ ಮೀಟಿಂಗ್ ಮತ್ತಿತರ ಕಡೆ ಫೋನನ್ನು ತುಂಬಾ ಸುಲಭವಾಗಿ ಸೈಲೆಂಟ್ ಪ್ರೊಫೈಲ್ಗೆ ನಿಲ್ಲಿಸಿಕೊಳ್ಳಬಹುದಾಗಿದ್ದು, ಅನುಕೂಲಕರವಾಗಿದೆ ಮತ್ತು ಈ ಬಟನ್ ಅನ್ನು ನೊಟಿಫಿಕೇಷನ್ ಸೈಲೆಂಟ್ ಮಾಡಲು, ಕ್ಯಾಮರಾ, ಟಾರ್ಚ್, ವಾಯ್ಸ್ ರೆಕಾರ್ಡ್, ಮ್ಯಾಗ್ನಿಫೈರ್ ಸೇರಿ ವಿವಿಧ ಆಪ್ ನ ಕಾರ್ಯಾಚರಣೆಯ ಬಟನ್ ಆಗಿಯೂ ಸೆಟ್ ಮಾಡಿಕೊಳ್ಳಬಹುದು. ಎಡಬದಿಯ ಕೆಳಭಾಗದಲ್ಲಿ ಸಿಮ್ ಹಾಕುವ ಟ್ರೇ ಇದೆ. ಫೋನಿನ ಬಲಭಾಗದ ಮೇಲೆ ಆನ್ ಆಫ್ ಬಟನ್ ಇದೆ. ಇನ್ನು ತಳಭಾಗದಲ್ಲಿ ಸಿ ಟೈಪ್ ಪೋರ್ಟ್ ಮತ್ತು ಮೈಕ್ ಮತ್ತು ಸ್ಪೀಕರ್ ಗ್ರಿಲ್ ಗಳಿವೆ.

ಫೋನಿನ ಹಿಂಭಾಗ ಎಡಮೂಲೆಯಲ್ಲಿ ಎರಡು ಲೆನ್ಸ್ ಹೊಂದಿರುವ ಕ್ಯಾಮರಾ ಇದೆ. ಇದು ಉಬ್ಬಿದೆ. ಹೀಗಾಗಿ ಫೋನನ್ನು ಟೇಬಲ್ ಮೇಲಿಟ್ಟಾಗ ಫೋನಿನ ಮೇಲ್ಭಾಗ ಎದ್ದುಕೊಳ್ಳುತ್ತದೆ. ಫೋನಿನ ಹಿಂಬದಿ ಗಾಜಿನ ದೇಹ ಹೊಂದಿದೆ. ಮಧ್ಯದಲ್ಲಿ ಆಪಲ್ನ ಕಚ್ಚಿದ ಸೇಬಿನ ಲೋಗೋ ಇದೆ. ಒಟ್ಟಾರೆ ಫೋನನ್ನು ಯಾವುದೇ ಬ್ಯಾಕ್ ಕವರ್ ಹಾಕದೆ ಕೈಯಲ್ಲಿ ಹಿಡಿದಾಗ ಬಹಳ ಸ್ಲೀಕ್ ಆಗಿ, ಸುಂದರವಾಗಿ ಕಾಣುತ್ತದೆ. ಫೋನ್ ಗಳನ್ನು ಯಾವುದೇ ಬ್ಯಾಕ್ ಕವರ್, ಫ್ಲಿಪ್ ಕವರ್ ಇಲ್ಲದೇ ಬಳಸಲು ಚೆನ್ನಾಗಿರುತ್ತದೆ. ಆದರೆ ಅಕಸ್ಮಾತ್ ಕೈ ಜಾರಿ ಬಿದ್ದರೆ ಒಡೆದು ಹೋಗುತ್ತವೆ ಎಂಬ ಕಾರಣಕ್ಕೆ ಕವರ್ ಗಳನ್ನು ಬಳಸಬೇಕಾಗುತ್ತದೆ. ಈ ಕವರ್ ಗಳು ಫೋನುಗಳ ಅಂದವನ್ನು ಮರೆಮಾಚುತ್ತವೆ ಮಾತ್ರವಲ್ಲದೇ, ಫೋನನ್ನು ದಪ್ಪವಾಗಿಸುತ್ತವೆ!

ಪರದೆ: ಐಫೋನ್ 15 ಪ್ಲಸ್  6.7 ಇಂಚಿನ ಓಎಲ್ಇಡಿ ಪರದೆ ಹೊಂದಿದೆ.  ಐಫೋನಿನ ಓಎಲ್ಇಡಿ ಪರದೆ ಬೇರೆ ಫೋನುಗಳ ಪರದೆಗಿಂತ ಪ್ರತ್ಯೇಕವಾಗಿ ನಿಲ್ಲುತ್ತದೆ. ಕಣ್ಣಿಗೆ ಆಯಾಸವಾಗದ ಮಂದ ಬೆಳಕಿನಂಥ ಎಲ್ ಇ ಡಿ ಪರದೆ ಖುಷಿ ಕೊಡುತ್ತದೆ. ಪರದೆ ಫ್ರೇಮಿನವರೆಗೂ ಇದ್ದು, ಸಣ್ಣ ದಾರದ ಎಳೆಯಂಥ ಬೆಜೆಲ್ ಇದೆ.  ಈ ಬೆಜೆಲ್ ಫೋನಿನ ಮೇಲಾಗಲೀ, ತಳಭಾಗದಲ್ಲಾಗಲೀ, ದಪ್ಪವಾಗದೇ ಎಲ್ಲ ನಾಲ್ಕು ಕಡೆಗಳಲ್ಲೂ ಒಂದೇ ಅಳತೆಯಲ್ಲಿರುವುದರಿಂದ ಫೋನಿನ ಪರದೆಯ ವಿನ್ಯಾಸ ಆಕರ್ಷಕವಾಗಿ ಕಾಣುತ್ತದೆ.

ಐಫೋನ್ ನ ವಿಶೇಷತೆಗಳಲ್ಲೊಂದಾದ ಡೈನಾಮಿಕ್ ಐಲ್ಯಾಂಡ್ ಎಂಬ ಹೆಸರಿನ ಉದ್ದದಾದ ಕಿಂಡಿಯನ್ನು ಪರದೆಯ ಮೇಲ್ಭಾಗ ನೀಡಲಾಗಿದೆ. ಮೊದಲು ಇದನ್ನು ಪ್ರೊ ಸರಣಿಗೆ ಮಾತ್ರ ನೀಡಲಾಗಿತ್ತು. 15 ಸರಣಿಯಲ್ಲಿ ಆರಂಭಿಕ 15 ಮತ್ತು 15 ಪ್ಲಸ್ ಗೂ ಡೈನಾಮಿಕ್ ಐಲ್ಯಾಂಡ್ ನೀಡಿರುವುದು ಪ್ಲಸ್ ಪಾಯಿಂಟ್. ಇದು ಫೋನ್ ಯಾವ ಕಾರ್ಯಾಚರಣೆಯಲ್ಲಿರುತ್ತದೋ ಆ ಸೆಟಿಂಗ್ ಅನ್ನು ತೋರಿಸುತ್ತದೆ. ಫೋನ್ನ ಹಾಟ್ಸ್ಪಾಟ್ ಆನ್ ಮಾಡಿದ್ದರೆ ಅಥವಾ ಕರೆಯಲ್ಲಿದ್ದರೆ ಆ ಸಿಂಬಲ್ ಪ್ರದರ್ಶಿಸುತ್ತದೆ. ಉದಾ:ಗೆ ಫೋನ್ ಕರೆಯಲ್ಲಿ ನಿರತರಾಗಿದ್ದಾಗ ಬೇರೆ ಯಾವುದೇ ಆಪ್ ಗಳು ಓಪನ್ ಆಗಿದ್ದರೂ, ಡೈನಾಮಿಕ್ ಐಲ್ಯಾಂಡ್ ಮೇಲೆ ಟಚ್ ಮಾಡಿದರೆ, ಫೋನ್ ಡಯಲರ್  ಓಪನ್ ಆಗುತ್ತದೆ.

ಪರದೆಯು 1000 nits ನಿಂದ 2000 nits ವರೆಗೂ ಪ್ರಕಾಶಮಾನವಾಗಿದ್ದು, ಬಿರುಬಿಸಿಲಿನಲ್ಲೂ ಸ್ಪಷ್ಟವಾಗಿ ಗೋಚರಿಸುತ್ತದೆ. 1290x2796px ರೆಸಲ್ಯೂಶನ್, 460ppi ಹೊಂದಿದೆ. ಆದರೆ ಪರೆದೆಯ ರಿಫ್ರೆಶ್ ರೇಟ್ 60 ಹರ್ಟ್ಜ್ ಇದೆ. ಇದು ಈ ಫೋನಿನ ದರಕ್ಕೆ ಹೋಲಿಸಿದರೆ ಕಡಿಮೆ ಎನಿಸುತ್ತದೆ.

ಕಾರ್ಯಾಚರಣೆ: ಐಫೋನ್ 15 ಪ್ಲಸ್ (ಮತ್ತು iPhone 15) ಕಳೆದ ವರ್ಷದ A16 ಬಯೋನಿಕ್ ಚಿಪ್ ಹೊಂದಿವೆ. 15 ಪ್ರೊ ಮಾದರಿಗಳು ಇನ್ನೂ ಹೆಚ್ಚು-ಸಾಮರ್ಥ್ಯದ A17 ಪ್ರೊ ಚಿಪ್ ಹೊಂದಿವೆ.

A16 ಬಯೋನಿಕ್ ಒಂದು ಸಶಕ್ತ ಪ್ರೊಸೆಸರ್ ಆಗಿದ್ದು, ಇದನ್ನು ಹಿಂದಿನ 14 ಸರಣಿಯ ಪ್ರೊ ಮಾದರಿಗಳಲ್ಲಿ ಬಳಸಲಾಗಿತ್ತು. ಹೀಗಾಗಿ ಇದೊಂದು ಫ್ಲಾಗ್ ಶಿಪ್, ಬಲಶಾಲಿ, ಸದೃಢ ಪ್ರೊಸೆಸರ್ ಎನ್ನಬಹುದು.  ಯಾವುದೇ ಅಡೆತಡೆಯಿಲ್ಲದೇ ಕಾರ್ಯನಿರ್ವಹಿಸುತ್ತದೆ. ದಿನನಿತ್ಯದ ಸಾಧಾರಣ ಬಳಕೆಯಿಂದ ಹಿಡಿದು ದೊಡ್ಡ ಗೇಮ್ ಗಳನ್ನೂ ಸಹ ಅತ್ಯಂತ ವೇಗವಾಗಿ ನಿಭಾಯಿಸುತ್ತದೆ.

iPhone 15 ಸರಣಿ ಬಾಕ್ಸ್ ನಲ್ಲಿ iOS 17 ನೊಂದಿಗೆ ಬಂದಿದ್ದು, ಬಳಿಕ iOS 17.1 ಅನ್ನು ಬಿಡುಗಡೆ ಮಾಡಿದೆ, ಇದರಲ್ಲಿ ಹೊಸ ವಿನ್ಯಾಸದ  ಲಾಕ್ ಸ್ಕ್ರೀನ್, ಸಂದೇಶಗಳಿಗೆ ಹೊಸ ಸ್ಟಿಕ್ಕರ್ಗಳು, ಹೊಸ ಹೆಲ್ತ್ ಅಪ್ಲಿಕೇಶನ್, ಫೇಸ್ ಟೈಮ್ ಆಡಿಯೋ ಮತ್ತು ವೀಡಿಯೊ ಸಂದೇಶಗಳನ್ನು ಹೊಂದಿದೆ.

ಕನ್ನಡದಲ್ಲಿ ವೇಗವಾಗಿ ಟೈಪ್ ಮಾಡಲು ಆಂಡ್ರಾಯ್ಡ್ ಫೋನ್ ಗಳಲ್ಲಿ ಜಸ್ಟ್ ಕನ್ನಡ ಆಪ್ ಇದೆ. ಐಫೋನ್ ಗಳಿಗೂ ಆಪ್ ಸ್ಟೋರ್ ನಲ್ಲಿ ಜಸ್ಟ್ ಕನ್ನಡ ಡೌನ್ ಲೋಡ್ ಮಾಡಿಕೊಳ್ಳಬಹುದು. ಆದರೆ ಆಂಡ್ರಾಯ್ಡ್ ಫೋನ್ ಗಳಷ್ಟು ಸಲೀಸಾಗಿ ಐಫೋನ್ ನಲ್ಲಿ ಜಸ್ಟ್ ಕನ್ನಡ ಬಳಸಲಾಗುವುದಿಲ್ಲ. ಜಸ್ಟ್ ಕನ್ನಡ ಆಪ್ ನಿರ್ಮಾಪಕರು ಆಂಡ್ರಾಯ್ಡ್ ಗೆ ನೀಡಿರುವ ಸೌಲಭ್ಯಗಳನ್ನು ಐ ಓಎಸ್ ಗೆ ಕಲ್ಪಿಸಿಲ್ಲ. ಮಹಾಪ್ರಾಣ ಅಕ್ಷರಗಳು ಆಂಡ್ರಾಯ್ಡ್ ಜಸ್ಟ್ ಕನ್ನಡದಲ್ಲಿ ಎರಡು ಬಾರಿ ಟ್ಯಾಪ್ ಮಾಡಿದರೆ ಬರುತ್ತವೆ. ಇಲ್ಲಿ ಪ್ರತಿ  ಮಹಾಪ್ರಾಣ ಅಕ್ಷರಗಳನ್ನೂ ಸ್ವಿಪ್ಟ್ ಲಾಕ್ (ಬಾಣದ ಗುರುತು ಒತ್ತಿಯೇ) ಒತ್ತಿ ಬಳಸಬೇಕು. ಜಸ್ಟ್ ಕನ್ನಡ ಆಪ್ ನಲ್ಲಿ ಐಓಸ್ ಗೆ, ಆಂಡ್ರಾಯ್ಡ್ ನಲ್ಲಿರುವಂತೆಯೇ ಸೌಲಭ್ಯ ನೀಡಿದರೆ, ಐಫೋನ್ ಬಳಕೆದಾರ ಕನ್ನಡಿಗರಿಗೆ ಬಹಳ ಅನುಕೂಲವಾಗುತ್ತದೆ.

ಆದರೂ ಸಮಾಧಾನಕರ ವಿಷಯವೆಂದರೆ ಐ ಓಎಸ್ 17ನಲ್ಲಿ ಇಂಗ್ಲಿಷ್ ನಿಂದ ಕನ್ನಡ ಟ್ರಾನ್ಸ್ ಲಿಟರೇಷನ್ ನೀಡಿರುವುದರಿಂದ ಇಂಗ್ಲಿಷ್ ಅಕ್ಷರಗಳನ್ನು ಒತ್ತುವ ಮೂಲಕ ಕನ್ನಡಕ್ಕೆ ಪರಿವರ್ತನೆ ಮಾಡಬಹುದು. ಉದಾಹರಣೆಗೆ: Kannada ಎಂದು ಟೈಪ್ ಮಾಡಿದರೆ ಕನ್ನಡ ಎಂದು ಮೂಡಿಬರುತ್ತದೆ. ಆದರೆ ಇದು ಎಲ್ಲ ಬಾರಿಯೂ ಸರಿಯಾಗುವುದಿಲ್ಲ. ಕೆಲವೊಮ್ಮೆ ನಮಗೆ ಬೇಕಾದ ಕನ್ನಡ ಅಕ್ಷರ ಮೂಡಿಸಲು ಕಸರತ್ತು ಮಾಡಬೇಕಾಗುತ್ತದೆ.

ಫೇಸ್ ಅನ್ಲಾಕ್: ಐಫೋನಿನ ಫೇಸ್ ಅನ್ ಲಾಕ್ ಸೌಲಭ್ಯ ಬಹಳ ಇಷ್ಟವಾಗುತ್ತದೆ. ಐಫೋನ್ ನಲ್ಲಿ ಆಂಡ್ರಾಯ್ಡ್ ನಂತ ಬೆರಳಚ್ಚು ಮೂಲಕ  ಅನ್ಲಾಕ್ ಮಾಡಲಾಗುವುದಿಲ್ಲ. ಫೇಸ್ ಅನ್ ಲಾಕ್ ಮೂಲಕವೇ ಮಾಡಬೇಕು. ಇದು ಬಹಳ ನಿಖರವಾಗಿರುತ್ತದೆ. ಹೊಸ ಆಪ್ ಇನ್ ಸ್ಟಾಲ್ ಮಾಡಲು, ಮೊದಲೇ ಸೇವ್ ಮಾಡಿರುವ  ಪಾಸ್ವರ್ಡ್ ಗಳನ್ನು ಬಳಸಲು, ಫೋನ್ ಪೇ, ಬ್ಯಾಂಕ್ ಆಪ್ ಗಳನ್ನು ತೆರೆಯಲು ಫೇಸ್ ಐಡಿ ಬಹಳ ವೇಗವಾಗಿ ಕೆಲಸ ಮಾಡುತ್ತದೆ.

ಕ್ಯಾಮರಾ: ಈ ಫೋನಿನಲ್ಲಿ 48MP ವೈಡ್-ಆಂಗಲ್ (f/1.78) ಕ್ಯಾಮರಾ, 12MP 120° ಅಲ್ಟ್ರಾ ವೈಡ್ (f/2.4) ಸೆಕೆಂಡರಿ ಕ್ಯಾಮೆರಾ ಇದೆ. 12MP TrueDepth (ƒ/1.9) ಮುಂಭಾಗದ ಕ್ಯಾಮರಾ ಇದೆ.

ಕ್ವಾಡ್-ಪಿಕ್ಸೆಲ್ ಸೆನ್ಸರ್ ಉಳ್ಳ ಹೊಸ 48MP ಮುಖ್ಯ ಕ್ಯಾಮೆರಾವು ಪ್ರತಿ ನಾಲ್ಕು ಪಿಕ್ಸೆಲ್ಗಳನ್ನು 2.44 µm ಗೆ ಸಮಾನವಾದ ಒಂದು ದೊಡ್ಡ ಕ್ವಾಡ್ ಪಿಕ್ಸೆಲ್ಗೆ)) ಸಂಯೋಜಿಸುತ್ತದೆ. ಇದನ್ನು ಮೊದಲು ಐಫೋನ್ 14 ಪ್ರೊ ಸರಣಿಯಲ್ಲಿ ಪರಿಚಯಿಸಲಾಯಿತು. ಕ್ವಾಡ್-ಪಿಕ್ಸೆಲ್ ಸೆನ್ಸರ್  2x ಟೆಲಿಫೋಟೋ ನೀಡುತ್ತದೆ.

48MP ಕ್ಯಾಮೆರಾದಿಂದ ಡೇಲೈಟ್ ಶಾಟ್ಗಳು ಸಾಕಷ್ಟು ವಿವರಗಳೊಂದಿಗೆ ಉತ್ತಮವಾಗಿ ಮೂಡಿ ಬರುತ್ತವೆ.  ಇದು ಉತ್ತಮ ಬಣ್ಣಗಳನ್ನು ಸಹ ನೀಡುತ್ತದೆ ಕಡಿಮೆ ಬೆಳಕಿನ ಫೋಟೋಗಳನ್ನು ತೆಗೆಯಬೇಕಾದಾಗ ನೈಟ್ ಮೋಡ್ ಅನ್ನು ಸಕ್ರಿಯಗೊಳಿಸಿದರೆ, ಚಿತ್ರಗಳು ಸ್ವಲ್ಪ ಪ್ರಕಾಶಮಾನವಾಗಿ ಮೂಡಿಬರುತ್ತವೆ.  ಇದರಲ್ಲಿ ಪ್ರೊ ಮಾದರಿಗಳಂತೆ ಮ್ಯಾಕ್ರೋ ಲೆನ್ಸ್ ಇಲ್ಲ. ಒಟ್ಟಾರೆಯಾಗಿ ಹಿಂಬದಿ ಕ್ಯಾಮರಾ ಫೋಟೋಗಳ ಗುಣಮಟ್ಟ ಬಹಳ ಚೆನ್ನಾಗಿದೆ. ಉತ್ತಮ ಕ್ಯಾಮರಾ ಫೋನ್ ಬೇಕೆನ್ನುವವರಿಗೆ ಸರಿಯಾದ ಆಯ್ಕೆ.

12MP ಸೆಲ್ಫಿ ಕ್ಯಾಮೆರಾದ ಚಿತ್ರಗಳು ಸಹ ಚೆನ್ನಾಗಿ ಮೂಡಿ ಬರುತ್ತವೆ.  ಸೆಲ್ಫಿ ತೆಗೆಯುವಾಗ  ವೈಡ್ ಮತ್ತು ಕ್ಲೋಸಪ್ ಮಾಡಿಕೊಳ್ಳುವ ಸೌಲಭ್ಯ ಇದೆ.

ವಿಡಿಯೋ ಗುಣಮಟ್ಟವೂ ಅತ್ಯುತ್ತಮವಾಗಿದೆ. ಡಾಲ್ಬಿ ವಿಷನ್ ಚಾಲನೆಗೊಳಿಸಿದಾಗ ಉತ್ತಮ ವಿಡಿಯೋ ಮೂಡಿಬರುತ್ತದೆ. ಎಚ್ ಡಿ ಆರ್ ವಿಡಿಯೋ ಸೌಲಭ್ಯವಿದ್ದು, 4ಕೆ ವರೆಗೂ ವಿಡಿಯೋ ಚಿತ್ರೀಕರಿಸಬಹುದು.

ಬ್ಯಾಟರಿ: iPhone 15 Plus 4,383mAh ಬ್ಯಾಟರಿ ಹೊಂದಿದೆ. ಒಮ್ಮೆ ಸಂಪೂರ್ಣ ಚಾರ್ಜ್ ಮಾಡಿದರೆ ಸಾಧಾರಣ ಬಳಕೆಗೆ ಒಂದೂವರೆ ದಿನ ಬ್ಯಾಟರಿ ಬಾಳಿಕೆ ಬರುತ್ತದೆ. ಸಿ ಪಿನ್ ಕೇಬಲ್ ಅನ್ನು ನೀಡಲಾಗಿದೆ. ಸಿ ಟೈಪ್ ಪೋರ್ಟ್ ಗೆ ಬದಲಿಸಿರುವುದರಿಂದ ಯಾವುದೇ ವೇಗದ ಚಾರ್ಜರ್ ಗೆ ಸಿ ಕೇಬಲ್ ಹಾಕಿ ಚಾರ್ಜ್ ಮಾಡಬಹುದು. ಆದರೆ ಉತ್ತಮ ಬ್ರಾಂಡ್ ನ ಚಾರ್ಜರ್ ಬಳಸುವುದು ಸುರಕ್ಷಿತ. ಫೋನ್ ಅನ್ನು ಶೂನ್ಯದಿಂದ ಶೇ. 50ರಷ್ಟಕ್ಕೆ ಅರ್ಧ ಗಂಟೆಯಲ್ಲಿ ಜಾರ್ಜ್ ಮಾಡಬಹುದು. 100% ಗೆ ಚಾರ್ಜ್ ಮಾಡಲು ಒಂದೂವರೆ ಗಂಟೆ ಬೇಕಾಗುತ್ತದೆ.

ಒಟ್ಟಾರೆಯಾಗಿ, ಐಫೋನ್ 15 ಪ್ಲಸ್ ಉತ್ತಮ ಡಿಸ್ಪ್ಲೇ, ಕಾರ್ಯಕ್ಷಮತೆ, ಕ್ಯಾಮೆರಾ ಮತ್ತು ಬ್ಯಾಟರಿ ಬಾಳಿಕೆ ಹೊಂದಿದ ಅತ್ಯುನ್ನತ ದರ್ಜೆಯ ಫೋನಾಗಿದೆ.

-ಕೆ.ಎಸ್. ಬನಶಂಕರ ಆರಾಧ್ಯ

ಟಾಪ್ ನ್ಯೂಸ್

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

1-wqeqeqwewq

HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ

9-upi

Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

arrested

ಮಹಾದೇವ್‌ ಆ್ಯಪ್‌ ಕೇಸು: ನಟ ಸಾಹಿಲ್‌ ಖಾನ್‌ ಬಂಧನ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

1-wc

Women’s T20; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 44 ರನ್‌ ಜಯ

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.